অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕ್ಯಾರೆಲ್, ಅಲೆಕ್ಸಿಸ್

ಕ್ಯಾರೆಲ್, ಅಲೆಕ್ಸಿಸ್

ಕ್ಯಾರೆಲ್, ಅಲೆಕ್ಸಿಸ್ (1873-1944 )  ೧೯೧೨

ಫ್ರಾನ್ಸ್-ಅಸಂಸಂ -ರಕ್ತನಾಳ ಶಸ್ತ್ರ ಚಿಕಿತ್ಸೆ ಹಾಗೂ ಸಿಂಪಡಿಕೆ  ವಿಧಾನಗಳನ್ನು ಅಭಿವೃದ್ದಿಗೊಳಿಸಿದಾತ.

1900ರಲ್ಲಿ ಲಿಯಾನ್ಸ್‍ನಿಂದ ವೈದ್ಯಕೀಯದಲ್ಲಿ ಪದವಿ ಪಡೆದ ಅಲೆಕ್ಸಾಸ್ ನಿಪುಣ ಶಸ್ತ್ರ ಚಿಕಿತ್ಸಕನಾಗಿದ್ದರೂ, ದೈನಂದಿನ ಶಸ್ತ್ರಚಿಕಿತ್ಸೆಗಳತ್ತ ವಿಮುಖಿಯಾಗಿದ್ದನು.  1904ರಲ್ಲಿ ದನಗಾಹಿಯಾಗಲು   ಆಗಲು ಬಯಸಿ ಕೆನಡಾಕ್ಕೆ ಭೇಟಿ ನೀಡಿದನು.  ಅದಾದ ನಂತರ ಚಿಕಾಗೋಗೆ ಹೋಗಿ 1906ರಲ್ಲಿ ರಾಕ್¥sóÉಲರ್ ಇನ್ಸ್ಟಿಟ್ಯೂಟ್ ಫಾರ್ ಮೆಡಿಕಲ್ ರಿಸರ್ಚ್‍ಗೆ ಸೇರಿದನು.  1934ರಲ್ಲಿ ನಿವೃತ್ತನಾಗುವವರೆಗೂ ಅಲೆಕ್ಸಿಸ್ ಆ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದನು. ಮೊದಲನೇ ಜÁಗತಿಕ ಯುದ್ದದ ಸಮಯದಲ್ಲಿ ಕೆಲಕಾಲ ಫ್ರೆಂಚ್ ಸೇನೆಯಲ್ಲಿ ಶಸ್ತ್ರ ಚಿಕಿತ್ಸಕನಾಗಿದ್ದನು. ಈ ಅವಧಿಯಲ್ಲಿ ಡ್ಯಾಕಿನ್ ಜೊತೆ ಸೇರಿ ಕ್ಯಾರೆಲ್ ಡ್ಯಾಕಿನ್ ದ್ರಾವಣವನ್ನು ಆಳವಾದ ಗಾಯಗಳನ್ನು ಉಪಚರಿಸಲು ಬಳಸಿದನು.  ಮೊದಲನೆ ಜಾಗತಿಕ ಯುದ್ದಕ್ಕೆ ಮೊದಲೇ ಅಂಗಾಂಗ ಕಸಿಯ ಬಗ್ಗೆ ಅಲೆಕ್ಸಿಸ್ ಆಸಕ್ತನಾಗಿದ್ದನು. ಕಸಿ ಮಾಡಿದ ಅಂಗಕ್ಕೆ ರಕ್ತ ಹೆಪ್ಪುಗಟ್ಟದಂತೆ  ಸತತವಾಗಿ  ರಕ್ತ ಸರಬರಾಜು ಮಾಡುವ ಸವಾಲು ಅಲೆಕ್ಸಿಸ್‍ಗೆ ಎದುರಾಯಿತು. ರಕ್ತನಾಳಗಳನ್ನು ಹೆಚ್ಚಿಗೆ ಗಾಯಗೊಳಿಸದೆ,ಸೂಕ್ಷವಾಗಿ ಹೊಲಿದು ಸೇರಿಸುವ ವಿಧಾನಗಳನ್ನು ಈತ ಜಾರಿಗೆ ತಂದನು. ಇದರಿಂದ ರಕ್ತನಾಳಗಳ  ಕ್ರಾಂತಿಕಾರಕ ಬದಲಾವಣೆಗಳು ಬಂದವು.  1910ರಲ್ಲಿ ಅಲೆಕ್ಸಿಸ್ ಹೃದಯದ ಸನಿಹ ಹಾಯಿಕೆ (By-Pass) ಶಸ್ತ್ರಚಿಕಿತ್ಸೆಯ ವಿಧಾನವನ್ನು ವಿವರಿಸಿದನಲ್ಲದೆ, ಇದನ್ನು ಕಳೇಬರದ  ಮೇಲೆ ಪ್ರಾಯೋಗಿಕವಾಗಿ ಈ ವಿಧಾನವನ್ನು ಪ್ರಯೋಗಿಸಿದನು. ಮುಂದಿನ ಅರ್ಧ ಶತಮಾನಗಳ ಕಾಲ ಈ ಶಸ್ತ್ರ ಚಿಕಿತ್ಸೆಯನ್ನು ಜೀವಂತ ಪ್ರಾಣಿಗಳ ಮೇಲೆ ಬಳಸುವುದು ಅಸಾಧ್ಯವಾಗಿದ್ದಿತು. ಅಲೆಕ್ಸಿಸ್ ತನ್ನ ಸಾಧನೆಗಳಿಗಾಗಿ 1912ರ ನೊಬೆಲ್ ಪ್ರಶಸ್ತಿ ಪಡೆದನು. ಅಲೆಕ್ಸಿಸ್, ಮೃತ ಅಂಗಗಳನ್ನು ರಕ್ತ ಅಥವಾ ರಕ್ತಕ್ಕೆ ಸಮಾನವಾದ ದ್ರವಗಳ ಕೃತಕ ಪರಿಚಲನೆಯಿಂದ ಜೀವಂತವಾಗಿರಿಸುವ ಸಾಧ್ಯತೆಯನ್ನು ಪರೀಕ್ಷಿಸಿದನು.  ಸಿ.ಲಿಂಡ್‍ಬರ್ಗ್ ಜೊತೆ ಸೇರಿ 1935ರಲ್ಲಿ ಅಲೆಕ್ಸಿಸ್ ಕೃತಕ ಹೃದಯವನ್ನು ಸಿದ್ದಗೊಳಿಸಿದನು.  ಮೂತ್ರನಾಳದ ಕಸಿಯಂತಹ ಶಸ್ತ್ರಚಿಕಿತ್ಸೆಗಳಲ್ಲಿ , ದಾನಿ ಹಾಗೂ ಸ್ವೀಕೃತರಿಬ್ಬರ ಅಂಗಾಂಗಗಳ ಪರಸ್ಪರ ತಿರಸ್ಕಾರವನ್ನು ತಡೆಯುವ ವಿಧಾನ ಅಂತಹ ಶಸ್ತ್ರಚಿಕಿತ್ಸೆಗಳ ಯಶಸ್ಸಿನ ಮೂಲವಾಗಿರುತ್ತದೆ.  ಇದಕ್ಕೆ ಮಾರ್ಗೋಪಾಯಗಳನ್ನು ಕಂಡು ಹಿಡಿದನು ಅಲೆಕ್ಸಿಸ್ ವಂತರ ಬಂದ ವೈದ್ಯರುಗಳು ಈತ ರೂಪಿಸಿದ ಚಿಕಿತ್ಸ ವಿಧಾನಗಳನ್ನೇ.ಬಹುವಾಗಿ ಅವಲಂಬಿಸಿದರು.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 4/18/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate