অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಪ್ರಮುಖ ಉದ್ದೇಶಗಳು

ಪ್ರಮುಖ ಉದ್ದೇಶಗಳು

ಎಲ್ಲ ಪ್ರೌಢ / ಮಾಧ್ಯಮಿಕ ಶಾಲೆಗಳಿಗೆ ಭೌತಿಕ ಸೌಲಭ್ಯಗಳನ್ನು,  ಸಿಬ್ಬಂದಿ, ಮತ್ತು ಇತರೆ ಅಗತ್ಯಗಳನ್ನು ಪೂರೈಸುವ  ಖಾತ್ರಿ ಇರಬೇಕು. ಅದಕ್ಕೆಅಗತ್ಯವಾದ ಆರ್ಥಿಕ ನೆರವನ್ನು  ಸರ್ಕಾರ / ಸ್ಥಳೀಯ ಸಂಸ್ಥೆಗಳು ಮತ್ತು ಸರಕಾರಿ ಅನುದಾನಿತ ಶಾಲೆಗಳಿಗೆ ಕೊಡಬೇಕು.ಇತರೆ ಶಾಲೆಗಳ ವಿಷಯದಲ್ಲಿ ಸೂಕ್ತವಾದ ನಿಯಂತ್ರಣ ವ್ಯವಸ್ಥೆ ಇರಬೇಕು.

ಎಲ್ಲ ಹದಿಹರೆಯದವರಿಗೆ ಮಾದರಿಯ ಪ್ರಕಾರ ಪ್ರೌಢ / ಮಾಧ್ಯಮಿಕ ಶಾಲಾ ಶಿಕ್ಷಣದ ಲಭ್ಯತೆಯನ್ನು ಒದಗಿಸಬೇಕು.- ಹತ್ತಿರದ ಸ್ಥಳದಲ್ಲಿ (ಪ್ರೌಢ / ಮಾಧ್ಯಮಿಕ ಶಾಲೆಯು ೫ ೧೦ ಕಿ. ಮೀ. ಅಂತರದೊಳಗೆ ಇರಬೇಕು) ಸುವ್ಯವಸ್ಥಿತ ಮತ್ತು ಸುರಕ್ಷಿತ ಸಾಗಣಿಕೆ ಮತ್ತು ವಸತಿಯನ್ನು ಸ್ಥಳೀಯ ಅನುಕೂಲತೆ ಗಮನಿಸಿ ಮಾಡಬೇಕು. ಮುಕ್ತ ಶಾಲೆಯನ್ನು ಹೊಂದಬಹುದು. ಆದರೂ ಬೆಟ್ಟ ಮತ್ತು ಕಠಿನಪ್ರದೇಶಗಳಲ್ಲಿ  ಮಾದರಿಯನ್ನು ತುಸು ಸಡಲಿಸಬಹುದು. ಇಂಥಹ ಪ್ರದೇಶಗಳಲ್ಲಿ ವಸತಿ ಶಾಲೆಯ ಸ್ಥಾಪನೆಗೆ ಆದ್ಯತೆ ಇರಬೇಕು.

ಯಾವುದೆ ಮಗುವು ಲಿಂಗ, ಜಾತಿ, ಆರ್ಥಿಕ, ಸಾಮಾಜಿಕ, ವಿಕಲಚೇತನತೆ ಮತ್ತು ಇತರೆ ಅಡೆತಡೆಗಳಿಂದಾಗಿ ಗುಣಾತ್ಮಕ ಪ್ರೌಢ / ಮಾಧ್ಯಮಿಕ ಶಿಕ್ಷಣದಿಂದ ವಂಚಿತನಾಗದಂತೆ ಖಾತ್ರಿ ನೀಡಬೇಕು.

ಬೌದ್ಧಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಲಿಯುವಿಕೆಯ ಪರಿಣಾಮವಾಗಿ ಪ್ರೌಢ / ಮಾಧ್ಯಮಿಕ ಶಿಕ್ಷಣದ ಗುಣ ಮಟ್ಟ ಹೆಚ್ಚಾಗಬೇಕು.

ಪ್ರೌಢ / ಮಾಧ್ಯಮಿಕ ಶಿಕ್ಷಣ ಪಡೆಯುವ ಎಲ್ಲ ಮಕ್ಕಳೂ ಉತ್ತಮ ಗುಣಮಟ್ಟ ಶಿಕ್ಷಣ  ಪಡೆವ ಖಾತ್ರಿ ಇರಬೇಕು.

ಮೇಲೆ ಕಾಣಿಸಿದ ಈ ಎಲ್ಲ ಉದ್ದೇಶಗಳನ್ನು ಸಾಧಿಸಿದರೆ ತನ್ನಿಂದ ತಾನೆ ಇತರೆ ವಿಷಯಗಳ ಜೊತೆ ಸಾಮಾನ್ಯ ಶಾಲಾ ವ್ಯವಸ್ಥೆಯಲ್ಲಿ ಗಣನೀಯ ಪ್ರಗತಿ ಕಾಣುವುದು.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 6/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate