অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ವಾಷಿ೯ಕ ಅನುದಾನ

ವಾಷಿ೯ಕ ಅನುದಾನ

  • ವಿ= ಸ್ಥಿರ ಸಂದಾಯಗಳು/ಆದಾಯಗಳ ಒಂದು ಸರಣಿ. ಒಂದು ನಿದಿ೯ಷ್ಟ ಪುನರಾವತ೯ನೆಯಲ್ಲಿ, ಒಂದು ನಿದಿ೯ಷ್ಟ ಅವಧಿಯಲ್ಲಿ .
  • ಉದಾ:- ಪ್ರತಿ ವಷ೯ ರೂ.೧೦೦೦ ದ ಸಂದಾಯ ಎಲ್.ಆಯ್.ಸಿಯಿಂದ ಮುಂದಿನ ೨೦ ವಷ೯ಗಳ ವರೆಗೆ. ೧೦೦ ರೂಪಾಯಿ ಪುನರಾವತಿ೯ತ ಠೇವಣಿ ಬ್ಯಾಂಕಿನಲ್ಲಿ ಐದು ವಷ೯ಗಳವರೆಗೆ.
  • ಎರಡು ತರಹದ ವಷಾ೯ಶನಗಳು :- ಸಾಧಾರಣ ವಷಾ೯ಶನ, ಸಂದಾಯವು ಪ್ರತಿ ಅವಧಿಯ ಕೊನೆಯಲ್ಲಿ ಮಾತ್ರ ಇರುತ್ತದೆ. ತೆರಬೇಕಾದ ವಷಾ೯ಶನ: ಸಂದಾಯವು ಪ್ರತಿ ಅವಧಿಯ ಪ್ರಾರಂಭದಲ್ಲಿ ಇರುತ್ತದೆ.

ವಷಾ೯ಶನದ ಹಾಲಿ ಮತ್ತು ಮುಂಬರುವ ಮೌಲ್ಯ

  • ಪಿ.ವಿಯ ವಷಾ೯ಶನವನ್ನು ಲೆಕ್ಕ ಹಾಕಲು, ಪ್ರತಿ ಪಿವಿ ಯ ಸಂದಾಯವನ್ನು ಲೆಕ್ಕ ಮಾಡಬೇಕು ಮತ್ತು ಎಲ್ಲವನ್ನು ಕೂಡಿಸಬೇಕು. ಉದಾ:- ಒಂದು ವೇಳೆ ೧೦೦ ರೂಪಾಯಿಯನ್ನು ಪ್ರತಿ ವಷ೯ದ ಕೊನೆಯಲ್ಲಿ ೧೦ ವಷ೯ಗಳವರೆಗೆ ಸಂದಾಯ ಮಾಡಿದರೆ, ನಾವು ಈ ಎಲ್ಲ ೧೦೦ ಸಂದಾಯಗಳ ಪಿ.ವಿ.ಯನ್ನು ರೂ.೧೦೦ ಕ್ಕೆ ಬೇರೆ ಬೇರೆಯಾಗಿ ಲೆಕ್ಕ ಮಾಡಿ ಎಲ್ಲ ಹತ್ತು ಮೊತ್ತಗಳನ್ನು ಕೂಡಿಸಬೇಕು.
  • ಅದೇ ರೀತಿ ಎಫ್.ವಿ.ಯ ವಷಾ೯ಶನವನ್ನು ಲೆಕ್ಕ ಹಾಕಲು ಪ್ರತೀ ವಷ೯ದ ಪಿ.ವಿಯ ಸಂದಾಯವನ್ನು ಲೆಕ್ಕ ಮಾಡಿ ಕೂಡಿಸಬೇಕಾಗುತ್ತದೆ. ಉದಾ:- ಒಂದು ವೇಳೆ ೧೦೦ ರೂಪಾಯಿಗಳನ್ನು ಪ್ರತಿ ವಷ೯ದ ಕೊನೆಯಲ್ಲಿ ೧೦ ವಷ೯ದ ಕೊನೆಯಲ್ಲಿ ೧೦ ವಷ೯ಗಳವರೆಗೆ ಸಂದಾಯ ಮಾಡಿದರೆ, ನಾವು ಈ ಎಲ್ಲ ೧೦ ಸಂದಾಯಗಳ ಎಫ್.ವಿ.ಯನ್ನು ರೂ.೧೦೦ಕ್ಕೆ ಬೇರೆ ಬೇರೆಯಾಗಿ ಲೆಕ್ಕ ಮಾಡಿ ಎಲ್ಲ ಮೌಲ್ಯಗಳನ್ನು ಕೂಡಿಸಬೇಕು.

ಪಿ.ವಿ. ಮತ್ತು ಎಫ್.ವಿ.ಗಳ ಲೆಕ್ಕಮಾಡುವಾಗ ತೆಗೆದುಕೊಳ್ಳಬೇಕಾದ ಮುಂಜಾಗ್ರತೆಗಳು

  • ಪುಸ್ತಕಗಳಲ್ಲಿ ಕೊಟ್ಟ ಸೂತ್ರದಿಂದ ನಾವು ಆರ್.ನ ಸರಿಯಾದ ಲೆಕ್ಕಕ್ಕೆ ತಲುಪಬೇಕು. ಅಂದರೆ ಬಡ್ಡಿ ದರ ಉದಾ:- ದತ್ತ ಬಡ್ಡಿ ದರವು ೧೨% ಪ್ರತಿ ವಷ೯ಕ್ಕೆ ಇದ್ದು, ಒಂದು ವೇಳೆ ಸಂದಾಯವನ್ನು ಪ್ರತಿ ವಷ೯ ಪಡೆದರೆ , ಆರ್=೧೨/೧೦೦=೦.೧೨ , ಆದರೆ ಒಂದು ವೇಳೆ ಸಂದಾಯವನ್ನು ಮಾಸಿಕವಾಗಿ ಪಡೆದರೆ ಅದು ೧೨/೧೦೦*೧೨=೦.೦೧ ಆಗುತ್ತದೆ. ತ್ರೈಮಾಸಿಕ ಸಂದಾಯಕ್ಕೆ ಅದು ೦.೦೩ ಆಗುತ್ತದೆ ಮತ್ತು ಅಧ೯ ವಷ೯ದ ಸಂದಾಯಕ್ಕೆ ಅದು ೦.೦೬ ಆಗುವುದು.

ಕಡಿಮೆಯಾಗುವ ನಿಧಿ

  • ಇದರ ಕಲ್ಪನೆಯು ವಷ೯ಶನದ ಹಾಗೆಯೇ ಇದೆ.
  • ನಿಮಗೆ ಒಂದು ಸ್ಥಿರ ಮೊತ್ತ(ಎ) ೫ ವಷ೯ಗಳ ನಂತರ ಬೇಕೆಂದು ತಿಳಿದುಕೊಳ್ಳಿ, ನೀವು ಬ್ಯಾಂಕಿನಲ್ಲಿ ಪ್ರತಿ ವಷ೯ ಮೊತ್ತ (ಸಿ)ಯ ಠೇವಣಿ ಇಡಬೇಕು. ಇದು ೫ ವಷ೯ಗಳ ನಂತರ ಎ ಆಗುತ್ತದೆ ಮತ್ತು ಇದನ್ನು ಋಣ ತೀರಿಸಲು ಅಥವಾ ಯಾವುದೇ ಉದ್ದೇಶಕ್ಕೆ ಬಳಸಬಹುದಾಗಿದೆ. ನಮಗೆ ಬಡ್ಡಿ ದರ ಮತ್ತು ಎಫ್.ವಿ.ಗೊತ್ತಿದ್ದ ಕಾರಣ ನಾವು ‘ ಸಿ ’ ಯನ್ನು ಲೆಕ್ಕ ಹಾಕಬಹುದು.

ಕರಾರು ಪತ್ರ

  • ಕರಾರು ಪತ್ರವು ಕರಾರು ಪತ್ರಕೊಡುವವರು ಎತ್ತಿದ ಒಂದು ತರದ ಋಣವಾಗಿದೆ.
  • ಕರಾರು ಪತ್ರ ಕೊಡುವವರು ಖರೀದಿ ಮಾಡುವವರಿಗೆ ಅದರ ಹಣ ಉಪಯೋಗಿಸಿದ್ದಕ್ಕಾಗಿ ಬಡ್ಡಿ ಕೊಡುತ್ತಾರೆ.
  • ಕರಾರು ಪತ್ರಕ್ಕೆ ಸಂಬಂಧಿಸಿದ ಪದಗಳು:- ಮುಖಮೌಲ್ಯ, ಹಕ್ಕಿನ ಚೀಟಿಯ ದರ, ಪರಿಪಕ್ವತೆ,(ಮ್ಯಾಚುರಿಟಿ) ಮರಳಿ
  • ಕೊಳ್ಳುವಿಕೆಯ ಮೌಲ್ಯ , ಮಾರುಕಟ್ಟೆ ಮೌಲ್ಯ.
  • ಮುಖ ಮೌಲ್ಯ ಮತ್ತು ಮರಳಿ ಕೊಳ್ಳುವಿಕೆಯ ಮೌಲ್ಯ, ಬೇರೆಯಾಗಿರಬಹುದು, ಆದರೆ ಅವು ಸ್ಥಿರವಾಗಿರುತ್ತವೆ ಮತ್ತು ಗೊತ್ತಿರುತ್ತವೆ.
  • ಕರಾರು ಪತ್ರದ ಮಾರುಕಟ್ಟೆ ಮೌಲ್ಯ ಮುಖ ಮೌಲ್ಯಗಿಂತ ಬೇರೆಯಾಗಿರಬಹುದು ಮತ್ತು ಅದು ಬದಲಾಗುತ್ತಿರುತ್ತದೆ.

ಕರಾರು ಪತ್ರಗಳ ಮೌಲ್ಯ ಮಾಪನ

  • ಕರಾರು ಪತ್ರ ಖರೀದಿಸುವವನು ಮ್ಯಾಚುರಿಟಿಯ ನಂತರ ನಿಯಮಿತವಾಗಿ ಬಡ್ಡಿಯ ಸಂದಾಯ ಮತ್ತು ಮರಳಿಕೊಳ್ಳುವಿಕೆಯ ಮೊತ್ತ ಪಡೆಯುತ್ತಾನೆ.
  • ಕರಾರು ಪತ್ರದ ಮೇಲಿನ ಬಡ್ಡಿ (ಇದನ್ನು ಹಕ್ಕಿನ ಚೀಟಿಯ ದರ ಎಂತಲೂ ಕರೆಯುತ್ತಾರೆ)ಯು ಅದನ್ನು ಕೊಡುವಾಗ ಸ್ಥಿರವಾಗಿರುತ್ತದೆ. ಆದರೆ ಮಾರುಕಟ್ಟೆಯಲ್ಲಿ ಬಡ್ಡಿದರವು ಬದಲಾಗುತ್ತಿರುತ್ತದೆ. ಮತ್ತು ಆದ್ದರಿಂದ , ಕರಾರು ಪತ್ರದ ಮಾರುಕಟ್ಟೆ ಬೆಲೆಯೂ ಬದಲಾಗುತ್ತದೆ.
  • ಕರಾರು ಪತ್ರದ ಮಾರುಕಟ್ಟೆ ಬೆಲೆ ಅಥವಾ ವಾಸ್ತವಿಕ ಮೌಲ್ಯವು ಮುಖ ಮೌಲ್ಯಕ್ಕಿಂತ ಭಿನ್ನವಾಗಿರುತ್ತದೆ. ಒಂದು ವೇಳೆ ಯಾವುದೇ ಸಮಯದಲ್ಲಿ ಹಕ್ಕು ಚೀಟಿಯ ದರವು ಮಾರುಕಟ್ಟೆಯ ಬಡ್ಡಿ ದರಕ್ಕಿಂತ ವಿಭಿನ್ನವಾಗಿದೆ
  • ಮಾರುಕಟ್ಟೆ ಮೌಲ್ಯವು ಬಳಕೆಯಾಗುವ ಮಾರುಕಟ್ಟೆ ಬೆಲೆಯ ರಿಯಾಯತಿ ಹಕ್ಕು ಚೀಟಿಯ ಪಾವತಿಗಳು ಮತ್ತು ಮರಳಿಕೊಳ್ಳುವಿಕೆಯ ಮೌಲ್ಯಕ್ಕೆ ಸಮನಾಗಿರುತ್ತದೆ.

ಪತ್ರಗಳ ಮೇಲಿನ ಉತ್ಪನ್ನ

  • ಚಾಲ್ತಿ ಉತ್ಪನ್ನ= ಹಕ್ಕಿನ ಚೀಟಿಯ ಬಡ್ಡಿ / ಹಾಲಿ ಮಾರುಕಟ್ಟೆ ಬೆಲೆ.
  • ಉದಾ:- ಒಂದು ವೇಳೆ ಕರಾರು ಪತ್ರದ ಮುಖ ಮೌಲ್ಯವು ರೂ.೫೦/- ಇದ್ದರೆ, ಹಕ್ಕು ಚೀಟಿಯ ದರ ೮% ಪ್ರತಿ ವಷ೯ಕ್ಕೆ ಇದ್ದರೆ ಮತ್ತು ಮಾರುಕಟ್ಟೆ ಬೆಲೆಯು ರೂ.೪೦/-ಇದ್ದರೆ ಚಾಲ್ತಿ ಉತ್ಪನ್ನ = ೪/೪೦=೦.೧ ಅಥವಾ ೧೦%
  • ಪರಿಪಕ್ವತೆಯ ಉತ್ಪನ್ನವು (ವಾಯ್.ಟಿ.ಎಮ್.)ಯಾವಾಗ ಎಲ್ಲ ಭವಿಷ್ಯದ ಹಣದ ಹರಿವು ಹಾಲಿ ಮಾರುಕಟ್ಟೆ ಮೌಲ್ಯಕ್ಕೆ ಸಮವಾಗಿರುತ್ತವೆಯೋ ಆ ರಿಯಾಯತಿಯ ದರ ಆಗಿರುತ್ತದೆ.

ಕರಾರು ಪತ್ರಗಳ ಮೌಲ್ಯಮಾಪನಕ್ಕೆ ಇರುವ ಸಿಧ್ದಾಂತಗಳು

  • ಮಾರುಕಟ್ಟೆಯ ಬಡ್ಡಿ ದರದ ಬದಲಾವಣೆಯ ಪರಿಣಾಮ.
  • ಪರಿಪಕ್ವತೆ ಅವಧಿಯ ಪರಿಣಾಮ.
  • ಕರಾರು ಪತ್ರದ ಬೆಲೆಯು ವಾಯ್.ಟಿ.ಎಮ್ ಗೆ ವಿಲೋಮ ಅನುಪಾತದಲ್ಲಿರುತ್ತದೆ.
  • ಬಡ್ಡಿ ದರದ ಸ್ಥಿತಿ ಸ್ಥಾಪಕತ್ವ = ಬೆಲೆಯಲ್ಲಿನ ಪ್ರತಿಶತ ಬದಲಾವಣೆ/ ವಾಯ್.ಟಿ.ಎಮ್ ನ ಪ್ರತಿಶತ ಬದಲಾವಣೆ.

ಪ್ರಧಾನ ನಿಧಿಯ ಆಯವ್ಯಯ ಪತ್ರ ತಯಾರಿಸುವುದು

  • ಅನೇಕ ಯೋಜನೆಗಳ ಮಧ್ಯೆ ಆರಿಸಲು ಉಪಯೋಗಿಸಲಾಗುತ್ತದೆ
  • ಒಂದು ಪ್ರಧಾನ ನಿಧಿ ಯೋಜನೆಯು ಪ್ರಧಾನ ನಿಧಿ ಹೊರ ಹರಿವು(ಹೂಡಿಕೆ) ಮತ್ತು ಪ್ರಧಾನ ನಿಧಿ ಒಳಹರಿವು(ನಿವ್ವಳ ಲಾಭ)ವನ್ನು ಯೋಜನೆಯ ಅವಧಿಯ ಉದ್ದಕ್ಕೂ ಒಳಗೊಂಡಿರುತ್ತದೆ.
  • ಎಲ್ಲ ನಗದು ಒಳಹರಿವಿನ ಪಿ..ವಿ.ಯು ಧನಾತ್ಮಕವಾಗಿರುತ್ತದೆ. ಮತ್ತು ಎಲ್ಲ ನಗದ ಹೊರಹರಿವಿನ ಪಿ.ವಿ.ಯು ಋಣಾತ್ಮಕವಾಗಿರುತ್ತದೆ. ಪಿ.ವಿ.ಯು ರಿಯಾಯತಿ ದರದ ಮೇಲೆ ಅವಲಂಬಿತವಾಗಿರುತ್ತದೆ.(ಪ್ರಧಾನ ನಿಧಿಯ ವೆಚ್ಚ)
  • ಎಲ್ಲ ನಗದು ಒಳಹರಿವು ಮತ್ತು ನಗದು ಹೊರಹರಿವಿನ ಪಿ.ವಿ.ಗಳ ಸಂಕಲನವನ್ನು ನಿವ್ವಳ ಹಾಲಿ ಮೌಲ್ಯ(ಎನ್.ಪಿ.ವಿ) ಎಂದು ಕರೆಯುತ್ತಾರೆ.
  • ಆಯ್.ಆರ್.ಅರ್. ವು ಯಾವ ಯೋಜನೆಯ ಎನ್.ಪಿ.ವಿ.ಯು ಶೂನ್ಯವಾಗಿರುತ್ತದೆಯೋ ಆ ರಿಯಾಯತಿ ದರವಾಗಿರುತ್ತದೆ.
  • ಪ್ರಧಾನ ನಿಧಿಯ ಆಯವ್ಯಯ ತಯಾರಿಸಲು ಬೇರೆ ವಿಧಾನವು ಮರಳಿ ಸಂದಾಯ ಅವಧಿ ವಿಧಾನವಾಗಿದೆ.

ವಸ್ತುಗಳ ಸವಕಳಿಗಾಗಿ ಕೊಡಮಾಡಿದ ಬೆಲೆ

  • ವಸ್ತುಗಳ ಸವಕಳಿಗಾಗಿ ಕೊಡಮಾಡಿದ ಬೆಲೆಯ ಪರಿಕಲ್ಪನೆ.
  • ಸರಳ ರೇಖಾವಿಧಾನ(ವೆಚ್ಚ-ಉಳಿವು ಮೌಲ್ಯ) ಅಂದಾಜಿಸಿದ ಉಪಯೋಗಕ್ಕೆ ಬರುವಂತಹ ಜೀವಮಾನ.
  • ಕಡಿಮೆ ಬರೆದ ಮೌಲ್ಯದ ವಿಧಾನ ಅಥವಾ ಕಡಿಮೆಯಾಗುವ ಶೇಷ ವಿಧಾನ: ಪ್ರತಿಶತವು ಸ್ಥಿರವಾಗಿರುತ್ತದೆ.

ವಿದೇಶಿ ವಿನಿಮಯದ ಅಂಕಗಣಿತ

  • ಮುಂಚಿನ ದಿನಗಳಲ್ಲಿ ಆರ್.ಬಿ.ಐ.ಯು ವಿದೇಶಿ ವಿನಿಮಯದ ಮಾರುವ ಮತ್ತು ಕೊಂಡುಕೊಳ್ಳುವ ದರವನ್ನು ನಿಗದಿಗೊಳಿಸುತ್ತಿತ್ತು. ಈಗ ಎಲ್.ಇ.ಆರ್.ಎಮ್.ಎಸ್.(ಉದಾತ್ತ ವಿನಿಮಯ ದರ ನಿವ೯ಹಣಾ ಪಧ್ಧತಿ)ಯನ್ನು ಬಳಸಲಾಗುತ್ತದೆ.
  • ನೇರ ಮತ್ತು ಅಪರೋಕ್ಷ ಉಲ್ಲೇಖನಗಳು. ದಿನಾಂಕ:-೦೨/೦೮/೧೯೯೩ ರಿಂದ ನೇರ ಉಲ್ಲೇಖನಗಳನ್ನು ಮಾತ್ರ ಬಳಸಲಾಗುತ್ತದೆ.
  • ಛೇದಕ ದರ/ ಸರಪಳಿ ನಿಯಮ: ಉದಾ:- ಒಂದು ವೇಳೆ ೧ ಯು.ಎಸ್.ಡಾಲರ್ =ರೂ.೪೮ ಮತ್ತು ೧ ಯುರೋ = ಯು.ಎಸ್.ಡಾಲರ ೧.೨೫ ಮುಂದೆ ೧ ಯುರೋ = ರೂ೧.೨೫ * ೪೮ ಆಗುತ್ತದೆ.
  • ಮೌಲ್ಯ ದಿನಾಂಕ:- ನಗದು/ತಯಾರಿ, ಟಿ.ಓ.ಎಮ್, ಸ್ಥಳ, ಮುಂದೆ ಮಾಡುವುದು.
  • ಹೆಚ್ಚಿನ ಮತ್ತು ರಿಯಾಯತಿ.
  • ಹೆಚ್ಚಿನ ಮತ್ತು ರಿಯಾಯತಿಯ ಮೇಲೆ ಪ್ರಭಾವ ಬೀರುವ ಅಂಶಗಳು.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 10/8/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate