অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕ್ಯಾನ್ಸರ್ ನಿಯಂತ್ರಣ ಹೇಗೆ?

ಕ್ಯಾನ್ಸರ್ ನಿಯಂತ್ರಣ ಹೇಗೆ?

ಹೊಸ ತಲೆಮಾರಿನ ಅಪಾಯಕಾರಿ ರೋಗಗಳ ಪೈಕಿ ಕ್ಯಾನ್ಸರ್ ಅಗ್ರಪಂಕ್ತಿಯಲ್ಲಿ ನಿಲ್ಲುತ್ತದೆ. ವೈದ್ಯಕೀಯ ಜಗತ್ತಿನ ನಿದ್ದೆ ಕೆಡಿಸಿರುವ ಈ ರೋಗಕ್ಕೆ ನಿರ್ದಿಷ್ಟ ಔಷಧವಿಲ್ಲ. ರೋಗಿಯ ಮಾನಸಿಕ ಸ್ಥೈರ್ಯ ಕಳೆದು ವೈದ್ಯರು ನೀಡಿದ ಗಡುವಿಗಿಂತ ಮೊದಲೇ ಆತ ಸಾವನ್ನಪ್ಪುವಂತೆ ಮಾಡಬಲ್ಲ ಶಕ್ತಿ ಈ ರೋಗಕ್ಕಿದೆ. ಇಂದು ಈ ರೋಗದ ಪರಿಹಾರಕ್ಕೆ ಹಲವು ಔಷಧಗಳು ಬಂದಿವೆ. ಆದರೆ ಅವೆಲ್ಲ ಸಂಪೂರ್ಣವಾಗಿ ರೋಗ ಪರಿಹರಿಸುವಲ್ಲಿ ಶಕ್ತವಾಗಿಲ್ಲ. ಕಿಮೋಥೆರಪಿ ಎಂಬ ತಂತ್ರಜ್ಞಾನ ಸಹ ರೋಗಿಯ ದೇಹದ ಕ್ಯಾನ್ಸರ್ ಕಣಗಳನ್ನು ಸಾಯಿಸುವಲ್ಲಿ ಯಶಸ್ವಿಯಾಗಿದ್ದರೂ, ದೇಹದಲ್ಲಿರುವ ಆರೋಗ್ಯಕರ ಕಣಗಳನ್ನೂ ಇದು ಸಾಯಿಸುತ್ತದೆ ಎಂಬ ಕಾರಣಕ್ಕಾಗಿ ಇದರಲ್ಲೂ ಲೋಪದೋಷಗಳಿವೆ.
ಆದರೆ ಇವೆಲ್ಲ ರೋಗ ಬಂದ ನಂತರದ ಕತೆಯಾಯ್ತು. ನಮ್ಮ ಪ್ರತಿದಿನದ ಆಹಾರ ಪದ್ಧತಿಯಲ್ಲಿ ಕೆಲವು ಆಹಾರಗಳ ಸೇವನೆಯಿಂದಾಗಿ ಕ್ಯಾನ್ಸರ್ ಬರುವುದನ್ನೇ ತಡೆಯುವುದಕ್ಕೆ ಸಾಧ್ಯವಿದೆ ಎನ್ನುತ್ತಾರೆ ತಜ್ಞ ವೈದ್ಯರು. ಅವುಗಳಲ್ಲಿ ಪ್ರಮುಖವಾದವು…
2 ಟೊಮ್ಯಾಟೋ: ನಿಯಮಿತವಾಗಿ ಟೊಮ್ಯಾಟೋ ಸೇವಿಸುವುದು ಅಥವಾ ಟೊಮ್ಯಾಟೋ ಜ್ಯೂಸ್ ಮಾಡಿ ಸೇವಿಸುವುದರಿಂದ ಪುರುಷರಲ್ಲಿ ಕಂಡುಬರುವ ಜನನಾಂಗ ಕ್ಯಾನ್ಸರ್(ಪ್ರೊಸ್ಟೇಟ್) ಬರದಂತೆ ತಡೆಗಟ್ಟಬಹುದು. ಇದರಲ್ಲಿರುವ ಲಿಕೋಪಿನ್ ಎಂಬ ಆ್ಯಂಟಿಆಕ್ಸಿಡೆಂಟ್ ಕ್ಯಾನ್ಸರ್ ಕಣಗಳು ದೇಹ ಪ್ರವೇಶಿಸದಂತೆ ನೋಡಿಕೊಳ್ಳುತ್ತದೆ.
2 ಬೆಳ್ಳುಳ್ಳಿ: ಘಾಟು ವಾಸನೆಯ ಕಾರಣಕ್ಕಾಗಿ ಬೆಳ್ಳುಳ್ಳಿಯನ್ನು ಹಲವರು ದ್ವೇಷಿಸುವುದನ್ನು ಕಾಣುತ್ತೇವೆ. ಆದರೆ ಪ್ರತಿ ದಿನ ಒಂದು ಎಸಳು ಬೆಳ್ಳುಳ್ಳಿ ಸೇವಿಸುವುದರಿಂದ ಕ್ಯಾನ್ಸರ್ ರೋಗ ಬರದಂತೆ ತಡೆಗಟ್ಟಬಹುದು. ಇದು ದೇಹದಲ್ಲಿ ನಿರೋಧಕ ಶಕ್ತಿ ಹೆಚ್ಚುವಂತೆ ಮಾಡಲು ಸಹಕಾರಿಯಾಗಿದೆ.
2 ದ್ರಾಕ್ಷಿ: ದ್ರಾಕ್ಷಿಯಲ್ಲಿರುವ ರೆಸ್ವೆರಾಟ್ರೋಲ್ ಎಂಬ ಆ್ಯಂಟಿಆಕ್ಸಿಡೆಂಟ್ ಕ್ಯಾನ್ಸರ್ ಕಣ್ಣುಗಳು ದೇಹ ಪ್ರವೇಶಿಸದಂತೆ ನೋಡಿಕೊಳ್ಳುತ್ತದೆ. ಆದ್ದರಿಂದ ದ್ರಾಕ್ಷಿ ಸೇವನೆ ಒಳ್ಳೆಯದು.
2 ಅವರೆ ಕಾಯಿ(ಬೀನ್ಸ್): ಬೀನ್ಸ್‌ನಲ್ಲಿರುವ ಫೈಬರ್ ಅಂಶ ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದೆ. ಆದ್ದರಿಂದ ನಿಯಮಿತವಾಗಿ ಬೀನ್ಸ್ ಸೇವಿಸುವುದು ಒಳ್ಳೆಯದು.
2 ಹಸಿರು ಸೊಪ್ಪು: ಬಸಳೆಯಂಥ ಹಸಿರು ಸೊಪ್ಪುಗಳು ಸಹ ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡಲು ನಮ್ಮ ದೇಹವನ್ನು ಸನ್ನದ್ಧಗೊಳಿಸಬಲ್ಲವು. ಇದರಲ್ಲಿರುವ ಬೀಟಾ ಕ್ಯಾರೋಟಿನ್ ಮತ್ತು ಲ್ಯುಟಿನ್ ಎಂಬ ಅಂಶ ಈ ಸಾಮರ್ಥ್ಯ ಪಡೆದಿದೆ.
2ಬೆರ‌್ರಿ ಹಣ್ಣುಗಳು: ಸ್ಟ್ರಾಬೆರ‌್ರಿ, ಬ್ಲ್ಯಾಕ್ ಬೆರ‌್ರಿ, ಬ್ಲ್ಯುಬೆರ‌್ರಿ ಮುಂತಾದ ಬೆರ‌್ರಿ ಹಣ್ಣುಗಳಲ್ಲಿರುವ ಟೆರಾಸ್ಟಿಲ್ಬಿನ್ ಎಂಬ ಅಂಶ ಕ್ಯಾನ್ಸರ್ ಬರದಂತೆ ತಡೆಯುತ್ತದೆ.
ಪ್ರತಿದಿನದ ಆಹಾರ ಪದಾರ್ಥದಲ್ಲಿ ಇವುಗಳಲ್ಲಿ ಯಾವುದು ಸಾಧ್ಯವೋ ಅದನ್ನು ಸೇವಿಸುತ್ತಿದ್ದರೆ ಕ್ಯಾನ್ಸರ್ ಬರದಂತೆ ಎಚ್ಚರವಹಿಸಬಹುದು.

ಮೂಲ: ವಿಕ್ರಮ

ಕೊನೆಯ ಮಾರ್ಪಾಟು : 4/27/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate