ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಸೆಳೆತ

ಸೆಳೆತವು ಅಪಸ್ಮಾರ ದಿಂದ ಅಥವಾ ತೀವ್ರ ಅನಾರೋಗ್ಯದಿಂದ ಬರಬಹುದು. ಆಗ ಆ ವ್ಯಕ್ತಿಯು ಉಸಿರಾಟ ನಿಲ್ಲಿಸಿದರೆ ತುಂಬ ಅಪಾಯ.

ಸೆಳೆತವು (ಸ್ನಾಯುಗಳ ಅನಿಯಂತ್ರಿತ ತೀವ್ರ ಆಕುಂಚನ ಅಥವಾ ಸ್ನಾಯುಗಳ ಸೆಳೆತ) ಅಪಸ್ಮಾರ ದಿಂದ ಅಥವಾ ತೀವ್ರ ಅನಾರೋಗ್ಯದಿಂದ ಬರಬಹುದು. ಆಗ ಆ ವ್ಯಕ್ತಿಯು ಉಸಿರಾಟ ನಿಲ್ಲಿಸಿದರೆ ತುಂಬ ಅಪಾಯ. ಆ ಸಂದರ್ಭದಲ್ಲಿ ವೈದ್ಯರ ನೆರವು ಪಡೆಯುವುದು ಅಗತ್ಯ.

ಲಕ್ಷಣಗಳು

 • ಮಾಂಸ ಖಂಡಗಳು ಬಿರುಸು ಮತ್ತು ಒರಟಾಗುವವು. ಜೊತೆಗೆ ಅಲುಗಾಡುವ ಚಲನೆ ಇರುವುದು
 • ರೋಗಿಯು ನಾಲಿಗೆ ಕಡಿದುಕೊಳ್ಳಬಹುದು. ಇಲ್ಲವೆ ಉಸಿರಾಟ ನಿಲ್ಲಬಹುದು.
 • ಮುಖ ಮತ್ತು ತುಟಿ ನೀಲಿಯಾಗುವುದು
 • ಹೆಚ್ಚು ಜೊಲ್ಲು ಸುರಿಸಬಹುದು. ಬಾಯಲ್ಲಿ ನೊರೆ

ಕಾರ್ಯನಿರ್ವಹಿಸಲು ಸೂಚನೆಗಳು

 • ಅವನ ಸುತ್ತಲಿರುವ ಎಲ್ಲವಸ್ತುಗಳನ್ನು ತೆರವುಮಾಡಿ. ತಲೆಯ ಕೆಳಗೆ ಮೃದುವಾದದ್ದನ್ನು ಇಡಿ
 • ರೋಗಿಯ ಬಾಯಲ್ಲಿ ಅಥವಾ ಹಲ್ಲಿನ ನಡುವೆ ಏನನ್ನೂ ಇಡಬೇಡಿ
 • ಅವನಿಗೆ ಯಾವದೇ ದ್ರವ ನೀಡಬೇಡಿ
 • ಅವನು ಉಸಿರಾಟವನ್ನು ನಿಲ್ಲಿಸಿದ್ದರೆ, ಶ್ವಾಸ ನಾಳವು ತೆರೆದುಕೊಂಡಿದೆಯೋ ಎಂಬುದನ್ನು ಗಮನಿಸಿ. ಇಲ್ಲವಾದರೆ ರಕ್ಷಣಾ ಕ್ರಮ ತೆಗೆದುಕೊಳ್ಳಿ
 • ಸಮಾಧಾನವಾಗಿರಿ ಹಾಗು ಸಹಾಯ ಬರುವವರೆಗೆ ರೋಗಿಯನ್ನು ಆರಾಮಾಗಿರುವಂತೆ ನೋಡಿಕೊಳ್ಳಿ
 • ಬಹುಪಾಲು ಸೆಳೆತಗಳ ನಂತರ ತುಸು ಸಮಯದವರೆಗೆ ಪ್ರಜ್ಞೆ ಇರುವುದಿಲ್ಲ. ಪುನಃ ಇನ್ನೊಂದು ಸೆಳೆತ ಬರಬಹುದು . ಆದಷ್ಟು ಬೇಗ ರೋಗಿಯನ್ನು ವೈದ್ಯರ ಬಳಿ ಕರದುಕೊಂಡು ಹೋಗಿ

ಮೂಲ: ಪೋರ್ಟಲ್ ತಂಡ

2.96511627907
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top