ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಪಾಲಕ್‌

ಪಾಲಕ್‌ ದೇಹ ಪೋಷಣೆಗೆ ಬೇಕಾದ ಎ ಮತ್ತು ಸಿ ಅನ್ನಾಂಗಗಳ ಮತ್ತು ಕೆಲವ್ರ ಖನಿಜ ಲವಣಾಂಶಗಳ ಸಂಪದ್ಭರಿತ ಮೂಲವಾಗಿದೆ.

 

ಪಾಲಕ್‌ ದೇಹ ಪೋಷಣೆಗೆ ಬೇಕಾದ ಎ ಮತ್ತು ಸಿ ಅನ್ನಾಂಗಗಳ ಮತ್ತು ಕೆಲವ್ರ ಖನಿಜ ಲವಣಾಂಶಗಳ ಸಂಪದ್ಭರಿತ ಮೂಲವಾಗಿದೆ.

ಬಿತ್ತನೆ ಕಾಲ

ಸೆಪ್ಟೆಂಬರ್‌ನಿಂದ ನವೆಂಬರ್‌ ತಿಂಗಳುಗಳು ಈ ಬೆಳೆಯನ್ನು ಪ್ರಾರಂಭಿಸಲು ಸೂಕ್ತವಾದ ಕಾಲ.

ಮಣ್ಣು

ಈ ಬೆಳೆಯನ್ನು ನೀರು ಬಸಿದು ಹೋಗುವಂತಹ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಸಾವಯವ ಗೊಬ್ಬರವನ್ನು ಹೊಂದಿರುವಂತಹ ಎಲ್ಲಾ ತರಹದ ಫಲವತ್ತಾದ ಮಣ್ಣುಗಳಲ್ಲಿ ಬೆಳೆಯಬಹುದು.

ತಳಿಗಳು

  • ಪೂಸಾ ಜ್ಯೋತಿ: ಇದು ದೊಡ್ಡ ಗಾತ್ರದ ದಪ್ಪವಾದ ಎಳೆಯ ರಸಭರಿತ ಎಲೆಗಳನ್ನು ಬಿಡುವ ತಳಿ. ಇದು ಪ್ರತಿ ಹೆಕ್ಟೇರಿಗೆ 49 ಟನ್‌ ಎಲೆಯ ಇಳುವರಿಯನ್ನು 6-8 ಕಟಾವ್ರಗಳಲ್ಲಿ ಕೊಡಬಲ್ಲದು.
  • ಆಲ್‌ ಗ್ರೀನ್‌: ಇದು ಒಂದೇ ತರಹದ ಅಚ್ಚ ಹಸಿರಿನ ಮೃದು ಎಲೆಗಳನ್ನು ಬಿಡುತ್ತದೆ. ಇದರ ಎಲೆಗಳನ್ನು 15-20 ದಿವಸಗಳ ಅಂತರದಲ್ಲಿ 6-7 ಸಲ ಕಟಾವ್ರ ಮಾಡಬಹುದು. ಒಟ್ಟು ಪ್ರತಿ ಹೆಕ್ಟೇರಿಗೆ 125 ಟನ್‌ ಇಳುವರಿಯನ್ನು ಕೊಡಬಲ್ಲದು.
  • ಅರ್ಕಾ ಅನುಪಮ: ಇದನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಬೆಂಗಳೂರು ಅಭಿವೃದ್ಧಿಪಡಿಸಿದೆ. ಇದು ಮಧ್ಯಮ ಗಾತ್ರದ ಹಾಗೂ ದಪ್ಪದ ಎಲೆಗಳನ್ನು ಬಿಡುತ್ತದೆ. ಇದು ಪ್ರತಿ ಹೆಕ್ಟೇರಿಗೆ 40 ಟನ್‌ ಎಲೆಯ ಇಳುವರಿಯನ್ನು 4 ಕಟಾವ್ರಗಳಲ್ಲಿ 90 ದಿವಸದ ಅವದಿಯಲ್ಲಿ ಕೊಡಬಲ್ಲದು.

ಬೇಸಾಯ ಸಾಮಗ್ರಿಗಳು

ಕ್ರ.ಸಂ

ವಿವರಗಳು

ಹೆಕ್ಟೇರಿಗೆ

1.

ಬೀಜ

15-20 ಹೆಕ್ಟೇರಿಗೆ

 

ಬಿತ್ತನೆ

ಭೂಮಿಯನ್ನು ಹದ ಮಾಡಿದ ನಂತರ 2-3 ಮೀ. x 1-2 ಮೀ. ಉದ್ದಗಲದ ಸಸಿ ಮಡಿಗಳನ್ನು ತಯಾರಿಸಬೇಕು. ಪೂರ್ಣ ಪ್ರಮಾಣದ ಕೊಟ್ಟಿಗೆ ಗೊಬ್ಬರ ಹಾಗೂ ರಸಗೊಬ್ಬರಗಳನ್ನು ಮಡಿಗೆ ಕೊಟ್ಟು ಚೆನ್ನಾಗಿ ಬೆರಸಬೇಕು. ನಂತರ ಬೀಜಗಳನ್ನು 10 ಸೆಂ.ಮೀ. ಸಾಲುಗಳಲ್ಲಿ ಬಿತ್ತಬೇಕು. ಬೀಜಗಳು ಮೊಳಕೆ ಒಡೆಯುವತನಕ ತುಂತುರು ಜಾಡಿಯ ಮೂಲಕ ನೀರು ಹಾಕಬೇಕು.

ಬೇಸಾಯ ಸಾಮಗ್ರಿಗಳು

 

ಕ್ರ.ಸಂ

ವಿವರಗಳು

ಹೆಕ್ಟೇರಿಗೆ

1.

ಕೊಟ್ಟಿಗೆ ಗೊಬ್ಬರ

20-25 ಟನ್‌

2.

ರಸಾಯನಿಕ ಗೊಬ್ಬರಗಳು

 

 

ಸಾರಜನಕ

150 ಕಿ.ಗ್ರಾಂ

 

ರಂಜಕ

100 ಕಿ.ಗ್ರಾಂ

 

ಪೊಟ್ಯಾಷ್‌

100 ಕಿ.ಗ್ರಾಂ

ನೀರಾವರಿ ಮತ್ತು ಅಂತರ ಬೇಸಾಯ

ಬೀಜಗಳು ಮೊಳಕೆಯೊಡೆದ ನಂತರ 4-5 ದಿವಸಗಳಿಗೊಮ್ಮೆ ನೀರು ಹಾಯಿಸಬೇಕು. ಮಡಿಗಳಲ್ಲಿ ಕಳೆಗಳು ಬೆಳೆಯದಂತೆ ಕಾಳಜಿ ವಹಿಸಬೇಕು.

ಸಸ್ಯ ಸಂರಕ್ಷಣೆ

ರೋಗಗಳು: ಸರ್ಕೋಸ್ಪೊರಾ ಎಲೆ ಚುಕ್ಕೆ ರೋಗ ಮತ್ತು ತುಕ್ಕು ರೋಗ.

ಹತೋಟಿ ವಿಧಾನ

ಎಲೆ ಚುಕ್ಕೆ ರೋಗ ಮತ್ತು ತುಕ್ಕು ರೋಗ ಕಂಡಾಗ 2 ಗ್ರಾಂ ಮ್ಯಾಂಕೋಜೆಬ್‌ ಪ್ರತಿ ಲೀಟರ್‌ ನೀರಿಗೆ ಸೇರಿಸಿ ಸಿಂಪರಿಸಬೇಕು.

ಸಸ್ಯ ಸಂರಕ್ಷಣೆ

ಕೀಟಗಳು: ಹೇನು ಮತ್ತು ಎಲೆ ತಿನ್ನುವ ಹುಳು.

ಹತೋಟಿ ವಿಧಾನ

ಸೊಪ್ಪಿನಲ್ಲಿ ಕೀಟ ಬಾಧೆ ಕಂಡು ಬಂದಾಗ 2 ಮಿ.ಲೀ. ಮೆಲಾತಿಯಾನ್‌ ಅಥವಾ 4 ಗ್ರಾಂ ಕಾರ್ಬಾರಿಲ್‌ 1 ಲೀಟರ್‌ ನೀರಿಗೆ ಬೆರಸಿ ಸಿಂಪಡಿಸಿರಿ.

ಕೊಯ್ಲು

ಬಿತ್ತಿದ 30-40 ದಿವಸಗಳಲ್ಲಿ ಬೆಲೆ ಮೊದಲು ಕಟಾವಿಗೆ ಬರುತ್ತದೆ. 3 ತಿಂಗಳ ಅಂತರದಲ್ಲಿ ಮುರು ಬಾರಿ ಕಟಾವ್ರ ಮಾಡಬಹುದು.

ಇಳುವರಿ

ಪ್ರತಿ ಹೆಕ್ಟೇರಿಗೆ 10 ಟನ್‌ ಸೊಪ್ಪಿನ ಇಳುವರಿ ಪಡೆಯಬಹುದು.

ಮೂಲ : ಆಗ್ರೋಪೀಡಿಯ

3.01587301587
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top