অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ತುರಿಗಜ್ಜಿ

ಸ್ಕೇಬಿಸ್ ಯಾ ತುರಿಕಜ್ಜಿ ಎಂದರೇನು?

ಸ್ಕೇಬಿಸ್ ಅಥವಾ ತುರಿಕಜ್ಜಿ ಎನ್ನುವ ಚರ್ಮದ ವ್ಯಾಧಿಯು ಸಾರ್ಕೋಪ್ಟಿಸ್ ಸ್ಕೇಬಿಯೈ ಎಂದು ಕರೆಯಲ್ಪಡುವ ಪರಾವಲಂಬಿ ಜೀವಿಯಿಂದ ಬರುತ್ತದೆ. ಇದು ಅತ್ಯಂತ ಸಣ್ಣದಾದ, ಸುಮಾರು 0.3 ಮಿ.ಮೀ. ಉದ್ದನೆಯ, ಕಜ್ಜಿ ಹುಳು ಎಂದು ಕರೆಯಲ್ಪಡುವ ಕೀಟವಾಗಿದೆ. ಹೆಣ್ಣು ಪರಾವಲಂಬಿಯು ಚರ್ಮದ ಅಡಿಯಲ್ಲಿ ಹುದುಗಿಕೊಂಡು, ಸೋಂಕು ತಗಲಿದ 2-3 ಘಂಟೆಗಳೊಳಗೆ ಮೊಟ್ಟೆಯಿಡಲು ಆರಂಭಿಸುತ್ತದೆ, ಹಾಗೂ ಸಾಮಾನ್ಯವಾಗಿ ದಿನಂಪ್ರತಿ 2-3 ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಗಳು ಒಡೆದ ಹತ್ತು ದಿನಗಳೊಳಗೆ ಕಜ್ಜಿ ಹುಳ (ಈ ಪರಾವಲಂಬಿಗೆ ಬಳಸುವ ಪದ) ಪ್ರಬುದ್ಧ ವಾಗುತ್ತವೆ. ಸ್ಕೇಬಿಸ್ ತುಲನಾತ್ಮಕವಾಗಿ ಒಂದು ಸಾಂಕ್ರಮಿಕ ರೋಗವಾಗಿದೆ.

ಪ್ರಸಾರ

ಪ್ರಸಾರವು ಒಬ್ಬರಿಂದ ಒಬ್ಬರಿಗೆ (ವ್ಯಕ್ತಿಯಿಂದ ವ್ಯಕ್ತಿಗೆ), ತ್ವಚೆಯ ನಿಕಟ ಸಂಪರ್ಕದಿಂದ ಉಂಟಾಗುತ್ತದೆ. ಸಂಗಾತಿಗಳು ಒಂದು ರಾತ್ರಿಯನ್ನು ಒಟ್ಟಿಗೆ ಕಳೆಯುವುದರಿಂದ, ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆಗಳು ಹೆಚ್ಚು. ರೋಗಾಣುಗಳು ತುಂಬಿದ ಹಾಸಿಗೆಯ ಬಳಕೆ, ಅಥವಾ ರೋಗಾಣು ತುಂಬಿದ ಬಟ್ಟೆಬರೆಗಳನ್ನು ತೊಡುವುದು, ಅಥವಾ ರೂಢಿಯ ಸಂಪರ್ಕಗಳು ಉದಾಹರಣೆಗೆ, ಹಸ್ತ ಲಾಘವ ಅಥವಾ ಹಸ್ತ ಸ್ಪರ್ಷ ಇತ್ಯಾದಿಗಳಿಂದಲೂ ರೋಗವು ಒಬ್ಬರಿಂದ ಇನ್ನೊಬ್ಬರಿಗೆ ಹರಡಬಹುದು.

ಲಕ್ಷಣಗಳು, ಮುಖ್ಯವಾಗಿ ತುರಿಕೆಯು, ಸಂಪರ್ಕವಾದ ಸುಮಾರು 4 ವಾರಗಳ ನಂತರ, ಕಿಶೋರಾವಸ್ಥೆಯ ಮರಿಹುಳಗಳ ಉಪಸ್ಥಿತಿಗೆ ಸೂಕ್ಷ್ಮತೆಯನ್ನು ತೋರಿಸುವ ಕಾರಣ (ಸೆನ್ಸಿಟೈಜ಼ೇಶನ್) ಕಾಣಿಸಿಕೊಳ್ಳುತ್ತದೆ.

ಸ್ಕೇಬಿಸ್ ಅಥವಾ ತುರಿಕಜ್ಜಿಯಿರುವ ವ್ಯಕ್ತಿಯು, ಚಿಕಿತ್ಸೆ ಪಡೆಯುವ ತನಕ, ರೋಗಹರಡುವ (ಸಾಂಕ್ರಮಿಕ)ವನೆಂದು ಪರಿಗಣಿಸಲಾಗುತ್ತದೆ. ರೋಗಾಣುಯುಕ್ತ ಬಟ್ಟೆಬರೆ ಹಾಗೂ ಹಾಸಿಗೆ ವಸ್ತ್ರಗಳು ಚಿಕಿತ್ಸೆಗೊಳಪಡುವ ತನಕ ರೋಗಕಾರಕಗಳೆಂದು ಪರಿಗಣಿಸಲ್ಪಡುತ್ತವೆ. ಚಿಕಿತ್ಸೆಯ ನಂತರವೂ ವ್ಯಕ್ತಿಯೊಬ್ಬರು, ಆರಂಭದಲ್ಲಿ ತುರಿಕಜ್ಜಿಯಿದ್ದ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬರುವುದರಿಂದ ಅಥವಾ ಇತರ ತುರಿಕಜ್ಜಿಯಿರುವ ವ್ಯಕ್ತಿಯ ಸಂಪರ್ಕಕ್ಕೆ ಬರುವುದರ ಮೂಲಕ ತಮಗರಿವಿಲ್ಲದಂತೆಯೇ ತಮ್ಮನ್ನು ತಾವು ಮತ್ತೆ ಸೋಂಕಿಗೊಳಪಡಿಸುವ ಸಾಧ್ಯತೆಗಳಿವೆ.

ಲಕ್ಷಣಗಳು

ಕಜ್ಜಿಹುಳಗಳ ಬಿಲಗಳ ಉಪಸ್ಥಿತಿ, ಕೆಂಪು-ಕಂದು ಬಣ್ಣದ ಗಂಟು ಇಲ್ಲವೇ ಬಾಧೆ ಅಥವಾ ಹಾನಿ ಹಾಗೂ ನಿರಂತರವಾದ ತುರಿಕೆ. ರಾತ್ರಿ ಸಮಯದಲ್ಲಿ ಈ ತುರಿಕೆ ಹೆಚ್ಚುತ್ತದೆ ಎನ್ನುವ ಮಾತಿದೆ. ಈ ತುರಿಕಜ್ಜಿಯ ಕಾರಣದಿಂದ ಹುಟ್ಟಿಕೊಳ್ಳುವ ತೀವ್ರತರನಾದ ಈ ತುರಿಕೆಯು ಚರ್ಮದೊಳಗಿನ ಪ್ರತಿಕ್ರಿಯೆಯ ಪರಿಣಾಮವಾಗಿದೆ. ಒಬ್ಬ ವ್ಯಕ್ತಿಯು ಮೊದಲ ಬಾರಿಗೆ ತುರಿಕಜ್ಜಿಯ ಸೋಂಕಿಗೆ ಒಳಗಾದಾಗ, ಹಲವು ವಾರಗಳು (4-6 ವಾರಗಳು) ಆತ ಅಥವಾ ಆಕೆ ತುರಿಕೆಯನ್ನು ಗಮನಿಸದಿರಬಹುದು. ಮರುಸೋಂಕು ಉಂಟಾದಂತೆ, ಮೊದಲ ಕಜ್ಜಿಹುಳವನ್ನು ಪಡೆಯುವುದರ ಘಂಟಗಳೊಳಗೆ ತುರಿಕೆಯು ಉಂಟಾಗುತ್ತದೆ. ಮಾನವ ಚರ್ಮದಿಂದ ದೂರವಾಗಿ ತುರಿಕಜ್ಜಿಯು ಕೇವಲ ಮೂರು ದಿನಗಳ ಕಾಲ ಬದುಕುವುದಾದರೂ, ಹತ್ತಿರದ ಕುಟುಂಬದ ಸದಸ್ಯರು ಇಲ್ಲವೇ ಹತ್ತಿರದ ಸಂಬಂಧಿಗಳ ಜೊತೆಗೆ ಬಟ್ಟೆಬರೆ ಹಂಚಿಕೊಳ್ಳುವುದರಿಂದ, ಹಾಸಿಗೆ ವಸ್ತ್ರಗಳನ್ನು ಹಂಚಿಕೊಳ್ಳುವುದರಿಂದ ತುರಿಕಜ್ಜಿಯು ವ್ಯಕ್ತಿಯಿಂದ ವ್ಯಕ್ತಿಗೆ ಹರಡಬಲ್ಲದು. 2002, ಮೇ ಯಲ್ಲಿ, ರೋಗ ನಿಯಂತ್ರಣಾ ಕೇಂದ್ರಗಳು (ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್- ಸಿ ಡಿ ಸಿ) ಲೈಂಗಿಕವಾಗಿ ಹರಡುವ ರೋಗಗಳ ಚಿಕಿತ್ಸೆಯ ನವೀಕರಿದ ಮಾರ್ಗಸೂಚಿಗಳಲ್ಲಿ, ಸ್ಕೇಬಿಸನ್ನೂ ಸೇರಿಸಿವೆ.

ಸಾಮಾನ್ಯ ಸ್ಥಳ/ ಸ್ಥಾನಗಳು: ಕೈಬೆರಳು ಹಾಗೂ ಕಾಲ್ಬೆರಳುಗಳ ಜಾಲ, ಸಂದುಗಳು, ಕಂಕುಳು, ಮೊಣಕೈ ಮತ್ತು ಮೊಣಕಾಲ ಗಂಟುಗಳು, ಮಣಿಕಟ್ಟುಗಳು, ಹೊಕ್ಕುಳು, ಸ್ತನಗಳು, ಪೃಷ್ಠದ ಕೆಳಗಿನ ಭಾಗ, ಸೊಂಟ ಮತ್ತು ಉದರ, ಹಾಗೂ ಆಗಾಗ ಶಿಶ್ನ ಹಾಗೂ ವೃಷಣಗಳು ಮತ್ತು ಹಸ್ತ ಹಾಗೂ ಪಾದಗಳ ಮೇಲೆ ಅವುಗಳು ಕಾಣಿಸಿಕೊಳ್ಳುವುದು ಮತ್ತು ಕತ್ತಿನ ಮೇಲ್ಪಟ್ಟ ಭಾಗದಲ್ಲಿ ಕಾಣಿಸಿಕೊಳ್ಳುವುದು ಬಹಳವೇ ಅಪರೂಪ. ಮೇ, 2002 ರಲ್ಲಿ, ರೋಗ ನಿಯಂತ್ರಣಾ ಕೇಂದ್ರಗಳು (ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್- ಸಿ ಡಿ ಸಿ) ಲೈಂಗಿಕವಾಗಿ ಹರಡುವ ರೋಗಗಳ ಚಿಕಿತ್ಸೆಯ ನವೀಕರಿದ ಮಾರ್ಗಸೂಚಿಗಳಲ್ಲಿ, ಸ್ಕೇಬಿಸನ್ನೂ ಸೇರಿಸಿವೆ. ತುರಿಸಿಕೊಳ್ಳುವುದು ಕೆಲವು ಉದ್ದೇಶವನ್ನು ಪೂರೈಸುವಂತೆ ತೋರುತ್ತದೆ. ಯಾಕೆಂದರೆ, ತುರಿಸಿಕೊಳ್ಳುವುದರಿಂದ, ಕಜ್ಜಿಹುಳುವು ಹೊರದೂಡಲ್ಪಡುತ್ತದೆ. ಹೆಚ್ಚಿನ ಸ್ಕೇಬಿಸ್ ಹುಳಗಳ ಮುತ್ತುವಿಕೆಯು 15 ಕಜ್ಜಿಹುಳುಗಳಿಗಿಂತ ಹೆಚ್ಚು ಇರುವುದಿಲ್ಲ.

ಸಾವಿರಾರು ಕಜ್ಜಿಹುಳುಗಳು (ಸಾವಿರದಿಂದ ಮಿಲಿಯಗಟ್ಟಲೆ) ಮುತ್ತಿಕೊಳ್ಳುವುದು ವ್ಯಕ್ತಿಯು ತುರಿಸಿಕೊಳ್ಳದಿರುವಾಗ ಅಥವಾ ಆತನ ರೋಗ ನಿರೋಧಕ ವ್ಯವಸ್ಥೆ ಬಲಹೀನವಾದಾಗ. ಈ ರೋಗಿಗಳು, ಸಂಸ್ಥೆಗಳಲ್ಲಿ ಬದುಕುವವರು, ಅಥವಾ ಮಾನಸಿಕ ವಿಕಲಚೇತನರು, ಅಥವಾ ದೈಹಿಕ ವಿಕಲ ಚೇತನರು, ಅಥವಾ ಲುಕೀಮಿಯಾ ಅಥಾಅ ಮಧುಮೇಹ ರೋಗದಿಂದ ಬಳಲುತ್ತಿರುವವರು; ತಮ್ಮ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುವ ಔಷಧಿಗಳನ್ನು ಸೇವಿಸುತ್ತಿರುವವರಾಗಿರುತ್ತಾರೆ, ಕ್ಯಾನ್ಸರಿಗೆ ಕೀಮೋಥೆರಪಿ, ಅಂಗ ಕಸಿಯ ನಂತರ ತೆಗೆದುಕೊಳ್ಳುವ ಔಷಧಿಗಳು, ಅಥವಾ ರೋಗನಿರೋಧಕ ವ್ಯವಸ್ಥೆಯನ್ನು ಕುಂಠಿತಗೊಳಿಸುವ ಔಷಧಿಗಳನ್ನು ಸೇವಿಸುವವರು (ಉದಾಹರಣೆಗೆ, ಅಕ್ವೈರ್ಡ್ ಇಮ್ಮ್ಯುನೋ ಡಿಫೀಶಿಯೆನ್ಸಿ ಸಿಂಡ್ರೋಮ್ ಅಥವಾ ಏಡ್ಸ್). ಈ ಮುತ್ತುವಿಕೆಯ ಪ್ರಮುಖ ವಿಧವಾದ ಸ್ಕೇಬಿಸ್, ಕ್ರಸ್ಟೆಡ್ ಸ್ಕೇಬಿಸ್ ಅಥವಾ ನಾರ್ವೇಜಿಯನ್ ಸ್ಕೇಬಿಸ್ ಎಂದು ಕರೆಯಲ್ಪಡುತ್ತದೆ. ಸೋಂಕು ತಗುಲಿದ ವ್ಯಕ್ತಿಗಳ ದೇಹದ ತುಂಬ, ಶಿರೋಭಾಗದ ತ್ವಚೆಯೂ ಸೇರಿದಂತೆ, ಒರಟಾದ ಪ್ರದೇಶಗಳಿರುತ್ತವೆ. ಅವರ ಚರ್ಮವು ಹುರುಪೆಯಂತಿರುತ್ತದೆ. ಉಗುರುಗಳು ದಪ್ಪನಾಗಿ ಕೊಂಬಿನಂತರುತ್ತವ..

ರೋಗನಿರ್ಧಾರ

ಸ್ಕೇಬಿಸ್ ರೋಗ ತರುವ ಕಜ್ಜಿ ಹುಳವು ಚರ್ಮದಲ್ಲಿ ಕೊರೆಯುವ ಬಿಲಗಳನ್ನು ಪರೀಕ್ಷಿಸುವುದರಿಂದಲೇ ರೋಗನಿರ್ಧಾರವನ್ನು ಮಾಡಬಹುದಾಗಿದೆ. ಬಿಲದ ಕೊನೆಗೆ ಇರುವ ಮುತ್ತಿನಂತಹ ಉಬ್ಬನ್ನು ಶೋಧಿಸಲು ಸ್ಟರಿಲೈಸ್ ಮಾಡಿದ ಸೂಜಿಯನ್ನು ಬಳಸಬಹುದು, ಉಬ್ಬಿನ ಒಳಗಣ ವಸ್ತುವನ್ನು, ಗಾಜಿನ ಪಟ್ಟಿಯ ಮೇಲಿರಿಸಿ ತಪಾಸಣೆಗೊಳಪಡಿಸಬಹುದು. ಕಜ್ಜಿಹುಳುಗಳನ್ನು ಸೂಕ್ಷ್ಮದರ್ಶಕದ ಮೂಲಕ ಗುರುತಿಸಬಹುದು.

ಕೆಲವೊಮ್ಮೆ, ನಾಯಿಯ ಮೈನಲ್ಲಿ ಕಂಡುಬರುವ ಕಜ್ಜಿಹುಳುಗಳು (ಸಾರ್ಕೋಪ್ಟಿಸ್ ಸ್ಕೇಬಿಯೈ ವರೈಟಿ ಕ್ಯಾನಿಸ್) ಮನುಷ್ಯರಿಗೂ ರೋಗತಗುಲಿಸಬಲ್ಲವು. ಇವುಗಳು ಮಾನವ ದೇಹದಲ್ಲಿ ಹೆಚ್ಚು ದಿನ ಬದುಕುಳಿಯಲಾರವು, ಆದುದರಿಂದ ಸೋಕು ಬಹಳ ಲಘುವಾಗಿರುತ್ತದೆ.

ಚಿಕಿತ್ಸೆ

ಹಲವು ವಿಧದ ಲೋಶನ್ ಗಳ (5% ಪರ್ಮೆಥ್ರಿನ್ ಒಳಗೊಂಡಿರುವ)ನ್ನು ಹಚ್ಚಬಹುದು ಹಾಗೂ 12-24 ಘಂಟೆಗಳ ಕಾಲ ಹಾಗೆಯೇ ಬಿಡಬಹುದು. ಒಂದು, ಮೇಲಿನ ಹಚ್ಚುವಿಕೆಯು (ಟಾಪಿಕಲ್ ಅಪ್ಲಿಕೇಷನ್) ಸಾಧಾರಣವಾಗಿ ಸಾಕಾಗುತ್ತದೆಯಾದರೂ, ಕಜ್ಜಿಹುಳುಗಳು ಉಳಿದುಕೊಂಡಿದ್ದರೆ, ವಾರದ ನಂತರ ಈ ಹುಳುನಿವಾರಕಗಳನ್ನು ಮತ್ತೆ ಹಚ್ಚಬಹುದಾಗಿದೆ. ಕಲಮೈನ್ ದ್ರಾವಣವನ್ನು ಹಚ್ಚುವುದರ ಮೂಲಕ ತುರಿಕೆಯನ್ನು ಕಡಿಮೆ ಮಾಡಬಹುದು.

ತಡೆಗಟ್ಟುವಿಕೆ

ತುರಿಕಜ್ಜಿಯನ್ನು ತಡೆಗಟ್ಟಲು ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯ- ನಿತ್ಯವೂ ಸ್ನಾನ ಮಾಡುವುದು ಒಗೆದು, ಶುಭ್ರವಾಗಿರುವ ಬಟ್ಟೆಯನ್ನು ತೊಟ್ಟುಕೊಳ್ಳುವುದು, ಇತರರ ಬಟ್ಟೆಬರೆಗಳನ್ನು ತೊಟ್ಟುಕೊಳ್ಳದಿರುವುದು, ಇತ್ಯಾದಿ. ಅಲ್ಲದೆ, ಎಲ್ಲ ಸದಸ್ಯರೂ ಜೊತೆಯಾಗಿ ಚಿಕಿತ್ಸೆಗೊಳಗಾಗತಕ್ಕದ್ದು. ಒಂದು ಮನೆಯ ಸದಸ್ಯನೊಬ್ಬನು ಸ್ಕೇಬಿಸ್ ಸೋಂಕಿಗೆ ಒಳಗಾಗಿರುವುದು ದೃಢಪಟ್ಟಲ್ಲಿ, ಆತನು ಇತ್ತೀಚೆಗೆ ಉಪಯೋಗಿಸಿರುವ ಎಲ್ಲ ಬಟ್ಟೆ ಬರೆಗಳು ಮತ್ತು ಹಾಸಿಗೆ ವಸ್ತ್ರಗಳನ್ನು ಬಿಸಿಬಿಸಿ ನೀರಿನಲ್ಲಿ ತೊಳೆಯಬೇಕು. ಮತ್ತು ಪ್ರಖರ ಸೂರ್ಯನ ಬೆಳಕಿನಲ್ಲಿ ಒಣಗಿಸಬೇಕು.

ಮೂಲ:ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 5/7/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate