অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಜೂಲಿಯನ್, ಷೈಂಜರ್

ಜೂಲಿಯನ್, ಷೈಂಜರ್

ಜೂಲಿಯನ್, ಷೈಂಜರ್ (1918-1994) ೧೯೬೫

ಜೂಲಿಯನ್ 12 ಫೆಬ್ರವರಿ1918ರಂದು ನ್ಯೂಯಾರ್ಕ್‍ನಲ್ಲಿ ಜನಿಸಿದನು.  ಬಾಲ್ಯದಿಂದಲೂ ಜೂಲಿಯನ್‍ಗೆ ಭೌತಶಾಸ್ತ್ರದತ್ತ ಭಾರಿ ಒಲವಿದ್ದಿತು.  ಉಳಿದ ವಿಷಯಗಳನ್ನು ನಿರ್ಲಕ್ಷಿಸಿ, ಜೂಲಿಯನ್ ಭೌತಶಾಸ್ತ್ರವನ್ನು ಮಾತ್ರ ಪರಿಗಣಿಸುತ್ತಿದ್ದನು. ಹದಿನಾರನೇ ವಯಸ್ಸಿಗೆ ಭೌತಶಾಸ್ತ್ರಜ್ಞನೆಂದು ಪರಿಗಣಿತನಾದನು. ನ್ಯೂಯಾರ್ಕ್ ನಗರದ ಸಾರ್ವಜನಿಕ ಶಾಲೆಗಳು, ಜೂಲಿಯನ್ ಶೀಘ್ರವಾಗಿ ಮೇಲಿನ ತರಗತಿಗಳಿಗೆ ಹೋಗುವ ನೆರವು ನೀಡಿದವು.  ಐ.ಐ ರಬಿಯ ನೆರವಿನೊಂದಿಗೆ ಜೂಲಿಯನ್ ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ವರ್ಗಾವಣೆಗೊಂಡನು. 1936ರಲ್ಲಿ ಜೂಲಿಯನ್ ತನ್ನ ಸಂಪ್ರಬಂಧ ಮಂಡಿಸಿದನಾದರೂ ಆತನಿಗೆ ಮೂರು ವರ್ಷಗಳ ನಂತರವಷ್ಟೇ  1939ರಲ್ಲಿ ಡಾಕ್ಟರೇಟ್  ದಕ್ಕಿತು.  ಮುಂದಿನ ಎರಡು ವರ್ಷಗಳ ಕಾಲ ಬರ್ಕ್ಲೆಯ  ಕ್ಯಾಲಿಫೋರ್ನಿಯಾವಿಶ್ವವಿದ್ಯಾಲಯದ ರಾಷ್ಟ್ರೀಯ  ಸಂಶೋಧನಾ ಫೆಲೋ ಆದನು. ನಂತರ ಜೆ.ಆರ್.ಒಪೆನ್‍ಹೀಮರ್‍ನ  ಸಹಾಯಕನಾದನು.  ಫೆಸಿಫಕ್ ಯುದ್ದ ಪ್ರಾರಂಭವಾದಾಗ ಜೂಲಿಯನ್ ಪಡ್ರ್ಯೂ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರದ ಬೋಧಕನಾದನು.  ಈ ಕಾಲದಲ್ಲೇ ಕೇಂಬ್ರಿಜ್‍ನ ಎಂಐಟಿಯ ವಿಕಿರಣ ಪ್ರಯೋಗಾಲಯದಲ್ಲಿ ಸೇವೆ ಸಲ್ಲಿಸಿದನು.  ಈ ಪ್ರಯೋಗಾಲಯದಲ್ಲಿ ಸಹ ಸಂಶೋಧಕರಿಲ್ಲದೆ, ಒಂಟಿಯಾಗಿ ರಾತ್ರಿಯ ವೇಳೆ ಕಾರ್ಯನಿರತನಾಗಿರುತ್ತಿದ್ದನು. ಜೂಲಿಯನ್‍ನ ಆರಂಭಿಕ ಸಂಶೋಧನೆಗಳು ರಡಾರ್‍ಗೆ ಸಂಬಂಧಿಸಿದ ಸಮಸ್ಯೆಗಳನ್ನು ವೈದ್ಯುತ್ ಕಾಂತೀಯ ದೃಷ್ಟಿಯಲ್ಲಿ ಪರಿಹರಿಸುವ ನಿಟ್ಟಿನಲ್ಲಿದ್ದವು,.  ಆದರೆ ಅಲ್ಪಾವಧಿಯಲ್ಲೇ ಇವನ್ನು ವೈದ್ಯುತ್ ಕ್ಷೇತ್ರ ದೃಷ್ಟಿಯಿಂದ ವಿಚಾರಿಸತೊಡಗಿದನು. ಇದು ಬೈಜಿಕ ಚದುರಿಕೆ (Nuclear Scattering)  ಅರ್ಥೈಸಿಕೊಳ್ಳಲು ನೆರವಾಯಿತು. ಮುಂದೆ ಕಾಲಾನುಕ್ರಮದಲ್ಲಿ ಜೂಲಿಯನ್ ಕಾಂತೀಯ ಕ್ಷೇತ್ರದಲ್ಲಿನ ಎಲೆಕ್ಟ್ರಾನ್‍ಗಳ ವಿಕಿರಣತೆಯನ್ನು ಕುರಿತಾಗಿ ಅಧ್ಯಯನ ಪ್ರಾರಂಭಿಸಿದನು.  ಎಲೆಕ್ಟ್ರಾನ್‍ಗಳ ಕ್ಷೇತ್ರದಲ್ಲಿನ ಪ್ರತಿಕ್ರಿಯೆ  ಅದರ ದ್ರವ್ಯ ರಾಶಿ ಸೇರಿದಂತೆ ಇತರ ಗುಣಗಳಲ್ಲೂ ಬದಲಾವಣೆ ತರುವುದೆಂಬ ಅಭಿಜಾತ ದೃಷ್ಟಿ ಆತನ ಗಮನ ಸೆಳೆಯಿತು.  ಇದು ಕ್ವಾಂಟಂ ಎಲೆಕ್ಟ್ರೋಗತಿಶಾಸ್ತ್ರದ ಅಭಿವೃದ್ದಿಯಲ್ಲಿ ಪ್ರಮುಖ ಅಂಶವಾಯಿತು.  ಯುದ್ದ ಕೊನೆಗೊಂಡ ನಂತರ ಜೂಲಿಯನ್ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕನಾದನು.  ಎರಡು ವರ್ಷಗಳ ನಂತರ ಪ್ರಾಧ್ಯಾಪಕನಾದನು. ಜೂಲಿಯನ್ ಭೌತಶಾಸ್ತ್ರದಲ್ಲಿ ಆವರೆಗೆ ಪರಿಹಾರ ಕಾಣದಿದ್ದ, ಸವಾಲಾಗಿದ್ದ ಹಲವಾರು ಸಮಸ್ಯೆಗಳನ್ನು ವ್ಯಾಪಕ ಹಾಗೂ ಆಳವಾಗಿ ಚಿಂತಿಸುತ್ತಿದ್ದನು.  ಇದರ ಫಲವಾಗಿ 1957ರಲ್ಲಿ ಎಲೆಕ್ಟ್ರಾನ್ ಹಾಗೂ ಮ್ಯುಯಾನ್‍ಗೆ ಸಂಬಂಧಿಸಿದಂತೆ, ಎರಡು ವಿಶಿಷ್ಟ ಮ್ಯುಯಾನ್‍ಗೆಗಳಿರುವುವೆಂದು ಹೇಳಿದನು.  ಇದು ಮುಂದೆ ಪ್ರಯೋಗಗಳಿಂದ ಖಚಿತಗೊಂಡಿತು. ಇದಲ್ಲದೆ  ಜೂಲಿಯನ್ ಎಲ್ಲಾ ಕ್ಷೀಣ ಬೈಜಿಕ ಅಂತಕ್ರಿಯೆಗಳೂ, ಭಾರವಾದ, ಆವೇಶಗೊಂಡ ಏಕ-ಗಿರಕಿಯ ಕಣಗಳಿಂದ ವರ್ಗಾವಣೆಗೊಳ್ಳುವುವೆಂದು ಸೂಚಿಸಿದ್ದಾನೆ. ಆದರೆ ಇದನ್ನು ಪ್ರಯೋಗಗಳಿಂದ ಸಾಬೀತಾಗಿಲ್ಲ.  ಜೂಲಿಯನ್ ಆಕರ ಸಿದ್ಧಾಂತ ಮಂಡಿಸಿ ಪ್ರಬಲ ಅಂತಕ್ರಿಯೆಯನ್ನು ಅರಿಯಲು ಯತ್ನಿಸಿದ್ದಾನೆ. ಇದು ಜೂಲಿಯನ್ ಪ್ರಕಟಿಸಿದ ಪಾರ್ಟಿಕಲ್ಸ್ ಸೋರ್ಸಸ್ ಅಂಡ್ ಫೆಲ್ಡ್ಸ್  ಕೃತಿಯಲ್ಲಿ ಚರ್ಚೆಗೊಂಡಿದೆ. ಜೂಲಿಯನ್ 1951ರಲ್ಲಿ ಐನ್‍ಸ್ಟೀನ್ ಪ್ರಶಸ್ತಿ, 1964ರಲ್ಲಿ ಯು ಎಸ್ ನ್ಯಾಷನಲ್ ಮೆಡಲ್ ಫಾರ್ ಸೈನ್ಸ್ ,1961ರಲ್ಲಿ ಪರ್ಡ್ಯೂ ವಿಶ್ವವಿದ್ಯಾಲಯದಿಂದ , 1962ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‍ಗಳಿಂದ ಸನ್ಮಾನಿತನಾಗಿದ್ದಾನೆ. 1965ರಲ್ಲಿ ಜೂಲಿಯನ್ ತನ್ನ ಸಾಧನೆಗಳಿಗಾಗಿ ನೊಬೆಲ್ ಪ್ರಶಸ್ತಿ  ಪುರಸ್ಕೃತನಾದನು.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 6/21/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate