ಮಾಟ ಮತ್ತು ಯಕ್ಷಿಣಿ ವಿದ್ಯೆ - ಸಮಾಜಿಕ ಮತ್ತು ವೈದ್ಯಕೀಯ ದೃಷ್ಟಿಕೋನ ಮಾಟ ಎಂದರೇನು? ಮಾಟ ಎಂದರೆ; ದುಷ್ಟ ಬಲಗಳನ್ನು ಹೊಂದಿ, ಪೈಶಾಚಿಕ ಕಾರ್ಯಗಳಿಂದ, ಸಮಾಜಕ್ಕೆ ಹಾನಿಕಾರಿಕವಾದ ಮನೋವೃತ್ತಿಯನ್ನು ಹೊಂದಿರುವುದು ಮತ್ತು ಕೆಲಸಗಳನ್ನು ಮಾಡುವುದು. ಭಾನಾಮತಿ ಎಂದರೇನು? ಅಲೌಕಿಕ ಸಾಧನೆಯ ಮೂಲಕ ಇತರರನ್ನು ಹಾನಿಮಾಡಬಹುದು ಎಂಬ ನಂಬಿಕೆ. ಮಾಟ/ಯಕ್ಷಿಣಿ ವಿದ್ಯೆಗೂ,ಮಂತ್ರವಾದಿಗೂ ಇರುವ ವ್ಯತ್ಯಾಸವೇನು? ಮಾಟಗಾತಿ ಮಾಟಗಾತಿ ಒಬ್ಬ ಮಹಿಳೆ ಇತರರಿಗೆ ಹಾನಿ ಮಾಡಬಹುದಾದಂತಹ ಅತಿಮಾನಷ ಶಕ್ತಿ ಹೊಂದಿರುತ್ತಾಳೆ.ಮಾಂತ್ರ ಮಾಂತ್ರಿಕ ಕೆಟ್ಟ ಉದ್ದೇಶ ಹೊಂದಿರುವ ದ್ವೇಷ , ಮತ್ಸರಗಳಿಂದ ಕೂಡಿದ ಮಂತ್ರಶಕ್ತಿಯ ಅರಿವು ಇರುವ ವ್ಯಕ್ತಿ ತೊಂದರೆಗೆ ಈಡಾಗುವ ಸಾಮಾಜಿಕ ವರ್ಗಗಳು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರು, ಬಡವರು, ಮಹಿಳೆಯರು, ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗ ಮತ್ತು ಹಿಂದುಳಿದ ಜಾತಿಯವರು. ಭಾನಾಮತಿಗೆ ಭಯ ಪಡಲು ಕಾರಣಗಳು ಸಾಂಸ್ಕೃತಿಕ ನಂಬಿಕೆಗಳು ಸಾಮಾಜಿಕ ವಾತಾವರಣ ಹಿಂಸೆಗೆ ಮತ್ತು ತುಳಿತಕ್ಕೆ ಒಳಗಾದವರು ಅನಕ್ಷರಸ್ಥರು ಅಜ್ಞಾನಿಗಳು ವೈಧ್ಯಕೀಯ ನೆರವಿನ ಕೊರತೆ ರಾಜಕೀಯ ಮತ್ತು ಸಾಮಾಜಿಕ ಸ್ಪರ್ಧೆ ದಾಂಪತ್ಯ / ವೈಯಕ್ತಿಕ ಸಮಸ್ಯೆಗಳು ಮಾನಸಿಕ ತೊಂದರೆಗಳು ಅಲೌಕಿಕ ಮತ್ತು ದುಷ್ಟಶಕ್ತಿಗಳಲ್ಲಿ ನಂಬಿಕೆ ಇರುವವರು ಅಂಧವಿಶ್ವಾಸಿಗಳು/ಮೂಢ ನಂಬಿಕೆಯುಳ್ಳವರು. ಭಾನಾಮತಿಯನ್ನು ನಂಬಲು ಕಾರಣಗಳು ಬಡತನ - ೮೦% ಅನಕ್ಷರತೆ - ೮೦% ಪಯಣಕ್ಕೆ ಅನಾನುಕೂಲ - ೯೦% ಅನಾರೋಗ್ಯ - ೮೦% ಹಿಂಸೆಗೊಳಗಾಗುವುದು ಮತ್ತು ತುಳಿತಕ್ಕೆಒಳಗಾಗುವುದು - ೭೦% ಮೂಢನಂಬಬಿಕೆ ಮತ್ತು ಮಂತ್ರ ಮಾಟದಲ್ಲಿ ನಂಬಿಕೆ ಇರುವವರು- ೯೫% ಮಾಟಗಾತಿ ಅಥವಾ ಮಾಂತ್ರಿಕರನ್ನು ಹೇಗೆ ಶಂಕಿಸುವುದು? ಅಸಹಜ ಮತ್ತು ವಿಚಿತ್ರ ವರ್ತನೆಯುಳ್ಳವರು