ಸ್ತನ ಕ್ಯಾನ್ಸರ್ ಮಹಿಳೆಯರಲ್ಲಿ ಬಹು ಸಾಮಾನ್ಯ ವಾಗಿದೆ. ಮಹಿಳೆಯರ ಸಾವಿಗೆ ಕಾರಣವಾಗಿರುವ ಎರಡನೆ ಕ್ಯಾನ್ಸರ್ ಇದಾಗಿದೆ. ಮಹಿಳೆಯ ಜೀವನಾವಧಿಯಲ್ಲಿನ ಸ್ಥನ ಕ್ಯಾನ್ಸರ್ ಬರುವ ಅಪಾಯದ ಸಂಭವ ಸುಮಾರು 9 ರಲ್ಲಿ 1 ಆಗಿದೆ.
ಲಕ್ಷಣಗಳು
- ಎದೆಯಲ್ಲಿ ಗಡ್ಡೆ
- ಮೊಲೆ ತೊಟ್ಟಿನಿಂದ ಸ್ರಾವ
- ಕುಗ್ಗಿದ ಮೊಲೆ ತೊಟ್ಟುಗಳು
- ಕೆಂಪಾದ / ಉರಿಯೂತವಾದ ಮೊಲೆತೊಟ್ಟುಗಳು
- ಸ್ಥನಗಳು ದೊಡ್ಡವಾಗುವುದು
- ಸ್ಥನಗಳು ಕಿರಿದಾಗುವುದು
- ಸ್ಥನಗಳು ಗಟ್ಟಿಯಾಗುವುದು.
- ಮೂಳೆ ನೋವು
- ಬೆನ್ನು ನೋವು
ಅಪಾಯದ ಅಂಶಗಳು
- ಕುಟುಂಬದಲ್ಲಿ ಸ್ಥನ ಕ್ಯನ್ಸರ್ ಇರುವುದು. ಅದೂ ಹತ್ತಿರದ ಸಂಬಂಧಿಗಳಲ್ಲಿ
- ಮಹಿಳೆಯರಿಗೆ ವಯಸ್ಸಾದಂತೆ ಬರುವ ಸಂಭವ ಹೆಚ್ಚು
- ಈ ಮೊದಲೆ ಆದ ಗರ್ಭಾಶಯ ಕ್ಯಾನ್ಸರ್
- ಈ ಮೊದಲೆ ಆದ ಸ್ಥನ ಕ್ಯಾನ್ಸರ್
- ನಿರ್ದಿಷ್ಟ ಬದಲಾವಣೆ, ಈ ಮೊದಲೆ ಬಂದಿದ್ದ ಸ್ಥನ ಕ್ಯಾನ್ಸರ್ ಮತ್ತು ಈ ಹಿಂದೆ ಬಂದ ಇತರೆ ಸ್ಥನ ರೋಗಗಳು
- ವಂಶವಾಹಿನಿ ದೋಷಗಳು ಅಥವ ಬದಲಾವಣೆಗಳು ( ವಿರಳ ಅವಕಾಶ)
- ಋತು ಚಕ್ರವು 12 ನೆ ವರ್ಷದ ಮೊದಲೆ ಪ್ರಾರಂಭವಾಗಿರುವುದು
- ಮುಟ್ಟು (ಮೆನೊಪಾಜ್) 50 ವರ್ಷದ ನಂತರ ಕೊನೆಯಾಗುವುದು
ಚಿಕಿತ್ಸೆ
- ಸ್ಥನ ಕ್ಯಾನ್ಸರಿನ ಚಿಕಿತ್ಸೆಗೆ ಗಮನಿಸಬೇಕಾದ ಮೂರು ಪ್ರಮುಖ ಅಂಶಗಳು :
- ಮಹಿಳೆಯು ಮೆನೊಪಾಜು ತಲುಪಿದ್ದರೆ
- ಹೃದಯ ಕ್ಯಾನ್ಸರ್ ಹರಡಿರುವ ವ್ಯಾಪ್ತಿ
- ಸ್ಥನ ಕ್ಯಾನ್ಸರಿನ ಜೀವ ಕೋಶದ ವರ್ಗ
- ಸ್ಥನದಲ್ಲಿ ಸ್ಥಳ
- ಅದು ಲಿಂಫ್ ನೋಡುಗಳಿಗೆ ಹರಡುವ ದರ .
- ಅದು ಸ್ಥನದಲ್ಲಿನ ಸ್ನಾಯುಗಳಿಗೆ ಹರಡಿದ ಆಳ
- ಇನ್ನೊಂದು ಸ್ಥನಕ್ಕೆ ಹರಡಿರುವುದು
- ಬೇರೆ ಅಂಗಗಳಿಗೆ ಕ್ಯಾನ್ಸರ್ ಹರಡಿರುವುದು, ಅಂದರೆ ಮೂಳೆ ಅಥವ ಮೆದುಳು
- ಕ್ಯಾನ್ಸರ್ ವ್ಯಾಪ್ತಿಯ ಪ್ರಮಾಣವು ಕೆಳಗಿನ ಅಂಶಗಳಿಗೆ ಅನುಗುಣವಾಗಿದೆ.:
- ಜೀವಕೋಶಗಳಲ್ಲಿಯೂ ಕೂಡ ಆಕ್ರಮಣಕಾರಿ ಜೀವಕೋಶಗಳು ಮತ್ತು ತುಸು ಕಡಿಮೆ ಆಕ್ರಮಣಕಾರಿ ಜೀವಕೋಶಗಳು ಇವೆ. ಇದಲ್ಲದೆ, ಜೀವಕೋಶಗಳಲ್ಲೇ ಕೆಲವು ಹೆಚ್ಚು ಕ್ರಿಯಾಶೀಲವಾಗಿರುವುದರಿಂದ ಸ್ಥನ ಕ್ಯಾನ್ಸರ್ ಚಿಕಿತ್ಸೆಗೆ ಬೇಗ ಸ್ಪಂದಿಸುವಂತೆ ಮಾಡುತ್ತವೆ.
ಮೇಲಿನ ಅಂಶಗಳಾಧಾರದ ಮೇಲೆ ವೈದ್ಯರು ನಿರ್ಧರಿಸುವರು.
- ರೇಡಿಯೇಷನ್ ಮಾಡಿ ಅಥವ ಮಾಡದೆ ಗಂಟನ್ನು ಮತ್ತು ಸುತ್ತುವರಿದ ಅಂಗಾಂಶವನ್ನು ತೆಗೆದುಹಾಕುವುದು
- ಪೂರ್ತಿ ಸ್ಥನ ತೆಗೆದುಹಾಕುವುದು
ತಡೆಗಟ್ಟುವುದು
- ತಿಂಗಳಿಗೊಮ್ಮೆ ಸ್ಥನಗಳ ಸ್ವ ಪರೀಕ್ಷೆ
- ವೈದ್ಯರಿಂದ ಪ್ರತಿವರ್ಷ ಸ್ಥನ ಪರೀಕ್ಷೆ
- ಪೌಷ್ಟಿಟಿಕ ಆಹಾರ ಸೇವನೆ
ನಿಮಗೆ ಸ್ಥನ ಕ್ಯಾನ್ಸರಿನ ಅನುಮಾನ ಬಂದರೆ, ತಕ್ಷಣ ವೈದ್ಯರ ಸಲಹೆ ಪಡೆಯಿರಿ. ಸ್ಥನ ಕ್ಯಾನ್ಸರನ್ನು ಮೊದಲ ಹಂತದಲ್ಲೆ ಚಿಕಿತ್ಸೆಮಾಡಿದರೆ ಗುಣಮಾಡಬಹುದು. ಆದರೆ ಅದರ ಪತ್ತೆ ಮತ್ತು ಚಿಕಿತ್ಸೆ ತಡವಾದರೆ ಸಾವು ಬರಬಹುದು..
ಮೂಲ:ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 7/23/2020
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.