ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಅನ್ನಪೂರ್ಣ ಯೋಜನೆ, ಸಂಧ್ಯಾ ಸುರಕ್ಷಾ ಯೋಜನೆ

ಅನ್ನಪೂರ್ಣ ಯೋಜನೆ, ಸಂಧ್ಯಾ ಸುರಕ್ಷಾ ಯೋಜನೆ


ನಿರ್ಗತಿಕ ವ್ಯಕ್ತಿಗಳಿಗೆ ಆಹಾರ ಭದ್ರತೆಯನ್ನೊದಗಿಸುವ ಸಲುವಾಗಿ ಕೇಂದ್ರ ಸರ್ಕಾರವು ,ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಅನ್ನಪೂರ್ಣ ಯೋಜನೆಯನ್ನು ಜಾರಿಗೆ ತಂದಿದೆ. ನಿಭಂದನೆಗಳು:

 • 65 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ನಿರ್ಗತಿಕ ವ್ಯಕ್ತಿಗಳು ಯೋಜನೆಯಡಿ ಫಲಾನುಭವಿಗಳಾಗಿರುತ್ತಾರೆ.
 • ಯೋಜನೆ ಅನುಸಾರ ಫಲಾನುಭವಿಗಳಿಗೆ10 ಕಿಲೋ ಗ್ರಾಂ ಅಕ್ಕಿಯನ್ನು ಪ್ರತಿ ತಿಂಗಳು ಉಚಿತವಾಗಿ ವಿತರಿಸಲಾಗುವುದು.
 • ಈಗಾಗಲೇ ಇತರೇ ಸಾಮಾಜಿಕ ಭದ್ರತಾ ಯೋಜನೆಯಡಿ ಫಲಾನುಭವಿಗಳಾಗಿದ್ದರೆ ಈ ಯೋಜನೆಯಡಿ ಅರ್ಹರಾಗುವುದಿಲ್ಲ.

ಸಂಧ್ಯಾ ಸುರಕ್ಷಾ ಯೋಜನೆ65 ವರ್ಷದ ಅಥವಾ ಮೇಲ್ಪಟ್ಟ ವಯಸ್ಸಿನ ಹಿರಿಯ ಜೀವಗಳನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ದಿಶೆಯಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯನ್ನುದಿನಾಂಕ:2-7-2007 ರಿಮದ ಮಾಸಾಶನವನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯಡಿ ಫಲಾನುಭವಿಗಳಿಗೆ ರೂ.500/- ಗಳ ಮಾಸಾಶನವನ್ನು ಪಡೆಯುತ್ತಾರೆ. ಕೆಳಕಂಡ ವ್ಯಕ್ತಿಗಳು ಈ ಮಾಸಾಶನವನ್ನು ಅರ್ಹರಾಗಿರುತ್ತಾರೆ.
(ಅ) ಸಣ್ಣ ರೈತರು
(ಆ) ಅತೀ ಸಣ್ಣ ರೈತರು
(ಇ) ಕೃಷಿ ಕಾರ್ಮಿಕರು
(ಈ) ನೇಕಾರರು
(ಉ) ಮೀನುಗಾರರು
(ಊ) ಅಸಂಘಟಿತ ವಲಯದ ಕಾರ್ಮಿಕರು, ಆದರೆ ಇದು”Building and other Construction workers” (Regulation of Employment and Conditions of Services) Act, 1996 ಅಡಿಯಲ್ಲಿ ಬರುವ ವ್ಯಕ್ತಿಗಳಿಗೆ ಅನ್ವಯಿಸುವುದಿಲ್ಲ ಮತ್ತು ಅದರಡಿ ಮಾಸಾಶನ ಪಡೆಯುವವರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ.

ನಿಬಂಧನೆಗಳು :

 • ಪತಿ, ಪತ್ನಿಯ ಸಂಯೋಜಿನ ವಾರ್ಷಿಕ ಆದಾಯ ರೂ.20,000/- ಕ್ಕಿಂತ ಹೆಚ್ಚಿಗೆ ಇರಕೂಡದು
 • ಫಲಾನುಭವಿಗಳು ಪತಿ ಅಥವಾ ಪತ್ನಿಯ ಸಂಯೋಜಿತ ಠೇವಣಿ ಮೌಲ್ಯ ರೂ.10.000ಕ್ಕಿಂತ ಹೆಚ್ಚಿಗೆ ಇರಬಾರದು.
 • ಯಾವುದೇ ರೀತಿಯ ಪಿಂಚಣಿಯನ್ನು ಸಾರ್ವಜನಿಕ/ಖಾಸಗಿ ಮೂಲದಿಂದ ಪಡೆಯುತ್ತಿರಬಾರದು.
 • ಫಲಾನುಭವಿಗಳಿಗೆ ಗಂಡು ಮಕ್ಕಳು ಇದ್ದರೂ ಸಹ ಇವರುಗಳು ಫಲಾನುಭವಿಗಳನ್ನು ಪೋಷಿಸದೆ ಇದ್ದಲ್ಲಿ ಈ ಯೋಜನೆಯಡಿ ಮಾಸಾಶನಕ್ಕೆ ಅರ್ಹರಾಗಿರುತ್ತಾರೆ.
 • ಜನನ ಪ್ರಮಾಣ ಪತ್ರ, ವೈದ್ಯಕೀಯ ದೃಢೀಕರಣ ಪತ್ರ ಅಥವಾ ಭಾರತ ಚುನಾವಣಾ ಆಯೋಗವು ನೀಡಿರುವ ಮತದಾರರ ಗುರುತಿನ ಚೀಟಿಯಲ್ಲಿರುವ ಜನ್ಮ ದಿನಾಂಕವು ವಯಸ್ಸಿಗೆ ಸಂಬಂಧಿಸಿದೆ ದಾಖಲೆಯಾಗಿರುತ್ತದೆ.

ಈ ಯೋಜನಗೆ ಸಲ್ಲಿಸಬೇಕಾದ ದಾಖಲಾತಿಯ ವಿವರ ಕೆಳಕಂಡಂತಿದೆ.

 • ವಯಸ್ಸಿನ ದೃಢೀಕರಣ ಪತ್ರ
 • ಪಡಿತರ ಚೀಟಿ ಸಂಖ್ಯೆ
 • ಆದಾಯ ಪ್ರಮಾಣ ಪತ್ರ
 • ವಾಸಸ್ಥಳ ದೃಢಿಕರಣ ಪತ್ರ
 • ಉದ್ಯೋಗ ಪ್ರಮಾಣ ಪತ್ರ

ಮೂಲ : ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ

3.02040816327
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top