অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ನರ್ನ್’ಸ್ಟ್ , (ಹೆರ್ಮಾನ್) ವಾಲ್ಟರ್

ನರ್ನ್’ಸ್ಟ್ , (ಹೆರ್ಮಾನ್) ವಾಲ್ಟರ್

ನರ್ನ್’ಸ್ಟ್ , (ಹೆರ್ಮಾನ್) ವಾಲ್ಟರ್ (1864-1941)  ೧೯೨೦

ಜರ್ಮನಿ-ಭೌತಶಾಸ್ತ್ರ-ರಾಸಾಯನಿಕ ಔಷ್ಣೀಂiÀi ಗತಿಶಾಸ್ತ್ರದ (Thermodynamics) ಮುಂಚೂಣಿಗ.  ಔಷ್ಣೀಯ ಗತಿಶಾಸ್ತ್ರದ ಮೂರನೇ ನಿಯಮ ನೀಡಿದಾತ.

ಪಶ್ಚಿಮ ಪ್ರಷ್ಯಾದ ಬ್ರೆಸೆನ್ ಸಂಸ್ಥಾನದಲ್ಲಿ 25 ಜೂನ್ 1864ರಂದು ನರ್ನ್ಸ್ಟ್  ಜನನವಾಯಿತು. ನರ್ನ್ಸ್ಟ್  ಜೂರಿಕ್ ,ಗ್ರಾಸ್ ಹಾಗೂ ವಿರ್ಸ್‍ಬರ್ಗ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದನು. ವಿರ್ಸ್‍ಬರ್ಗ್‍ನಲ್ಲಿ ಖ್ಯಾತ ವಿಜ್ಞಾನಿ ಕೋಲ್‍ರಾಷ್ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಪಡೆದನು. ನಂತರ ಲೀಪ್‍ಜಿಗ್ ವಿಶ್ವ ವಿದ್ಯಾಲಯದಲ್ಲಿ ವಿಲ್‍ಹೆಲ್ಮ್ ಓಸ್‍ವಾಲ್ಡ್ ಸಹಾಯಕನಾಗಿ ಭೌತ ರಸಾಯನಶಾಸ್ತ್ರ ವಿಭಾಗ ಸ್ಥಾಪಿಸಿದನು. 1890ರಲ್ಲಿ ಗಟ್ಟಿಂಜೆನ್‍ನಲ್ಲಿದ್ದ ನರ್ನ್ಸ್ಟ್ 1905ರಲ್ಲಿ ಬರ್ಲಿನ್ ವಿಶ್ವವಿದ್ಯಾಲಯ ಸೇರಿದನು. ನರ್ನ್ಸ್ಟ್  ಜರ್ಮನಿಯಲ್ಲಿ ಪದವಿಗೆ ವ್ಯಾಸಂಗ ಮಾಡುತ್ತಿರುವಾಗಲೇ, ರಾಸಾಯನಿಕ ಶಾಸ್ತ್ರದ ಸಮಸ್ಯೆಗಳಿಗೆ ಭೆತಶಾಸ್ತ್ರದ ಪರಿಹಾರಗಳನ್ನು ಹೇಗೆ ಒದಗಿಸಬಹುದೆಂದು ಚಿಂತಿಸುತ್ತಿದ್ದನು. 1905ರಲ್ಲಿ ಬರ್ಲಿನ್‍ನಲ್ಲಿ ಪ್ರಾಧ್ಯಾಪಕನಾದ ನರ್ನ್ಸ್ಟ್ , ವೈದ್ಯುತ್ ರಸಾಯನಶಾಸ್ತ್ರ ಮತ್ತು ಔಷ್ಣೀಯಗತಿಶಾಸ್ತ್ರದಲ್ಲಿ ಕ್ರಿಯಾಶೀಲನಾಗಿದ್ದನು. 1904ರಲ್ಲಿ ವಿಶಿಷ್ಟ ವೈದ್ಯುತ್ ದೀಪ ತಯಾರಿಸಿ, ಅದರ ತಂತ್ರವನ್ನು  ಮಿಲಿಯನ್ ಮಾರ್ಕ್‍ಗಳಿಗೆ ಮಾರಿದನು.  ಆದರೆ ಎಡಿಸನ್ ಇದಾದ ಕೆಲವೇ ದಿನಗಳಲ್ಲಿ ಇದಕ್ಕಿಂತಲೂ ಸುಧಾರಿತ ವಿದ್ಯುತ್ ದೀಪದ ತಯಾರಿಕೆಯಲ್ಲಿ ಯಶಸ್ಸನ್ನು ಕಂಡದ್ದರಿಂದ, ನರ್ನ್ಸ್ಟ್  ದೀಪ ಅಲ್ಪಕಾಲದಲ್ಲೇ ಬಳಕೆಯಿಂದ ಕಣ್ಮರೆಯಾಯಿತು.  ಆದರೆ ಈ ವಿದ್ಯುತ್ ದೀಪದ ತಂತ್ರಜ್ಞಾನ ಮಾರಿ ಸಾಕಷ್ಟು ಶ್ರೀಮಂತನಾಗಿದ್ದ ನೆನ್ರ್ಸ್‍ಟ್ ಜಮೀನು ಖರೀದಿಸಿ, ಅಲ್ಲಿ ಮೋಟಾರ್ ಕಾರ್ ನಿರ್ಮಾಣದಲ್ಲಿ ತಲ್ಲೀನನಾದನು.ನೆನ್ರ್ಸ್‍ಟ್ ಶಾಖ ಪ್ರಮೇಯ ನೀಡಿ, ರಸಾಯನಶಾಸ್ತ್ರದಲ್ಲಿ ಶಾಶ್ವತ ಸ್ಥಾನ ಗಿಟ್ಟಿಸಿದನು.  ಇದು ಮುಂದೆ ಔಷ್ಣೀಯ ಗತಿಶಾಸ್ತ್ರದ ಮೂರನೆ ನಿಯಮವೆಂದು ಹೆಸರಾಯಿತು.

ನೆನ್ರ್ಸ್‍ಟ್ ಇದನ್ನು ಔಷ್ಣೀಯ ಗತಿಶಾಸ್ತ್ರದ ಅಂತಿಮ ನಿಯಮವೆಂದು ಸಾರಿದನು.  ಏಕೆಂದರೆ, ಮೊದಲ ನಿಯಮ ಮೂರು ಜನರಿಂದಲೂ, ಎರಡನೇ ನಿಯಮ ಇಬ್ಬರಿಂದಲೂ ನೀಡಲ್ಪಟ್ಟರೆ, ಮೂರನೆಯದು ತನ್ನೊಬ್ಬನಿಂದಲೇ ಬಂದಿದೆ ಎನ್ನುವುದು ನೆನ್ರ್ಸ್‍ಟ್ ವಾದವಾಗಿದ್ದಿತು.  ಈ ಮೂರನೇ ನಿಯಮದ ಪ್ರಕಾರ ನಿರಪೇಕ್ಷ ಶೂನ್ಯ ತಾಪಮಾನದಲ್ಲಿ ಎಲ್ಲಾ ಪರಿಶುದ್ಧ ಪದಾರ್ಥಗಳೂ ಒಂದೇ ಎಂಟ್ರೋಪಿ ಹೊಂದಿರುತ್ತವೆ.  ಆದರೆ ಈ ಪ್ರಮೇಯ ಸತ್ಯವೆಂದು ಇನ್ನು ವಿವಾದಾತೀತವಾಗಿ ಸಾಬೀತಾಗಬೇಕಾಗಿದೆ. ಏಕೆಂದರೆ ಈವರೆಗೆ ವಸ್ತುಗಳನ್ನು ನಿರಕ್ಷೇಪ ಶೂನ್ಯ ತಾಪಮಾನಕ್ಕೆ ಇಳಿಸುವುದು ಸಾಧ್ಯವಾಗಿಲ್ಲ ನಿರಪೇಕ್ಷ ಶೂನ್ಯದ ಸನಿಹ 0.00001 ಕೆಲ್ವಿನ್ ತಾಪಮಾನ ತಲುಪಲಾಗಿದೆ.  ಹಾಗೆ ಆದಾಗ, ಮೂರನೆಯ ನಿಯಮವನ್ನು ನೆನ್ರ್ಸ್‍ಟ್ ಭಾವಿಸಿದಂತೆ ಒಬ್ಬನಿಂದ ನೀಡಲ್ಪಡದೆ, ಒಬ್ಬರಿಗಿಂತ ಹೆಚ್ಚಿನ ಜನರಿಂದ ಬಂದಿರುತ್ತದೆ.  ವೈದ್ಯುತ್ ರಸಾಯನಶಾಸ್ತ್ರದ ಬಹುತೇಕ ಮೂಲ ಚಿಂತನೆಗಳ ಆದ್ಯ ಪ್ರವರ್ತಕ ನೆನ್ರ್ಸ್‍ಟ್.  ಪರಮಾಣು ಕ್ಲೋರಿನ್ ಆಧಾರಿತ, ಜಲಜನಕ ಶೀಘ್ರ ರಾಸಾಯನಿಕ ಪ್ರತಿಕ್ರಿಯೆಗಳ ಪಥ ಪ್ರತಿಪಾದಿಸಿದ ಮೊದಲಿಗ .ಅಯಾನ್ ಸ್ವರೂಪದ ಸಂಯುಕ್ತಗಳು ನೀರಿನಲ್ಲಿ ಕರಗಿ ದ್ರಾವಣವಾದಾಗ ಅ್ಯನಯಾನ್ ಹಾಗೂ ಕ್ಯಾಟಯಾನ್‍ಗಳಾಗಿ ವಿಭಜನೆಗೊಳ್ಳುತ್ತವೆ. ಶುದ್ಧ ನೀರಿನ ಪರಾ ವೈದ್ಯುತ್ ಗುಣ ಪ್ರಬಲವಾಗಿರುವುದರಿಂದ ಅದು ವೈದ್ಯುತ್ ಅವಾಹಕದಂತೆ ವರ್ತಿಸುತ್ತದೆ. ಈ ಸ್ಥಿತಿಯಲ್ಲಿ ಧನ ಹಾಗೂ ಋಣ ಕಣಗಳ ಮಧ್ಯದ ಆಕರ್ಷಣೆ ಕುಗ್ಗಿರುತ್ತದೆ. ಆಯಾನ್ ಸ್ವರೂಪದ ಸಂಯುಕ್ತ ಕರಗಿದಾಗ,ಅಯಾನ್‍ಗಳು ಬೇರ್ಪಟ್ಟು ವಿದ್ಯುತ್ ಪ್ರವಹಿಸುತ್ತದೆಯೆಂದು ನರ್ನ್ಸ್ಟ್  ತಿಳಿಸಿದನು. ಇದನ್ನು ಸ್ವತಂತ್ರವಾಗಿ ಜೆ.ಜೆ.ಥಾಮ್ಸನ್ ಸಹ ಪ್ರತಿಪಾದಿಸಿದ್ದನು. ಜಲಜನಕ ಹಾಗೂ ಕ್ಲೋರಿನ್‍ಗಳ ಮಿಶ್ರಣದ ಮೂಲಕ ಬೆಳಕನ್ನು ಹಾಯಿಸಿ ಹೈಡ್ರೋಜನ್ ಕ್ಲೋರೈಡ್ ಸಂಯುಕ್ತ ಪಡೆಯಬಹುದು. ಬೆಳಕಿನ ಚೈತನ್ಯದಿಂದಾಗಿ ಕ್ಲೋರಿನ್ ಪರಮಾಣು ಎರಡಾಗಿ ಒಡೆದು ಸರಪಳಿ ರಾಸಾಯನಿಕ ಕ್ರಿಯೆ ಜರುಗುವುದನ್ನು ನರ್ನ್ಸ್ಟ್  ವಿವರಿಸಿದನು. ನೆನ್ರ್ಸ್‍ಟ್‍ದು ಬಹು ವಿಶಿಷ್ಟವಾದ ವ್ಯಕ್ತಿತ್ವ. ಈತ ಕರುಣಾಳುವಾಗಿದ್ದರೂ, ನಾಗರಿಕ ಸೋಗು, ನಡವಳಿಕೆಗಳಿಗೆ ಸೊಪ್ಪು ಹಾಕುತ್ತಿರಲಿಲ್ಲ. ನೆನ್ರ್ಸ್‍ಟ್‍ನ ಕುಟುಂಬ ವೈಜ್ಞಾನಿಕ ವಲಯದಲ್ಲಿ ಅದರಾತಿಥ್ಯಕ್ಕೆ ಹೆಸರಾಗಿದ್ದಿತು.  ಮೊದಲನೇ ಜಾಗತಿಕ ಯುದ್ದದಲ್ಲಿ ಜರ್ಮನಿಗೆ ಸೋಲಾಗುವುದನ್ನು, ಗ್ರಹಿಸಿದ ನೆನ್ರ್ಸ್‍ಟ್, ಕೈಸರ್‍ಗೆ ಯುದ್ದ ನಿಲ್ಲಿಸಿ ಶಾಂತಿ ಘೋಷಿಸಬೇಕೆಂದು ಆಗ್ರಹಿಸಿದನಾದರೂ ಅದರಲ್ಲಿ ಯಶಸ್ಸನ್ನು ಕಾಣಲಿಲ್ಲ.  ಯುದ್ದದಲ್ಲಿ ನೆನ್ರ್ಸ್‍ಟ್ ಮಕ್ಕಳಿಬ್ಬರೂ ಹತರಾದರು.  ಮುಂದೆ ಅಸಂಸಂಗಳಿಗೆ ರಾಯಭಾರಿಯಾಗಬೇಕೆಂದು ಆಹ್ವಾನವನ್ನು ನೆನ್ರ್ಸ್‍ಟ್ ನಿರಾಕರಿಸಿದನು. 1920ರಲ್ಲಿ ನೊಬೆಲ್ ಪ್ರಶಸ್ತಿ ಪಡೆದ ನೆನ್ರ್ಸ್‍ಟ್ ಹಿಟ್ಲರ್‍ನ ನೀತಿ ನಿಯಮಗಳನ್ನು ವಿರೋಧಿಸಿದನು.  ನೆನ್ರ್ಸ್‍ಟ್ ಜಗತ್ತು ಕಂಡ ಅತಿ ಶ್ರೇಷ್ಟ  ಭೌತ ರಸಾಯನಶಾಸ್ತ್ರಜ್ಞನೆಂದು ದಾಖಲಾಗಿದ್ದಾನೆ.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 7/23/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate