অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಜೇಮ್ಸ್, ಬ್ಯಾಚೆಲ್ಲರ್ ಸುಮ್ನರ್

ಜೇಮ್ಸ್, ಬ್ಯಾಚೆಲ್ಲರ್ ಸುಮ್ನರ್

ಜೇಮ್ಸ್, ಬ್ಯಾಚೆಲ್ಲರ್ ಸುಮ್ನರ್ (1887-1955)  ೧೯೪೬

ಅಸಂಸಂ-ರಸಾಯನಶಾಸ್ತ್ರ-ಕಿಣ್ವಗಳನ್ನು ಬೇರ್ಪಡಿಸಿ (Enzymes) ಶುದ್ಧರೂಪದಲ್ಲಿ ಪಡೆದ ಮೊದಲಿಗ.

ಜೇಮ್ಸ್‍ನ ಪೂರ್ವಜರು ಇಂಗ್ಲೆಂಡ್‍ನಿಂದ ಅಸಂಸಂಗಳಿಗೆ ವಲಸೆ ಬಂದು ನೆಲೆಸಿದ್ದರು.  ಜೇಮ್ಸ್ 19 ನವೆಂಬರ್ 1887ರಂದು ಮೆಸಾಚುಸೆಟ್ಸ್‍ನ ಕ್ಯಾಂಟೀನ್‍ನಲ್ಲಿ ಜನಿಸಿದನು.  ಭೌತ ಹಾಗೂ ರಸಾಯನಶಾಸ್ತ್ರಗಳನ್ನು ಹೊರತಾಗಿ ಬೇರೆ ಯಾವುದೇ ವಿಷಯಗಳ ಬಗೆಗೆ ಜೇಮ್ಸ್‍ಗೆ ಕಿಂಚಿತ್ತೂ ಆಸಕ್ತಿಯಿರಲಿಲ್ಲ.  ಹದಿನೇಳನೆ ವಯಸ್ಸಿಗೆ ಬರುವ ವೇಳೆಗೆ ಬಂದೂಕು ಬಳಸುವುದು, ಬೇಟೆಯಾಡುವುದು ಜೇಮ್ಸ್‍ನ ನೆಚ್ಚಿನ ಹವ್ಯಾಸಗಳಾಗಿದ್ದವು.  ಸ್ನೇಹಿತರೊಂದಿಗೆ ಬೇಟೆಗೆ ಹೋದಾಗ,ಸಂಗಡಿಗನ ಆಚಾತುರ್ಯದಿಂದಾಗಿ ಜೇಮ್ಸ್‍ನ ಎಡಗೈಗೆ ಗುಂಡು ಹೊಕ್ಕಿತು.  ಇದರಿಂದ ಕೈ ಕೊಳೆಯತೊಡಗಿತು.  ಇದಕ್ಕೆ ಪರಿಹಾರವಾಗಿ ಮೊಳಕೈ ಕೆಳಗಿನ ಭಾಗವನ್ನು ಕತ್ತರಿಸಿದುದರಿಂದ ಜೇಮ್ಸ್ ಮೊಂಡು ಕೈಯವನಾದನು.  ಮುಂದೆ ಬಲಗೈಯೊಂದನ್ನೇ ಬಳಸಿ ಎಲ್ಲಾ ತರದ ಕ್ರೀಡೆಗಳನ್ನು ಅತ್ಯುತ್ತಮವಾಗಿ ಆಡುತ್ತಿದ್ದನು.1906ರಲ್ಲಿ ಜೇಮ್ಸ್ ಹಾರ್ವರ್ಡ್ ಕಾಲೇಜು ಸೇರಿ 1910 ರಲ್ಲಿ ರಸಾಯನಶಾಸ್ತ್ರದ ವಿಶೇಷದೊಂದಿಗೆ ಪದವಿ ಪಡೆದನು.  ಇದರ ನಂತರ ತನ್ನ ಚಿಕ್ಕಪ್ಪನ ಒಡೆತನದಲ್ಲಿದ್ದ ಹತ್ತಿ ನೂಲೆಳೆಯ ಕಾರ್ಖಾನೆ ಸೇರಿದನು.  ಇಲ್ಲಿರುವ ಏಕತಾನತೆಯಿಂದ ಬೇಸತ್ತು ಉಪಾಧ್ಯಾಯ ವೃತ್ತಿಗೆ ಸೇರಿದನು.  ಈ ವೃತ್ತಿಯಲ್ಲಿ ಹಲವಾರು ಸಂಸ್ಥೆಗಳನ್ನು ಬದಲಾಯಿಸಿ, 1912ರಲ್ಲಿ ಒಟ್ಟೋ ಫಾಲಿನ್ ಮಾರ್ಗದರ್ಶನದಲ್ಲಿ ಜೀವ ರಸಾಯನಶಾಸ್ತ್ರದಲ್ಲಿನ ಅಧ್ಯಯನ ಮಾಡಲು ಹಾರ್ವರ್ಡ್ ವೈದ್ಯಕೀಯ ಕಾಲೇಜಿಗೆ ಸೇರಿದನು.  ಒಂಟಿ ಕೈಯವನಾಗಿರುವುದರಿಂದ  ಕಾನೂನು ವೈದ್ಯಕೀಯದಲ್ಲಿ ಪರಿಣಿತಿ ಪಡೆಯುವಂತೆ ಓಟ್ಟೋ ಸೂಚಿಸಿದ್ದನು.  ಆದರೆ ಜೇಮ್ಸ್ ತನ್ನಿಚ್ಚೆಯಂತೆ ಅಧ್ಯಯನ ಮಾಡಿ 1914ರಲ್ಲಿ ಡಾಕ್ಟರೇಟ್ ಗಳಿಸಿದನು. ಮೊದಲನೆ ಜಾಗತಿಕ ಯುದ್ದ ಪ್ರಾರಂಭವಾದಾಗ, ಇಥಾಕಾದಲ್ಲಿರುವ ಕಾರ್ನೆಲ್ ವೈದ್ಯಕೀಯ ಶಾಲೆಯ ಅಹ್ವಾನಕ್ಕೆ ಒಪ್ಪಿ ಜೀವರಸಾಯನ ಶಾಸ್ತ್ರದ ಪ್ರಾಧ್ಯಾಪಕನಾದನು.  ಇಲ್ಲಿ ಕಿಣ್ವಗಳನ್ನು (Enzymes) ಬೇರ್ಪಡಿಸಲು ಯತ್ನಿಸಿದನಾದರೂ ಇದರಲ್ಲಿ ಈ ಮೊದಲು ಯಾರಿಗೂ ಯಶಸ್ಸು ದಕ್ಕಿರಲಿಲ್ಲ.  ಹಲವಾರು ವರ್ಷಗಳ ನಂತರದ ಅಪಾರ ಪರಿಶ್ರಮದ ನಂತರವೂ, ಜೇಮ್ಸ್‍ಗೆ ಯಶಸ್ಸಿನ ಕುರುಹುಗಳು ದಕ್ಕಲಿಲ್ಲ.  ಸಹೋದ್ಯೋಗಿಗಳಿಂದ ಟೀಕೆ, ನಿರುತ್ತೇಜನಗಳು ದಕ್ಕಿದವು.  ಶುದ್ಧ ರೂಪದಲ್ಲಿ ಕಿಣ್ವಗಳನ್ನು ಬೇರ್ಪಡಿಸುವುದು ಅಸಾಧ್ಯವೆಂದು ಹಲವರು ಭಾವಿಸಿದ್ದರು. 1921ರಲ್ಲಿ ಅಮೆರಿಕನ್ ಬೆಲ್ಜಿಯಂಫೆಲೋಷಿ¥sóï ಪಡೆದುಕೊಂಡ ಜೇಮ್ಸ್, ಬ್ರುಸೆಲ್ಸ್‍ನಲ್ಲಿದ್ದ ಕಿಣ್ವಶಾಸ್ತ್ರದಲ್ಲಿ ಅಧಿಕೃತ ವ್ಯಕ್ತಿಯೆಂದು ಪರಿಗಣಿತನಾಗಿದ್ದ ಜೀನ್ ಎಫ್ರಾಂಟ್ಮಾರ್ಗದರ್ಶನದಲ್ಲಿ ಕಿಣ್ವಗಳನ್ನು ಬೇರ್ಪಡಿಸಲು ಯತ್ನಿಸುವುದಾಗಿ ಹೇಳಿದನು.  ಯೂರಿಯಾದಂತಹ ಕಿಣ್ವವನ್ನು ಬೇರ್ಪಡಿಸುವುದು ಅಸಾಧ್ಯವೆಂದೇ ಜೀನ್ ಎ¥sóÁ್ರಂಟ್ ತಿಳಿಸಿದನು. ಇದರಿಂದ ಹತಾಶನಾಗಿ ತನ್ನ ಪ್ರಯೋಗಾಲಯಗಳಲ್ಲಿ ಇನ್ನು ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕೆಂದು ಜೀಮ್ಸ ನಿರ್ಧರಿಸಿದನು.  ಅಂತಿಮವಾಗಿ 1926ರಲ್ಲಿ ಯುರಿಯಾದಿಂದ ಯೂರಿನೇಸ್ ಕಿಣ್ವವನ್ನು ಬೇರ್ಪಡಿಸಿ ಹರಳು ರೂಪದಲ್ಲಿ ಪಡೆದನು.  ಮೊದಮೊದಲಿಗೆ ಅದೆಷ್ಟೋ ಜೀವಶಾಸ್ತ್ರಜ್ಞರು ಈ ಬಗ್ಗೆ ತಮ್ಮ ಅನುಮಾನ ವ್ಯಕ್ತಪಡಿಸಿದರು.  ಆದರೆ ಕಾಲಕ್ರಮೇಣ ಜೇಮ್ಸ್ ಸಾಧನೆಯನ್ನು ಎಲ್ಲರೂ ಒಪ್ಪಬೇಕಾಯಿತು. 1929ರಲ್ಲಿ ಜೇಮ್ಸ್ ಪ್ರಾಧ್ಯಾಪಕನಾದನು. 1937ರಲ್ಲಿ ಜೇಮ್ಸ್‍ಗೆ ಗುಗೆನ್‍ಹೀಮ್ಫೆಲೋಷಿ¥sóï ದಕ್ಕಿತು. ರಾಕ್¥sóÉಲರ್ ಸಂಸ್ಥೆಯಲ್ಲಿ ನಾರ್ಥಾಪ್ ಪೆಪ್ಸಿನ್ ಕಿಣ್ವವನ್ನು ಹರಳು ರೂಪದಲ್ಲಿ (Crystalline Form) ಪಡೆದನು.  ಕಿಣ್ವಗಳನ್ನು ಬೇರ್ಪಡಿಸಲು ಜೇಮ್ಸ್ ಅನುಸರಿಸಿದ ಮಾರ್ಗಗಳು ಬೇರೆಯವರ ಹೆಚ್ಚಿನ ಅಧ್ಯಯನಗಳಿಗೆ ಮಾರ್ಗದರ್ಶಕವಾದವು.  ಇದಕ್ಕಾಗಿ ಜೇಮ್ಸ್ 1946ರ ನೊಬೆಲ್ ಪ್ರಶಸ್ತಿ ಪಡೆದನು.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 2/23/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate