ಜಂಟಿ ಹೊಣೆಗಾರಿಕೆ ಗುಂಪುಗಳ ರಚನೆ (ಜೆಎಲ್ಜಿ) : • ತರಬೇತಿಯ ನಂತರ ಯುವಜನರು ತಮ್ಮ ಆಸಕ್ತಿಗೆ ಅನುಗುಣವಾಗಿ ಗುರುತಿಸಿಕೊಂಡ ಸ್ವ-ಉದ್ಯೋಗ ಚಟುವಟಿಕೆಯ ಆಧಾರದ ಮೇಲೆ, ಆಯ್ಕೆ ಮಾಡಿದ ಒಂದೇ ರೀತಿಯ ಚಟುವಟಿಕೆಯ ಜಂಟಿ ಹೊಣೆಗಾರಿಕೆ ಗುಂಪುಗಳನ್ನು ರಚಿಸಿಕೊಳ್ಳಲು ಪ್ರೇರಣೆ ನೀಡುವುದು. • ಒಂದೇ ರೀತಿಯ ಸ್ವ-ಉದ್ಯೋಗ ಚಟುವಟಿಕೆಯನ್ನು ಕೈಗೊಳ್ಳಲು ಸಿದ್ದರಿರುವ 5 ಯುವಜನರನ್ನೊಳಗೊಂಡ ಜಂಟಿ ಹೊಣೆಗಾರಿಕೆ ಗುಂಪನ್ನು ರಚಿಸುವುದು. • ಜಂಟಿ ಹೊಣೆಗಾರಿಕೆ ಗುಂಪು ರಚನೆ ಸಾಧ್ಯವಾಗದಿದ್ದಲ್ಲಿ ಮಾತ್ರ ವೈಯಕ್ತಿಕವಾಗಿಯೂ ಚಟುವಟಿಕೆಗಳ ಆಯ್ಕೆಗೂ ಅವಕಾಶವಿರುವುದು. • ಬ್ಯಾಂಕು / ಹಣಕಾಸು ಸಂಸ್ಥೆಗಳಲ್ಲಿ ಉಳಿತಾಯ ಖಾತೆ ತೆರೆಯುವುದು. • ನಿಗದಿತ ಸ್ಥಳದಲ್ಲಿ ವಾರಕ್ಕೊಮ್ಮೆ ಸಭೆ ಸೇರುವುದು. • ಮೇಲ್ಕಂಡ ಹಂತಗಳಲ್ಲಿ ಯೋಜನಾ ಬೆಂಬಲ ಸಂಸ್ಥೆಯು (ಪಿಎಸ್ಎ) ಮಾರ್ಗದರ್ಶನ ನೀಡುವುದು. • ಜಂಟಿ ಹೊಣೆಗಾರಿಕೆ ಗುಂಪಿನ 5 ಸದಸ್ಯರು ಒಂದೇ ಉದ್ಯಮದ ಆಯ್ಕೆ ಅಥವಾ 5 ಸದಸ್ಯರು ಪ್ರತ್ಯೇಕವಾದ ಉದ್ಯಮದ ಆಯ್ಕೆಗೆ ಬ್ಯಾಂಕ್ ಮತ್ತು ಇತರೆ ಹಣಕಾಸು ಸಂಸ್ಥೆಗಳಿಂದ ಉದ್ಯಮ ಆರಂಭಿಸಲು ಬೇಕಾದ ಸಾಲ ಸೌಲಭ್ಯವನ್ನು ಒದಗಿಸಲು ಸಹಾಯ ಮಾಡುವುದು. • ಜಂಟಿ ಹೊಣೆಗಾರಿಕೆ ಗುಂಪುಗಳ ರಚನೆ ಮತ್ತು ಉದ್ಯಮಗಳ ಆಯ್ಕೆಯಾದ ನಂತರ ಮಾಹಿತಿಯನ್ನು ಮೇಲ್ವಿಚಾರಣಾ ತಂತ್ರಾಂಶ (ಎಂ.ಐ.ಎಸ್) ಅಳವಡಿಸಲು ತಾಲ್ಲೂಕು / ಜಿಲ್ಲಾ ಪಂಚಾಯಿತಿಗೆ ಕಾರ್ಯಕ್ರಮ ಬೆಂಬಲ ಸಂಸ್ಥೆಯು (ಪಿ.ಎಸ್.ಎ) ಕಳುಹಿಸಿಕೊಡುವುದು. • ಬೆಂಬಲ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಕುರಿತು ಆಗಿಂದಾಗ್ಗೆ ಹೊರಡಿಸುವ ಆದೇಶದಲ್ಲಿನ ಷರತ್ತುಗಳನ್ವಯ ಬಿಡುಗಡೆ ಮಾಡಲಾಗುವುದು. ಮೂಲ: ಅರ್.ಜಿ.ಸಿ.ವೈ