অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕಾರಣಗಳು

ಕಾರಣಗಳು

ಎಚ್‍ಐವಿ/ಏಡ್ಸ್ ಹರಡುವುದಕ್ಕೆ ಮುಖ್ಯವಾದ ಕಾರಣವೆಂದರೆ ಅಪಾಯಕಾರಿಯಾದ ಲೈಂಗಿಕ ನಡವಳಿಕೆಗಳು. ಕಾಂಡೋಮ್ ಬಳಸದೆ ಅನೇಕ ಸಂಗಾತಿಗಳೊಡನೆ ಸಂಭೋಗ ನಡೆಸುವುದು ಅಪಾಯಕಾರಿ ಲೈಂಗಿಕ ನಡವಳಿಕೆ. ಅನೇಕ ಜನರೊಡನೆ ಸಂಭೋಗ ನಡೆಸುವುದಷ್ಟೀ ಅಲ್ಲ ಅನೇಕ ಜನರು ಮನೆಗಳಿಂದ ಮತ್ತು ಕುಟುಂಬಗಳಿಂದ ದೀರ್ಘಕಾಲ ಹೊರಗುಳಿಯುತ್ತಾರೆ. ಉದಾ. ಟ್ರಕ್ ಚಾಲಕರು.

ಭಾರತದಲ್ಲಿ ಮಹಿಳೆಯರು ಎಚ್‍ಐವಿ/ಏಡ್ಸ್ನಿಂದ ಬಹಳಮಟ್ಟಿಗೆ ಬಾಧಿತರಾಗಿದ್ದಾರೆ. ಇದು ಅವಳ ಆರ್ಥಿಕ ಮತ್ತು ಸಾಮಾಜಿಕ ಸ್ಥಾನಮಾನ ಮತತು ಲಿಂಗ ಅಸಮಾನತೆಗಳಿಗೆ ನೇರವಾಗಿ ಸಮಬಂಧಿಸಿದೆ. ಅಸ್ತಿತ್ವದಲ್ಲಿರುವ ಸಾಮಾಜಿಕ ಮತ್ತು ಲಿಂಗ ರೂಢಿಯ ಮಾದರಿಗಳು ಪುರುಷರು ಮತ್ತು ಮಹಿಳೆಯರ ಲೈಂಗಿಕ ಚಟುವಟಿಕೆ ಮತ್ತು ಅಪಾಯಕಾರಿ ನಡವಳಿಕೆಯ ಮೇಲೆ ಅಪಾರ ಪ್ರಭಾವವನ್ನು ಬೀರಿಬೆ. ಅವು ಪುರಷರಿಗಿಂತ ಹೆಚ್ಚಾಗಿ ಮಹಿಳೆಯರನ್ನು ಬಾಧಿಸುತ್ತವೆ. ಮಹಿಳೆಯರು ತಮ್ಮ ಸಂಗಾತಿಗಳಿಗೆ ಕಾಂಡೋಮ್‍ಗಳನ್ನು ಉಪಯೋಗಿಸಲು ಅಥವಾ ಸೋಂಕುಗಳ ಚಿಕಿತ್ಸೆ ಸೇವಾ ಕ್ಷೇತ್ರಗಳಿಗೆ ಹೋಗಲು ಪ್ರಚೋದಿಸುವುದು ಕಷ್ಟ ಎಂದು ಕಂಡುಕೊಂಡಿದ್ದಾರೆ.

ನಮ್ಮ ರಾಷ್ಟ್ರದಲ್ಲಿ ಎಚ್‍ಐವಿ ಹರಡುವಿಕೆಯಲ್ಲಿ ಶೇ. 85ಕ್ಕಿಂತ ಹೆಚ್ಚು ಲೈಂಗಿಕ ಮಾರ್ಗದ ಮೂಲಕವೇ ನಡೆಯುತ್ತದೆ.  "ಅತಿ ಅಪಾಯದ ಗುಂಪುಗಳು" ಇಲ್ಲಿಲ್ಲ ಆದರೆ ಅತಿ ಅಪಾಯದ ನಡವಳಿಕೆಯ ಕೆಲವು ಜನರಿದ್ದಾರೆ ಜನರ ನಡವಳಿಕೆಯನ್ನು ಅವಲಂಭಿಸಿ ಎಚ್‍ಐವಿ/ಏಡ್ಸ್ ಯಾರಿಗೆ ಬೇಕಾದರೂ ತಗಲಬಹುದು.

ವಿಂಡೊ ಅವಧಿ

ಅಪಾಯಕಾರಿ ಸನ್ನಿವೇಶಗಳಿಗೆ ಒಳಗಾದ ಮೇಲೆ 6 ಇಂದ 12 ವಾರಗಳ ಅನಂತರವಷ್ಟೇ ಎಚ್‍ಐವಿ ಪರೀಕ್ಷೆಯು ಪಾಸಿಟೀವ್ ಫಲಿತಾಂಶವನ್ನು ನೀಡುತ್ತದೆ. ದೊನ್ನ ವಿಂಡೊ ಅವಧಿ  ಎಂದು ಕರೆಯುತ್ತಾರೆ. ಆದ್ದರಿಂದ ಎಚ್‍ಐವಿ ಪರೀಕ್ಷೆ ಮಾಡಿಸಿಕೊಳ್ಳಲು ಸಂಬಂಧಪಟ್ಟವರು ಇಷ್ಟುಕಾಲ ಕಾಯಬೇಕು.

ಮೂಲ: ಕುಟುಂಬ ಯೋಜನೆ ತರಬೇತಿದಾರರ ಕೈಪಿಡಿ

ಕೊನೆಯ ಮಾರ್ಪಾಟು : 4/1/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate