অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಬಾಯಿಯ ಆರೋಗ್ಯ

ಬಾಯಿಯ ಮತ್ತು ಹಲ್ಲಿನ ಆರೋಗ್ಯವು ಎಲ್ಲ ಸಮಾಜಕ್ಕೂ ಅತಿ ಮುಖ್ಯವಾಗಿದೆ. ಬಾಯಿಯ ಆರೋಗ್ಯವು ಆರೋಗ್ಯ ಪೂರ್ಣ ಜೀವನಕ್ಕೆ ದಾರಿಯಾಗಿದೆ. ಕೆಳಗಿನ ಸಲಹೆಗಳು ನಮ್ಮ ಅತ್ಯುತ್ತಮ ಹಲ್ಲಿನಾರೋಗ್ಯಕ್ಕೆ ಅವಶ್ಯಕ

ವಸಡುಗಳು : ಗುಲಾಬಿ ಬಣ್ಣದವಾಗಿದ್ದರೆ ಆರೋಗ್ಯ ಪೂರ್ಣ

ನಿಮ್ಮಹಲ್ಲುಗಳನ್ನು ಸುತ್ತುವರದಿರುವ ವಸಡುಗಳು ಅವನ್ನು ಗಟ್ಟಿಯಾಗಿ ಅವುಗಳ ಸ್ಥಳದಲ್ಲಿ ಹಿಡಿದಿಟ್ಟಿರುತ್ತವೆ. ನಿಮ್ಮ ವಸಡುಗಳನ್ನು ಆರೋಗ್ಯ ಪೂರ್ಣವಾಗಿಡಲು ಉತ್ತಮ ಬಾಯಿಯ ಸ್ವಚ್ಛತೆ ಅಗತ್ಯ.- ನಿಮ್ಮ ಹಲ್ಲನ್ನು ಕನಿಷ್ಟ ದಿನಕ್ಕೆ ಎರಡುಬಾರಿ ಉಜ್ಜಿರಿ. ನಿಮ್ಮ ಹಲ್ಲನ್ನು ದಿನಕ್ಕೊಂದುಸಾರಿ ಫ್ಲಾಸ್ ಮಾಡಿ. ಮತ್ತು ನಿಯಮಿತವಾಗಿ ದಂತ ಪರಿಶೀಲನೆ ಮಾಡಿಸಿಕೊಳ್ಳಿ. ನಿಮ್ಮ ವಸಡುಗಳು ಕೆಂಪಾಗಿ ಬಾತುಕೊಂಡರೆ, ರಕ್ತ ಬೇಗ ಬಂದರೆ ,ಅವು ಸೋಂಕು ಹೊಂದಿರಬಹುದು. ಇದನ್ನು ಜಿನ್ ಜಿವೈಟಿಸ್. ಕ್ರಮವಾದ ಚಿಕಿತ್ಸೆಯು ಬಾಯಿಯ ಆರೊಗ್ಯ ವನ್ನು ನೀಡಬಲ್ಲುದು. ಚಿಕಿತ್ಸೆ ನೀಡದೆ ಇದ್ದರೆ ಜಿನ್ ಜಿವೈಟಿಸ್ ಉಲ್ಬಣವಾಗಿ ವಸಡಿನ ರೋಗ ತೀವ್ರವಾಗಬಹುದು( ಪೆರಿಯೋಡೊಂಟೈಟಿಸ್) ಮತ್ತು ಹಲ್ಲ ಹೋಗಬಹುದು..

ಬಾಯಿಯ ಆರೋಗ್ಯಕ್ಕೆ ಹಲ್ಲುಜ್ಜುವುದು

ಬಾಯಿಯ ಆರೋಗ್ಯವು ಹಲ್ಲುಗಳ ಶುಚಿತ್ವದಿಂದ ಪ್ರಾರಂಭ ವಾಗುವುದು. ಹಲ್ಲುಜ್ಜುವ ಕೆಲ ಮೂಲ ತತ್ವಗಳನ್ನು ಪರಿಗಣಿಸಿರಿ

ದಿನಕ್ಕೆ ಎರಡು ಸಲ ತಪ್ಪದೆ ಹಲ್ಲುಜ್ಜಿ. ಹಲ್ಲುಜ್ಜುವಾಗ ಅವಸರ ಬೇಡ. ಸಾಕಷ್ಟು ಸಮಯ ಉಪಯೋಗಿಸಿ ಚೆನ್ನಾಗಿ ಉಜ್ಜಿರಿ

ಸರಿಯಾದ ಪೇಸ್ಟು ಮತ್ತು ಬ್ರಷ್ ಅನ್ನು ಉಪಯೋಗಿಸಿ ಫ್ಲೋರೈಡ್ ಪೇಷ್ಟು ಮತ್ತು ಮೃದುವಾದ ಬ್ರಷ್ ನ್ನು ಬಳಸಿರಿ.

ಉತ್ತಮ ತಂತ್ರವನ್ನು ಬಳಸಿ ಬ್ರಷ್‌ಅನ್ನು ಹಲ್ಲಿಗೆಸರಿಯಾದ ಕೋನದಲ್ಲಿ ಹಿಡಿಯಿರಿ. ಚಿಕ್ಕಹಿಂದು ಮುಂದಿನ ಚಲನೆಯಲ್ಲಿ ಬ್ರಷ್ ಆಡಿಸಿ ಒಳಬಾಗವನ್ನು ಮತ್ತು ಅಗಿಯುವ ಬಾಗವನ್ನು ಬ್ರಷ್ ಮಾಡಲು ನೆನಪಿಡಿ ಜೊತೆಗೆ ನಾಲಿಗೆಯನ್ನೂ ಉಜ್ಜಿರಿ. ಜೊರಾಗಿ ಉಜ್ಜಬಾರದು ವಸಡೆಗೆ ಕಿರಿಯಾಗಬಾರದು

ಟೂಥ್ ಬ್ರಷ್ ಅನ್ನು ಬದಲಯಿಸುವುದು . ಪ್ರತಿ ಮೂರು ತಿಂಗಳಿಗೆ ಟೂಥ್ ಬ್ರಷ್ ಅನ್ನು ಬದಲಾಯಿಸಿ.—ಇಲ್ಲದಿದ್ದರೆ ಅದರ ತಂತಿ ಕೂದಲು ತಿಕ್ಕಿ ಸವೆದಿರುತ್ತವೆ.

  • ಯಾವಾಗಲು ಮೃದವಾದ ತಂತಿಗಳುಳ್ಳ ಬ್ರಷ್ ಅನ್ನು ಬಳಸಿ
  • ಊಟವಾದ ಕೂಡಲೆ ಪ್ರತಿಬಾರಿಯೂ ಬಾಯಿ ಮುಕ್ಕಳಿಸಿ.
  • ಹಲ್ಲುಗಳ ನಡುವೆ ಸಿಕಿ ಹಾಕಿಕೊಂಡಿರುವ ಆಹಾರದ ಕಣಗಳನ್ನು ತೆಗೆಯಲು ಫ್ಲಾಸ್ ಮಾಡಿ
  • ಬಾಯಿ ಒಣಗಿದ್ದರೆ ಸಕ್ಕರೆ ರಹಿತ ಚ್ಯೂಯಿಂಗಮ್ ಅನ್ನು ಉಪಯೋಗಿಸಿ ಲಾಲಾರಸದ ಹರಿವನ್ನು ಪ್ರಚೋದಿಸಿ.
  • ಗಟ್ಟಿಯಾದ ಬೀಜಗಳನ್ನು ಅಗಿದು ; ಲಾಲಾರಸ ಹರಿವನ್ನು ಪ್ರಚೋದಿಸಿ. ಇದರಿಂದ ದವಡೆಯ ಸ್ನಾಯುಗಳ ವ್ಯಾಯಮವೂ ಆಗುವುದು.
  • ಮಕ್ಕಳಿಗೆ ಬಟಾಣಿ ಗಾತ್ರದ ಟೂಥ್ ಪೇಸ್ಟ್ ಅನ್ನು ಉಪಯೋಗಿಸಿ. ಉಜ್ಜಿದ ಮೇಲೆ ಪೇಸ್ಟನ್ನು ಉಗುಳಲು ಉತ್ತೇಜಿಸಿ.
  • ಆಲ್ಕೋಹಾಲ್ ಇಲ್ಲದ ಮೌತ್ ವಾಷ್ ಬಳಸಿ. ಆಲ್ಕೋಹಾಲ್ ಇದ್ದ ಮೌತ್ ವಾಷ್ ಬಾಯಿಯನ್ನು ಒಣಗಿಸುವುದು.
  • ನಾಲಿಗೆ ಯು ಶುಚಿಯಾಗಿರಿಸಲು ಟಂಗ್ ಕ್ಲೀನರ್ ಬಳಸಿ. ಅದು ಸಹಾ ಸ್ವಚ್ಛವಾಗಿರಬೇಕು. ಬ್ಯಾಕ್ಟೀರಿಯಾ ಭರಿತ ನಾಲಗೆಯಿಂದ ಹಲಿಟೊಸಿಸ್ ಎಂಬ ರೋಗ ಬರಬಹುದು. ಟೂಥ್ ಬ್ರಷ್ ಅನ್ನೆ ನಾಲಿಗೆ ಸ್ವಚ್ಛ ಮಡಲು ಬಳಸಬಹುದು.

ಹಲ್ಲು ಕಳೆದು ಕೊಂಡವರು ಹಲ್ಲನ್ನು ಇಂಪ್ಲಾಂಟ್ ಮಾಡಿಸಿಕೊಳ್ಳಬಹುದು. ಅವು ಕ್ರೌನಿಗೆ ಆಧಾರ ಕೊಡುವವು. ಅಥವ ಸೇತುವೆಯಾಗುವವು. ನೋಡಲು ಅಂದವಾಗಿಯೂ ಕಾಣವವು. ಅವು ಹಲ್ಲಗಳ ನಡುವೆ ಇರುವ ಅವಕಾಶ ಮತ್ತು ಉದುರಿದ ಹಲ್ಲಗಳ ಖಾಲಿ ಜಾಗಕ್ಕೆ ಪರಿಹಾರ ಸೂಚಿಸುವವು.

  • ಸವೆದು ಹೋದ ಹಲ್ಲು ಇರುವವರು ವಿಭಿನ್ನ ಅವಕಾಶಗಳನ್ನು ಅಳವಡಿಸಿಕೊಳ್ಳಬಹದು. ಅದು ದೊಡ್ಡ ವ್ತ್ಯಾಸವನ್ನೆ ಮಾಡುವುದು. ಕ್ರೌನುಗಳು ಹಲ್ಲಿನ ಮೂಲ ಆಕಾರವನ್ನು ಕೊಡುವವು.ಮತ್ತು ಇಂಪ್ಲಾಂಟ್ ಮಡಿಸಿಕೊಳ್ಳಲು ಸಾಕಷ್ಟು ಅವಕಾಶಗಳು ಇರುವವು

ಕೊನೆಯದಾಗಿ, ಧೂಮಪಾನವು ಬಾಯಿಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದು ಹಲ್ಲು ಹಳದಿ ಬಣ್ಣಗೆಡಿಸುವುದಲ್ಲದೆ ಅದಕ್ಕೂ ಗಂಭೀರವಾದ ಸಮಸ್ಯೆಗಳಿಗೆ ಕಾರಣ ವಾಗಬಹುದು.

ಮೂಲ:ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 12/9/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate