অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಡಿಜಿ ಲಾಕರ್

ಡಿಜಿ ಲಾಕರ್  ಅಂದರೆ ಏನು

ಡಿಜಿ ಲಾಕರ್ ಒಂದು ವೈಯಕ್ತಿಕ ಸಂಗ್ರಹ ಸ್ಥಳ, ಇದನ್ನು ಪ್ರತಿ ನಿವಾಸಿಯ ಆಧಾರ್ ಸಂಖ್ಯೆಯನ್ನು ಆಧರಿಸಿ ಲಿಂಕ್ ಮಾಡಲಾಗಿ ಮೀಸಲಿಟ್ಟ ವೈಯಕ್ತಿಕ ಸಂಗ್ರಹ ಸ್ಥಳ ಎಂದು ಪರಿಗಣಿಸಬಹುದು. ವಿವಿಧ ಇಲಾಖೆಗಳು ಜಾರಿಮಾಡಿದ  ಇ-ದಾಖಲೆಗಳನ್ನುಯೂನಿಫಾರ್ಮ್ ರಿಸೋರ್ಸ್ ಐಡೆಂಟಿಫೈಯರ್ (URI) ಅಡಿಯಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲು ಬಳಸಬಹುದು. ಇ ಸೈನ್ ಸೌಲಭ್ಯವನ್ನು  ಡಿ ಜಿ ಲಾಕರ್  ನ  ಒಂದು ಭಾಗ ವಾಗಿ ನೀಡಲಾಗುವುದು ಇದನ್ನು ಇ ದಾಖಲೆ ಗಳಿಗೆ ಇ  ಸೈನ್ ಮಾಡಲು ಬಳಸಬಹುದಾಗಿದೆ

ಡಿ ಜಿ ಲಾಕರ್ ಅನ್ನು ವೆಬ್ ಪೋರ್ಟಲ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಪ್ರವೇಶಿಸಬಹುದಾಗಿದೆ.

ಡಿ ಜಿ ಲಾಕರ್ ನಬಹುಮುಖ್ಯ ಭಾಗಗಳು

ಪ್ರತಿ ನಿವಾಸಿಯ ಡಿ ಜಿ ಲಾಕರ್ ಖಾತೆ ಕೆಳಗಿನ ವಿಭಾಗಗಳನ್ನು ಹೊಂದಿದೆ

ಡ್ಯಾಶ್ಬೋರ್ಡ್

ಈ ವಿಭಾಗವು  ನೀವು ಪ್ರವೇಶಿಸಿದಾಗ ನೋಡುವ ಮೊದಲ ಪುಟ ಇದರಲ್ಲಿ ನೀವು ವೀಕ್ಷಿಸಿದ ಎಲ್ಲಾ ನಿಮ್ಮ ದಾಖಲೆಗಳ ಸಾರಾಂಶ ತೋರಿಬರುತ್ತದೆ.

ನೀಡಲಾಗಿರುವದಾಖಲೆಗಳು

ಈ ವಿಭಾಗವು ಸರ್ಕಾರ ಅಥವಾ ಡಿ ಜಿ ಲಾಕರ್ ನಲ್ಲಿ ಭಾಗವಹಿಸುವ ಇತರ ಸಂಸ್ಥೆಗಳು ನೀಡಲಾಗುವ ದಾಖಲೆಗಳನ್ನು, ಪ್ರಮಾಣಪತ್ರಗಳ URI ಗಳನ್ನು (ಕೊಂಡಿಗಳನ್ನು ) ತೋರಿಸುತ್ತದೆ.

ಅಪ್ಲೋಡ್ಡಾ ಕ್ಯುಮೆಂಟ್ಸ್

ಈ ವಿಭಾಗವು ನೀವು ಅಪ್ಲೋಡ್ ಮಾಡುವ ಎಲ್ಲಾ ದಾಖಲೆಗಳನ್ನು ತೋರಿಸುತ್ತದೆ. ನೀವು ದಾಖಲೆ ಪ್ರಕಾರ, ಇ ಸೈನ್  ನವೀಕರಿಸಬಹುದು ಮತ್ತು ಈ ಅಪ್ಲೋಡ್ ದಾಖಲೆಗಳನ್ನು ಹಂಚಿಕೊಳ್ಳ ಬಹುದು

ಹಂಚಿಕೆ ಮಾಡಲಾದ ಡಾಕ್ಯುಮೆಂಟ್ಗಳು - ಈ ವಿಭಾಗವು ನೀವು ಇತರರೊಂದಿಗೆ  (ಇಮೇಲ್ ಮೂಲಕ) ಹಂಚಿಕೊಂಡ ದಾಖಲೆಗಳ ಪಟ್ಟಿಯನ್ನು ತೋರಿಸುತ್ತದೆ.

ಚಟುವಟಿಕೆ (ಆಕ್ಟಿವಿಟಿ )

ಈ ವಿಭಾಗ ನೀವು ಡಿ ಜಿ ಲಾಕರ್ ಖಾತೆಯಲ್ಲಿ ನಡಿಸಿದ ಚಟುವಟಿಕೆಗಳ ದಾಖಲೆ ಆಗಿದೆ. ನೀವು ಲಾಗ್ ಆದ ವಿವರ,ಫೈಲ್ ಅಪ್ಲೋಡ್, ಡೌನ್ಲೋಡ್, ಇ ಸೈನ್ ಇತ್ಯಾದಿ ಚಟುವಟಿಕೆಗಳ ಬಗ್ಗೆ ವಿವರಗಳನ್ನು ಒಳಗೊಂಡಿರುತ್ತದೆ.

ವಿತರಕರು (ಇಸ್ಸೂರ್ಸ್)

ಈ ವಿಭಾಗದಲ್ಲಿ ಸರ್ಕಾರ ಅಥವಾ ಇತರ ಇ - ಇಲಾಖೆಗಳು ನಿಮಗೆ  ನೀಡಿದ ಯಾವುದೇ ದಾಖಲೆ / ಪ್ರಮಾಣಪತ್ರವನ್ನು  URI (ಲಿಂಕ್) ರೂಪದಲ್ಲಿ ಕಾಣಿಸುತ್ತದೆ.

ಬಳಸುವುದು ಹೇಗೆ

ನಿವಾಸಿಗಳಿಗೆ

  • ಲಾಗಿನ್ ಮಾಡಲು, ಲಾಗಿನ್ ಎಂದು ಸೂಚಿಸಿರುವ ಜಾಗದಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.
  • ಒಂದು ಟೈಮ್ ಪಾಸ್ವರ್ಡ್ (OTP) ಅನ್ನು ನಿಮ್ಮ  ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುವುದು.
  • ಬಳಕೆದಾರ ಹೆಸರು ಮತ್ತು ಪಾಸ್ವರ್ಡ್ ಆಯ್ಕೆ ನಂತರ ಅಗತ್ಯ ಸ್ಥಳದಲ್ಲಿ OTP ನಮೂದಿಸಿ. ಇದು  ನಿಮ್ಮ ಡಿ ಜಿ ಲಾಕರ್ ಖಾತೆಯನ್ನು ರಚಿಸುತ್ತದೆ.
  • ನಿಮ್ಮ ಡಿ ಜಿ ಲಾಕರ್ ಖಾತೆಯನ್ನು ಯಶಸ್ವಿಯಾಗಿ ರಚಿಸಿದ ನಂತರ, ನೀವು ಸ್ವಯಂಪ್ರೇರಣೆಯಿಂದ ಹೆಚ್ಚುವರಿ ಸೇವೆಗಳನ್ನು ಪಡೆಯಲು ನಿಮ್ಮ ಆಧಾರ್ ಸಂಖ್ಯೆ (ಯುಐಡಿಎಐ ಹೊರಡಿಸಿದ) ಒದಗಿಸಬಹುದು.
  • ಮೇಲೆ ತಿಳಿಸಿದ ವಿವರ ಪೂರ್ಣಗೊಂಡ ಮೇಲೆ, ನಿವಾಸಿಗಳು ವಿವಿಧ ವಿತರಕರಿಂದ ಡಿಜಿಟಲ್ ಲಾಕರ್ ಅಪ್ಲೋಡ್ ಮಾಡಿದ ಇ-ದಾಖಲೆಗಳನ್ನು URI ಗಳನ್ನು ವೀಕ್ಷಿಸಬಹುದು.
  • ನಂತರ ನಿವಾಸಿಗಳು (ಖಾತೆದಾರರು) ತಮ್ಮ ಡಿಜಿಟಲ್ ಲಾಕರ್ ಇ -ದಾಖಲೆಗಳ ಅಪ್ಲೋಡ್ ಮತ್ತು ಅವುಗಳನ್ನು ಇ ಸೈನ್ ಮಾಡಬಹುದು.
  • ನಿವಾಸಿಗಳು (ಖಾತೆದಾರರು) ಇ-ಡಾಕ್ಯುಮೆಂಟ್ ಲಿಂಕ್ ಮೂಲಕ  ದಾಖಲೆಗಳನ್ನು ವಿನಂತಿದಾರರ ಇಮೇಲ್ ವಿಳಾಸಕ್ಕೆ ಹಂಚಿಕೊಳ್ಳಬಹುದು
  • ಒಮ್ಮೆ ಮೇಲೆತಿಳಿಸಿದ  ಪ್ರಕ್ರಿಯೆ ಯಶಸ್ವಿಯಾಗಿ ಮುಗಿದ ನಂತರ ನೀವು ಆಧಾರ್ OTP ಅಥವಾ ಪ್ರವೇಶಿಸುವ ಬಳಕೆದಾರ ಹೆಸರು ಮತ್ತು ಪಾಸ್ವರ್ಡ್ ಮುಖಾಂತರ  ನಿಮ್ಮ ಡಿಜಿಟಲ್ ಲಾಕರ್ ಖಾತೆಗೆ ಸೈನ್ ಇನ್ ಅಥವಾ ಸಾಮಾಜಿಕ ಮಾಧ್ಯಮ ಖಾತೆಗಳಳಿಗೆ ಸೈನ್ ಇನ್ ಮಾಡಬಹುದು.

ವಿತರಕರಿಗೆ (ಇಶ್ಯೂಅರ್ಸ್)

  • ಯೂನಿಕ್ ಐ ಡಿ  ಪಡೆಯಲು ವಿತರಕರು ಡಿಜಿಟಲ್ ಲಾಕರ್ ವ್ಯವಸ್ಥೆ ಯಲ್ಲಿ ಅಗತ್ಯವಾಗಿ ನೋಂದಾವಣಿ ಮಾಡಿಕೊಳ್ಳಬೇಕು.
  • ಒಮ್ಮೆ ಯೂನಿಕ್ ಐ ಡಿ  ಪಡೆದ ನಂತರ ವಿತರಕರು API ಅನ್ನು ಬಳಸಿಕೊಂಡು ಗೊತ್ತುಪಡಿಸಿದ ಆಕರದಿಂದ ಪ್ರಮಾಣಿತ XML ಸ್ವರೂಪದಲ್ಲಿ ದಾಖಲೆಗಳನ್ನು ಅಪ್ಲೋಡ್ ಮಾಡಬಹುದು.
  • ಅಪ್ಲೋಡ್ ಮಾಡಿದ ಪ್ರತಿ ದಾಖಲೆಗಳು  URI  ಮತ್ತು ನೀಡಿದ ಯೂನಿಕ್ ಐ ಡಿ  ಆಧರಿಸಿರುತ್ತದೆ. ಡಾಕ್ಯುಮೆಂಟ್ URI ಅನ್ನು ಸಂಬಂಧಪಟ್ಟ ನಿವಾಸಿಗಳ ಆಧಾರ್ ಸಂಖ್ಯೆಯನ್ನು ಆಧರಿಸಿ  ಡಿಜಿಟಲ್ ಲಾಕರ್ ಖಾತೆಗೆ ಕಳುಹಿಸಲಾಗುವುದು

ವಿನಂತಿದಾರರಿಗೆ

  • ಮೊತ್ತ ಮೊದಲನೆಯದಾಗಿ ವಿನಂತಿದಾರ ಪ್ರವೇಶ ಗೇಟ್ವೇ ಮಂಡಳಿಯಲ್ಲಿ ಡಿಜಿಟಲ್ ಲಾಕರ್ ವ್ಯವಸ್ಥೆಯಲ್ಲಿ ನೋಂದಣಿ ಮಾಡಿಕೊಳ್ಳುವ ಅಗತ್ಯವಿದೆ
  • ವಿನಂತಿಸುವವರು ಸುರಕ್ಷಿತವಾಗಿ ಪ್ರವೇಶ ಗೇಟ್ವೇ ಮೂಲಕ ದಾಖಲೆಗಳ  URI ಗಳನ್ನು (ಯೂನಿಫಾರ್ಮ್ ರಿಸೋರ್ಸ್ ಐಡೆಂಟಿಫೈಯರ್) ಬಳಸಬಹುದು
  • ನಿವಾಸಿ ಡಿಜಿಟಲ್ ಲಾಕರ್ ವಿವಿಧ ಅಂಶಗಳು ಯಾವುವು


ಪ್ರತಿ ನಿವಾಸಿ ಡಿಜಿಟಲ್ ಲಾಕರ್ ಕೆಳಗಿನ ವಿಭಾಗಗಳನ್ನು ಹೊಂದಿದೆ:

ನನ್ನ ಪ್ರಮಾಣಪತ್ರಗಳುಈ ವಿ ಭಾಗವು ಎರಡು ಉಪ ವಿಭಾಗಗಳನ್ನು  ಒಳಗೊಂಡಿದೆ

ಡಿಜಿಟಲ್ ಡಾಕ್ಯುಮೆಂಟ್

ಇದು ಸರಕಾರ  ಅಥವಾ ಇತರ ಇಲಾಖೆಗಳು ನಿವಾಸಿಗಳಿಗೆ ಬಿಡುಗಡೆ ದಾಖಲೆಗಳನ್ನು  (ಕೊಂಡಿಗಳು) ಹೊಂದಿರುತ್ತದೆ. ಪ್ರತಿ ಡಾಕ್ಯುಮೆಂಟ್ ಕೆಳಗಿನ ಮಾಹಿತಿಯನ್ನು ಹೊಂದಿರುತ್ತದೆ.

URI

ಡಾಕ್ಯುಮೆಂಟ್ ಹೆಸರು

ನೀಡಲಾದ ದಿನಾಂಕ

ಹಂಚಿಕೊಳ್ಳುವ ವಿವರ

ಅಪ್ ಲೋಡೆಡ್ ಡಾಕ್ಯುಮೆಂಟ್ಸ್

ಇದರಲ್ಲಿ  ನಿವಾಸಿ ಅಪ್ಲೋಡ್  ಮಾಡಿದ ಎಲ್ಲಾ ದಾಖಲೆಗಳ ಪಟ್ಟಿಯನ್ನು ನೋಡಬಹುದು. ಪ್ರತಿ ಡಾಕ್ಯುಮೆಂಟ್ ಕೆಳಗಿನ ಮಾಹಿತಿಯನ್ನು ಹೊಂದಿರುತ್ತದೆ.

ಡಾಕ್ಯುಮೆಂಟ್ ಹೆಸರು

ಅಪ್ಲೋಡ್ ದಿನಾಂಕ

ಸ್ಟೇಟಸ್ : ಡಾಕ್ಯುಮೆಂಟ್ ಇ ಸೈನ್ ಆಗಿದೆಯಾ ಇಲ್ಲವಾ ಎಂದು ಸೂಚಿಸಲು.

ಆಕ್ಷನ್ : ಡಿಜಿಟಲ್ ಲಾಕರ್  ನಿಂದ ಹೊರಬರಲು ಅಥವಾತೆಗೆದುಹಾಕಲು,  ಡಾಕ್ಯುಮೆಂಟ್ ಅಳಿಸಲು.

ವಿವರಗಳು

ಹಂಚಿಕೊಳ್ಳಿ: ಇಮೇಲ್ ಮೂಲಕ ಅಪ್ಲೋಡ್ ಡಾಕ್ಯುಮೆಂಟ್ ಹಂಚಿಕೊಂಡಿರುವುದು

ಡಿ ಜಿ ಸೈನ್ ಆಯ್ಕೆ : ಒಮ್ಮೆ ದಾಖಲೆಯಲ್ಲಿ  ಇ  ಸೈನ್ ಮಾಡಿದನಂತರ  √ ತೋರಿಸಲಾಗುತ್ತದೆ

ಸ್ವ ಭೂಮಿಕೆ (ಮೈ ಪ್ರೊಫೈಲ್ )ಈ ವಿಭಾಗವು ಸಂಪೂರ್ಣವಾಗಿ ನಿವಾಸಿಯ  (ಹೆಸರು, ಜನನ, ಲಿಂಗ, ವಸತಿ ವಿಳಾಸ, ಇಮೇಲ್, ಮೊಬೈಲ್ ಸಂಖ್ಯೆ ದಿನಾಂಕ) ಯುಐಡಿಎಐ ಡೇಟಾಬೇಸ್ ವಿವರವನ್ನು  ತೋರಿಸುತ್ತದೆ.

ನನಗೆ ನೀಡುವವರು :

ಈ ವಿಭಾಗವು ನಿವಾಸಿಗೆ ದಸ್ತಾವೇಜುಗಳನ್ನು ನೀಡುವವರ ಹೆಸರು ಮತ್ತು ನೀಡಲ್ಪಟ್ಟ ದಸ್ತಾವೇಜುಗಳನ್ನು ಸಂಖ್ಯೆ ತೋರಿಸುತ್ತದೆ.

ನನ್ನನ್ನುವಿನಂತಿಸುವವರು :

ಈ ವಿಭಾಗವು ವಿನಂತಿಸುವವರ ಹೆಸರು ಮತ್ತು ವಿನಂತಿದಾರ ನಿವಾಸಿಗೆ  ಕೋರಿದ ದಾಖಲೆಗಳ ಸಂಖ್ಯೆ ತೋರಿಸುತ್ತದೆ.

ನಿರ್ದೇಶಿಕೆಗಳು :

ಈ ವಿಭಾಗವು ತಮ್ಮ URL ಜೊತೆಗೆ ನೋಂದಾಯಿತ ವಿತರಕರು ಮತ್ತು ವಿನಂತಿದಾರರ ಸಂಪೂರ್ಣ ಪಟ್ಟಿಯನ್ನು ತೋರಿಸುತ್ತದೆ.

ಹೇಗೆ ನಾನು ನನ್ನ ಡಿಜಿಟಲ್ ಲಾಕರ್ನಲ್ಲಿ ಡಾಕ್ಯುಮೆಂಟ್ ಅಪ್ಲೋಡ್ ಮಾಡಬಹುದು

ಅಪ್ಲೋಡ್ ದಾಖಲೆಗಳ ಸೌಲಭ್ಯ 'ನನ್ನ ಪ್ರಮಾಣಪತ್ರಗಳು' ವಿಭಾಗದಲ್ಲಿ ಲಭ್ಯವಿದೆ

  • ನೀವು ಮೊದಲು ದಾಖಲೆ ಪ್ರಕಾರ (ಯಸ್ ಯಸ್ ಎಲ್ ಸಿ ಪ್ರಮಾಣಪತ್ರ,  ಹೆಚ್ ಯಸ್ ಸಿ  ಪ್ರಮಾಣಪತ್ರ, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಇತ್ಯಾದಿ) ಡ್ರಾಪ್ ಡೌನ್ ಮುಖಾಂತರ ಆಯ್ಕೆ ಮಾಡುವ  ಅಗತ್ಯವಿದೆ.
  • ದಾಖಲೆಗೆ  ಹೆಸರನ್ನು ಒದಗಿಸಿ
  • ಆಯ್ಕೆ ದಾಖಲೆ ಪ್ರಕಾರ ಆಧರಿಸಿ, ನೀವು ಡಾಕ್ಯುಮೆಂಟ್ ಸಂಬಂಧಿಸಿದ ಇತರ ವಿವರಗಳನ್ನು  ತುಂಬುವ  ಅಗತ್ಯವಿದೆ.
  • ಡಿಜಿಟಲ್ ಲಾಕರ್ ಅಪ್ಲೋಡ್ ಮಾಡಲು ನಿಮ್ಮ ಸ್ಥಳೀಯ ಗಣಕದಿಂದ ಫೈಲ್ ಆಯ್ಕೆಮಾಡಿ, ಪ್ರತಿ ಫೈಲ್ ಅಪ್ಲೋಡ್ 1MB ಹೆಚ್ಚು ಇರಬಾರದು [1 ಎಂಬಿ ಫೈಲ್ನ ಗರಿಷ್ಠ ಗಾತ್ರ] ಪಿಡಿಎಫ್, JPG, JPEG, PNG, BMP ಮತ್ತು gif ಫೈಲ್ ಪ್ರಕಾರಗಳಿಗೆಅವಕಾಶವಿದೆ
  • ಡಾಕ್ಯುಮೆಂಟ್ ವಿವರಣೆ ಒದಗಿಸಿ (ಗರಿಷ್ಠ 50 ಅಕ್ಷರಗಳು)
  • 'ಅಪ್ಲೋಡ್' ಬಟನ್ ಕ್ಲಿಕ್ ಮಾಡಿ.

ಯಶಸ್ವಿ ಅಪ್ಲೋಡ್ ಮೇಲೆ, ಡಾಕ್ಯುಮೆಂಟ್ 'ಅಪ್ಲೋಡ್ ಡಾಕ್ಯುಮೆಂಟ್ಸ್' ಉಪವಿಭಾಗ ಅಡಿಯಲ್ಲಿ ಪಟ್ಟಿ ತೋರಿಬರುವುದು.

ನನ್ನ ಡಿಜಿಟಲ್ ಲಾಕರ್ ಇ-ದಾಖಲೆಗಳನ್ನು ಹೇಗೆ  ಹಂಚಿಕೊಳ್ಳಬಹುದು?

ನಿಮ್ಮ ಇ ಡಾಕ್ಯುಮೆಂಟ್ ಹಂಚಿಕೊಳ್ಳಲು ( 'ಅಪ್ಲೋಡ್ ಡಾಕ್ಯುಮೆಂಟ್ಸ್' ಉಪವಿಭಾಗ ಅಡಿಯಲ್ಲಿ 'ಡಿಜಿಟಲ್ ಡಾಕ್ಯುಮೆಂಟ್ಸ್' ಉಪವಿಭಾಗ ಅಡಿಯಲ್ಲಿ URI  ಎಂದು ಸೂಚಿಸಲಾಗಿದೆ) ನೀವು ಹಂಚಿಕೊಳ್ಳಲು ಬಯಸುವ  ಡಾಕ್ಯುಮೆಂಟ್ ಮುಂದೆ ಒದಗಿಸಿದ 'ಹಂಚಿಕೊಳ್ಳಿ' ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

