অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ವಾಂತಿ ಭೇದಿ (ಕಾಲರ)

ವಾಂತಿ ಭೇದಿ (ಕಾಲರ)

ಕಾಲರವು ತೀವ್ರವಾದ ಭೇದಿಯಿಂದ ಕೂಡಿದ ಖಾಯಿಲೆ. ಅದು ಕರುಳಿನ ಬ್ಯಾಕ್ಟೀರಿಯಾ ಸೋಂಕಿನಿಂದ ಬರುವುದು. ವಿಬ್ರಿಯೋ ಕಾಲರ ಬ್ಯಾಕ್ಟೀರಿಯಾ ದಿಂದ ಬರುವುದು. ಸೋಂಕು ಸಾಧರಣವಾಗಿ ಲಘುವಾಗಿರುವುದು. ಕೆಲವು ಸಲ ಗಂಭೀರವಾಗಬಹುದು

ಕಾಲರದ ಲಕ್ಷಣಗಳೇನು?

ಸೋಂಕು ತಗಲಿದ ಸುಮಾರು 20 ಜನರಲ್ಲಿ ಒಬ್ಬರಿಗೆ ತೀವ್ರವಾದ ಕೆಳಗಿನ ಲಕ್ಷಣಗಳು ಇರುವವು:

ಅತಿಯಾದ ನೀರುನೀರಾದ ಭೇದಿ,

  • ವಾಂತಿ, ಮತ್ತು
  • ಕಾಲು ಸೆಳೆತ.

ಈ ಜನರಲ್ಲಿ , ದೇಹದ ಜೀವ ದ್ರವದ ನಷ್ಟವಾಗಿ ನಿರ್ಜಲೀಕರಣವಾಗುವುದು ಮತ್ತು ಅವರು ನಿಶ್ಚೇತನರಾಗಬಹುದು, ಕೆಲವೆ ಗಂಟೆಗಳಲ್ಲಿ ಮರಣ ಸಂಭವಿಸಬಹುದು

ಒಬ್ಬ ವ್ಯಕ್ತಿಗೆ ಕಾಲರ ಹೇಗೆ ಬರುತ್ತದೆ ?

ಕಾಲರವು ಬ್ಯಾಕ್ಟೀರಿಯಾದಿಂದ ಕುಲುಷಿತವಾದ ಕುಡಿಯುವ ನೀರಿನಿಂದ ಅಥವ ಸೇವಿಸುವ ಆಹಾರದಿಂದ ಬರುವುದು. ಸಾಂಕ್ರಾಮಿಕವಾದಾಗ ಸೋಂಕಿತನ ಮಲವು ರೋಗಾಣು ಹರಡಲು ಕಾರಣವಾಗುವುದು. ರೋಗವು ಕೂಡಿಯುವ ನೀರಿನ ಸಂಸ್ಕರಣೆ ಮತ್ತು ಚರಂಡಿಯ ವ್ಯವಸ್ಥೆ ಇಲ್ಲದ ಪ್ರದೇಶಗಳಲ್ಲಿ ಬೇಗ ಹರಡುವುದು.

ಕಾಲರದ ಬ್ಯಾಕ್ಟೀರಿಯಾಗಳು ನಿಂತ ನೀರಿನಲ್ಲಿ ಮತ್ತು ಸಮುದ್ರದ ತೀರದಲ್ಲಿ ಇರಬಹುದು. ಹಸಿಯಾದ ಚಿಪ್ಪಿನ ಮೀನು ತಿಂದರೂ ಕಾಲರ ಬರಬಹುದು. ಈ ರೋಗವು ನೇರವಾಗಿ ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ. ಆದ್ದರಿಂದ ರೋಗಿಯನ್ನು ಮುಟ್ಟಿದರೆ ರೋಗ ಬರಬಹುದೆಂಬ ಭಯ ಬೇಡ.

ಕಾಲರವನ್ನು ಚಿಕಿತ್ಸೆ ಮಾಡಬಹುದೆ ?

ಕಾಲರವನ್ನು ಸರಳವಾಗಿ ಯಶಸ್ವಿಯಾಗಿ ಚಿಕಿತ್ಸೆಮಾಡಬಹುದು. ಭೇದಿಯ ಮೂಲಕ ನಷ್ಟವಾದ ದೇಹದ ಜೀವ ದ್ರವ ಮತ್ತು ಲವಣಗಳನ್ನು ಪೂರ್ಣ ಮಾಡಿದರೆ ಸಾಕು. ರೋಗಿಗಳಿಗೆ ಬಾಯಿಯಿಂದ ಪುನರ್ಜಲೀಕರಣ ಮಾಡಬಹುದು. ಸಕ್ಕರ ಮತ್ತು ಉಪ್ಪನ್ನು ಸೇರಿಸಿದ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಕುಡಿಸಬೇಕು. ಈ ದ್ರಾವಣವನ್ನು ಪ್ರಪಂಚದಲ್ಲಿ ಎಲ್ಲ ಕಡೆ ಅತಿಸಾರದ ಚಿಕಿತ್ಸೆಗೆ ಬಳಸುವರು. ಅತಿ ಗಂಭೀರವಾದ ಅತಿಸಾರವಾದರೆ ರಕ್ತನಾಳಗಳ ಮೂಲಕ ದ್ರಾವವಣವನ್ನು ದೇಹದಲ್ಲಿ ಸೇರಿಸುವರು. ತಕ್ಷಣದ ಪುನರ್ಜಲೀಕರಣದಿಂದ 1 ಗೂ ಕಡಿಮೆ ಕಾಲರಾ ರೋಗಿಗಳು ಸಾವಿಗೆ ಶರಣಾಗುವರು..

ಆ್ಯಂಟಿ ಬಯೋಟಿಕ್ಸ ಸಮಯದ ಉಳಿತಾಯ ಮಾಡುವವು. ಮತ್ತು ರೋಗದ ತೀವ್ರತೆಯನ್ನು ಕಡಿಮೆ ಮಾಡುವವು. ಕಾಲರ ಪೀಡಿತ ಪ್ರದೇಶದಲ್ಲಿ ಯಾವುದೆ ವ್ಯಕ್ತಿಗೆ ತೀವ್ರ ವಾದ ಭೇದಿ ಮತ್ತು ವಾಂತಿ ಯಾದರೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು.

ಕಾಲರದ ವಿರುದ್ಧ ಮುನ್ನೆಚ್ಚರಿಕೆ

  • ಕಸದ ಗುಂಡಿಯನ್ನು ಸ್ವಚ್ಛ ಗೊಳಿಸಿ, ಸ್ಥಳವು ಗಾಳಿ ಬೆಳಕಿನಿಂದ ಕೂಡಿರಲಿ ಮತ್ತು ಕ್ರಿಮಿನಾಶಕ ಸಿಂಪಡಿಸಿ.
  • ದೈಹಿಕ ಮತ್ತು ಮಾನಸಿಕವಾದ ಅತಿ ಶ್ರಮ ಬೇಡ. ಮತ್ತು ತೀವ್ರವಾದ ಉಷ್ಣತೆಯ ವ್ಯತ್ಯಾಸಕ್ಕೆ ದೇಹವನ್ನು ಒಡ್ಡಬೇಡಿ
  • ಗುಂಪಿನಲ್ಲಿ ಇರಬೇಡಿ
  • ಕುದಿಸದೆ ನೀರನ್ನು ಕುಡಿಯಬೇಡಿ. ಅದು ತಣ್ಣಗಾದ ಮೇಲೆ ಬಾಟಲಿಯಲ್ಲಿ ಹಾಕಿಡಿ. ಬಾಟಲಿ ಮತ್ತು ನೀರು ಕುಡಿಯುವ ಲೋಟ ಶುದ್ಧವಾಗಿರಬೇಕು.
  • ಯಾವುದನ್ನೆ ಕುಡಿಯುವ ಮೊದಲು ಕುದಿಸಿರಬೇಕು
  • ಎಲ್ಲ ಆಹಾರವು ಪೂರ್ಣವಾಗಿ ಬೆಂದಿರಲಿ. ಹಣ್ಣುಗಳನ್ನು ಕುದಿದಾರಿಸಿದ ನೀರಿನಲ್ಲಿ ತೊಳೆಯಿರಿ ಅಥವ ತೊಳೆದ ನಂತರ ಸಿಪ್ಪೆಯನ್ನು ತೆಗೆಯಿರಿ ಅಥವ ಉತ್ತಮವೆಂದರೆ. ಬೇಯಿಸಿದ ಹಣ್ಣು ಒಳ್ಳೆಯದು.
  • ಸಾಧಾರಣ ಬ್ರೆಡ್ ಮತ್ತು ಬೆಣ್ಣೆಯ ಬದಲು ಗರಿಗರಿಯಾದ ಟೋಸ್ಟಗಳನ್ನು ಸೇವಿಸಿ
  • ಬಿಸಿ ಬಿಸಿ ಯಾದ ಊಟ ಮಾಡುವುದು ಉತ್ತಮ.
  • ಆಹಾರ ಸೇವನೆಗೆ ಬಳಸುವ ಎಲ್ಲವನ್ನೂ; ತಟ್ಟೆ, ಲೋಟ, ಚಮಚ, ಸೌಟು, ಫೋರ್ಕು, ಚಾಕು ಉಪಯೋಗಿಸುವ ಮುನ್ನ ಬಿಸಿ ನೀರಲ್ಲಿ ತೊಳೆಯ ಬೇಕು. ನಂತರ ಓವನ್ ನಲ್ಲಿ ತುಸು ಹೊತ್ತು ಬಿಸಿ ಮಾಡಬೇಕು.
  • ಕುದಿಸದ ನೀರಿನಲ್ಲಿ ಎಂದೂ ತೊಳೆಯಬೇಡಿ.
  • ದಿನದಲ್ಲಿ ಹಲವು ಬಾರಿ ಎರಡು ಕೈಗಳನ್ನು ಮತ್ತು ಮುಖ ಕುದಿಸಿ ಆರಿಸಿದ ನೀರಿನಲ್ಲಿ ತೊಳೆಯಿರಿ ಮತ್ತು ಏನಾದರೂ ತಿನ್ನುವ ಮುನ್ನ ಕೈತೊಳೆಯಿರಿ ಸಾಧ್ಯವಾದರೆ ಅದಕ್ಕೆ ಕಾರ್ಬಾಲಿಕ್ ಆಮ್ಲ ಸೇರಿಸಿ.
  • ಸಾಧ್ಯವಾದರೆ ಪ್ರತಿ ಸಲವೂ ಶುಚಿಯಾದ ಟವೆಲ್ ಬಳಸಿ.
  • ತೊಳೆಯುವ ನೀರು ಸಹ ಕುದಿಸಿ ಆರಿಸಿರಬೇಕು.
  • ಹಾಸಿಗೆ ಬಟ್ಟೆಗಳನ್ನು, ಇತರೆ ಬಟ್ಟೆಗಳನ್ನು ಕುದಿವ ನೀರಿನಲ್ಲಿ ಹಾಕಿ ನಂತರ ಒಣಗಿಸಿ.
  • ಪಾತ್ರೆ ಒರಸುವ ಬಟ್ಟೆ ಮತ್ತು ಇತರ ಒರಸಲು ಬಳಸುವ ಬಟ್ಟೆಗಳನ್ನು ಬಳಸುವ ಪ್ರತಿ ಸಲವೂ ಕುದಿವ ನೀರಿನಲ್ಲಿ ಹಾಕಿ ಒಣಗಿಸಿ ಉಪಯೋಗಿಸಬೇಕು.
  • ಕಾಲರ ಬಂದವರನ್ನು ಮನೆಯಲ್ಲಿ ಪ್ರತ್ಯೇಕವಾಗಿರಿಸಿ.
  • ಕಾಲರ ಬಂದವರ ವಾಂತಿ ಭೇದಿಗಳಿಂದ ಮಲಿನ ವಾದ ಬಟ್ಟೆಗಳನ್ನು ಶುಚಿ ಮಾಡುವಾಗ ಬಾಯಿ ಮತ್ತು ಮೂಗನ್ನು ಅರ್ಧ ಅಂಗುಲ ದಪ್ಪದ ಪ್ಯಾಡು ಇರುವ ಬಟ್ಟೆಯಿಂದ ಮುಚ್ಚಿರಬೇಕು. ಆ ಮಾಸ್ಕನ್ನು 150 ಡಿಗ್ರಿ ಉಷ್ಣತೆಯಲ್ಲಿ ಇಟ್ಟು ತೆಗೆಯಬೇಕು. ಪ್ರತಿ ಬಳಕೆಯ ಮುನ್ನ ಮತ್ತು ನಂತರ ಅದನ್ನು ಉರಿಯ ಮುಂದೆ ಹಿಡಿದು ಉಷ್ಣೋಪಚಾರ ಮಾಡಬೇಕು.
  • ಕಾಲರ ರೋಗಿ ಇದ್ದ ಕೋಣೆಯನ್ನು ಬೇರೆಯವರು ಬಳಸುವ ಮುನ್ನ ಕೆಲವು ಗಂಟೆಗಳ ಕಾಲ ಬಗಿಲು ಹಾಕಿಡಬೇಕು.

ಮೂಲ : ಮೆಡಿಸಿನ್ ನೆಟ್

ಕೊನೆಯ ಮಾರ್ಪಾಟು : 4/23/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate