ಯೋಜನೆಯ ನಿರ್ದಿಷ್ಠ ಗುರಿ: • ಉದ್ಯೋಗ ಬಯಸುವ ನಿರುದ್ಯೋಗಿ ಯುವಜನರಿಗೆ ಉದ್ಯೋಗ ದೊರಕಿಸಿಕೊಡಬಲ್ಲ ಕೌಶಲ್ಯ ತರಬೇತಿಯನ್ನು ಸೂಕ್ತ ತರಬೇತಿ ಸಂಸ್ಥೆಗಳಿಂದ ಒದಗಿಸಿ 1 ಲಕ್ಷ ಯುವಜನರಿಗೆ ಉದ್ಯೋಗ ದೊರಕಿಸುವುದು. • ಸ್ವ-ಉದ್ಯೋಗ ಕೈಗೊಳ್ಳಬಯಸುವ ನಿರುದ್ಯೋಗಿ ಯುವಜನರಿಗೆ, ಪ್ರತಿ ಜಿಲ್ಲೆಯಲ್ಲೂ ಸರ್ಕಾರ ಅಥವಾ ಪ್ರತಿಷ್ಠಿತ ಸರ್ಕಾರೇತರ ಬೆಂಬಲ ಸಂಸ್ಥೆಗಳ ಮೂಲಕ ತರಬೇತಿ ನೀಡಿ, ಬ್ಯಾಂಕುಗಳೊಂದಿಗೆ ಸಂಪರ್ಕ ಏರ್ಪಡಿಸಿ, ಅನುಸರಣೆ ಮತ್ತು ಬೆಂಬಲ ನೀಡಿ, 1 ಲಕ್ಷ ಯುವಜನರಿಗೆ ಸ್ವ-ಉದ್ಯೋಗ ದೊರಕಿಸುವುದು. ಯೋಜನೆಯ ವ್ಯಾಪ್ತಿ: • ರಾಜ್ಯದಲ್ಲಿನ ಒಟ್ಟು 5627 ಗ್ರಾಮಪಂಚಾಯತ್ಗಳಿಂದ, ಅಂದರೆ ಪ್ರತಿ ಗ್ರಾಮಪಂಚಾಯತ್ನಿಂದ 40 ಯುವಜನರನ್ನು ಯೋಜನೆಯ ವ್ಯಾಪ್ತಿಗೆ ತರಲು ಉದ್ದೇಶಿಸಲಾಗಿದೆ. • ಇದರಿಂದ ರಾಜ್ಯದಲ್ಲಿ ಪ್ರತಿ ವರ್ಷ ಎರಡು ಲಕ್ಷ ಯುವಜನರು ಯೋಜನೆಯ ಪ್ರಯೋಜನ ಪಡೆಯುವರು. ಯೋಜನೆಯ ಫಲಾನುಭವಿಗಳು: • ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ನಿರುದ್ಯೋಗಿ ಯುವಜನರು ಹಾಗೂ ಇದುವರೆಗೂ ಯಾವುದೇ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದೆ, ಸ್ವ-ಉದ್ಯೋಗ/ ವೃತ್ತಿಪರ ಕೌಶಲ್ಯದೊಂದಿಗೆ ಉದ್ಯೋಗವನ್ನು ಕೈಗೊಳ್ಳಲು ಆಸಕ್ತರು. • 18 ರಿಂದ 35 ವರ್ಷ ವಯೋಮಾನದ ಯುವಜನರು ಪ್ರಸ್ತುತ ಯೋಜನೆಯ ಫಲಾನುಭವಿಗಳಾಗಿರುತ್ತಾರೆ. ಮೂಲ: ಅರ್.ಜಿ.ಸಿ.ವೈ