ವೃತ್ತಿ ತರಬೇತಿಗಳು: • ಚಟುವಟಿಕೆಗೆ ಸಾಲ ಮಂಜೂರಾತಿ ನಂತರ ಯೋಜನಾ ಬೆಂಬಲ ಸಂಸ್ಥೆಗಳು 3 ದಿನಗಳ ಉದ್ಯಮಶೀಲತಾ ತರಬೇತಿಯನ್ನು / 6 ದಿನಗಳ ಕೌಶಲ್ಯಧಾರಿತ ಉದ್ಯಮಶೀಲತಾ ತರಬೇತಿಯನ್ನು ರೂಡ್ಸೆಟಿ / ಆರ್ಸೆಟಿ / ಸಿಡಾಕ್ ಜನಶಿಕ್ಷಣ ಸಂಸ್ಥೆ / ಸಮುದಾಯ ಪಾಲಿಟೆಕ್ನಿಕ್ / ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ತರಬೇತಿ ವ್ಯವಸ್ಥೆ ಮಾಡುವುದು. • ರೂಡ್ಸೆಟಿ / ಆರ್ಸೆಟಿ ತರಬೇತಿ ಸಂಸ್ಥೆಗಳಿಗೆ ಅಭ್ಯರ್ಥಿಗಳನ್ನು ನಿಯೋಜಿಸಿದಾಗ ತರಬೇತಿಯ ಅವಧಿಯು 6 ದಿನಗಳು ಮತ್ತು 6 ದಿನಗಳಿಗಿಂತ ಹೆಚ್ಚಾಗಿದ್ದಲ್ಲಿ ಅದರ ವೆಚ್ಚವನ್ನು ಜಿಲ್ಲೆಗೆ ನೀಡಲಾಗಿರುವ ಆರ್ಸೆಟಿ ಅನುದಾನದಲ್ಲಿ ಭರಿಸುವುದು. ಯೋಜನಾ ಪ್ರಸ್ತಾವನೆಗಳ ತಯಾರಿಕೆ: • ಯುವಜನರು ತಾವು ಕೈಗೊಳ್ಳಲು ತೀರ್ಮಾನಿಸಿರುವ ಚಟುವಟಿಕೆಗಳ ಬಗ್ಗೆ ಯೋಜನಾ ವರದಿಯನ್ನು ತಯಾರಿಸುವುದು. • ಯೋಜನಾ ಬೆಂಬಲ ಸಂಸ್ಥೆಯು ಜಂಟಿ ಹೊಣೆಗಾರಿಕೆ ಗುಂಪುಗಳಿಲ್ಲಿನ ಯುವಜನರು ಆಯ್ಕೆ ಮಾಡಿದ ಉದ್ಯಮಕ್ಕೆ ಯೋಜನಾ ಪ್ರಸ್ತಾವನೆಯನ್ನು 2 ವಾರಗಳೊಳಗೆÉ ತಯಾರಿಸಲು ನೆರವು ನೀಡುವುದು. • ಯೋಜನಾ ಪ್ರಸ್ತಾವನೆಗಳ ಆಧಾರದ ಮೇಲೆ ಬ್ಯಾಂಕ್ / ಹಣಕಾಸು ಸಂಸ್ಥೆಗಳು ಹಣಕಾಸಿನ ನೆರವನ್ನು ಒದಿಗಿಸುತ್ತವೆ. ಈ ಎಲ್ಲಾ ಹಂತದ ಪ್ರಕ್ರಿಯೆಯಲ್ಲಿ ಯೋಜನಾ ಬೆಂಬಲ ಸಂಸ್ಥೆಗಳು ಸಕಲ ಸಹಕಾರವನ್ನು ನೀಡತಕ್ಕದ್ದು. ಮೂಲ: ಅರ್.ಜಿ.ಸಿ.ವೈ