অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಗೋಪೆರ್ಟ್,ಮೇಯರ್, ಮಾರಿಯಾ

ಗೋಪೆರ್ಟ್,ಮೇಯರ್, ಮಾರಿಯಾ

ಗೋಪೆರ್ಟ್,ಮೇಯರ್, ಮಾರಿಯಾ (1906-1972) ೧೯೬೩

ಜರ್ಮನಿ-ಅಸಂಸಂ-ಗಣಿತೀಯ ಭೌತಶಾಸ್ತ್ರಜ್ಞೆ.

ಮಾರಿಯಾ ಗಟ್ಟಿಂಜೆನ್‍ನಲ್ಲಿ ಹುಟ್ಟಿದಳು.  ಅವಳ ಕುಟುಂಬ ಸ್ನೇಹಿತನಾಗಿದ್ದ ಹಿಲ್ಬರ್ಟ್‍ನ  ಪ್ರಭಾವದಿಂದಾಗಿ ಮಾರಿಯಾ ಗಣಿತದಲ್ಲಿ ಪದವಿ ಪಡೆದಳು.  1927ರಲ್ಲಿ ಬಾರ್ನ್ ನೀಡಿದ ಉಪನ್ಯಾಸಗಳಿಗೆ ಮಾರು ಹೋದ ಮಾರಿಯಾ ಭೌತಶಾಸ್ತ್ರದಲ್ಲಿ ಆಸಕ್ತಿ ತಳೆದಳು.  1930ರಲ್ಲಿ ಎಲೆಕ್ಟ್ರಾನ್ ರೋಹಿತದ ಬಗ್ಗೆ ಅಧ್ಯಯನ ನಡೆಸಲು, ಪ್ರಾರಂಭಿಸಿದ ಮಾರಿಯಾಗೆ, ಅಮೇರಿಕಾದ ಔಷಧಶಾಸ್ತ್ರಜ್ಞ ಜೊಸೆಫ್ಮೇಯರ್‍ನ ಪರಿಚಯವಾಯಿತು.  ಮಾರಿಯಾ, ಮೇಯರ್‍ನನ್ನು ವಿವಾಹವಾದಳು.  ವಿವಾಹದ ನಂತರ, ದಂಪತಿಗಳು ಜಾನ್ಸ್‍ಹಾಫ್ಕಿನ್ಸ್ ಸಂಸ್ಥೆ ಸೇರಿದರು.  ಇಲ್ಲಿ ಮೇಯರ್ ಸೇರಿದಂತೆ ಇಬ್ಬರೇ ಇಬ್ಬರು ನೌಕರರಿದ್ದರು.  ಸ್ತ್ರೀಯರೊಂದಿಗೆ ಕೆಲಸ ಮಾಡಲು ಯಾವುದೇ ಇನ್ನೊಬ್ಬ ಪುರುಷ ಉದ್ಯೋಗಿ ಒಪ್ಪಲಿಲ್ಲ.  ಲಿಂಗ ತಾರತಮ್ಯದಿಂದಾಗಿ ಮಾರಿಯಾಳಿಗೆ ಬಹು ಕೆಳದರ್ಜೆಯ, ಅತ್ಯಲ್ಪ ವೇತನದ ಕೆಲಸವನ್ನು ಈ ಸಂಸ್ಥೆಯಲ್ಲಿ ನೀಡಲಾಯಿತು. ಮಾರಿಯಾ ಕ್ವಾಂಟಂ ವಿಧಾನಗಳಿಂದ ಅಣ್ವಕ ರೋಹಿತಗಳ (Molecular Spectrum) ಮೇಲೆ ನಡೆಸಿದ ಪ್ರಯೋಗಗಳು ಯುಕೆ ಮತ್ತು ಎನ್ರಿಕೊಫರ್ಮಿಯವರ ಗಮನಕ್ಕೆ ಬಂದವು.  ಈ ಇಬ್ಬರೂ ಖ್ಯಾತರಿಗೆ ಮಾರಿಯಾಳ ಕೆಲಸದ ಮೇಲೆ  ಅಪಾರ ಗೌರವ ,ಮೆಚ್ಚುಗೆ ಮೂಡಿ ಅವಳ ಪ್ರತಿಭೆಗೆ ತಕ್ಕ ಕೆಲಸ ಕೊಡಿಸುವಂತಹ ಪ್ರಯತ್ನಕ್ಕೆ ಕೈ ಹಾಕುವಂತೆ ಮಾಡಿತು.  ದಂಪತಿಗಳಿಬ್ಬರನ್ನುಫರ್ಮಿ ಹಾಗೂ ಯುಕೆ, ಕೊಲಂಬಿಯಾಕ್ಕೆ ಕರೆಸಿಕೊಂಡು, ಉತ್ತಮ ನೌಕರಿಗೆ ಸೇರಿಸುವ ಪ್ರಯತ್ನದಲ್ಲಿ ಯಶಸ್ಸನ್ನು ಕಾಣಲಿಲ್ಲ.  ಆದರೆ ಇವರಿಬ್ಬರ ಭೇಟಿ ಮಾರಿಯಾಳಲ್ಲಿ ಹೆಚ್ಚಿನ ಉತ್ಸಾಹ, ಉಮೇದಿಕೆಯನ್ನು ತುಂಬಿದವು.  ಮಾರಿಯಾ ಹೊಸದಾಗಿ  ಆವಿಷ್ಕರಿಸಲ್ಪಟ್ಟಿದ್ದ, ಯುರೇನಿಯಂಗಿಂತಲೂ ಭಾರವಾದ ಧಾತುಗಳ ಬಗೆಗಿನ ಸಂಶೋಧನೆಗಳನ್ನು ಮುಂದುವರಿಸಿದಳು.  ಈ ವೇಳೆಗೆ ಎರಡನೇ ಜಾಗತಿಕ ಯುದ್ದ ಪ್ರಾರಂಭವಾಯಿತು.  ಎನ್ರಿಕೋ ಫರ್ಮಿ ನೇತೃತ್ವದಲ್ಲಿ ಅಣ್ವಸ್ತ್ರ ತಯಾರಿಸುವ ಮ್ಯಾನ್ ಹಟ್ಟನ್ ಯೋಜನೆ ಪ್ರಾರಂಭವಾಯಿತು.  ಇದ್ದಕ್ಕಿದ್ದಂತೆ, ಯುರೇನಿಯಂಗಿಂತಲೂ ಹೆಚ್ಚು ತೂಕದ ಧಾತುಗಳ ಬಗೆಗೆ ಅಧಿಕಾರಯುತವಾಗಿ ಬಲ್ಲ ಮಾರಿಯಾಳಿಗೆ ಬೇಡಿಕೆ ಹೆಚ್ಚತೊಡಗಿತು.  ಮಾರಿಯಾ 15 ಜನ ವಿಜ್ಞಾನಿಗಳ ಮುಂದಾಳುವಾಗಿ ಮ್ಯಾನ್‍ಹಟನ್ ಯೋಜನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದಳು.  ಮಾರಿಯಾ ಈಗಲೇ UP6  ಧಾತುವಿನ , ವಿದಳನ ಎಸೋಟೋಪ್ ಯುರೇನಿಯಂ -235ರ ಗುಣಗಳನ್ನು ನಿರ್ಧರಿಸಿದಳು. ಎರಡನೇ ಜಾಗತಿಕ ಯುದ್ದದ ನಂತರ, ಮಾರಿಯಾ ಮತ್ತು ಮೇಯರ್ ಚಿಕಾಗೋ ನಗರದಲ್ಲಿ ನೆಲೆಸಿದರು.  ಇಲ್ಲಿರುವಾಗಲೇ ಮಾರಿಯಾ 2,8,20,28,50,82 ಅಥವಾ 126 ನ್ಯೂಟ್ರಾನ್ ಅಥವಾ ಪ್ರೋಟಾನ್, ಇರುವ ಧಾತುಗಳು ಸ್ಥಿರ  ಸ್ಥಿತಿಯಲ್ಲಿರುವವೆಂದು ಪತ್ತೆ ಹಚ್ಚಿದಳು.  ಇವುಗಳಿಗೆ ಅಪವಾದವಾಗಿ ಆಮ್ಲಜನಕ , ಕ್ಯಾಲ್ಸಿಯಂ, ಹೀಲಿಯಂನಲ್ಲಿ ಸ್ಥಿರತೆಗಾಗಿ ಏಳು ನ್ಯೂಟ್ರಾನ್ ಅಥವಾ ಪ್ರೋಟಾನ್ ಇರುವುದು ತಿಳಿದು ಬಂದಿತು.  ಮಾರಿಯಾಗೆ ಇದಕ್ಕೆ ಕಾರಣ ನೀಡುವುದು  ಮೊದಲಿಗೆ ಸಾಧ್ಯವಾಗಲಿಲ್ಲ.  ಎಲೆಕ್ಟ್ರಾನ್ ಕಕ್ಷೆಯ ರಚನೆಯಲ್ಲಿರುವ ಕಾರಣಗಳೇ ಇಲ್ಲೂ ಇರಬಹುದೆಂದು ಮಾರಿಯಾ ಊಹಿಸಿದಳು.   ಆದರೆ ಫರ್ಮಿಯಿಂದ ಅವಳಿಗೆ ದೊರೆತ ಕುರುಹಿನಿಂದಾಗಿ ಅವಳು ಪರಮಾಣುವಿನ ಬೈಜಿಕ ಸ್ಥಿತಿಗೆ ಕಕ್ಷಾ ಮಾದರಿಯನ್ನು ಬಳಸಿದಳು.  ಇದರಲಿ ಸ್ಥಿರತೆಗಾಗಿ ಬೇಕಾಗಿರುವ ಪ್ರೋಟಾನ್ ಅಥವಾ ನ್ಯೂಟ್ರಾನ್ ಸಂಖ್ಯೆಗಳು ಖಚಿತವಾದವು.  ಮಾರಿಯಾಳ ಈ ಸಾಧನೆಗಾಗಿ 1963ರ ನೊಬೆಲ್ ಪ್ರಶಸ್ತಿಯನ್ನು ಹೈಡೆಲ್‍ಬರ್ಗ್‍ನಲ್ಲಿದ್ದ ಜೆ.ಎಚ್.ಡಿ ಜೆನ್ಸೆನ್‍ನೊಂದಿಗೆ ಹಂಚಲಾಯಿತು.  ಹೈಡೆನ್‍ಬರ್ಗ್‍ನಲ್ಲಿದ್ದ ಸ್ವತಂತ್ರ ಸಂಶೋಧನೆ ನಡೆಸಿದ್ದ ಜೆನ್ಸೆನ್‍ನ ಪರಮಾಣು ಮಾದರಿಗಳು ಮಾರಿಯಾ ರೂಪಿಸಿದವುಗಳಂತೆಯೇ ಇದ್ದುದು ಗಮನಾರ್ಹ.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 8/3/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate