অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಆಂಡ್ರ್ಯೂ , ಫೀಲ್ಡಿಂಗ್ ಹಕ್ಸ್’ಲೀ

ಆಂಡ್ರ್ಯೂ , ಫೀಲ್ಡಿಂಗ್ ಹಕ್ಸ್’ಲೀ

ಆಂಡ್ರ್ಯೂ , ಫೀಲ್ಡಿಂಗ್ ಹಕ್ಸ್’ಲೀ–(1917--) ೧೯೬೩

ಬ್ರಿಟನ್-ವೈದ್ಯಕೀಯ- ಎಲೆಕ್ಟ್ರಾನ್ ಸೂಕ್ಷ್ಮದರ್ಶಕಗಳಿಗಾಗಿ   ಸೂಕ್ಷ್ಮ ಪದರಗಳನ್ನು ಪಡೆಯುವ ವಿಧಾನ  ಅಭಿವೃದ್ಧಿಗೊಳಿಸಿದಾತ.

ಹಕ್ಸಲೀಯ ತಂದೆ ಥಾಮಸ್ ಹಕ್ಸಲೀ ಹತ್ತೊಂಬತ್ತನೇ ಶತಮಾನದ ಖ್ಯಾತ ವಿಜ್ಞಾನಿಯಾಗಿದ್ದನು.  ಈತನ ಮೊದಲ ಪತ್ನಿಯ ಮಕ್ಕಳಾದ ಜ್ಯೂಲಿಯಸ್ ಹಕ್ಸಲೀ ಖ್ಯಾತ ಜೀವಶಾಸ್ತ್ರಜ್ಞನಾಗಿದ್ದರೆ, ಆಲ್ಡಸ್ ಹಕ್ಸ್‍ಲಿ ಪ್ರಸಿದ್ದ ಬರಹಗಾರನಾಗಿದ್ದನು.  ಆ್ಯಂಡ್ರ್ಯೂ ವಿದ್ಯಾರ್ಥಿವೇತನ ಗಳಿಸಿ, 1935ರಲ್ಲಿ ಕೇಂಬ್ರಿಜ್‍ನ ಟ್ರಿನಿಟಿ ಕಾಲೇಜನ್ನು ಸೇರಿದನು.  ಭೌತಶಾಸ್ತ್ರದಲ್ಲಿ ಆ್ಯಂಡ್ರ್ಯೂಗೆ ಭಾರಿ ಆಸಕ್ತಿಯಿದ್ದಿತು.  ಆದ್ದರಿಂದ ಶೈಕ್ಷಣಿಕ ಪಠ್ಯದ ಅಂಗವಾಗಿ ಭೌತ, ರಸಾಯನಶಾಸ್ತ್ರ ಹಾಗೂ ಗಣಿತಗಳನ್ನು ಆಯ್ದುಕೊಂಡನು. ವಿಶ್ವವಿದ್ಯಾಲಯದ ನಿಯಮಗಳಿಗನುಗುಣವಾಗಿ ಆತ ಇನ್ನೊಂದು ವಿಷಯವನ್ನು ಅಭ್ಯಸಿಸುವ ಅನಿವಾರ್ಯತೆ ಒದಗಿತು.  ಅದಕ್ಕಾಗಿ ಅಂಗಕ್ರಿಯಾಶಾಸ್ತ್ರವನ್ನು ಆಯ್ದುಕೊಂಡನು. ಟ್ರಿನಿಟಿ ಕಾಲೇಜಿನಲ್ಲಿ ಫೆಲೋಗಳಾಗಿದ್ದ ತನ್ನ ಹಿರಿಯ ಸ್ನೇಹಿತರ ಪ್ರಭಾವದಿಂದ ಆ್ಯಂಡ್ರೂಗೆ ಅಂಗಕ್ರಿಯಾಶಾಸ್ತ್ರದಲ್ಲಿ ಆಸಕ್ತಿ ಮೂಡತೊಡಗಿತು.  1937ರಲ್ಲಿ ಅಂಗರಚನಾಶಾಸ್ತ್ರವನ್ನು ಅಭ್ಯಸಿಸಿ, ವೈದ್ಯಕೀಯ ಪದವಿಗೆ ಆರ್ಹತೆ ಹೊಂದಿದನು.  1939ರಲ್ಲಿ ಫ್ಲೈಮೌತ್‍ನಲ್ಲಿರುವ ಸಾಗರ ಜೀವಶಾಸ್ತ್ರ ಪ್ರಯೋಗಾಲಯ ಸೇರಿದನು.  ಎರಡನೇ ಜಾಗತಿಕ ಯುದ್ದ ಪ್ರಾರಂಭವಾU ಲಂಡನ್ ನಗರ ಸತತವಾಗಿ ವೈರಿಗಳ ಕ್ಷಿಪಣಿ ದಾಳಿಗೆ ತುತ್ತಾಯಿತು. ಈ ಅವಧಿಯಲ್ಲಿ ಲಂಡನ್‍ನಲ್ಲಿ ವೈದ್ಯಕೀಯ ತರಬೇತಿಗಳು ನಿಲ್ಲಿಸಲ್ಪಟ್ಟವು.  ಆ್ಯಂಡ್ರ್ಯೂವನ್ನು ಫಿûರಂಗಿಗಳ ವ್ಯೂಹ ರಚನಾ ಯೋಜನೆ ಹಾಗೂ ಯುದ್ದ ವಿರೋಧಿ ವೈಮಾನಿಕ ಸಂಶೋಧನಾ ವಿಭಾಗಕ್ಕೆ ಹಾಕಲಾಯಿತು.  1941 ರಿಂದ 1951ರ ಅವಧಿಯಲ್ಲಿ ಆ್ಯಂಡ್ರ್ಯೂ , ಹಾಡ್ಗ್‍ಕಿನ್‍ನೊಂದಿಗೆ ನರ ಸ್ಥಿತಿಗಳ , ನರ ತಂತುಗಳ ಬಗ್ಗೆ ಅಧ್ಯಯನ ಆರಂಭಿಸಿದನು.  1952ರಲ್ಲಿ ಸ್ನಾಯು ಸಂಕೋಚನದತ್ತ ಗಮನ ಹರಿಸಿ, ಪ್ರತ್ಯೇಕಿಸಿದ ನರ ತಂತುಗಳ ಪ್ರಯೋಗಗಳಿಗೆ ವ್ಯತಿಕರಣ ಸೂಕ್ಷ್ಮದರ್ಶಕ  (Interference Microscope)  ನಿರ್ಮಿಸಿದನು.  ಎಲೆಕ್ಟ್ರಾನ್ ಸೂಕ್ಷ್ಮದರ್ಶಕಗಳಿಗಾಗಿ   ಸೂಕ್ಷ್ಮ ಪದರಗಳನ್ನು ಸಹ ಆ್ಯಂಡ್ರ್ಯೂ ಅಭಿವೃದ್ಧಿಗೊಳಿಸಿದನು.  ಈ ಸಾಧನೆಗಳಿಗಾಗಿ ಆ್ಯಂಡ್ರ್ಯೂ 1963ರಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದನು

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 4/24/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate