ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಸಮಾಜ ಕಲ್ಯಾಣ / ಸೇವೆಗಳು / ವಿಕಲಚೇತನರಿಗೆ ಸಂಬಂಧಿಸಿದ ಯೋಜನೆಗಳ ಸೇವೆಗಳು / ವಿಕಲಚೇತನ ಕ್ಷೇತ್ರದಲ್ಲಿ ಸಾಧನೆಗೈದ ಸ್ವಯಂ ಸಂಸ್ಥೆಗಳಿಗೆ ನೀಡುವ ಪ್ರಶಸ್ತಿಗಳು
ಹಂಚಿಕೊಳ್ಳಿ

ವಿಕಲಚೇತನ ಕ್ಷೇತ್ರದಲ್ಲಿ ಸಾಧನೆಗೈದ ಸ್ವಯಂ ಸಂಸ್ಥೆಗಳಿಗೆ ನೀಡುವ ಪ್ರಶಸ್ತಿಗಳು

ವಿಕಲಚೇತನ ಕ್ಷೇತ್ರದಲ್ಲಿ ಸಾಧನೆಗೈದ ಸ್ವಯಂ ಸಂಸ್ಥೆಗಳಿಗೆ ನೀಡುವ ಪ್ರಶಸ್ತಿಗಳು

ಸೇವೆ ಆಯ್ಕೆ ವಿಕಲಚೇತನ ಕ್ಷೇತ್ರದಲ್ಲಿ ಸಾಧನೆಗೈದ ಸ್ವಯಂ ಸಂಸ್ಥೆಗಳಿಗೆ ನೀಡುವ ಪ್ರಶಸ್ತಿಗಳು
ಸೇವೆ ಪೂರೈಕೆದಾರರು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ
ಈ ಸೇವೆ ಪಡೆಯಲು ಅರ್ಹತೆಗಳು ಸಂಸ್ಥೆಯು ಕಳೆದ 5 ವರ್ಷಗಳಲ್ಲಿ ವಿಕಲಚೇತನರಿಗಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸಿರಬೇಕು
ಈ ಸೇವೆ ಪಡೆಯಲು ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಲಗತ್ತಿಸಿ
ದಾಖಲೆಗಳ ವಿವರಗಳು
1.  ಈ ಹಿಂದೆ ಸಂಸ್ಥೆ ಪಡೆದ ಪ್ರಶಸ್ತಿಗಳ ವಿವರಗಳು
2.  ಪ್ರಶಸ್ತಿಗಳನ್ನು ಪಡೆದ ವಿವರಗಳು (ಪ್ರಮಾಣ ಪತ್ರಗಳನ್ನು ಲಗತ್ತಿಸುವುದು)
3.  ಗಮರ್ನಾಹ ಸೇವೆಗಳ ವಿವರಗಳು (ಅಗತ್ಯ ದಾಖಲೆಗಳೊಂದಿಗೆ)
4.  ನೊಂದಣಿ ಪ್ರಮಾಣ ಪತ್ರ
5.  ರಾಜ್ಯ / ಕೇಂದ್ರ ಸರ್ಕಾರದ ಅಧಿಕಾರಿಗಳು ಸಂಸ್ಥೆಗೆ ಭೇಟಿ ನೀಡಿದ್ದಲ್ಲಿ ಅವರುಗಳು ಸಂಸ್ಥೆಯ ಕುರಿತು ವ್ಯಕ್ತ ಪಡಿಸಿದ ಅಭಿಪ್ರಾಯಗಳು
6.  ಸಂಸ್ಥೆಯು ರಾಜ್ಯ / ಕೇಂದ್ರ ಸರ್ಕಾರದಿಂದ ಆನುದಾನ ಪಡೆಯುತ್ತಿರುವ ವಿವರಗಳು
7.  ಅಂಗವಿಕಲರ ಅಭಿವೃದ್ಧಿಗಾಗಿ ಕೈಗೊಂಡ ಕಾರ್ಯಕ್ರಮಗಳ ವಿವರಗಳು
8.  ಈ ಸಂಸ್ಥೆಯು ವಿಕಲಚೇತನರಿಗಾಗಿ ನಡೆಸುತ್ತಿರುವ ಚಟುವಟಿಕೆಗಳ/ ಕಾರ್ಯಕ್ರಮಗಳ ಸಂಪೂರ್ಣ ವರದಿ
ಈ ಸೇವೆ ಪಡೆಯಲು ಪಾವತಿಸಬೇಕಾದ (ರೂ.) ಇಲ್ಲ
ಸೇವೆಗಳು ನಿರೀಕ್ಷಿತ ದಿನಗಳಲ್ಲಿ ವಿತರಿಸಲಾಗುವುದು ಪ್ರತಿ ವರ್ಷ ಡಿಸಂಬರ್ 3 ರಂದು ನಡೆಯುವ ವಿಶ್ವ ಅಂಗವಿಕಲರ ದಿನಾಚರಣೆಯಂದು ಪ್ರಶಸ್ತಿ ಪ್ರಧಾನ ಮಾಡಲಾಗುವುದು
ಸೇವೆ ಪ್ರಕ್ರಿಯೆ
ಪ್ರಕ್ರಿಯೆ
1.   ಅರ್ಜಿದಾರರು ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ಲಾಗ್ ಇನ್ ಆಗುವುದು
2.  ನ೦ತರ, ಅರ್ಜಿದಾರರು ತಮ್ಮ ವೈಯಕ್ತಿಕ ಮೊಬೈಲ್ ಸಂಖ್ಯೆಯನ್ನು ನಮೂದಿಸಿದಾಗ ಓಟಿಪಿ ಸಂಖ್ಯೆಯು ಅವರ ಮೊಬೈಲಿಗೆ ಸಂದೇಶ ಬರುವುದು, ಸದರಿ ಓಟಿಪಿ ಸಂಖ್ಯೆಯನ್ನು ನಮೂದಿಸಿದಾಗ ಅರ್ಜಿದಾರರು ಬಯಸಿದ ಸೇವೆಯ ಅರ್ಜಿಯ ಪುಟ ಅನಾವರಣಗೊಳ್ಳುವುದು
3.  ಮನವಿದಾರರು ಸದರಿ ಅರ್ಜಿಯಲ್ಲಿ ಕೋರಿರುವ ಎಲ್ಲಾ ಮಾಹಿತಿಗಳನ್ನು ಸಂಬಂಧಿಸಿದ ಕಂಡಿಕೆಯಲ್ಲಿ ತುಂಬುವುದು ನಂತರ ಉಳಿಸು ಎಂಬುದನ್ನು ಕ್ಲಿಕ್ ಮಾಡುವುದು
4.  ಅರ್ಜಿ ಸಲ್ಲಿಸಿದ ನಂತರ ಒಂದು ಸ್ವೀಕೃತಿ ಸಂಖ್ಯೆಯು ಸಿಗುತ್ತದೆ
5.   ಅರ್ಜಿಯು ವಿಷಯನಿರ್ವಾಹಕರಿಗೆ ಹೋಗುತ್ತದೆ. ನಂತರ ವಿಷಯ ನಿರ್ವಾಹಕರು ದಾಖಲೆಗಳೊಂದಿಗೆ ಅರ್ಜಿದಾರರ ಎಲ್ಲಾ ವಿವರಗಳನ್ನು ಪರಿಶೀಲಿಸುವರು
6.  ಕೇಸ್ ವರ್ಕರ್ ದಾಖಲೆಗಳೊಂದಿಗೆ ಅರ್ಜಿದಾರರ ಎಲ್ಲಾ ವಿವರಗಳನ್ನು ಪರಿಶೀಲಿಸಲು
7.  ವಿಷಯ ನಿರ್ವಾಹಕರು ಅರ್ಜಿಗಳನ್ನು ಪರಿಶೀಲಿಸಿ, ಅಭಿಪ್ರಾಯದೊಂದಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಿಗೆ ಸಲ್ಲಿಸುತ್ತಾರೆ
8.  DDWO ಎಲ್ಲಾ ವಿವರಗಳನ್ನು ನಿಯಮಾನುಸಾರ ಪರಿಶೀಲಿಸಿ, ಸರಿಯಾಗಿದ್ದರೆ, ಒಪ್ಪಿಗೆ ಸೂಚಿಸುತ್ತಾರೆ
9.  DDWO ಅರ್ಜಿಯನು ಪರೀಕ್ಷಿಸಿ ನಂತರ ಸಂಬಂಧಪಟ್ಟ ಅರ್ಜಿದಾರರಿಗೆ ಪ್ರಶಸ್ತಿಯನ್ನು ನೀಡುವರು

ಮೂಲ : ವಿಕಲಚೇತನರ ಹಾಗು ಹಿರಿಯ ನಾಗರಿಕರ ಸಾಬರಿಕಾರಣ ಇಲಾಖೆ

3.02564102564
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top