ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಜೈವಿಕ ಅನಿಲ ಸ್ಥಾವರ

ಜೈವಿಕ ಅನಿಲದ ಸ್ಥಾವರವನ್ನು ಅಡುಗೆಯ ತ್ಯಾಜ್ಯ ವಸ್ತುವಿನ ಪರಿಸರ ಸ್ನೇಹಿ ವಿಲೇವಾರಿಗಾಗಿ ಸ್ಥಾಪಿಸಲಾಗಿದೆ.

ಅಡುಗೆ ಮನೆ ತ್ಯಾಜ್ಯವಸ್ತು ಆಧಾರಿತ ಜೈವಿಕ ಅನಿಲ ಸ್ಥಾವರ ಬಿ ಎ ಆರ್ ಸಿ ಸಮೀಪದಲ್ಲಿ ಹಲವಾರು ಕ್ಯಾಂಟೀನ್ ಗಳ ಸಸ್ಯವಾಟಿಕೆಗಳಲ್ಲಿ ಅಡುಗೆ ತ್ಯಾಜ್ಯ ವಸ್ತು ಆಧಾರಿತ ಜೈವಿಕ ಅನಿಲದ ಸ್ಥಾವರವನ್ನು ಅಡುಗೆಯ ತ್ಯಾಜ್ಯ ವಸ್ತುವಿನ ಪರಿಸರ ಸ್ನೇಹಿ ವಿಲೇವಾರಿಗಾಗಿ ಸ್ಥಾಪಿಸಲಾಗಿದೆ. ಈ ಸ್ಥಾವರವು ಕ್ಯಾಂಟೀನಿನಲ್ಲಿ ಉತ್ಪಾದನೆಯಾದ ಎಲ್ಲಾ ತ್ಯಾಜ್ಯ ವಸ್ತುವನ್ನು ಸಂಸ್ಕರಣೆ ಮಾಡುವುದೆಂದು ನಿರೀಕ್ಷಿಸಲಾಗಿದೆ. ಜೈವಿಕ ಅನಿಲದ ಸ್ಥಾವರವು ಈ ಕೆಳಗೆ ಸೂಚಿಸಿದ ಭಾಗಗಳನ್ನು ಹೊಂದಿದೆ: ಘನವಸ್ತುಗಳನ್ನು ಪುಡಿಮಾಡಲು ಮಿಕ್ಸರ್ ಪಲ್ಪರ್ (5 ಎಚ್ ಪಿ ಮೋಟಾರು) ಪೂರ್ವ ಮಿಶ್ರಣ (ಪ್ರಿಮಿಕ್ಸ್ )ತೊಟ್ಟಿಗಳು ಪೂರ್ವ ಸಂಗ್ರಹಣಾ ತೊಟ್ಟಿ ನೀರನ್ನು ಬಿಸಿ ಮಾಡಲು ಸೋಲಾರ್ ಹೀಟರ್ ಮುಖ್ಯ ಸಂಗ್ರಹಣಾ ತೊಟ್ಟಿ (35ಘನ ಮೀಟರುಗಳು) ಗೊಬ್ಬರ ಗುಂಡಿ ಸ್ಥಾವರದಿಂದ ಉತ್ಪಾದಿತ ಜೈವಿಕ ಅನಿಲವನ್ನು ಉಪಯೋಗಿಸಲು ಅನಿಲ ದೀಪ. ಸಂಸ್ಕರಣೆ ಈ ಸ್ಥಾವರದಲ್ಲಿ ಅಡುಗೆಮನೆಯಲ್ಲಿ ಉತ್ಪಾದನೆಯಾಗುವ ತರಕಾರಿ ತ್ಯಾಜ್ಯ ,ಬೇಯಿಸಿದ ಅಥವಾ ಬೆಂದಿರದ ಹಳಸಿದ ಪದಾರ್ಥ,ಸಾರ ತೆಗೆದ ಟೀ ಪುಡಿ, ಹಾಳಾಗಿರುವ ಹಾಲು ಮತ್ತು ಹಾಲಿನ ಉತ್ಪನ್ನಗಳು ಇಂತಹ ಎಲ್ಲಾ ತ್ಯಾಜ್ಯವನ್ನು ಸಂಸ್ಕರಿಸಬಹುದಾಗಿದೆ. ಅಡುಗೆಮನೆ ತ್ಯಾಜ್ಯವನ್ನು ಸಂಗ್ರಹ ಮಾಡಬೇಕಾದಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು : ಕಾಯಿಯ ಕರಟ, ನಾರು, ಮೊಟ್ಟೆಯ ಕವಚ, ಈರುಳ್ಳಿಸಿಪ್ಪೆ ಮತ್ತು ಮೂಳೆಗಳನ್ನು ಬೇರೆಯಾಗಿ ಸಂಗ್ರಹ ಮಾಡಬೇಕು. ಇವುಗಳನ್ನು ಜೈವಿಕ ಅನಿಲದ ಸ್ಥಾವರದಲ್ಲಿ ಸಂಸ್ಕರಣೆ ಮಾಡಲಾಗುವುದಿಲ್ಲ. ಹಸಿ ತ್ಯಾಜ್ಯವಸ್ತುಗಳ(ಹಳಸಿದ ಪದಾರ್ಥ, ಹಾಳಾದ ಹಾಲಿನ ಉತ್ಪನ್ನಗಳು) ಸಂಗ್ರಹಕ್ಕಾಗಿ ಸಣ್ಣ ಪ್ರಮಾಣದ ಬೇರೆ ಬೇರೆ ಪಾತ್ರೆಗಳು (5ಲೀ ಸಾಮರ್ಥ್ಯವುಳ್ಳ). ತರಕಾರಿ ತ್ಯಾಜ್ಯಗಳಾದ ವಿವಿಧ ತರಕಾರಿ ಸಿಪ್ಪೆಗಳು, ಕೊಳೆತ ಆಲೂಗೆಡ್ಡೆ, ಟೊಮ್ಯಾಟೊ, ಕೊತ್ತಂಬರಿಸೊಪ್ಪು ಮುಂತಾದವುಗಳಿಗೆ 5 ಕೆ.ಜಿ. ಸಾಮರ್ಥ್ಯವುಳ್ಳ ಕಸದ ಬ್ಯಾಗುಗಳು. ಜೈವಿಕ ಅನಿಲದ ಸ್ಥಾವರವು ಸರಿಯಾಗಿ ನೆಡೆಯಲು ಈ ರೀತಿಯಾಗಿ ತ್ಯಾಜ್ಯವಸ್ತುಗಳ ಬೇರ್ಪಡಿಸುವಿಕೆ ಬಹಳ ಮುಖ್ಯ ಎಂಬುದನ್ನು ಮನಗೊಳ್ಳಬೇಕು. ಬಿ ಎ ಆರ್ ಸಿ ಯಲ್ಲಿನ ಜೈವಿಕ ಅನಿಲದ ಸ್ಥಾವರದ ಸಾಂಪ್ರದಾಯಿಕ ರಚನೆಗೆ ಎರಡು ಮುಖ್ಯವಾದ ಬದಲಾವಣೆಗಳನ್ನು ಮಾಡಲಾಗಿದೆ : ಪೂರ್ವ ಸಂಗ್ರಹ ತೊಟ್ಟಿಯಲ್ಲಿ ತ್ಯಾಜ್ಯವನ್ನು ಹಾಕುವ ಮುನ್ನ 5 ಎಚ್ ಪಿ ಮಿಕ್ಸರ್ ನನ್ನು ತ್ಯಾಜ್ಯವಸ್ತುಗಳ ಸಂಸ್ಕರಣೆ ಮಾಡಲು ಉಪಯೋಗಿಸಲಾಗುತ್ತದೆ. ಈ ತ್ಯಾಜ್ಯವು ನೀರಿನೊಂದಿಗೆ ಮಿಶ್ರವಾಗಿ (1;1) ದ್ರಾವಣದ ರೀತಿಯಲ್ಲಿ ಮಾರ್ಪಾಡಾಗುತ್ತದೆ ತ್ರಾಜ್ಯವಸ್ತುವನ್ನು ಶೀಘ್ರವಾಗಿ ವಿಭಜಿಸಲು ಥರ್ಮೋಫಿಲಿಕ್ ಮೈಕ್ರೋಬಿನ ಬಳಕೆಮಾಡಲಾಗುತ್ತಿದೆ. ಥರ್ಮೋಫೈಲ್ಸ್ ಗಳು ಹೆಚ್ಚಿನ ಉಷ್ಣಾಂಶದಲ್ಲಿ ಬಹಳ ಚೆನ್ನಾಗಿ ಕೆಲಸ ಮಾಡುತ್ತದೆ. ಬಹಳಷ್ಟು ಕೇಡು ಉಂಟುಮಾಡುವ ಮತ್ತು ರೋಗ ಹರಡುವ ಸೂಕ್ಷ್ಮಜೀವಿಗಳು ಈ ಹೆಚ್ಚಿನ ಉಷ್ಣಾಂಶದಲ್ಲಿ ಬದುಕುಳಿಯುವುದಿಲ್ಲ, ಹಾಗೆಯೇ ಥರ್ಮೋಫೈಲ್ಸ್ ಸಂತಹ ಸೂಕ್ಷ್ಮಜೀವಿಗಳು ಇಂತಹ ಉಷ್ಣಾಂಶವನ್ನು ತಾಳಿಕೊಳ್ಳಬಲ್ಲವು. ಆದ್ದರಿಂದ ಅಡುಗೆಯ ತ್ಯಾಜ್ಯವಸ್ತುವಿನಲ್ಲಿನ ವಿಷ ಪದಾರ್ಥವನ್ನು ತೆಗೆದುಹಾಕಿ ವಿಭಜಿಸಲು ಈ ಸೂಕ್ಷ್ಮಜೀವಿಗಳ ಉಪಯೋಗ ಸೂಕ್ತವಾಗಿದೆ. ಇದಾದನಂತರ ಮೀತೇನ್ ಉತ್ಪಾದನೆಗಾಗಿ ಇದನ್ನು ಸಾಂಪ್ರದಾಯಿಕ ಜೈವಿಕ ಅನಿಲದ ಸ್ಥಾವರಕ್ಕೆ ಹಾಕಲಾಗುತ್ತದೆ. ಪೂರ್ವ ಸಂಗ್ರಹಣಾ ತೊಟ್ಟಿಯಲ್ಲಿ ಹೆಚ್ಚಿನ ಉಷ್ಣಾಂಶವಿರುವಂತೆ ನೋಡಿಕೊಳ್ಳಲಾಗುತ್ತದೆ. ಸಂಗ್ರಹಣಾ ತೊಟ್ಟಿಯಲ್ಲಿ ಬಿಸಿ ನೀರನ್ನು ಮಿಶ್ರಣ ಮಾಡಿ ಥರ್ಮೋಫೈಲ್ಸ್ ನ ಬೆಳವಣಿಗೆ ಹೆಚ್ಚಾಗುವಂತೆ ಮಾಡಲಾಗುತ್ತದೆ. ಹಾಗೂ 55 ಡಿಗ್ರಿ-60 ಡಿಗ್ರಿ ಉಷ್ಣಾಂಶವನ್ನು ನಿರ್ವಹಿಸಲಾಗುತ್ತದೆ. ಸೋಲಾರ್ ಹೀಟರ್ ಗಳಿಂದ ಬಿಸಿ ನೀರನ್ನು ಒದಗಿಸಲಾಗುತ್ತದೆ. ಈ ಬಿಸಿನೀರಿನ ಅವಶ್ಯಕತೆಗೆ ಒಂದು ಘಂಟೆಗಳ ಬಿಸಿಲು ಸಾಕಷ್ಟಾಗುತ್ತದೆ. ಜೈವಿಕ ಅನಿಲದ ಸ್ಥಾವರವನ್ನು ನೆಡೆಸಲು ಇನ್ನೊಂದು ಬಹಳ ಮುಖ್ಯವಾದ ಅಂಶವೆಂದರೆ, ಸ್ಥಾವರವು ಕಟ್ಟಿಕೊಳ್ಳದ ಹಾಗೆ ಘನವಸ್ತುವನ್ನು ಎಷ್ಟರ ಮಟ್ಟಿಗೆ ನಿರ್ವಹಿಸಲಾಗುತ್ತದೆ ಎಂಬುದರ ಮೇಲೆ ನಿರ್ಧಾರಿತವಾಗಿರುತ್ತದೆ. ಸೂಕ್ಷ್ಮ ಜೀವಿಗಳು ಈ ಗಟ್ಟಿ ವಸ್ತುಗಳನ್ನು ವಿಭಜಿಸಲು ಅಸಾಧ್ಯವಾದಾಗ ಸ್ಥಾವರವು ಕಟ್ಟಿಕೊಳ್ಳುತ್ತದೆ. ಇದಕ್ಕಿರುವ ಉಪಾಯವೆಂದರೆ ಘನ ತ್ಯಾಜ್ಯ ವಸ್ತುಗಳನ್ನು ದ್ರಾವಣವನ್ನಾಗಿ ಪರಿವರ್ತಿಸಿ ಸೂಕ್ಷ್ಮಜೀವಿಗಳಿಗೆ ವಿಭಜಿಸಲು ಸುಲಭವಾಗುವಂತೆ ಮಾಡುವುದು. ಘನ ವಸ್ತುವನ್ನು ದ್ರಾವಣವನ್ನಾಗಿ ಪರಿವರ್ತಿಸಲು ಹೆಚ್ಚಿನ ಶಕ್ತಿಯುಳ್ಳ ಮಿಕ್ಸರ್ ನ್ನು ಈ ಉದ್ದೇಶಕ್ಕಾಗಿ ಬಳಸಲಾಗುತ್ತದೆ. ಪೂರ್ವಸಂಗ್ರಹಣಾ ತೊಟ್ಟಿಯ ನಂತರ ದ್ರಾವಣವು ಮುಖ್ಯ ಸಂಗ್ರಹಣಾ ತೊಟ್ಟಿಯನ್ನು ತಲುಪುತ್ತದೆ. ಇದರಲ್ಲಿ ಮೆತನೋಕಾಕಸ್ ಗುಂಪಿಗೆ ಸೇರಿರುವ ಆರ್ಕಿಬ್ಯಾಕ್ಟೀರಿಯ ಸಮೂಹದ ಸಹಾಯದಿಂದ ದ್ರಾವಣವನ್ನು ಮುಖ್ಯವಾಗಿ ಆಮ್ಲಜನಕರಹಿತವಾಗಿ ವಿಭಜನೆ ಮಾಡಲಾಗುತ್ತದೆ. ಈ ಬ್ಯಾಕ್ಟೀರಿಯಗಳು ನೈಸರ್ಗಿಕವಾಗಿ ಮೆಲಕು ಹಾಕುವ ಪ್ರಾಣಿಗಳ(ಜಾನುವಾರುಗಳು) ಬಾಯಿಯಿಂದ ಗುದದ್ವಾರದವರೆಗಿನ ಮಾರ್ಗದಲ್ಲಿ ವಾಸಿಸುತ್ತಿರುತ್ತದೆ.ಇವುಗಳು ದ್ರಾವಣದಲ್ಲಿನ ಜೀವಕೋಶಗಳಿಂದ ಮುಖ್ಯವಾಗಿ ಮೀತೇನ್ ನನ್ನು ಉತ್ಪಾದಿಸುತ್ತದೆ. ವಿಭಜನೆಯಾಗದ ಲಿಗ್ನೋಸೆಲ್ಲ್ಯುಲೋಸ್ ಗಳು ಮತ್ತು ಹೆಮಿಸೆಲ್ಲ್ಯುಲೋಸ್ ಗಳನ್ನು ಒಂದು ವ್ಯವಸ್ಥಿತ ತೊಟ್ಟಿಗೆ ಕಳಿಸಲಾಗುತ್ತದೆ. ಒಂದು ತಿಂಗಳ ನಂತರ ಈ ವ್ಯವಸ್ಥಿತ ತೊಟ್ಟಿಗಳಿಂದ ಉತ್ತಮ ಗುಣಮಟ್ಟದ ಗೊಬ್ಬರವನ್ನು ಪಡೆಯಬಹುದಾಗಿದೆ. ಈ ಗೊಬ್ಬರಕ್ಕೆ ಒಂದು ಸ್ವಲ್ಪವೂ ವಾಸನೆಯಿರುವುದಿಲ್ಲ. ಇದರಲ್ಲಿ ಜೈವಿಕ ಪದಾರ್ಥಗಳು ಹೆಚ್ಚಿದ್ದು, ಇದು ಮಣ್ಣಿನ ಹ್ಯೂಮಸ್ಸಿನ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಸಹಾಯಮಾಡುತ್ತದೆ. ಇದರಿಂದ ಮಣ್ಣಿನ ಫಲವತ್ತತೆಯೂ ಹೆಚ್ಚುತ್ತದೆ. ಮುಖ್ಯವಾದ ತೊಟ್ಟಿಯಲ್ಲಿ ಅನಿಲವು ತುಂಬುತ್ತಿದ್ದಂತೆಯೇ, ಅದರ ಗುಮ್ಮಟವನ್ನು ನಿಧಾನವಾಗಿ ಮೇಲಕ್ಕೆತ್ತಲಾಗುತ್ತದೆ. ಅದು ಗರಿಷ್ಟ 8 ಅಡಿ ಎತ್ತರಕ್ಕೆ ಹೋಗಿ 35 ಘನ ಮೀಟರುಗಳಷ್ಟು ಅನಿಲವನ್ನು ಹಿಡಿದಿಟ್ಟು ಕೊಳ್ಳಬಹುದಾಗಿದೆ. ಈ ಅನಿಲವು ಮೀತೇನ್ (70-75%), ಇಂಗಾಲದ ಡೈಆಕ್ಸೈಡ್ (10-15%) ಮತ್ತು ಆವಿ (5-10%) ರ ಮಿಶ್ರಣವಾಗಿದೆ. ಇದನ್ನು G1 ಪೈಪಿನ ಮುಖಾಂತರ ದೀಪದ ಕಂಬದವರೆಗೆ ತೆಗೆದುಕೊಂಡು ಹೋಗಲಾಗುತ್ತದೆ. ಘನೀಕೃತ ಆವಿಗಳಿಗಾಗಿ ಪೈಪ್ ನ ಮೇಳೆ ಚರಂಡಿಯ ವ್ಯವಸ್ಥೆಯಿರುತ್ತದೆ. ಈ ಅನಿಲವು ಉರಿದಾಗ ನೀಲಿ ಬಣ್ಣದ ಜ್ವಾಲೆಯನ್ನು ಕೊಡುವುದರಿಂದ ಇದನ್ನು ಅಡುಗೆಗೂ ಕೂಡ ಬಳಸಬಹುದಾಗಿದೆ. ಈ ಸ್ಥಾವರದಿಂದ ಉತ್ಪಾದನೆಯಾದ ಅನಿಲವನ್ನು ಸುತ್ತಮುತ್ತಲಿನ ಅನಿಲ ದೀಪಗಳಿಗೆ ಉಪಯೋಗ ಮಾಡಲಾಗುತ್ತಿದೆ. ಕ್ಯಾಂಟೀನಿಗೆ ಈ ಸ್ಥಾವರದಿಂದ ಬಹಳವಾದ ಉಪಯೋಗವಾಗಿದೆ.ಇದರಿಂದ ಉತ್ಪಾದಿತ ಗೊಬ್ಬರವು ಉತ್ತಮ ಗುಣಮಟ್ಟದಾಗಿದ್ದು ಜಮೀನಿನಲ್ಲಿ ಬಳಸಬಹುದಾಗಿದೆ. ಈ ಜೈವಿಕ ಅನಿಲ ಸ್ಥಾವರದ ಯಶಸ್ಸು ಬಹುಪಾಲು ಅಡುಗೆ ತ್ಯಾಜ್ಯದ ಬೇರ್ಪಡಿಸುವಿಕೆಯ ಮೇಲೆ ಅವಲಂಬಿತವಾಗಿದೆ. ಸ್ಥಾವರವು ಪರಿಣಾಮಕಾರಿಯಾಗಿ ನೆಡೆಯದಿರಲು ತೆಂಗಿನ ಕರಟ, ನಾರು, ಮೊಟ್ಟೆಯ ಕವಚ, ಈರುಳ್ಳಿ ಸಿಪ್ಪೆ, ಮೂಳೆ ಮತ್ತು ಪ್ಲಾಸ್ಟಿಕ್ ಚೂರುಗಳು ಕಾರಣವಾಗಬಹುದು. ಕ್ಯಾಂಟೀನಿನ ಕಸದ ಬ್ಯಾಗಿನಿಂದ ತಟ್ಟೆ, ಸ್ಪೂನು ಮುಂತಾದವುಗಳು ಕಾಣಸಿಗುತ್ತದೆ. ಮೂಳೆಗಳು, ಕರಟಗಳು, ಮತ್ತು ಲೋಹದ ಪದಾರ್ಥಗಳು ಮಿಕ್ಸರ್ ನ ಕವಚವನ್ನು ಹಾಳುಗೆಡವಿದರೆ, ಈರುಳ್ಳಿ ಸಿಪ್ಪೆ, ನಾರು, ಪ್ಲಾಸ್ಟಿಕ್ ವಸ್ತುಗಳು ಪೂರ್ವಸಂಗ್ರಹ ತೊಟ್ಟಿ ಮತ್ತು ಮುಖ್ಯ ಸಂಗ್ರಹ ತೊಟ್ಟಿಯ ಸೂಕ್ಷ್ಮ ಜೀವಿಗಳ ಗುಂಪಿನ ಮೇಲೆ ಹಾನಿಮಾಡಿ ಸ್ಥಾವರಕ್ಕೆ ಕೆಡುಕುಂಟುಮಾಡುತ್ತದೆ.

ಮೂಲ: ಪೋರ್ಟಲ್ ತಂಡ

3.05714285714
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top