ಹಳ್ಳಿಗೆ ಅಪರಿಚಿತರು ಸಾಮಾಜಿಕ ವೈಷಮ್ಯ ಬೇರೆಯವರಿಗೆ ಅರ್ಥವಾಗದ ರೀತಿಯಲ್ಲಿ ಮಂತ್ರಪಠಿಸುವುದು. ಸಂದೇಹಾಸ್ಪದ ವ್ಯಕ್ತಿಯು ಚಿತ್ರಹಿಂಸೆ ಕೊಡುವ ವಿಧಾನಗಳು ದಂಡ ಹಾಕುವುದು - ವ್ಯಕ್ತಿಯ/ಕುಟುಂಬದ ಮೇಲೆ. ಹೊಡೆಯುವುದು ಹಲ್ಲುಗಳನ್ನು ಕೀಳುವುದು ಕಿವಿ ಮತ್ತು ನಾಲಿಗೆಯನ್ನು ಕತ್ತರಿಸುವುದು ಕೈಕಾಲು ಕತ್ತರಿಸುವುದು ವಿರೂಪಗೊಳಿಸುವುದು ಸಾಮಾಜಿಕ ಬಹಿಷ್ಕಾರ ಹಾಕುವುದು ಮನೆ ಅಥವಾ ಜಮೀನು ತೆರವುಗೊಳಿಸುವಂತೆ ಒತ್ತಾಯಿಸುವುದು. ಹಳ್ಳಿಯಿಂದ ಓಡಿಸುವುದು ಆಸ್ತಿಯನ್ನು ಕಾನೂನು ಬಾಹಿರವಾಗಿ ವಶಪಡಿಸಿಕೊಳ್ಳುವುದು ತಪ್ಪು/ಸುಳ್ಳು ಆಪಾದನೆ ಹೊರಿಸುವುದು. ನೆಂಟರಿಗೆ ಚಿತ್ರಹಿಂಸೆ ಕೊಡುವುದು. ಜೀವಂತ ಸುಡುವುದು. ಮಾನಸಿಕವಾಗಿ ಚಿತ್ರಹಿಂಸೆ ಕೊಡುವುದು. ಭಾನಾಮತಿ ತನಿಖೆ "ಪ್ರೊ. ನರಸಿಂಹಯ್ಯ ಭಾನಾಮತಿ ತನಿಖೆ ಸಮಿತಿ ಭಾನಾಮತಿಯ ಬಗ್ಗೆ ತನಿಖೆ ನಡೆಸಲು ಕರ್ನಾಟಕ ವಿಧಾನ ಪರಿಷತ್ತು ಒಂದು ಸಮಿತಿಯನ್ನು ರಚಿಸಿತು. ಡಾ|| ಹೆಚ್. ನರಸಿಂಹಯ್ಯ, ವಿಧಾನ ಪರಿಷತ್ತಿನ ಸದಸ್ಯರಾದವರು, ಈ ತಂಡದ ಮುಖಂಡತ್ವ ವಹಿಸಿದರು. ಈ ತನಿಖೆಯಿಂದ ಹೊರಬಿದ್ದ ವಿಷಯಗಳೇನೆಂದರೆ; ಭಾನಾಮತಿ, ಮಾಟ/ಯಕ್ಷಿಣಿ ವಿದ್ಯೆ ಎಂಬುದು ಅಸ್ತಿತ್ವದಲ್ಲಿಯೇ ಇಲ್ಲ. ಜನರಲ್ಲಿ ಭಯ ಭೀತಿಯನ್ನು ಮೂಡಿಸಿ ಅದನ್ನೇ ಸತತವಾಗಿ ಮುಂದುವರೆಸಲು ಕೆಲವು ಹಿತಾಸಕ್ತಿಗಳು ವದಂತಿಗಳನ್ನು ಹುಟ್ಟಿಸಿ ಜನರ ಜೀವನದ ಜತೆ ವಿಧ್ವಂಸಕ ಕ್ರಿಯೆಯನ್ನು ನಡೆಸುವುದಾಗಿದೆ ಎಂದು ತಿಳಿಸಿಕೊಟ್ಟಿತು. ಈ ಸಾಮಾಜಿಕ ಪಿಡುಗಿನಿಂದ ಪಾರಾಗಲು ಸಮಿತಿಯು ಮಾಡಿದ ಶಿಫಾರಸುಗಳು ಭಾನಾಮತಿಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು. ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸೌಕರ್ಯಗಳನ್ನು ಸುಧಾರಿಸುವುದು. ಸಂಚಾರಿ ವೈದ್ಯಕೀಯ ತಂಡಗಳು. ಭಾನಾಮತಿ ರೋಗಿಗಳನ್ನು ಆಸ್ಪತ್ರೆಗೆ ದಾಖಲು ಮಾಡಿ ಅವರಿಗೆ ತತ್ಕ್ಷಣ ವೈದ್ಯಕೀಯ ಚಿಕಿತ್ಸೆ ಕೊಡಿಸುವುದು ಮತ್ತು ಭಾನಾಮತಿಯ ವಿರುದ್ಧ ಶಿಕ್ಷಣ ಕೊಡಿಸುವುದು. ಮಂಡಲ ಕೇಂದ್ರಸ್ಥಾನಗಳಲ್ಲಿ ಮನಶಾಸ್ತ್ರಜ್ಞ ಮತ್ತು ಮನೋರೋಗ/ವೈದ್ಯಕೀಯ ಚಿಕಿತ್ಸಕರನ್ನು ಮತ್ತು ಸಮಾಜ ಕಾರ್ಯಕರ್ತರನ್ನು ನೇಮಿಸುವುದು. ಸಾಮಾಜಿಕ ಮತ್ತು ಆರ್ಥಿಕ ಏಳಿಗೆ ಮತ್ತು ಬಡತನ ನಿವಾರಣಾ ಕ್ರಮಗಳನ್ನು ತೆಗೆದುಕೊಳ್ಳುವುದು. ಗ್ರಾಮೀಣ ಪ್ರದೇಶದಲ್ಲಿ ವಿದ್ಯುನ್ಮಾನ ಮತ್ತು ಸಾರಿಗೆ ಸಂವಹನಗಳನ್ನು ಸುಧಾರಿಸುವುದು. ಸರ್ಕಾರೇತರ ಸಂಸ್ಥೆಗಳನ್ನು ಪ್ರೋತ್ಸಾಹಿಸುವುದು. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಶಾಖೆಗಳನ್ನು ತೆರೆಯುವುದು. ಔಪಚಾರಿಕ ಮತ್ತು ಅನೌಪಚಾರಿಕ ಶಿಕ್ಷಣ ಭಾನಾಮತಿಯ ವಿರುದ್ಧ ಪಾಠಗಳನ್ನು ಶಾಲಾ ಪಠ್ಯಕ್ರಮಗಳಲ್ಲಿ ಅಳವಡಿಸುವುದು. ಭಾನಾಮತಿಯ ವಿರುದ್ಧ ಕಠಿಣ ಕಾನೂನುಗಳನ್ನು ಜಾರಿಗೊಳಿಸುವುದು. ಭಾನಾಮತಿ ಪ್ರಕರಣಗಳನ್ನು ವಿಚಾರಣೆಗೆ ಅರ್ಹವಾದ (ಕೋರ್ಟಿನ ಗಮನಕ್ಕೆ) ತರಬಹುದಾದ ಅಪರಾಧವನ್ನಾಗಿ ಪರಿಗಣಿಸುವುದು. ಅಪರಾಧಿಗಳಿಗೆ ಕಠಿಣ ಶಿಕ್ಷೆ. ಮಾಧ್ಯಮಗಳ ಪಾತ್ರ (ಮುದ್ರಿತ ಮತ್ತು ವಿದ್ಯುನ್ಮಾನ) ಭಾನಾಮತಿ ನಂಬಿಕೆಯನ್ನು ಹೆಚ್ಚಿಸುವ ದೂರದರ್ಶನ ಧಾರಾವಾಹಿ ಮತ್ತು ಸಿನಿಮಾ ಕಾರ್ಯಕ್ರಮಗಳನ್ನು ನಿಷೇಧಿಸುವುದು. ವಿಜ್ಞಾನ ಯಾತ್ರೆ / ಇಂದ್ರಜಾಲ ಪ್ರದರ್ಶನಗಳನ್ನು ಉತ್ತೇಜಿಸುವುದು. ಯುವಕರು ಮತ್ತು ಮಹಿಳೆಯರನ್ನು ಸಂಘಟಿಸುವುದು. ಸಾಂಸ್ಕೃತಿಕ ಕಾರ್ಯಕ್ರಮಗಳು ಭಾನಾಮತಿಗೆ ಒಳಗಾದ ಬಲಿಪಶುಗಳನ್ನು ರಕ್ಷಿಸುವುದು. ಸರ್ಕಾರದ ಪಾತ್ರ ಅಂಧವಿಶ್ವಾಸವನ್ನು ತೊಲಗಿಸುವುದು ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು. ವೈಧ್ಯಕೀಯ ಸೌಲಭ್ಯಗಳನ್ನು ಕಲ್ಪಿಸುವುದು. ಭಾನಾಮತಿ ನಿಷೇಧ ಕಾರ್ಯಕ್ರಮಗಳ ಪರವಾಗಿ ಪಾತ್ರವನ್ನು ನಿರ್ವಹಿಸುವುದು ರಾಜಕೀಯ ಇಚ್ಛಾಶಕ್ತಿ. ಮೂಲ: ಪೋರ್ಟಲ್ ತಂಡ