অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಗೊಬ್ಬರದ ಅಂಶಗಳು

ಗೊಬ್ಬರದ ಅಂಶಗಳು

ಬೆಳೆ ಅವಶ್ಯಕತೆ ಹಾಗೂ ಬೆಳವಣಿಗೆ ಮಾದರಿ ಪ್ರಕಾರ, ಸಸ್ಯ ಪೋಷಕಾಂಶಗಳನ್ನು ವಿವಿಧ ವಿಧಾನಗಳಿಂದ ಒದಗಿಸಬಹುದು. ಸಾಮಾನ್ಯವಾಗಿ ಮೂರು ವಿಧಾನಗಳಲ್ಲಿ ಸಸ್ಯ ಬೆಳವಣಿಗೆಗೆ ಬೇಕಾಗುವ ಕೆಲವು ಪೋಷಕಾಂಶಗಳನ್ನು ಒದಗಿಸಲಾಗುತ್ತದೆ.

ಅವುಗಳೆಂದರೆ:-

  1. ಮಣ್ಣಿಗೆ ಹಾಕುವುದು
  2. ಎಲೆಗಳ ಮೇಲೆ ಸಿಂಪರಣೆ
  3. ಹನಿ ನೀರಾವರಿ ಮೂಲಕ
  1. ಮಣ್ಣಿಗೆ ಹಾಕುವುದು. :-
  2. ಇದು ರಸಗೊಬ್ಬರಗಳ ಬಳಕೆಯ ಸಾಮಾನ್ಯ ವಿಧಾನ. ಶಿಫಾರಸ್ಸು ಪ್ರಮಾಣದ ರಸಗೊಬ್ಬರಗಳನ್ನು ನಿರ್ದಿಷ್ಟ ಅಂತರಗಳಲ್ಲಿ ಮಣ್ಣಿಗೆ ಹಾಕುವುದು. ರಸಗೊಬ್ಬರ ಹಾಕುವ ಅವಧಿಯಲ್ಲಿ ಹಲವು ಬೇರುಗಳು ಕತ್ತರಿಸದ ಹಾಗೆ ಗಮನಹರಿಸಬೇಕು. ಇಲ್ಲದಿದ್ದರೆ, ಪೋಷಕಾಂಶಗಳನ್ನು ಹೀರಿಕೊಳ್ಳುವ ಬೇರುಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ರೋಗಕಾರಕಗಳು ಬೇರಿನ ವ್ಯವಸ್ಥೆಯ ಮೂಲಕ ಹೋಗಿ ರೋಗಕ್ಕೆ ಕಾರಣವಾಗಲು ಅವಕಾಶ ನೀಡುತ್ತದೆ. ಎಲ್ಲಾ ಶಿಫಾರಸ್ಸು ಪ್ರಮಾಣದ ರಾಸಾಯನಿಕ ಗೊಬ್ಬರ ಹಾಕುವುದಕ್ಕೆ ಮೊದಲು ಚೆನ್ನಾಗಿ ಮಿಶ್ರ ಮಆಡಬೇಕು. ಆದರೆ ಫಾಸ್ಫೇಟಿಕ್ ರಸಗೊಬ್ಬರವನ್ನು ಸತು ಹೊಂದಿರುವ ರಸಗೊಬ್ಬರದ ಜೊತೆ ಸುಣ್ಣದ ಮಿಶ್ರಣವನ್ನು ತಪ್ಪಿಸಬೇಕು. ರಾಸಾಯನಿಕ ಗೊಬ್ಬರಗಳು ಸಸ್ಯಭಾಗಗಳಿಗೆ ಸಂಪರ್ಕಬಾರದ ಹಾಗೆ ಎಚ್ಚರಿಕೆ ವಹಿಸಬೇಕು. ಫಾಸ್ಫೇಟಿಕ್ ರಸಗೊಬ್ಬರವನ್ನು ಉತ್ತಮ ಸಕ್ರಿಯ ಬೇರಿನ ವಲಯದಲ್ಲಿ ಪಟ್ಟಿಯ ರೂಪದಲ್ಲಿ ಹಾಕಬೇಕು. ಫಾಸ್ಫೇಟಿಕ್ ರಸಗೊಬ್ಬರವನ್ನು ಮಣ್ಣಿನ ಜೊತೆ ಮಿಶ್ರಣ ಮಾಡುವುದಕ್ಕೆ ಸಲಹೆ ನೀಡಬಾರದು. ಇದರಿಂದ ಮಣ್ಣಿನಲ್ಲಿ ರಂಜಕದ ಸ್ಥಿರೀಕರಣಕ್ಕೆ ಕಾರಣವಾಗುತ್ತದೆ.

    ಪೊಟ್ಯಾಷಿಯಂ ರಸಗೊಬ್ಬರವನ್ನು ಯಾವುದೇ ಗೊಬ್ಬರದ ಮಿಶ್ರಣದೊಂದಿಗೆ ಮಿಶ್ರ ಮಾಡಬಹುದು. ಇದರಿಂದ ಯಾವುದೇ ವ್ಯತಿರಿಕ್ತ ಪರಿಣಾಮಗಳನ್ನು ಉಂಟುಮಾಡುವುದಿಲ್ಲ. ಪೊಟ್ಯಾಷಿಯಂ ಗೊಬ್ಬರಗಳು ಬೆಳೆಗಳ ಬೆಳವಣಿಗೆಯ ಸಮಯದಲ್ಲಿ ಬಳಸಲ್ಪಡುತ್ತದೆ. ಆದ್ದರಿಂದ, ಈ ಹಂತದಲ್ಲಿ ಕಂತುಗಳಲ್ಲಿ ಪೊಟ್ಯಾಷಿಯಂನ್ನು ಹಾಕಲಾಗುತ್ತದೆ. ಪೊಟ್ಯಾಷಿಯಂ ಲಭ್ಯತೆ ಕಡಿಮೆಯಿರುವ ಮಣ್ಣಿನಲ್ಲಿ ಪೊಟ್ಯಾಷಿಯಂ ರಸಗೊಬ್ಬರವನ್ನು ಮೂಲಗೊಬ್ಬರವಾಗಿ ಹಾಕಬೇಕು.

  3. ಎಲೆಗಳ ಮೇಲೆ ಸಿಂಪರಣೆ  :-

ಬೆಳೆಯುವ ಸಸ್ಯಗಳ ಎಲೆಗಳಿಗೆ ರಸಗೊಬ್ಬರದ ಸಿಂಪರಣೆಯ ದ್ರಾವಣದ ಸ್ಟೊಮ್ಯಾಟೊದ ಎಲೆಯ ಎಪಿಡ್ರವಿಸ್ ಮೂಲಕ ತೂತು ಮಾಡಿ ಆ ರಂಧ್ರದ ಮುಖಾಂತರ ತುಂತುರು ಮಾಡುವ ದ್ರಾವಣವನ್ನು ಹಾಕುವುದು. ತುಂತುರು ಮಾಡಿದ ದ್ರಾವಣವು ಹೊರ ಚರ್ಮದ ಜೀವಕೋಶಗಳು ಹಾಗೂ ಕಾವಲು ಜೀವಕೋಶಗಳು ಹೀರಿಕೊಳ್ಳುತ್ತವೆ. ಎಂಬ ಊಹೆ ಇದೆ. ಆದ್ದರಿಂಧ ಎಲೆಗಳ ಮೇಲೆ ಗೊಬ್ಬರ ಸಿಂಪರಣೆಯು ಅತಿ ವೇಗವಾಗಿ ಪೋಷಕಾಂಶಗಳನ್ನು ವಿಶೇಷವಾಗಿ ಸೂಕ್ಷ್ಮ ಪೋಷಕಾಂಶಗಳನ್ನು ಸರಬರಾಜು ಮಾಡುವುದಕ್ಕೆ ಇರುವ ದಾರಿ. ಇದರಿಂದ ಸೂಕ್ಷ್ಮಪೋಷಕಾಂಶಗಳ ಕಡಿಮೆ ಪ್ರಮಾಣದ ತೀವ್ರ ಬೇಡಿಕೆಗಳನ್ನು ಪೂರೈಸಲು ಬಳಸಬಹುದು. ಎಲೆಗಳ ಸಿಂಪರಣೆಯಲ್ಲಿ ಸೂಕ್ಷ್ಮಪೋಷಕಾಂಶಗಳನ್ನು ಒದಗಿಸಿದಾಗ ಅವುಗಳ ಪ್ರತಿಕ್ರಿಯೆಯು ಪ್ರಮುಖವಾಗಿರುತ್ತದೆ.

ಬೇರುಗಳ ಮೂಲಕ ಪೂರೈಕೆ ಆಗುವ ಪೋಷಕಾಂಶಗಳು ಕೆಲವು ಮಣ್ಣಿನ ಗುಣಗಳಲ್ಲಿ ನಿರ್ಬಂಧಿಸಲಾಗಿದೆ. ಅವುಗಳೇಂದರೆ, ಹೆಚ್ಚು ರಸಸಾರ, ಹೆಚ್ಚಿನ ಸುಣ್ಣದ ಆಮ್ಲ ಹಾಗೂ ಶುಷ್ಕ ಮತ್ತು ಅರೆ ಶುಷ್ಕ ಪ್ರದೇಶಗಳಲ್ಲಿ ಆಗಿಂದಾಗ್ಗೆ ಎದುರಿಸುವ ಅಸಮರ್ಪಕ ನೀರಿನ ಪೂರೈಕೆ. ಲಘುಪೋಷಕಗಳಾದ ಕಬ್ಬಿಣ, ಮ್ಯಾಂಗನೀಸ್, ಸತು, ತಾಮ್ರವು ಮಣ್ಣಿನಲ್ಲಿ ಸ್ಥಿರವಾಗುವಂತೆ ಮಾಡಿ ಸಾಕಷ್ಟು ಪ್ರಮಾಣದಲ್ಲಿ ಸಸ್ಯಗಳಿಗೆ ಲಭ್ಯವಾಗುವುದಿಲ್ಲ. ಹಾಗೂ ಸುಪ್ತ ಅಥವಾ ಗೋಚರವಾಗುವಂತಹ ಪೋಷಕಾಂಶಗಳ ಕೊರತೆಯು ವ್ಯಾಪಕವಾಗಿದೆ. ಉದಾಹರಣೆ: ಕ್ಷಾರೀಯ ಮಣ್ಣಿನ ಸುಧಾರಣೆಯಲ್ಲಿ ಸತುವಿನ ಸಲ್ಫೇಟ್‍ನ್ನು ಮಣ್ಣಿಗೆ ಸೇರಿಸುವುದು. ಶಿಫಾರಸ್ಸು ಪದ್ಧತಿಯಲ್ಲ. ಇದರಿಂದ ಸಸ್ಯಗಳಿಗೆ ಮಣ್ಣಿನಿಂದ ಪೂರೈಕೆಯಾಗುವ ಸತು ಪೋಷಕಾಂಶವನ್ನು ಕಡಿಮೆಗೊಳಿಸುತ್ತದೆ. ಎಲೆಗಳ ಮೇಲೆ ಪೋಷಕಾಂಶಗಳ ಸಇಂಪರಣೆಯು ಒಂದು ಪೋಷಕಾಂಶದ ಕೊರತೆಯನ್ನು ಕಡಿಮೆಮಾಡಿ ಅಥವಾ ಸುಧಾರಿಸುವ ನಿರ್ದಿಷ್ಟ ಗುರಿಯನ್ನು ಹೊಂದಿದ್ದು ಇದು ಒಂದು ಉತ್ತಮ ರಸಗೊಬ್ಬರ ಒದಗಿಸುವ ಪ್ರಮುಖ ವಿಧಾನವಾಗಿದೆ. ಎಲೆಗಳ ಮೇಲೆ ಗೊಬ್ಬರದ ಸಿಂಪರಣೆಯು ಲಘುಪೋಷಕಾಂಶಗಳ ಮೇಲೆ  ಪ್ರಾಮುಖ್ಯವಾಗಿದ್ದರೂ ವಿವಿಧ ಪ್ರಾಯೋಗಿಕ ಕೃಷಿ ಪರಿಸ್ಥಿತಿಗಳ ಅಧ್ಯಯನದಿಂದ ತಿಳಿದುಬಂದಿದ್ದೇನೆಂದರೆ ಇದು ಪದೇ ಪದೇ ಬೈಹತ್/ದೊಡ್ಡ ಮಟ್ಟಿನ ಪೋಷಕಂಶಗಳನ್ನು ಎಲೆಗಳ ಮೂಲದ ಗೊಬ್ಬರ ಸಿಂಪರಣೆಯಿಂದ ಸಸ್ಯಗಳ ಚಯಾಪಚಯ ಕ್ರಿಯೆಯ ಮೇಲೆ ಸಂಭಾವ್ಯ ಪರಿಣಾಮದಿಂದಲೂ ಸಹ ಇಳುವರಿಯು ಹೆಚ್ಚಾಗುತ್ತದೆ. ಎಲೆಗಳ ಸಿಂಪರಣೆ ಮೂಲಕ ಮಾಡುವ ಪೋಷಕಾಂಶಗಳ ಪ್ರಮಾಣ ಹಾಗೂ ಸಆಮಥ್ರ್ಯವು ಮಣ್ಣಿನ ರಸಸಾರ ಮೌಲ್ಯಗಳಿಂದ ಸ್ಥಿರೀಕರಣವನ್ನು ತಡೆಯಲು ಸಹಾಯ ಮಆಡುತ್ತದೆ. ಇದು ಗೊಬ್ಬರವನ್ನು ಒದಗಿಸಿದ ಒಂದು ನಿಯಮಿ ವಿಧಾನವಲ್ಲ. ಕೊರತೆಯ ಎಲೆಗಳ ಮೇಲೆ ಕಾಣಿಸಿಕೊಂಡಾಕ್ಷಣ ಇದನ್ನು ಶೀಘ್ರ ಪರಿಹಾರ ಹಾಗೂ ಅನೇಕ ಬಾರಿ ಬೆಳೆಗಳ ಹಾನಿಯಿಂದ ಬೆಳೆ ಉಳಿಸಲು ಬಳಸಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಮುಖ್ಯ ಹಾಗೂ ದ್ವಿತೀಯ ಪೋಷಕಾಂಶಗಳನ್ನು ಎಲೆಗಳ ಸಿಂಪರಣೆಯ ಮೂಲಕ ತೆಗೆದುಕೊಳ್ಳಲಾಗುತ್ತದೆ. ಉದಾಹರಣೆ: ಬೇರುಗಳ ಷಟುವಟಿಕೆ ದುರ್ಬಲಗೊಂಡಾಗ ಸಾರಜನಕವನ್ನು ಎಲೆಗಳ ಸಿಂಪರಣೆಯ ಮೂಲಕ ಒದಗಿಸುವುದಾಗಿ ಸೂಚಿಸಲಾಗುತ್ತದೆ. ಹಾಗಯೇ ರಂಜಕಕ್ಕೆ ಎಲೆಗಳ ಸಿಂಪರಣೇಯ ಅಮೋನಿಯಂ ಫಾಸ್ಫೇಟ್ ಅಥವಾ ಪೊಟ್ಯಾಷಿಯಂ ಫಾಸ್ಫೇಟ್‍ಗಳನ್ನು ಕಡಿಮೆ ಸಾಂದ್ರತೆಯಲ್ಲಿ ರಂಜಕದ ಕೊರತೆಯನ್ನು ಸರಿಮಾಡಲು ಅಥವಾ ಸ್ಥಳೀಯ ರಂಜಕವು ಮಣ್ಣಿನಿಂದ ಸುಲಭವಾಗಿ ಲಭ್ಯವಿಲ್ಲದಾಗಲೂ ಕೂಡ ಎಲೆಗಳ ಮೂಲಕ ಪೋಷಕಾಂಶವನ್ನು ಸಿಂಪರಣೆ ಮಾಡಲಾಗಿದೆ.

ಮ್ಯಾಂಗನೀಸ್ ಸಲ್ಫೇಟ್ ಅಥವಾ ಮೆಗ್ನೀಶಿಯಂ ನೈಟ್ರೇಟ್‍ಗಳನ್ನು ಎಲೆಗಳ ಮೂಲಕ ಪೋಷಕಾಂಶಗಳ ಸಿಂಪರಣೆ ಮಾಡುವುದರಿಂದ ಸಸ್ಯಗಳಲ್ಲಿ ಮೆಗ್ನೀಶಿಯಂ ಕೊರತೆಯನ್ನು ಒದಗಿಸಬಹುದು. ಕೆಲವು ಬೆಳೆಗಳಳ್ಳಿ ಕೆಲವು ಪೋಷಕಾಂಶಗಳನ್ನು ಒಂದು ಆರಂಭಿಕ ಬೆಳವಣಿಗೆಯ ಹಂತದಲ್ಲಿ ಎಲೆಗಳ ಮೂಲಕ ಪೋಷಕಾಂಶ ಒದಗಿಸಲು ಶಿಫಾರಸ್ಸು ಮಾಡಲಾಗಿದೆ. ಬೆಳೆಗಳಲ್ಲಿ ಗರಿಷ್ಠ ಇಳುವರಿ ಪಡೆಯಲು ಎಲ್ಲಾ ಅಥವಾ ಕೆಲವು ಪೋಷಕಾಂಶಗಳ ನಿರ್ದಿಷ್ಟ ಪೂರೈಕೆಯ ಅವಶ್ಯಕತೆಯಿದೆ. ಸಸ್ಯದ ಅವಧಿಯಲ್ಲಿ ಸಾಮಾನ್ಯವಾಗಿ ಸಸ್ಯ ಪೋಷಕಾಂಶಗಳ ಬೇಡಿಕೆಯು ಅಧಿಕವಾಗಿರುತ್ತದೆ. ಇಂತಹ ವಿಷಮ ಹಂತಗಳಲ್ಲಿ ಎಲೆಗಳು ಪೋಷಕಾಂಶಗಳನ್ನು ಹೀರಿಕೊಳ್ಳುವುದಿಲ್ಲ. ನಿರ್ದಿಷ್ಠವಾಗಿ ಹೆಚ್ಚಿನ ಪರಿಣಾಮ ತೋರಿಸುತ್ತದೆ. ಇದಲ್ಲದೆ ಸಸ್ಯದ ಹಂತಗಳಲ್ಲಿ ಮಣ್ಣಿನಿಂದ ಪೋಷಕಾಂಶಗಳನ್ನು ತೆಗೆಯುವುದು ಅಸಮರ್ಪಕವಾಗಿರುತ್ತದೆ. ಅಂದರೆ ಎಲ್ಲಾ ಭಾಗದ ಸಸ್ಯಗಳಿಗೆ ಸಮರ್ಪಕವಾಗಿ ಪೋಷಕಾಂಶಗಳು ಪೂರೈಕೆಯಾಗುವುದಿಲ್ಲ. ಎಲೆಗಳ ಮೂಲಕ ಪೋಷಕಾಂಶಗಳ ಸಿಂಪರಣೆ ಯಶಸ್ವಿಯಾಗಲು ಮಣ್ಣಿನಲ್ಲಿ ಕನಿಷ್ಠ ಮಟ್ಟದ ತೇವಾಂಶ ಅನಿವಾರ್ಯವಾಗುತ್ತದೆ. ಸುದೇರ್ಘ ಶುಷ್ಕ ಹವಾಮಾನದ ಅವಧಿಯಲ್ಲಿ ಎಲೆಗಳ ಮೇಲೆ ಪೋಷಕಾಂಶಗಳ ಸಿಂಪರಣೇಯು ಸಹ ಇಳುವರಿಯ ಮೇಲೆ ಯಾವುದೇ ಅನುಕೂಲಕರ ಪ್ರಭಾವ ಸಾಧ್ಯವಾಗುವುದಿಲ್ಲ. ಎಲೆಗಳ ಮೂಲಕ ಪೋಷಕಾಂಶಗಳ ಸಿಂಪರಣೆ ವಿಶ್ವದಾದ್ಯಂತ ಕ್ರಮವಾಗಿ ತಡೆಗಟ್ಟುವ ಮತ್ತು ಗುಣಪಡಿಸುವ ಎರಡು ವಿಧಾನಗಳು ದ್ರಾವಣದ ಸಂಯೋಜನೆಯ ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಸೂಕ್ತವಾಗುವಂತೆ ಸರಿಪಡಿಸಬಹುದು.

ಸಾದ್ಯವಾದರೆ. ಪೋಷಕಾಂಶದ ದ್ರಾವಣವು ಆದರ್ಶ ಸಾಂದ್ರತೆಯಿದ್ದು ಮತ್ತು ರಸಸಾರವು ತಟಸ್ಥಕ್ಕೆ ಹತ್ತಿರವಿರಬೇಕು. ಪೈಟೊಟಾಕ್ಸಿಸಿಟಿ ಮತ್ತು ಮಳಡ ಸಂಭವಿಸುವುದನ್ನು ತಪ್ಪಿಸಲು ಮಧ್ಯವರ್ತಿಗಳು ಮತ್ತು ಮೇಲ್ಮೈ ಮೇಲೆ ಸಕ್ರಿಯವಾಗಿ ಚಟುವಟಿಕೆ ಮಾಡುವ ಮಧ್ಯವರ್ತಿಗಳ ಸೇರ್ಪಡೆಯಿಂದ ಪೋಷಕಾಂಶಗಳ ದ್ರಾವಣದ ದಕ್ಷತೆಯನ್ನು ಹೆಚ್ಚಿಸುತ್ತದೆ.

ಮೂಲ: ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು

ಕೊನೆಯ ಮಾರ್ಪಾಟು : 12/31/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate