ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಪರಿಶಿಷ್ಟ ಜಾತಿಯ ಬಾಲಕ, ಬಾಲಕಿಯರು ದೂರದ ಪ್ರದೇಶಗಳಲ್ಲಿ ತಮ್ಮ ಹೆಚ್ಚಿನ ವಿದ್ಯಾಭ್ಯಾಸವನ್ನು ಮುಂದುವರೆಸಿಕೊಂಡು ಹೋಗಲು ಈ ಕಾರ್ಯಕ್ರಮ ರೂಪಿಸಿದೆ. 5 ರಿಂದ 10ನೇ ತರಗತಿಯವರೆಗೆ ಓದುತ್ತಿರುವ ಪರಿಶಿಷ್ಟ ಜಾತಿಯ ಬಾಲಕರು ಮತ್ತು ಬಾಲಕಿಯರು ವಿದ್ಯಾರ್ಥಿ ನಿಲಯಗಳ ಪ್ರಯೋಜನ ಪಡೆಯುವರು.
ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಸಾಮಾನ್ಯವಾಗಿ ದೂರದ ಹಳ್ಳಿಗಳಿಂದ ಬಂದು ಶಾಲೆಗಳಲ್ಲಿ ವಿದ್ಯಾಭ್ಯಾಸವನ್ನು ಮುಂದುವರೆಸಲು ಸಾಧ್ಯವಿಲ್ಲದಂತಹ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಈ ವಸತಿ ನಿಲಯಗಳಲ್ಲಿ ವಸತಿ ಅವಕಾಶವನ್ನು ಒದಗಿಸಲಾಗುತ್ತಿದೆ.
2015-16ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು -------- ವಿದ್ಯಾರ್ಥಿನಿಲಯಗಳಿದ್ದು, ಅವುಗಳಲ್ಲಿ -------- ವಿದ್ಯಾರ್ಥಿಗಳು ವಸತಿ ನಿಲಯಗಳಲ್ಲಿ ಸ್ಥಳಾವಕಾಶವನ್ನು ಪಡೆಯಲಿದ್ದಾರೆ.

ಈ ವಿದ್ಯಾರ್ಥಿ ನಿಲಯಗಳಿಗೆ ಸೇರ ಬಯಸುವ 5 ರಿಂದ 10ನೇ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು 5 ಕಿ.ಮೀ ದೂರದಿಂದ ಬರುವವರಿಗೆ ಹಾಗೂ ಸ್ಥಳೀಯರಿಗೆ ಅವಕಾಶ ನೀಡಲಾಗುತ್ತಿದೆ. ಪ್ರತಿ ಶಾಲಾ ವರ್ಷಗಳಲ್ಲಿ ಜೂನ್ 1 ರಿಂದ ಈ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸಲಾಗುತ್ತದೆ. ಹಳೆಯ ಪಾಸಾದ ವಿದ್ಯಾರ್ಥಿಗಳನ್ನು ಮುಂದುವರೆಸಲಾಗುತ್ತದೆ.
ಹೊಸದಾಗಿ ಖಾಲಿ ಇದ್ದ ಸ್ಥಳಗಳನ್ನು ತುಂಬಲು ಆ ಶಾಲಾ ವರ್ಷದ ಮೇ 15 ರಂದು ಅರ್ಜಿಗಳನ್ನು ಕರೆಯಲು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಲಾಗುತ್ತದೆ. ಪ್ರವೇಶ ಬಯಸುವ ವಿದ್ಯಾರ್ಥಿಗಳು ಆಯಾ ಶಾಲಾ ಮುಖ್ಯೋಪಾಧ್ಯಾಯರಿಂದ ಅರ್ಜಿಗಳನ್ನು ಪಡೆದು ಜೂನ್ 15ರ ಒಳಗೆ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳು/ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಮುಖ್ಯೋಪಾಧ್ಯಾಯರ ಮುಖಾಂತರ ಸಲ್ಲಿಸಬೇಕು. ಈ ಅರ್ಜಿಗಳನ್ನು ಕ್ರೋಢೀಕರಿಸಿ, ಸಂಬಂಧಪಟ್ಟ ಅಧಿಕಾರಿಗಳು ಜೂನ್ 30ರೊಳಗೆ ಸಲ್ಲಿಸಿದ್ದಲ್ಲಿ ತಾಲೂಕು ಮತ್ತು ಜಿಲ್ಲಾ ಆಯ್ಕೆ ಸಮಿತಿಗಳ ಮುಖಾಂತರ ಆಯ್ಕೆ ಮಾಡಲಾಗುವುದು.
ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶಾವಕಾಶ ದೊರಕಿರುವ ಪ್ರತಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗೆ ತಿಂಗಳೊಂದಕ್ಕೆ ರೂ. 1100.00 ಗಳನ್ನು ಭೋಜನ ವೆಚ್ಚಕ್ಕಾಗಿ ಹಣವನ್ನು ಖರ್ಚು ಮಾಡಲಾಗುತ್ತಿದೆ. ಪುಸ್ತಕ, ಲೇಖನ ಸಾಮಾಗ್ರಿ, ಸಮವಸ್ತ್ರ, ಹಾಸಿಗೆ, ಹೊದಿಕೆ ಮತ್ತು ಇತರ ವೆಚ್ಚಗಳನ್ನು ಸಹ ಪೂರೈಸಲಾಗುತ್ತಿದೆ.

ಮೂಲ :   ಸಮಾಜ ಕಲ್ಯಾಣ ಇಲಾಖೆ,ಮಂಗಳೂರು