ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಸಮಾಜ ಕಲ್ಯಾಣ / ನೀತಿ ಮತ್ತು ಯೋಜನೆಗಳು / ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆ

ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆ ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ.

ವೃದ್ಧಾಪ್ಯ ವೇತನದ ನಿಯಮಗಳನ್ನು ಬದಲಾಯಿಸಿ 19/11/2007ರಿಂದ ಕೇಂದ್ರ ಸರ್ಕಾರವು ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಅನ್ವಯ.

  • ಫಲಾನುಭವಿಗಳು 60 ವರ್ಷ ಹಾಗೂ ಮೇಲ್ಪಟ್ಟ ವಯಸ್ಸುಳ್ಳವರಾಗಿರಬೇಕು. ಅವರ ಬಡತನ ರೇಖೆಗಿಂತ(ಬಿಪಿಎಲ್) ಕೆಳಗಡೆ ಇರಬೇಕು.
  • ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯಿತಿ ರಾಜ್ ಮಂತ್ರಾಲಯವು, ಬಡತನ ರೇಖೆಗಿಂತ ಕೆಳಗಿರುವವರನ್ನು ಗುರುತಿಸಲು ಕುಟುಂಬದ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ಬಗ್ಗೆ 13 ಅಂಶಗಳನ್ನು ನಿಗದಿಪಡಿಸಿದೆ. ಪ್ರತಿಯೊಂದು ಅಂಶಕ್ಕೆ 0-4 ಅಂಕಗಳನ್ನು ನಿಗದಿಪಡಿಸಲಾಗಿದೆ. ಅದರಂತೆ 26 ಅಂಕಗಳು ಅಥವಾ ಅದಕ್ಕಿಂತ ಕಡಿಮೆ ಅಂಕಗಳನ್ನು ಪಡೆದ ಕುಟುಂಬಗಳನ್ನು ಬಡತನದ ರೇಖೆಗಿಂತ ಕೆಳಗಿದೆ ಎಂದು ಪರಿಗಣಿಸುವುದು.
  • ಅಂತಹ ವ್ಯಕ್ತಿಯು ವಿಧವಾ ವೇತನ, ಅಂಗವಿಕಲ ವೇತನ, ಸಂಧ್ಯಾ ಸುರಕ್ಷಾ ಯೋಜನೆಯಡಿ ಯಾವುದೇ ತರಹದ ಪಿಂಚಣಿ ಇತ್ಯಾದಿಗಳನ್ನು ಸಾರ್ವಜನಿಕ ಅಥವಾ ಖಾಸಗಿ ಮೂಲಗಳಿಂದ ಪಡೆಯುತ್ತಿರಬಾರದು.
  • ವಯಸ್ಸು ಪಿಂಚಣಿ ಮೊತ್ತ (ಪ್ರತಿ ತಿಂಗಳಿಗೆ) ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲು
    ಕೇಂದ್ರ ರಾಜ್ಯ
    60-64 ರೂ.200/- ರೂ.200/- -
    65-79 ರೂ.500/- ರೂ.200/- ರೂ.300/-
    80 ವರ್ಷ ಮೇಲ್ಪಟ್ಟು ರೂ.750/- ರೂ.500/- ರೂ.250/-

ಫಲಾನುಭವಿಗಳಿಗೆ ಗಂಡು ಮಕ್ಕಳು ಇದ್ಯಾಗ್ಯಾ ಅವರು ಫಲಾನುಭವಿಗಳನ್ನು ಪೋಷಿಸದೆ ಇದ್ದಲ್ಲಿ ಈ ಮಾಸಾಶನವನ್ನು ಪಡೆಯುಬಹುದಾಗಿದೆ.

  • ಜನನ ಪ್ರಮಾಣ ಪತ್ರ,ವೈದ್ಯಕೀಯ ದೃಢೀಕರಣ ಪತ್ರ ಅಥವಾ ಭಾರತ ಚುನಾವಣಾ ಆಯೋಗವು ನೀಡಿರುವ ಮತದಾರರ ಗುರುತಿನ ಚೀಟಿಯಲ್ಲಿರುವ ಜನ್ಮ ದಿನಾಂಕವು ವಯಸ್ಸಿಗೆ ಸಂಬಂಧಿಸಿದ ದಾಖಲೆಯಾಗಿರುತ್ತದೆ.
  • ಈ ಯೋಜನೆಗೆ ಸಲ್ಲಿಸಬೇಕಾದ ದಾಖಲಾತಿಯ ವಿವರ ಕೆಳಕಂಡಂತಿದೆ

    • ವಾಸಸ್ಥಳದ ದೃಢೀಕರಣ ಪತ್ರ
    • ವಯಸ್ಸಿನ ದೃಢೀಕರಣ ಪತ್ರ
    • ಆದಾಯ ಪ್ರಮಾಣ ಪತ್ರ

    ಮೂಲ : ಪ್ರೆಸ್ ಇನ್ಫರ್ಮೇಷನ್ ಬ್ಯೂರೊ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ

    2.92405063291
    ಶ್ರೀನಿವಾಸ ಕೆ 9972625040 May 06, 2017 12:20 AM

    ಹಳ್ಳಿಗಳಲ್ಲಿ ಈ ಯೋಜನೆ ಬಗ್ಗೆ ಪ್ರಚಾರ ಮಾಡಬೇಕು

    ಕೂಡಂಡ ರವಿ Mar 10, 2017 02:21 PM

    ಅಂತ್ಯೋದಯ ಪಡಿತರ ಚೀಟಿಯ ಬಗ್ಗೆ ವಿವರಣೆ ನೀಡಿ.

    ಟಿಪ್ಪಣಿ ಸೇರಿಸು

    (ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

    Enter the word
    ನೇವಿಗೇಶನ್‌
    Back to top