ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಕುಡಿತದ ನಿರೋಧ

೧೯೯೨ರಲ್ಲಿ ಸಾರಾಯಿ ವಿರುದ್ಧ ಚಳುವಳಿಯಿಂದಾಗಿ, ಭಾರತದ ಆಂಧ್ರಪ್ರದೇಶದಲ್ಲಿ ಸಾರಾಯಿ ಮಾರುವುದು ಮತ್ತು ಸೇವಿಸುವುದು ಶಿಕ್ಷಾರ್ಹ ಅಪರಾಧವಾಗಿದೆ.

೧೯೯೨ರಲ್ಲಿ ಸಾರಾಯಿ ವಿರುದ್ಧ ಚಳುವಳಿಯಿಂದಾಗಿ, ಭಾರತದ ಆಂಧ್ರಪ್ರದೇಶದಲ್ಲಿ ಸಾರಾಯಿ ಮಾರುವುದು ಮತ್ತು ಸೇವಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ರಾಜ್ಯನೀತಿಯಿಂದಾಗಿ ೧೯೯೧-೯೨ರ ವಾರ್ಷಿಕ ಬಜೆಟ್‌ನಲ್ಲಿ ಶೇ ೧೦% ರಷ್ಟು ಹೆಂಡದ ಮೇಲೆ ವಿಧಿಸುವ ಸುಂಕದಿಂದಾಗಿ ಆದಾಯ ಹೆಚ್ಚಿತು. ಸರ್ಕಾರವು ಸಾರಾಯಿ ತಡೆಯಾಜ್ಞೆ ತಂದಿರುವುದನ್ನೇ ಪ್ರಶ್ನಿಸುತ್ತಿರುವಾಗ, ಮಹಿಳೆಯರ ಹೋರಾಟವು ರಾಜಕೀಯ ಪರಿಣಾಮದ ಮೇಲೆ ಸ್ಪಷ್ಟವಾಗಿರುತ್ತದೆ. ಮಹಿಳೆಯರ ಜೀವನವು ಸಾರಾಯಿಯಿಂದ ಹಾಳಾಗುತ್ತದೆ ಎಂಬುದನ್ನು ಅನುಭವಿಸಿದ ಮಹಿಳೆಯರು ಒಂದುಗೂಡಿ ಮಹಿಳಾ ಗುಂಪುಗಳನ್ನು ರಚಿಸಿ, ಹಳ್ಳಿಗಳನ್ನು ಸಾರಾಯಿ ಮುಕ್ತರನ್ನಾಗಿಸಲು ಹೋರಾಡಲು ಪ್ರಾರಂಭಿಸಿದವು. ಸರ್ಕಾರವು ಹಣ ವಿನಿಯೋಗಿಸಿ, ಸರ್ಕಾರೇತರ ಸಂಘಟನೆಗಳೊಂದಿಗೆ ಸಂಯೋಜನೆ ಕೈಗೊಂಡ ಸಾಕ್ಷರತಾ ಆಂದೋಲನದಲ್ಲಿ ಇರುವ ಸಾಕ್ಷರತೆಯ ಪ್ರಾಥಮಿಕ ಪುಸ್ತಕದಲ್ಲಿ ಕುಡುಕ ಗಂಡಂದಿರ ಕೈಯಲ್ಲಿ ನರಳುತ್ತಿರುವ ಹೆಂಗಸರ ಸ್ಥಿತಿಯ ಬಗ್ಗೆ ಅರಿತಿದ್ದರು. ಮಹಿಳೆಯರು ಸಾರಾಯಿಯ ಬಗ್ಗೆ ಮಾತ್ರ ವಿರುದ್ಧವಾಗಿರಲಿಲ್ಲ. ಆದರೆ ಹೊಸ ವಿಧದ ಹಾಗೂ ಕಡಿಮೆ ವೆಚ್ಚದ ಸಾರಾಯಿಯು ಅತಿ ಸಮೀಪದಲ್ಲಿ ಎಲ್ಲ ಹಳ್ಳಿಗಳಲ್ಲಿ ಲಭ್ಯವಿರುತ್ತಿತ್ತು. ಆದರೆ ಜನರು ಕುಡಿಯುವ ನೀರಿಗಾಗಿ ಹಲವು ಮೈಲುಗಳನ್ನು ಸವೆಸಬೇಕಾಗುತ್ತಿತ್ತು. ಇದರಿಂದಾಗಿ ಮಹಿಳೆಯರು ಕುಡುಕ ಗಂಡಂದಿರ ಬಗ್ಗೆ ಬೇಸತ್ತಿದ್ದರು. ಏಕೆಂದರೆ ಅವರು ತಮ್ಮ ದುಡಿತದ ಹಣವನ್ನು ಬರೇ ಕುಡಿತಕ್ಕಾಗಿ ಖರ್ಚು ಮಾಡುವುದಲ್ಲದೆ, ಮಹಿಳೆಯರಿಗೆ ಕಿರುಕುಳ ಕೊಡುವುದರಿಂದ ಅವರು ಬೇಸತ್ತಿದ್ದರು. ಸಾರಾಯಿ ಕುಡಿಯುವವರ ಬದಲಾಗಿ, ಸಾರಾಯಿ ಸರಬರಾಜುದಾರರ, ಮದ್ಯ ಉದ್ದಿಮೆದಾರರ ಬಗ್ಗೆ ಅವರು ದೃಷ್ಟಿ ಕೇಂದ್ರೀಕರಿಸಿದ್ದುದರಿಂದ ಇವರು ಗಂಡಸರ ನಿಷ್ಕ್ರಿಯ ಬೆಂಬಲ ಸಿಕ್ಕಿತು. ಮಹಿಳೆಯರು ಚಟುವಟಿಕೆಗಳನ್ನು ತಮ್ಮ ತಮ್ಮ ಹಳ್ಳಿಗಳಿಗೆ ಮಾತ್ರ ಸೀಮಿತಗೊಳಿಸಿ ಸ್ವಯಂ ಸೇವಾ ಸಂಘಟನೆಗಳ ಸಹಾಯವನ್ನು ಪಡೆದರು. ಆದಾಗ್ಯೂ ಸ್ಥಳೀಯ ಮಹಿಳೆಯರೇ ಈ ಹೋರಾಟದಲ್ಲಿ ಮುಂಚೂಣಿ ಪಾತ್ರವನ್ನು ವಹಿಸಿದರು.

 • ಈಗ ಈ ಹೋರಾಟವು ಬಡ ಗ್ರಾಮೀಣ ಮಹಿಳೆಯರಿಂದ, ಮಧ್ಯಮ ವರ್ಗದ ಮಹಿಳೆಯರು, ಪಟ್ಟಣದ ಮಹಿಳೆಯರು ಗಾಂಧೀಜಿಯವರ ತತ್ವಗಳನ್ನು ಸಮರ್ಥಿಸುತ್ತಾರೋ ಅವರು ಹೀಗೆ ಎಲ್ಲರೂ ಸಂಪೂರ್ಣ ನಿಷೇಧಕ್ಕೆ ಬೇಡಿಕೆ ವ್ಯಕ್ತಪಡಿಸುತ್ತಿದ್ದಾರೆ. ಹಳ್ಳಿಯ ಮಹಿಳೆಯರು ರಾಜ್ಯಾದ್ಯಂತ ಪಾನ ನಿರೋಧವನ್ನು ಜಾರಿಗೆ ತರಲು ಒತ್ತಾಯಿಸುವುದರಲ್ಲಿ ಯಶಸ್ವಿಯಾಗುತ್ತಾರೋ ಇಲ್ಲವೋ ಆದರೆ ರಾಜಕೀಯ ಶಕ್ತಿಯ ಅಡಿಪಾಯವನ್ನು ಅಲ್ಲಾಡಿಸಲು ಯಶಸ್ವಿಯಾಗಿದ್ದಾರೆ.

೨೧ ದಿನಗಳಲ್ಲಿ ಮದ್ಯವನ್ನು ಕುಡಿಯುವುದನ್ನು ಬಿಡಲು ಉತ್ತಮ ಉಪಾಯಗಳು.

ನಿಮ್ಮ ಧ್ಯೇಯವನ್ನು ಮೊದಲು ಗುರುತಿಸಿಕೊಳ್ಳಿ. ಕಡಿಮೆ ಕುಡಿತವನ್ನು ರೂಢಿಸಿಕೊಳ್ಳಲು ನಿಮಗಿರುವ ವೈಯಕ್ತಿಕ ಕಾರಣಗಳನ್ನು, ನಿಮ್ಮ ಆಲೋಚನೆಗಳನ್ನು ಬರೆದಿಡಿ ಮತ್ತು ಇದು ನಿಮ್ಮ ಗುರಿಯನ್ನು ತಲುಪಲು ನಿರ್ದೇಶನವನ್ನು ನೀಡುತ್ತದೆ. ಕುಡಿತದ ಸಮಾರಂಭಗಳಿಂದ ದೂರವಿರುವುದು, ನಿಯಂತ್ರಿತವಾಗಿ ಕುಡಿಯುವುದ ಅಥವಾ ಕುಡಿತವನ್ನು ಬಿಟ್ಟು ಬಿಡುವುದು. ನಿಮ್ಮ ಅಯ್ಕೆಯನ್ನು ನೀವೇ ಮಾಡಿ. ಇವೆಲ್ಲದಕ್ಕೂ ಮುನ್ನ ನೀವೇ ಇದನ್ನು ಏಕೆ ಮಾಡುತ್ತಿದ್ದೀರೆಂದು ಅರ್ಥೈಸಿಕೊಳ್ಳಿ. ಈ ಕೆಲಸವನ್ನು ನಿಮಗಾಗಿ ಅದು, ಯಾರೊಬ್ಬರಿಗಾಗಿ ಅಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳಿ. ಇಲ್ಲದಿದ್ದಲ್ಲಿ ನೀವು ಯಶಸ್ವಿಯಾಗುವುದಿಲ್ಲ.

 • ಕುಡಿತದ ಪ್ರಮಾಣವನ್ನು ಕಡಿಮೆ ಮಾಡಲು ಮುಂಬರುವ ವಾರದಲ್ಲಿ ಯಾವುದಾದರೊಂದು ದಿನವನ್ನು ಆಯ್ಕೆ ಮಾಡಿಕೊಳ್ಳಿ. ನೀವು ಆರಾಮಗಿರುವ ಯಾವುದೆ ಒತ್ತಡವಿರದ ದಿನ ಅದಾಗಿರಲಿ. ಆಆ ದಿನವನ್ನು ಮುಂಚಿತವಾಗಿಯೇ ನಿರ್ಧರಿಸಿ.
 • ಒಂದೆ ಸಲಕ್ಕೆ ಬಿಟ್ಟು ಬಿಡಬೇಡಿ: ಈ ಲೇಖನದ ಯಾವುದೇ ಭಾಗದಲ್ಲೂ ಕುಡಿತ ಬಿಡುವುದು ಸುಲಭ ಎಂದು ಹೇಳಿಲ್ಲ. ಯಾವಾಗಲು ನೀವು ನಿಮ್ಮ ಗುರಿ ನಿರ್ಧಾರದ ಕಾರಣಗಳನ್ನು ಧೃಡಪಡಿಸಿಕೊಳ್ಳಿ. ಯಾವುದಾದರೊಂದು ದಿನ ನೀವು ಅತಿಯಾಗಿ ಕುಡಿದರೆ, ನಿಮ್ಮ ಗುರಿಯನ್ನು ಮುಟ್ಟಲು ಅಸಾಧ್ಯ ಎಂಬುದನ್ನು ಮನಗಾಣಿ. ಹಾಗೂ ಮರುದಿನವೇ ಸರಿಯಾದ ದಾರಿಗೆ ಬನ್ನಿ . ಯಾವಾಗಲಾದರೂ ನೀವು ಅಸಫಲರಾದರೆ ಜೆ.ಎಫ್. ಕೆನಡಿಯವರ ಈ ಒಂದು ಉಲ್ಲೇಖವನ್ನು ನೆನಪಿಸಿಕೊಳ್ಳಿರಿ. “ಯಾರು ಅಸಫಲರಾದಾಗ ಎದೆಗೆಡುವುದಿಲ್ಲವೂ ಅವರೆ ದೊಡ್ಡ ಸಾಧನೆ ಮಾಡುವರು’”. ನೀವು ನಿಜವಾಗಿಯೂ ಕುಡಿತದ ಚಟವನ್ನು ಬಿಡಬೇಕೆಂಬ ಛಲವುಳ್ಳವರಾಗಿದ್ದರೆ, ಕುಡಿತ ನಿಯಂತ್ರಣದಿಂದ ನೀವು ಖಂಡಿತಾ ಮುಕ್ತರಾಗಬಲ್ಲಿರಿ.
 • ನಿಮ್ಮ ಯೋಜನೆಯನ್ನು ಇತರರೊಂದಿಗೂ ಹಂಚಿಕೊಳ್ಳಿ. ಅದನ್ನು ಬಗ್ಗೆ ನಿಮ್ಮ ಕುಟುಂಬದ ಸದಸ್ಯರೊಂದಿಗೂ, ವಿಶ್ವಾಸಿಗಳೊಂದಿಗೂ ಹಂಚಿಕೊಳ್ಳಿ. ಇದರಿಂದ ಅವರೂ ಕೂಡ ನಿಮ್ಮ ಯೋಜನೆಯ ಯಶಸ್ಸಿನಲ್ಲಿ ಭಾಗಿಯಾಗಿ ಹೇಗೆ ಸಹಕರಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳಬಹುದು.
 • ನಿಮ್ಮ ಕುಟುಂಬದ ಮತ್ತು ಗೆಳೆಯರ ಸಹಾಯವನ್ನು ಕೇಳಿ. ನಿಮ್ಮ ಈ ಬದಲಾವಣೆಗೆ ಯಾರು ಬೆಂಬಲಿಸುತ್ತಾರೋ ಅವರು ಖಂಡಿತಾ ನಿಮ್ಮಬಿಡುವಿನ ದಿನಗಳಲ್ಲಿ ಸಂತಸದಿಂದ ಪಾಲ್ಗೊಳ್ಳುತ್ತಾರೆ. ನೀವು ಮೊದಲನೆಯದಾಗಿ ನಿಮ್ಮ ಕಾಳಜಿಯನ್ನು ಅವರಿಗೆ ಹೇಳಿಕೊಳ್ಳಿ.
 • ಒಂದು ವಿರಾಮವನ್ನು ತೆಗೆದುಕೊಳ್ಳಿ. ಮಧ್ಯಪಾನವನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ಒಂದು ದಿನವನ್ನು ಮಾತ್ರ ಮಧ್ಯಪಾನವನ್ನು ಮಾಡುವುದಿಲ್ಲ ಎಂದು ಮೀಸಲಿಡಿ. ಒಂದು ದಿನ ಬಿಡುವುದು ಸುಲಭ, ನಂತರ ಎರಡು ದಿನ, ನಂತರ ಮೂರು ದಿನ, ನಂತರ ಒಂದು ವಾರ ತೀರ್ಮಾನಿಸಿ. ಹೆಚ್ಚು ಬದ್ಧತೆಯಿಂದ ಸಾಧಿಸಬೇಕಾದರೆ ದೊಡ್ಡ ಗುರಿಯನ್ನು ಸಣ್ಣ ಗುರಿಗಳನ್ನಾಗಿ ಮಾಡಿ ಹಾಗೂ ಅವನ್ನು ತಪ್ಪದೇ ಪಾಲಿಸಿರಿ. ಇಲ್ಲದಿದ್ದಲ್ಲಿ ಗುರಿಯನ್ನು ಧೀರ್ಘಾವಧಿಯವರೆಗೆ ಮುಂದೂಡುವ ಸಾಧ್ಯತೆ ಇರುತ್ತದೆ.
 • ನೀವು ಯಾವಾಗ ಕುಡಿಯುತ್ತೀರಿ ಎಂದು ನಿರ್ಣಯಿಸುತ್ತೀರೋ ಆ ದಿನವನ್ನು ನಿವಾರಿಸಲು ಯೋಜನೆ ಮಾಡಿ ಪ್ರಯತ್ನಿಸಿ. ಸಮಾರಂಭಗಳಲ್ಲಿ ಮದ್ಯಪಾನಕ್ಕೆ ಬದಲು ಬೇರೆಯಾವುದಾದರೂ ಪಾನೀಯವನ್ನು ತೆಗೆದುಕೊಂಡು ನಿಮ್ಮ ಯೋಜನೆಗೆ ಬದ್ಧರಾಗಿರಿ. ಮದ್ಯಪಾನದ ಬದಲಾಗಿ ಬೇರೆ ಅಭ್ಯಾಸಗಳನ್ನು ಎಂದರೆ ವ್ಯಾಯಾಮ, ಓದುವುದು, ಚಿತ್ರಕಲೆ, ಮುಂತಾದವುಗಳನ್ನು ರೂಡಿಸಿಕೊಂಡು ನಿಮ್ಮ ವ್ಯಕ್ತಿತ್ವವನ್ನು ರಚನಾತ್ಮಕವಾಗಿ ರೂಪಿಸಿಕೊಳ್ಳಿ.
 • ಪ್ರಲೋಭನೆಗಳನ್ನು ದೂರವಿರಿಸಿ. ನಿಮಗೆ ಯಾವಾಗ ಕುಡಿಯಬೇಕೆನ್ನಿಸುತ್ತದೆ? ಸಮಾರಂಭಗಳಲ್ಲಿಯೋ ಅಥವಾ ಒಬ್ಬರೇ ಇದ್ದಾಗಲೋ? ಮದ್ಯಪಾನ ಮಾಡಲು ನಿಮ್ಮನ್ನು ಪ್ರೇರೇಪಿಸುವ ಅಂಶಗಳಾವು ಎಂಬುದನ್ನು ಅರ್ಥಮಾಡಿಕೊಂಡು, ಇವುಗಳನ್ನು ತಡೆಯಲು ಯೋಜನೆ ಮಾಡಿ. ಮದ್ಯದ ಬದಲಾಗಿ ಇತರೆ ಪಾನೀಯಗಳನ್ನು ಕುಡಿಯುವುದನ್ನು ಅಭ್ಯಾಸಮಾಡಿಕೊಂಡು ಇದನ್ನೇ ಮನೆಯಲ್ಲಿ ಮುಂದುವರಿಸಿ. ಇಲ್ಲದಿದ್ದಲ್ಲಿ ಮದ್ಯಪಾನಕ್ಕೆ ಬದಲಾಗಿ ಯಾವ ಚಟುವಟಿಕೆಯು ನಿಮಗೆ ಸಂತೋಷ ಕೊಡುತ್ತದೆಯೋ ಉದಾ:- ವ್ಯಾಯಾಮ, ಓದುವುದು, ಚಿತ್ರಕಲೆ, ಇತ್ಯಾದಿಗಳಲ್ಲಿ ತೊಡಗಿಸಿಕೊಳ್ಳಿ.
 • ನಿಮ್ಮನ್ನು ನೀವೇ ಕೊಡುಗೆ ನೀಡಿಕೊಳ್ಳಿ.. ನೀವು ಮದ್ಯಪಾನಕ್ಕೆ ವ್ಯಯಿಸುತ್ತಿದ್ದ ಹಣವನ್ನು ನಿಮ್ಮ ಕುಟುಂಬದ ಸದಸ್ಯರ/ಗೆಳೆಯರ ಸಂತೋಷಕ್ಕಾಗಿ ಖರ್ಚು ಮಾಡಿರಿ. ಹೊರಗಡೆ ಹೋಗಿ ತಿನ್ನಿ, ಸಿನಿಮಾ ನೋಡಿರಿ ಅಥವಾ ಆಟವನ್ನು ಆಡಿರಿ.
 • ನೀವು ಕುಡಿತವನ್ನು ಕಡಿಮೆ ಮಡಲು ಕಷ್ಟವಾದರೆ ಹೊಸ ತಂತ್ರಗಳ ಸಹಾಯ ಪಡೆಯಿರಿ. ದಯಮಾಡಿ ಪರಿಣಿತರನ್ನು ಸಂಪರ್ಕಿಸಿ

ಮೂಲ: ಪೋರ್ಟಲ್ ತಂಡ

2.96808510638
ravi Jul 07, 2016 04:16 PM

ಸರಿಯಾದ ಮಾಹಿತಿ ಇದೆ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top