• ಪಂಚಾಯತಿ ರಾಜ್ಯ ವ್ಯವಸ್ಥೆಯ ಸಹಯೋಗದೊಂದಿಗೆ ಯಾವುದೇ ಸರ್ಕಾರಿ ಯೋಜನೆಗಳ ಪ್ರತಿಫಲ ಪಡೆಯದ ಗ್ರಾಮೀಣ ಯುವಜನತೆಗೆ ಲಾಭದಾಯಕ ಸ್ವ-ಉದ್ಯೋಗದ ಅವಕಾಶ ಕಲ್ಪಿಸುವುದು. • ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಜನರನ್ನು ಯಶಸ್ವಿ ಉದ್ಯಮಶೀಲರನ್ನಾಗಿಸುವುದರ ಮೂಲಕ ಅವರ ಯಶೋಗಾಥೆಗಳು ಇತರರಿಗೆ ಸ್ವ-ಉದ್ಯೋಗಿಗಳಾಗಲು ಪ್ರೇರಣೆ ನೀಡುವುದು. • ನಿರುದ್ಯೋಗಿ ಯುವಜನರನ್ನು ದೇಶದ ಸ್ವತ್ತು ಎಂಬಂತೆ ಪ್ರೇರೇಪಿಸುವುದು. • ಗ್ರಾಮೀಣ ಯುವಜನರನ್ನು ದೇಶಕ್ಕೆ ಕೊಡುಗೆ ನೀಡುವ ನಾಗರಿಕರನ್ನಾಗಿ ಮಾಡುವುದು. • ಗ್ರಾಮೀಣ ಯುವಜನರು ಸ್ಥಳೀಯ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ತಮ್ಮ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿ ಉತ್ತಮಪಡಿಸುವುದು. • ಸಮಗ್ರ ಗ್ರಾಮೀಣ ಅಭಿವೃದ್ಧಿಗೆ ಪ್ರೇರಣೆ ನೀಡುವ ಮೂಲಕ ಗ್ರಾಮೀಣ ಯುವಜನರು ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸುವುದು. ಮೂಲ: ಅರ್.ಜಿ.ಸಿ.ವೈ