ಒಂದು ಸಂವಾದ ಪೆಟ್ಟಿಗೆಯ ಪಾಪ್ ಅಪ್ ತೋರಿಬರುತ್ತದೆ . ದಯವಿಟ್ಟು ಸಂವಾದ ಪೆಟ್ಟಿಗೆಯಲ್ಲಿ ಸ್ವೀಕರಿಸುವವರ ಇಮೇಲ್ ವಿಳಾಸವನ್ನು ನಮೂದಿಸಿ ಮತ್ತು 'ಹಂಚಿಕೊಳ್ಳಿ' ಬಟನ್ ಕ್ಲಿಕ್ ಮಾಡಿ.

ಡಾಕ್ಯುಮೆಂಟ್ ಸ್ವೀಕರಿಸುವವರಿಗೆ  no-reply@digitallocker.gov.in

ಇಮೇಲ್ ಮೂಲಕ ಸ್ವೀಕರಿಸುವವರಿಗೆ ಹಂಚಿಕೆಯಾಗುತ್ತದೆ. ಇಮೇಲ್ ವಿಷಯದ ಸಾಲಿನಲ್ಲಿ ಡಾಕ್ಯುಮೆಂಟ್ ಕುರಿತ ಬಗ್ಗೆ ತೋರಿಬರುತ್ತದೆ. ಇಮೇಲ್ ವಿವರದ ವಿಭಾಗ  ಡಾಕ್ಯುಮೆಂಟ್ URI ಲಿಂಕ್ ಮತ್ತು ಕಳುಹಿಸುವವರ ಹೆಸರು ಮತ್ತು ಆಧಾರ್ ಸಂಖ್ಯೆಯನ್ನು ಹೊಂದಿರುತ್ತದೆ.

ಸ್ವೀಕರಿಸುವವರು  ಇಮೇಲ್ ಒದಗಿಸಿದ URI ಅನ್ನು ಲಿಂಕ್ ಬಳಸಿ ಡಾಕ್ಯುಮೆಂಟ್ ಪ್ರವೇಶಿಸಬಹುದು

ಇದು ಹೇಗೆ ಸಹಾಯ ಮಾಡುತ್ತದೆ

ಇದು ಭೌತಿಕ ದಾಖಲೆಗಳ ಕಡಿಮೆ ಬಳಕೆ  ಮತ್ತು ಇ-ದಾಖಲೆಗಳ ದೃಢೀಕರಣವನ್ನು ಒದಗಿಸುತ್ತದೆ. ಸರ್ಕಾರ ನೀಡಲ್ಪಟ್ಟ ದಸ್ತಾವೇಜುಗಳ ವೀಕ್ಷಣೆಗೆ  ಸುರಕ್ಷಿತ ಪ್ರವೇಶವನ್ನು ಒದಗಿಸುತ್ತದೆ. ನಿವಾಸಿಗಳಿಗೆ ಅಗತ್ಯ ಸೇವೆಗಳನ್ನು ಒದಗಿಸುವಲ್ಲಿ  ಸರ್ಕಾರದ ಮತ್ತು ಇತರ ಇಲಾಖೆಗಳ ಆಡಳಿತಾತ್ಮಕ ವೆಚ್ಚವನ್ನು ಸಹ ಕಡಿಮೆಗೊಳಿಸುತ್ತದೆ

ಈಗಲೇ ನೋಂದಯಿಸಿ

ಇಮೇಲ್ ಮೂಲಕ ಡಿ ಜಿ ಲಾಕರ್ ಬೆಂಬಲ ತಂಡ: support@digitallocker.gov.in

ಮೂಲ: ಡಿಜಿ ಲಾಕರ್

ಕೊನೆಯ ಮಾರ್ಪಾಟು : 3/6/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate