ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ವಿಧಾನಗಳು

ಪರಿಸರವನ್ನು ಮಲಿನ್ಯರಹಿತಗೊಳಿಸುವುದು ಹಿಂದೆಂದಿಗಿಂತ ಇಂದು ಅತ್ಯಗತ್ಯವಾಗಿದೆ.

ಪರಿಸರ ಮಾಲಿನ್ಯವನ್ನು ತಡೆಗಟ್ಟುವ ವಿಧಾನಗಳು:

ಪರಿಸರವನ್ನು ಮಲಿನ್ಯರಹಿತಗೊಳಿಸುವುದು ಹಿಂದೆಂದಿಗಿಂತ ಇಂದು ಅತ್ಯಗತ್ಯವಾಗಿದೆ. ಎಕೆಂದರೆ ಪರಿಸರ ಇಂದು ವ್ಯಾಪಕವಾಗಿ ಹಾಳಾಗುತ್ತಿದೆ. ಇದೇ ವೇಗದಲ್ಲಿ ವಿಷವಸ್ತುಗಳು, ರಾಸಾಯನಿಕ ಪದಾರ್ಥಗಳು,ತ್ಯಾಜ್ಯಗಳು ಪರಿಸರವನ್ನು ಸೇರುತ್ತಿದ್ದರೆ ಸಮಸ್ತ ಜೀವಸಂಕುಲದ ನಾಶ ಖಂಡಿತ. ಆದ್ದರಿಂದ ಇಂದು ನಾವು ಕೆಳಕಂಡ ಕ್ರಮಗಳನ್ನು ಸಮಾರೋಪಾದಿಯಲ್ಲಿ ಕೈಗೊಳ್ಳಲೇಬೇಕಾಗಿದೆ.

  1. ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳು, ಕ್ರಿಮಿನಾಶಕಗಳ ಬಳಕೆಯನ್ನು ನಿಲ್ಲಿಸಬೇಕು. ಬದಲಾಗಿ ನೈಸರ್ಗಿಕ ಸಾವಯವ ಗೊಬ್ಬರ ಬಳಸಿ ಕೃಷಿ ಮಾಡಬೇಕು.
  2. ಬೃಹತ್ ಕೈಗಾರಿಕೆಗಳ ಸ್ಥಾಪನೆ ನಿಲ್ಲಬೇಕು.
  3. ಆಹಾರ ತ್ಯಾಜ್ಯಗಳು, ಮತ್ತಿತರೆ ಕೊಳೆಯುವ ವಸ್ತುಗಳನ್ನು ನದಿ, ಕೆರೆ, ಸರೋವರಗಳಿಗೆ ಬಿಡಬಾರದು. ಬದಲಾಗಿ ತ್ಯಾಜ್ಯಗಳನ್ನು ಬಳಸಿ ಗೊಬ್ಬರ ತಯಾರಿಸಬಹುದು.
  4. ಕಟ್ಟಿಗೆ, ಧ್ರವೀಕೃತ ಅನಿಲ ಇಂಧನಗಳನ್ನು ಅಡುಗೆಗೆ ಉರುವಲಾಗಿ ಉಪಯೋಗಿಸುವ ಬದಲು, ಸೌರಶಕ್ತಿ ಬಳಸಬಹುದು.
  5. ಇಂಧನಗಳನ್ನು ಮಿತವಾಗಿ ಅಗತ್ಯ ಇರುವಷ್ಟೇ ಬಳಸಬೇಕು. ವಾಹನಗಳು,ದೀಪಗಳು,ಸ್ಟೌ ಮೊದಲಾದವುಗಳನ್ನು ಅಗತ್ಯವಿಲ್ಲದಿರುವಾಗ ನಂದಿಸಬೇಕು.
  6. ಉಳಿದಿರುವ ಅರಣ್ಯವನ್ನು ಸಂರಕ್ಷಿಸಬೇಕು. ಜೊತೆಗೆ ವನಮಹೋತ್ಸವಗಳಂತಹ ಆಚರಣೆಗಳಿಂದ ಹೊಸದಾಗಿ ಗಿಡ ನೆಟ್ಟು ವೃಕ್ಷ ಸಂಪತ್ತನ್ನು ಹೆಚ್ಚಿಸಬೇಕು. ಇದರಿಂದ ಬೇಸಗೆ ದಿನಗಳಲ್ಲಿ ತಂಪಾದ ವಾತಾವರಣವುಂಟಾಗಿ ಏರ್ ಕೂಲರ್ / ಫ್ರಿಡ್ಜ್ / ಪಂಖಗಳ ಬಳಕೆ ಕಡಿಮೆಯಾಗುತ್ತದೆ.
  7. ಧೂಮಪಾನ ನಿಲ್ಲಿಸಬೇಕು.
  8. ವಾಹನಗಳ ನಿರ್ವಹಣೆ ಸರಿಯಾಗಿರಬೇಕು. ವಾಹನದ ಯಂತ್ರಗಳ ಕಾರ್ಯಕ್ಷಮತೆ ಹೆಚ್ಚಿಸಾಲು ಮತ್ತು ಇಂಧನದ ಉಳಿತಾಯಕ್ಕಾಗಿ ಅವು ಯಾವಾಗಲೂ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು.
  9. ಹೆಚ್ಚಿನ ಓಡಾಟಕ್ಕೆ ಸಾರ್ವಜನಿಕ ಸಾರಿಗೆಯನ್ನೇ ಉಪಯೋಗಿಸಬೇಕು. ಕಡಿಮೆ ದೂರದ ಸ್ಥಳಗಳಿಗೆ ನೆಡೆದುಕೊಂಡು ಹೋಗುವುದು ಆರೋಗ್ಯದ ದೃಷ್ಟಿಯಿಂದಲೂ ಕೂಡ ಉತ್ತಮ ಮತ್ತು ಪರಿಸರಕ್ಕೂ ಒಳ್ಳೆಯದು.

ಕೈಗಾರಿಕೆಗಳಿಂದ ಹೊರಬರುವ ಕಲುಷಿತ ರಾಸಾಯನಿಕ ಮತ್ತು ವಿಷಯುಕ್ತ ನೀರು ಮತ್ತು ಅನಿಲಗಳನ್ನು ಶುದ್ದೀಕರಿಸಿಯೇ ಹೊರಬಿಡಬೇಕು. ಈ ನಿಟ್ಟಿನಲ್ಲಿ ಸರ್ಕಾರಗಳು ಕೈಗಾರಿಕೆಗಳಿಗೆ ಕಠಿಣ ಕಾನೂನನ್ನು ಜಾರಿಗೆ ತಂದು ನಿರ್ವಹಿಸಬೇಕು.

ಶಾಲೆ ಕಾಲೇಜುಗಳಲ್ಲಿ ಪರಿಸರ ಮಾಲಿನ್ಯ ತಡೆಗಟ್ಟುವ ಕುರಿತಾಗಿ ಹೆಚ್ಚಿನ ಪರಿಣಾಮಕಾರಿಯಾದ ಶಿಕ್ಷಣ ವ್ಯವಸ್ಥೆ ಜಾರಿಗೆ ತರಬೇಕು.

ಹೀಗೆ ನಾವು ಈಗಲಾದರೂ ಎಚ್ಚೆತ್ತುಕೊಲ್ಲದಿದ್ದರೆ ಈ ಭೂಮಿ ಮುಂದೊಂದು ದಿನ ವಾಸಯೋಗ್ಯ ಆಗದಿರಬಹುದು. ನಮ್ಮ ಮುಂದಿನ ಪೀಳಿಗೆಗೆ ಇಂದನ್ನು ಸಂರಕ್ಷಿಸಿದಬೇಕಾದ ಅನಿವಾರ್ಯತೆ ನಮಗಿದೆ. ಇದಕ್ಕೆ ಎಲ್ಲರೂ ಕಟಿಬದ್ದರಾದರೆ ಮಾತ್ರ ಈ ಮನುಕುಲದ, ಸಮಸ್ತ ಜೀವಸಂಕುಲದ, ಭೂಮಂಡಲದ ಉಳಿವು ಸಾದ್ಯ.

ಮೂಲ: ಪೋರ್ಟಲ್ ತಂಡ

3.09302325581
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top