অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಪ್ರಾಯೋಜಿತ ಯೋಜನೆಗಳು

ಪ್ರಾಯೋಜಿತ ಯೋಜನೆಗಳು

ಸರ್ಕಾರವು ನಾಲ್ಕು ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು ಕೈಗೊಂಡಿದೆ

ಕೇಂದ್ರ ಸರ್ಕಾರವು  ನಾಲ್ಕು ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು ಕೈಗೊಂಡಿದೆ

ಶಾಲೆಗಳಲ್ಲಿ ಮಾಹಿತಿ ಸಂವಹನ ತಂತ್ರಜ್ಞಾನ (ICT@ schools)   ರಾಜ್ಯಸರ್ಕಾರಗಳಿಗೆ , ಕಾಂಪ್ಯೂಟರ್ ಶಿಕ್ಷಣಕ್ಕಾಗಿ , ಪ್ರೌಢ / ಮಾಧ್ಯಮಿಕ ಮತ್ತು ಹಿರಿಯ ಪ್ರೌಢ / ಮಾಧ್ಯಮಿಕ ಶಾಲೆಗಳಲ್ಲಿ ಕಾಂಪ್ಯೂಟರ್ ಸಹಾಯದ ಶಿಕ್ಷಣ ನೀಡುವುದಕ್ಕಾಗಿ

(ii)  ವಿಕಲಚೇತನ ಮಕ್ಕಳಿಗೆ ಸಮಗ್ರ (ಇಂಟಿಗ್ರೇಟೆಡ್) ಶಿಕ್ಷಣ ( ಐ ಇ ಡಿ ಸಿ)ವನ್ನು  ಮುಖ್ಯವಾಹಿನಿಯ ಶಾಲಾ ಶಿಕ್ಷಣದಲ್ಲಿಯೇ ಕೊಡಲು  ರಾಜ್ಯ ಸರ್ಕಾರಗಳಿಗೆ ಮತ್ತು ಸರ್ಕಾರೇತರ ಸಂಸ್ಥೆಗಳಿಗೆ  
(iii)  ಪ್ರೌಢ / ಮಾಧ್ಯಮಿಕ ಮತ್ತು ಹಿರಿಯ ಪ್ರೌಢ / ಮಾಧ್ಯಮಿಕ ಶಾಲೆಗಳಲ್ಲಿ  ಹೆಣ್ಣು ಹುಡುಗಿಯರಿಗೆ  ವಸತಿನಿಲಯ (ಹಾಸ್ಟೆಲ್) ಸೌಲಭ್ಯ  ಹೆಚ್ಚಿಸಲು ( ಲಭ್ಯತೆ ಮತ್ತು ಸಮತ್ವ)  ಗ್ರಾಮೀಣ ಪ್ರದೇಶದ  ಸರಕಾರೇತರ ಸಂಸ್ಥೆ ಗಳಿಗೆ ಹುಡುಗಿಯರ ವಸತಿನಿಲಯ (ಹಾಸ್ಟೆಲ್) ನೆಡೆಸಲು  ಸಹಾಯ ಮಾಡುವುದು. ಮತ್ತು
(iv) ಶಾಲೆಗಳಲ್ಲಿ ಗುಣ ಮಟ್ಟ ಸುಧಾರಣೆಗಾಗಿ ರಾಜ್ಯಸರ್ಕಾರಗಳಿಗೆ ಯೋಗಾಭ್ಯಾಸದ ತರಗತಿ ಪ್ರಾರಂಭಿಸಲು , ಶಾಲೆಯಲ್ಲಿನ ವಿಜ್ಞಾನ ಬೋಧನೆಯನ್ನು ಅಭಿವೃದ್ಧಿಪಡಿಸಲು ಪರಿಸರ ಶಿಕ್ಷಣ ಮತ್ತು ಜನಸಂಖ್ಯಾ ಶಿಕ್ಷಣ  ಅಲ್ಲದೆ ಅಂತರಾಷ್ಟ್ರೀಯ ವಿಜ್ಞಾನ, ಒಲಂಪಿಯಾಡ್ ಗಳಿಗೆ ಸಹಾಯ ಮಾಡುವುದು , ಈ ಎಲ್ಲ ಕಾರ್ಯ ಕ್ರಮಗಳು  ಈಗಿರುವ ರೂಪದಲ್ಲಿ ಇಲ್ಲವೆ ಸುಧಾರಿತ ರೂಪದಲ್ಲಿ ಹೊಸ ಕಾರ್ಯ ಕ್ರಮದಲ್ಲಿರುವವು.
(v) ಆರ್ಥಿಕವಾಗಿ ಹಿಂದುಳಿದ  ಮಕ್ಕಳಿಗೆ  ಕಲಿಯುವಾಗಲೆ ಗಳಿಸುವ ಸೌಲಭ್ಯವನ್ನು ಸ್ವಉದ್ಯೋಗ ಇಲ್ಲವೆ ಅರೆಕಾಲಿಕ ಉದ್ಯೋಗದ ಮೂಲಕ ಮಾಡಬೇಕು. ರಾಜ್ಯಗಳು / ಕೇಂದ್ರ ಆಡಳಿತ ಪ್ರದೇಶ ಗಳು  ವೃತ್ತಿ ತರಬೇತಿ ಕೇಂದ್ರಗಳನ್ನು ( ವಿಟಿಸಿ) ಸಂಸ್ಥೆಗಳನ್ನು  ವಲಯ, ಜಿಲ್ಲಾ ಮಟ್ಟದಲ್ಲಿ ಸ್ಥಾಪಿಸಬೇಕು

ಕೇಂದ್ರೀಯ ವಿದ್ಯಾಲಯ ಮತ್ತು ಜವಾಹರ್ ನವೋದಯ ವಿದ್ಯಾಲಯಗಳು

ಕೇಂದ್ರೀಯ ವಿದ್ಯಾಯಗಳ ಮತ್ತು ಜವಹರ್ ನವೋದಯ ವಿದ್ಯಾಲಯಗಳ ಸಂಖ್ಯೆಯನ್ನು ಹೆಚ್ಚಿಸುವುದಲ್ಲದೆ ಮಾರ್ಗದರ್ಶಿ ಶಾಲೆಗಳಾಗಿರುವುದರಿಂದ ಅವುಗಳ ಪಾತ್ರವನ್ನು ಬಲಪಡಿಸಬೇಕು.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 8/28/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate