অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸಮಗ್ರ ಶಿಶು ಅಭಿವೃದ್ಧಿ ಯೋಜನೆ

ಸಮಗ್ರ ಶಿಶು ಅಭಿವೃದ್ಧಿ ಯೋಜನೆ

1975 ರಲ್ಲಿ ಈ ಯೋಜನೆಯನ್ನು ಭಾರತ ಸರ್ಕಾರದ ಸಹಯೋಗದೊಂದಿಗೆ ಕರ್ನಾಟಕ ರಾಜ್ಯದಲ್ಲಿ ಪ್ರಾರಂಭಿಸಲಾಗಿದೆ

ಉದ್ದೇಶಗಳು ಈ ಕೆಳಕಂಡಂತಿವೆ.

 

1.            ತಿಂಗಳಿನಿಂದ 6 ವರ್ಷದೊಳಗಿನ ಮಕ್ಕಳ, ಗರ್ಭಿಣಿ, ಬಾಣಂತಿಯರ ಮತ್ತು ನ್ಯೂನ ಪೋಷಣೆಯುಳ್ಳ ಮಕ್ಕಳ ಪೌಷ್ಠಿಕತೆ ಮಟ್ಟವನ್ನು ಸುಧಾರಿಸುವುದು.

2.            ಮಕ್ಕಳ ಮಾನಸಿಕ ಸಾಮಾಜಿಕ ಮತ್ತು ಭೌತಿಕ ಬೆಳವಣಿಗೆಗೆ ಬುನಾದಿ ಹಾÀಕುವುದು.

3.            ಶಿಶು ಮರಣ ದರ, ಅಪೌಷ್ಠಿಕತೆ, ಕಾಯಿಲೆ ಪ್ರಮಾಣ ಹಾಗೂ ಮಕ್ಕಳು ಶಾಲೆ ಬಿಡುವ ಪ್ರಮಾಣವನ್ನು ಕಡಿಮೆ ಮಾಡುವುದು.

4.            ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಇತರೆ ಇಲಾಖೆಗಳೊಂದಿಗೆ ಪರಿಣಾಮಕಾರಿಯಾದ ಸಮನ್ವಯತೆಯನ್ನು ಸಾಧಿಸುವುದು.

5.            ಪೌಷ್ಠಿಕಾಂಶ ಹಾಗೂ ಆರೋಗ್ಯ ಶಿಕ್ಷಣವನ್ನು ನೀಡುವುದರ ಮೂಲಕ ಮಕ್ಕಳ ಸಾಮಾನ್ಯ ಆರೋಗ್ಯ ಹಾಗೂ ಪೌಷ್ಠಿಕ  ಮಟ್ಟವನ್ನು ಕಾಪಾಡುವ ಬಗ್ಗೆ ತಾಯಂದಿರ ಸಾಮಥ್ರ್ಯವನ್ನು ಹೆಚ್ಚಿಸುವುದು.

ಸೇವೆಗಳು :

1.            6 ವರ್ಷದೊಳಗಿನ ಮಕ್ಕಳಿಗೆ, ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೂರಕ ಪೌಷ್ಠಿಕ ಆಹಾರ ನೀಡುವುದು.

2.            ಮಕ್ಕಳಿಗೆ ಹಾಗೂ ತಾಯಂದಿರಿಗೆ ರೋಗ ನಿರೋಧಕ ಚುಚ್ಚುಮದ್ದು ನೀಡುವುದು.

3.            ಆರೋಗ್ಯ ತಪಾಸಣೆ

4.            ಸಲಹಾ ಸೇವೆ

5.            ಮಹಿಳೆಯರಿಗೆ ಆರೋಗ್ಯ ಮತ್ತು ಪೌಷ್ಠಿಕ ಆಹಾರ ಕುರಿತಂತೆ ಶಿಕ್ಷಣ ನೀಡುವುದು.

6.            3-6 ವರ್ಷದೊಳಗಿನ ಮಕ್ಕಳಿಗೆ ಶಾಲಾಪೂರ್ವ ಚಟುವಟಿಕೆ ನಡೆಸುವುದು.

ಅಂಗನವಾಡಿ ಕೇಂದ್ರದ ಮೂಲಕ ಮಕ್ಕಳಿಗೆ ಈ ಕೆಳಕಂಡ ಸೇವೆಗಳನ್ನು ಒದಗಿಸಲಾಗುತ್ತದೆ.

1)            ಆರೋಗ್ಯ ತಪಾಸಣೆ 2) ಶಾಲಾಪೂರ್ವಶಿಕ್ಷಣ 3) ಪೂರಕ ಪೌಷ್ಠಿಕ ಆಹಾರ ವಿತರಣೆ 4) ಪೌಷ್ಠಿಕ ಆಹಾರ ಹಾಗೂ ಆರೋಗ್ಯದ ಬಗ್ಗೆ ತಾಯಂದಿರಿಗೆ ಅರಿವು ಮೂಡಿಸುವುದು 5) ರೋಗ ನಿರೋಧಕ ಲಸಿಕೆ ನೀಡುವುದು ಹಾಗೂ 6) ಮಾಹಿತಿ ಸೇವೆಗಳು.

ಶಾಲಾ ಪೂರ್ವ ಶಿಕ್ಷಣ

 

ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಸೇವಾ ಸೌಲಭ್ಯಗಳಲ್ಲಿ ಶಾಲಾ ಪೂರ್ವ ಶಿಕ್ಷಣವು ಪ್ರಮುಖ ಸೇವೆಯಾಗಿದೆ. ಈ ಶಿಕ್ಷಣವು 3 ವರ್ಷದಿಂದ 6 ವರ್ಷದೊಳಗಿನ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅಡಿಪಾಯವನ್ನು ಹಾಕುವ ಮೂಲಭೂತ ಶಿಕ್ಷಣವಾಗಿದೆ. ಅಂಗನವಾಡಿ ಕೇಂದ್ರಗಳಲ್ಲಿ ಪ್ರಕೃತಿದತ್ತ ವಸ್ತುಗಳನ್ನು ಅಂದರೆ ಮಣ್ಣು ಕಲ್ಲು, ಬೀಜ, ಮರಳು ಹಾಗು ಬಣ್ಣಕ್ಕೆ ಸಂಬಂಧಪಟ್ಟ ವಸ್ತುಗಳ ವಿವಿಧ ರೀತಿಯ ಎಲೆಗಳು, ಹೂವುಗಳು ಮುಂತಾದವುಗಳಿಂದ ಶಾಲಾ ಪೂರ್ವ ಶಿಕ್ಷಣವನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವಾಗಿದೆ. ಇದರಿಂದ ಮಕ್ಕಳಿಗೆ ಪರಿಸರದ ಪರಿಚಯವಾಗುವುದಲ್ಲದೆ, ಅವುಗಳ ಬಳಕೆ, ಆಗುತ್ತಿರುವ ಉಪಯೋಗ ಮತ್ತು ಆಕೃತಿ ಮತ್ತು ಬಣ್ಣಗಳ ಪರಿಚಯ  ಮಾಡಿಕೊಟ್ಟಂತಾಗುತ್ತದೆ. ಆಕರ್ಷಣೀಯ ಬೋಧನಾ ವಿಧಾನದಿಂದ ಮಕ್ಕಳಲ್ಲಿ ಕಲಿಯುವ ಉತ್ಸುಕತೆ ಹೆಚ್ಚಾಗುವುದಲ್ಲದೆ ಶಿಕ್ಷಣ ಮುಂದುವರಿಸಲು ಮತ್ತು ಶಾಲೆಗೆ ನಿರಂತರವಾಗಿ ಹಾಜರಾಗಲು ಸಾಧ್ಯವಾಗುತ್ತದೆ. ಶಾಲೆ ಬಿಡುವುದನ್ನು ತಪ್ಪಿಸಲು ಪ್ರಾರಂಭದಿಂದಲೇ ಕಲಿಸಿದಂತಾಗುತ್ತದೆ. ಅಂಗನವಾಡಿಗಳಲ್ಲಿ ಶಾಲಾ ಪೂರ್ವ ಶಿಕ್ಷಣದ ಮಹತ್ವದಿಂದ ಪ್ರಾಥಮಿಕ ಶಾಲೆಗಳ್ಲ್ಲಿ ಮಕ್ಕಳ ಹಾಜರಾತಿ ವೃದ್ಧಿಯಗಿರುವುದು ಸಮೀಕ್ಷೆಯೊಂದರಿಂದ ತಿಳಿದು ಬಂದಿರುತ್ತದೆ.

 

ಆರೋಗ್ಯ ತಪಾಸಣೆ

ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಸೇವಾ ಸೌಲಭ್ಯಗಳಲ್ಲಿ ಆರೋಗ್ಯ ತಪಾಸಣಾ ಕಾರ್ಯಕ್ರಮವು ಪ್ರಮುಖವಾಗಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳಿಂದ ಗರ್ಭಿಣಿಯರ, ಬಾಣಂತಿಯರ ಹಾಗೂ 6 ವರ್ಷದೊಳಗಿನ ಮಕ್ಕಳಿಗೆ ಆರೋಗ್ಯ ತಪಾಸಣೆ ಹಾಗೂ ಅಗತ್ಯ ಮಾರ್ಗದರ್ಶನಗಳನ್ನು ನೀಡಲಾಗುತ್ತಿದೆ.

ಪೂರಕ ಪೌಷ್ಠಿಕ ಆಹಾರ :

ಆರು ವರ್ಷದೊಳಗಿನ ಮಕ್ಕಳು, ಗರ್ಭಿಣಿ ಮತ್ತು ಬಾಣಂತಿಯರ ಪೌಷ್ಠಿಕ ಮಟ್ಟವನ್ನು ಸುಧಾರಿಸುವುದು. ಈ ವರ್ಗಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಅಪೌಷ್ಠಿಕತೆಯನ್ನು ಹೋಗಲಾಡಿಸುವುದು.

ನೀಡುತ್ತಿರುವ ಸೇವೆ :

             ಅರ್ಹ ಫಲಾನುಭವಿಗಳಿಗೆ ಅವರು ದಿನ ನಿತ್ಯವೂ ಸೇವಿಸುತ್ತಿರುವ ಆಹಾರದಲ್ಲಿ ಸಿಗುವ  ಕ್ಯಾಲೋರಿ, ಪ್ರೋಟೀನ್, ವಿಟಮಿನ್, ಖನಿಜಾಂಶಗಳ ಕೊರತೆ ಹಾಗೂ ಅವರಿಗೆ ಅವಶ್ಯವಿರುವ ಪ್ರಮಾಣಗಳ ನಡುವೆ ಇರುವ ವ್ಯತ್ಯಾಸವನ್ನು ಸರಿದೂಗಿಸಲು ಪೂರಕ ಪೌಷ್ಠಿಕ ಆಹಾರ ಕಾರ್ಯಕ್ರಮದಡಿ ಅಂಗನವಾಡಿಗಳ ಮೂಲಕ ಪೂರಕ ಪೌಷ್ಠಿಕ ಆಹಾರವನ್ನು ಒದಗಿಸಲಾಗುತ್ತಿದೆ.

             ರಾಜ್ಯದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿರುವ 6 ತಿಂಗಳಿಂದ-6 ವರ್ಷದ ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಪೂರಕ ಪೌಷ್ಠಿಕ ಆಹಾರ ನೀಡಲಾಗುತ್ತಿದೆ.

             3 ರಿಂದ 6 ವರ್ಷದ ಮಕ್ಕಳಿಗೆ ಪ್ರತಿದಿನ 500 ಕ್ಯಾಲೋರಿ ಅಂಶವುಳ್ಳ ಮತ್ತು 12 ರಿಂದ 15 ಗ್ರಾಂ ಪ್ರೋಟೀನ್ ಅಂಶವುಳ್ಳ ಆಹಾರವನ್ನು ವರ್ಷದಲ್ಲಿ 300 ದಿನಗಳು ನೀಡಲಾಗುತ್ತಿದೆ. ತೀವ್ರ ಅಪೌಷ್ಠಿಕತೆಯಿಂದ ಬಳಲುವ 3ರಿಂದ 6 ವರ್ಷದ ಮಕ್ಕಳಿಗೆ 500 ಕ್ಯಾಲೋರಿ ಅಂಶವುಳ್ಳ ಮತ್ತು 20-25 ಗ್ರಾಮ ಪ್ರೋಟಿನ್ ಅಂಶವುಳ್ಳ ಆಹಾರ ವರ್ಷದ 300 ದಿನಗಳು ನೀಡಲಾಗುತ್ತದೆ.

             ಗರ್ಭಿಣಿ ಮತ್ತು ಬಾಣಂತಿಯರಿಗೆ 600 ಕ್ಯಾಲೋರಿ ಅಂಶವುಳ್ಳ ಆಹಾರ ಮತ್ತು 18-20 ಗ್ರಾಂ ಪ್ರೋಟೀನ್ ಅಂಶವುಳ್ಳ ಅಹಾರ ನೀಡಲಾಗುತ್ತಿದೆ.

             ತೀವ್ರ ಅಪೌಷ್ಠಿಕತೆÉಯಿಂದ ಬಳಲುತ್ತಿರುವ  ಮಕ್ಕಳಿಗೆ ರೂ. 6 ಹಾಗೂ ಗರ್ಭಿಣಿ ಬಾಣಂತಿಯರಿಗೆ ಪ್ರತಿಫಲಾನುಭವಿಗೆ ದಿನವೊಂದಕ್ಕೆ ರೂ. 5 ರಂತೆ 300 ದಿನಗಳ ಪೌಷ್ಠಿಕ ಆಹಾರ ನೀಡಲಾಗುವುದು.

ಫಲಾನುಭವಿಗಳಿಗೆ ಅಂಗನವಾಡಿ ಕೇಂದ್ರಗಳಲ್ಲಿ ವಿತರಿಸಲಾಗುತ್ತಿರುವ ಪೂರಕ ಪೌಷ್ಠಿಕ ಆಹಾರದ ವಿವರ ಕೆಳಕಂಡಂತಿರುತ್ತದೆ.

 

ಅ) 6 ತಿಂಗಳಿನಿಂದ – 3 ವರ್ಷದ ಮಕ್ಕಳಿಗೆ ಅಮೈಲೇಸ್‍ಯುಕ್ತ ಶಕ್ತಿಯುತ ಆಹಾರವನ್ನು ವಾರದ 6 ದಿನಗಳು ನೀಡಲಾಗುತ್ತಿದೆ.

ಆ) 3-6 ವರ್ಷದ ಮಕ್ಕಳಿಗೆ ವಾರದ 2 ದಿನಗಳಲ್ಲಿ ಅಮೈಲೇಸ್‍ಯುಕ್ತ ಶಕ್ತಿಯುತ ಆಹಾರಮತ್ತು ನಾಲ್ಕು ದಿನಗಳು ಅಕ್ಕಿಯಿಂದ ತಯಾರಿಸಿದ ಸ್ಥಳೀಯ ಆಹಾರವನ್ನು ನೀಡಲಾಗುತ್ತಿದೆ.

ಇ) ಗರ್ಭಿಣಿ ಬಾಣಂತಿಯರಿಗೆ ಪ್ರತಿ ದಿನ 5 ರೂ. ಮೌಲ್ಯದ ಆಹಾರ ನೀಡುವುದ. ಅಕ್ಕಿ, ಹೆಸರುಕಾಳನ್ನು ಹಾಗೂ ಶಕ್ತಿಯುತ ಆಹಾರವನ್ನು ಇವರಿಗೆ ವಾರಕ್ಕೆ ಒಂದು ಬಾರಿ ವಿತರಿಸಿ ಮನೆಗೆ ತೆಗೆದುಕೊಂಡು ಹೋಗಲು ನೀಡಲಾಗುತ್ತದೆ.

ಕೊನೆಯ ಮಾರ್ಪಾಟು : 6/9/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate