ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಇ ಗವರ್ನೆನ್ಸ್‌ / ನಾಗರಿಕ ಸೇವೆಗಳು / ನೋಂದಣಿ ಮಾಡಿಸಿಕೊಳ್ಳುವುದು ಹೇಗೆ
ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ನೋಂದಣಿ ಮಾಡಿಸಿಕೊಳ್ಳುವುದು ಹೇಗೆ

ಆಧಾರ್‌ ನೋಂದಣಿ ಮಾಡಿಸಿಕೊಳ್ಳುವುದರ ಕುರಿತು ಇಲ್ಲಿ ತಿಳಿಸಲಾಗಿದೆ.

 • ಆಧಾರ್‌ ನೋಂದಣಿ ಉಚಿತವಾಗಿರುತ್ತದೆ.
 • ಭಾರತದಾದ್ಯಂತ ಇರುವ ಯಾವುದೇ ಅಧಿಕೃತ ಆಧಾರ್‌ ನೋಂದಣಿ ಕೇಂದ್ರಕ್ಕೆ ನಿಮ್ಮಲ್ಲಿರುವ ಗುರುತು ಸಾಕ್ಷಿ ಮತ್ತು ವಿಳಾಸ ಸಾಕ್ಷಿಗಳೊಂದಿಗೆ ಭೇಟಿ ನೀಡಿ.
 • ಪ್ರಾಧಿಕಾರವು ಗುರುತು ಸಾಕ್ಷಿಗಾಗಿ ೧೮ ದಾಖಲೆಗಳು ಮತ್ತು ವಿಳಾಸ ಸಾಕ್ಷಿಗಾಗಿ ೩೩ ದಾಖಲೆಗಳ ಪಟ್ಟಿ ರಚಿಸಿದೆ. ಸೂಕ್ತ ದಾಖಲೆಗಳ ಪಟ್ಟಿಗಾಗಿ ಇಲ್ಲಿ ಕ್ಲಿಕ್‌ ಮಾಡಿರಿ. ಸಾಮಾನ್ಯವಾದ ವಿಳಾಸ ಸಾಕ್ಷಿ ಮತ್ತು ಗುರುತು ಸಾಕ್ಷಿಗಳೆಂದರೆ – ಛಾಯಾಚಿತ್ರ [ಫೋಟೋ] ವಿರುವ ಚುನಾವಣಾ ಗುರುತು ಪತ್ರ, ಪಡಿತರ ಚೀಟಿ, ಪಾಸ್‌ಪೋರ್ಟ್‌ ಮತ್ತು ವಾಹನ ಚಾಲನಾ ಪತ್ರ.
 • ಫೋಟೋ ಸಹಿತವಾದ ಗುರುತು ಪತ್ರಗಳಾದ, ಪಾನ್‌ ಕಾರ್ಡ್‌ ಮತ್ತು ಸರ್ಕಾರದ ಐಡೆಂಟಿಟಿ ಕಾರ್ಡುಗಳನ್ನೂ ತೋರಿಸಬಹುದು. ವಿಳಾಸ ಸಾಕ್ಷಿ ಕೆಲವು ದಾಖಲೆಗಳೆಂದರೆ, ವಿದ್ಯುತ್ತು, ನೀರು, ದೂರವಾಣಿ ಬಿಲ್ಲುಗಳು. ಇವು ಸದರಿ ಮೂರು ತಿಂಗಳುಗಳದ್ದಾಗಿರಬೇಕು.
 • ನಿಮ್ಮ ಬಳಿ ಈ ಮೇಲ್ಕಂಡ ಸಾಮಾನ್ಯವಾದ ಸಾಕ್ಷಿಗಳು ಇಲ್ಲವಾದರೆ, ಪತ್ರಾಂಕಿತ ಅಧಿಕಾರಿ [ಗೆಜೆಟಡ್‌ ಅಧಿಕಾರಿ / ತಹಸೀಲ್ದಾರ್‌ಗಳು ಫೋಟೋ ಇರುವಂತಹ ಗುರುತು ಪ್ರಮಾಣ ಪತ್ರ ನೀಡಬಹುದು. ಇದು ಗುರುತು ಪತ್ರವಾಗುತ್ತದೆ. ವಿಳಾಸ ಸಾಕ್ಷಿ ಪತ್ರವನ್ನು, ಫೋಟೊ ಇರುವ ಪ್ರಮಾಣಪತ್ರವನ್ನು ಸಂಸತ್‌ ಸದಸ್ಯರು / ವಿಧಾನಸಭೆ / ವಿಧಾನ ಪರಿಷತ್‌ ಸದಸ್ಯರು / ಗೆಜೆಟಡ್‌ ಅಧಿಕಾರಿಗಳು / ತಹಸೀಲ್ದಾರ್‌ ಅವರ ಲೆಟರ್‌ಹೆಡ್‌ ಅಂದರೆ ಅಧಿಕೃತವಾದ ಪತ್ರದ ಮೂಲಕ ನೀಡಬಹುದು. ಹಳ್ಳಿಗಳಲ್ಲಿ ಗ್ರಾಮ ಪಂಚಾಯಿತಿ ಮುಖ್ಯಸ್ಥರು ಅಥವಾ ಅವರ ಸಮಾನರಾದ ಅಧಿಕೃತ ಆಡಳಿತಾಂಗದವರು ನೀಡಬಹುದಾಗಿದ್ದು ಇದು ವಿಳಾಸಕ್ಕೆ ಸಾಕ್ಷಿ ಪತ್ರವಾಗಿರುತ್ತದೆ.
 • ಕುಟುಂಬದಲ್ಲಿ ಯಾರ ಒಬ್ಬ ಬಳಿ ವೈಯಕ್ತಿಕವಾದ ಸೂಕ್ತ ದಾಖಲೆಗಳಿಲ್ಲದಿದ್ದರೆ, ನಿವಾಸಿಯು ತಮ್ಮ ಬಳಿ ಇರುವ ಕುಟುಂಬದ ಸೂಕ್ತವಾದ ದಾಖಲೆಯಲ್ಲಿ ಹೆಸರಿದ್ದರೆ ಆತ / ಆಕೆ ನೋಂದಣಿ ಮಾಡಿಸಬಹುದು. ಈ ಸಂದರ್ಭದಲ್ಲಿ ಕುಟುಂಬ ಮುಖ್ಯಸ್ಥನ ದಾಖಲೆಯನ್ನು ಮೊದಲು ಗುರುತು ಹಾಗೂ ವಿಳಾಸ ಸಾಕ್ಷಿಗೆ ಬಳಸಲಾಗುತ್ತದೆ. ಆ ನಂತರ ಕುಟುಂಬ ಮುಖ್ಯಸ್ಥರು, ಕುಟುಂಬದ ಇತರರಿಗೆ ನೋಂದಣಿ ಮಾಡಿಸಬಹುದು. ಸಂಬಂಧಗಳನ್ನು ದೃಢೀಕರಿಸಲು ಪ್ರಾಧಿಕಾರವು ಎಂಟು ದಾಖಲೆಗಳನ್ನು ಸಾಕ್ಷಿಯಾಗಿ ಪರಿಗಣಿಸುತ್ತದೆ.ರಾಷ್ಟ್ರೀಯವಾಗಿ ಸೂಕ್ತತತೆ ಹೊಂದಿರುವ ಪ್ರಮಾಣ ದಾಖಲೆಗಳಿಗಾಗಿ ದಯಮಾಡಿ ಇಲ್ಲಿ ಕ್ಲಿಕ್ ಮಾಡಿ
 • ಎಲ್ಲಿ ಯಾವುದೇ ದಾಖಲೆಗಳು ಲಭ್ಯವಿರುವುದಿಲ್ಲವೋ ಅಂತಹ ಸಂದರ್ಭದಲ್ಲಿ ನಿವಾಸಿಯು ನೋಂದಣಿ ಕೇಂದ್ರದಲ್ಲಿ ಲಭ್ಯವಿರುವ ಪರಿಚಯ ಮಾಡುವವರ ಸಹಾಯವನ್ನು ಕೋರಬಹುದು. ರಿಜಿಸ್ಟ್ರಾರ್‌ ಅವರು ಪರಿಚಯ ಮಾಡಿಕೊಡುವವರ ಬಗ್ಗೆ ಘೋಷಣೆ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ರಿಜಿಸ್ಟ್ರಾರ್‌ ಕಚೇರಿಯನ್ನು ಸಂಪರ್ಕಿಸಬಹುದು.
 • ನೋಂದಣಿ ಕೇಂದ್ರದಲ್ಲಿ ದೊರಕುವ ಅರ್ಜಿ ನಮೂನೆಯಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ತುಂಬಿ, ನೋಂದಣಿಯ ಭಾಗವಾಗಿ ನಿಮ್ಮ ಘೋಟೋ [ಭಾವಚಿತ್ರ], ಕೈಬೆರಳುಗಳ ಅಚ್ಚುಗಳು ಹಾಗೂ ಕಣ್ಣಚ್ಚುಗಳನ್ನು ತೆಗೆದುಕೊಳ್ಳಲಾಗುತ್ತದೆ. ಈ ಸಂದರ್ಭದಲ್ಲಿಯೇ ನೀವು ನೀಡಿದ ವಿವರಗಳನ್ನು ಪರಿಶೀಲಿಸಿ ಅಗತ್ಯವಿದ್ದರೆ ತಿದ್ದುಪಡಿಗಳನ್ನು ಮಾಡಬಹುದು. ನೋಂದಣಿಯ ಸಂದರ್ಭದಲ್ಲಿ ನೀವು ನೀಡಿದ ವಿವರಗಳನ್ನು ಹೊಂದಿರುವ ಸ್ವೀಕೃತಿ ಪತ್ರ ಹಾಗೂ ತಾತ್ಕಾಲಿಕ ನೋಂದಣಿ ಸಂಖ್ಯೆ ಹೊಂದಿರುವ ಚೀಟಿಯನ್ನು ನೀಡಲಾಗುವುದು.
 • ಒಂದು ಬಾರಿ ನೋಂದಣಿ ಮಾಡಿಸಿದರೆ ಸಾಕು. ಒಂದೇ ಆಧಾರ್‌ ಸಂಖ್ಯೆ ಸಿಗುವುದರಿಂದ ಪುನಃ ಪುನಃ ನೋಂದಣಿ ಮಾಡಿಸಬೇಕಿಲ್ಲ.
 • ನೀವು ನೀಡಿದ ಮಾಹಿತಿಯನ್ನು ಆಧರಿಸಿ, ನಿಮ್ಮ ವಿವರವನ್ನು ಕೇಂದ್ರೀಯವಾಗಿ ಪರಿಶೀಲಿಸಲಾಗುತ್ತದೆ. ಅದು ಯಶಸ್ವಿಯಾದರೆ, ಒಂದು ಆಧಾರ್‌ ಸಂಖ್ಯೆ ಸೃಷ್ಟಿಯಾಗುತ್ತದೆ ಮತ್ತು ಅದನ್ನು ನಿಮಗೆ ಅಂಚೆ ಮೂಲಕ ನಿಮ್ಮ ವಿಳಾಸಕ್ಕೆ ತಲುಪಿಸಲಾಗುತ್ತದೆ.

ಆಧಾರ್‌ಗಾಗಿ ಕಾಯುವ ಅವಧಿ ೬೦-೯೦ ದಿನಗಳು ಆಗಬಹುದು. ಜೊತೆ ತಿದ್ದುಪಡಿಗೆ ತಗಲುವ ಸಮಯವೂ ಇರಬಹುದು. ಇದು ನಿವಾಸಿಯ ದತ್ತಾಂಶ ಸಂಗ್ರಹವು ಕೇಂದ್ರೀಯ ಮಹಾ ದತ್ತಾಂಶ ಕೋಶ [ಸಿಐಡಿಆರ್‌] ತಲುಪಿದ ನಂತರದ ಅವಧಿ. ಇದು ಅವಧಿ ರಾಷ್ಟ್ರೀಯ ಜನಸಂಖ್ಯೆ ರಿಜಿಸ್ಟ್ರಾರ್‌ [ಎನ್‌ಪಿಆರ್‌] ಆಗಿದ್ದ ಸಂದರ್ಭದಲ್ಲಿ ಇನ್ನೂ ಅಧಿಕ ಕಾಲಾವಧಿ ಹಿಡಿಯಬಹುದು.ನೋಂದಣಿ ಆದ ನಂತರ ನೋಂದಣಿ ಕೇಂದ್ರದ ಮೇಲ್ವಿಚಾರಕರು ಗುಣಮಟ್ಟ ಕುರಿತ ಪರಿಶೀಲಿಸುತ್ತಾರೆ. ಆನಂತರ ತಿದ್ದುಪಡಿ ಪ್ರಕ್ರಿಯೆ ನಡೆಯುತ್ತದೆ. [ಅಗತ್ಯವಾಗಿದ್ದಲ್ಲಿ] ಜೊತೆಗೆ ದತ್ತಾಂಶ ಸಂಗ್ರಹ ಪೂರ್ಣಗೊಳಿಸುವಿಕೆ ಕೆಲಸ ಸಾಗುತ್ತದೆ. ಆನಂತರದಲ್ಲಿ, ನೋಂದಣಿ ಏಜೆನ್ಸಿಯು ಪ್ರಾಧಿಕಾರದ ದತ್ತಾಂಶ ಸಂಗ್ರಹಾಲಯಕ್ಕೆ [ಡೇಟಾ ಸೆಂಟರ್‌] ಮಾಹಿತಿ ಸಲ್ಲಿಸುತ್ತದೆ.ಈ ದತ್ತಾಂಶವು ಕೇಂದ್ರೀಯ ಮಹಾ ದತ್ತಾಂಶ ಕೋಶದಲ್ಲಿ ವಿವಿಧ ಹಂತಗಳ ಪರೀಕ್ಷಣೆಗೊಳಗಾಗುತ್ತದೆ. ಇದರಿಂದಾಗಿ ಮಾಹಿತಿಯು [ದತ್ತಾಂಶ] ಯಾವುದೇ ಡೂಪ್ಲಿಕೇಟ್‌ ಇಲ್ಲದಂತೆ ಪ್ರಮಾಣೀಕರಿಸಲಾಗುತ್ತದೆ. ನಿವಾಸಿಗಳಿಂದ ಪಡೆಯಲಾದ ಜನಸಂಖ್ಯಾ ಹಾಗೂ ಜೈವಿಕ ಮಾಹಿತಿಗಳ ಮೇಲೆ ಮಾದರಿ ಪರಿಶೀಲನೆ ಮಾಡಲಾಗುವುದು. ಇದರ ಜೊತೆಗೆ, ಪ್ರತಿ ದತ್ತಾಂಶ ಪ್ಯಾಕೆಟ್‌ ಅನ್ನು ಆಪರೇಟರ್‌ / ಮೇಲ್ವಿಚಾಕರ / ಪರಿಚಯದಾರ / ನೋಂದಣಿ ಏಜೆನ್ಸಿಗಳು / ರಿಜಿಸ್ಟ್ರಾರ್‌ ಪರಿಶೀಲನೆಯು ನಡೆದಿರುತ್ತದೆ. ಇವೆಲ್ಲ ದತ್ತಾಂಶ ಗುಣಮಟ್ಟ ಪರಿಶೀಲನೆಗಳ ಮತ್ತು ಉಳಿಕೆ ದೃಢೀಕರಣಗಳ ನಂತರ ಮಾಹಿತಿ ಪ್ಯಾಕೆಟ್‌ ಡಿ-ಡೂಪ್ಲಿಕೇಷನ್‌ಗೆ ಒಳಗಾಗಿ ಆಧಾರ್‌ ಸಂಖ್ಯೆಯ ಸೃಷ್ಟಿಯಾಗುತ್ತದೆ.

ಯಾವುದೇ ತಪ್ಪುಗಳಿದ್ದ ಪಕ್ಷದಲ್ಲಿ ಪ್ಯಾಕೆಟ್‌ ಅನ್ನು ತಡೆಹಿಡಿಯಲಾಗುತ್ತದೆ. ಉದಾಹರಣೆಗೆ, ನಿವಾಸಿಯನ್ನು ನೋಂದಣಿ ಮಾಡಿದ ಆಪರೇಟರ್‌ ಯಾವುದೇ ತಪ್ಪನ್ನು ಡೇಟಾಬೇಸ್‌ನಲ್ಲಿ ಮಾಡಿದ್ದರೆ ಅಥವಾ ಫೋಟೊ / ವಯಸ್ಸು / ಲಿಂಗ [ಉದಾ : ಮಗುವಿನ ಚಿತ್ರ – ವಯಸ್ಸು ೫೦ ಎಂದಿದ್ದರೆ] ವಿವರಗಳನ್ನು ಸರಿಪಡಿಸುವುದಕ್ಕಾಗಿ ಹೆಚ್ಚಿನ ವಿಚಾರಣೆಗಾಗಿ ತಡೆಹಿಡಿಯಲಾಗುತ್ತದೆ. ಅಂತಹ ಪ್ಯಾಕೆಟ್‌ಗಳ ಕುರಿತಾಗಿ ತಿದ್ದುಪಡಿ ಪ್ರಕ್ರಿಯೆ ನಡೆಯುತ್ತದೆ. ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲಲ್ಲಿ ತಿದ್ದುಪಡಿ ಕಾರ್ಯ ಕೈಗೊಳ್ಳಲಾಗುವುದು. ನಿವಾಸಿಗೆ ಈ ತಿರಸ್ಕೃತವಾದ ವಿಷಯದ ಬಗ್ಗೆ ಪತ್ರವನ್ನು ನಿವಾಸಿಗೆ ಕಳುಹಿಸಲಾಗುವುದು. ಪುನಃ ನೋಂದಣಿ ಮಾಡಿಸುವಂತೆ ಹೇಳಲಾಗುವುದು. ಆಧಾರ್‌ ಪತ್ರಗಳನ್ನು ನಿವಾಸಿಗೆ ತಲುಪಿಸುವಿಕೆಯ ಜವಾಬ್ದಾರಿಯನ್ನು ಇಂಡಿಯಾ ಪೋಸ್ಟ್‌ಗೆ ವಹಿಸಲಾಗಿದೆ. ಆಧಾರ್‌ ಪತ್ರಗಳ ಮುದ್ರಣ ಜವಾಬ್ದಾರಿಯನ್ನು ಅದಕ್ಕೇ ವಹಿಸಲಾಗಿದೆ. ಮುದ್ರಣ ಪತ್ರ ತಲುಪಿಸುವಿಕೆಯ ಪ್ರದೇಶ, ಬಾಕಿ ಉಳಿದಿರುವ ಕೆಲಸ ಇತ್ಯಾದಿ ಅಂಶಗಳನ್ನು ಆಧರಿಸಿ ಇಂಡಿಯಾ ಪೋಸ್ಟ್‌ ಸಂಸ್ಥೆಯು ಸಾಮಾನ್ಯವಾಗಿ ೩-೫ ವಾರಗಳ ಕಾಲಾವಧಿಯನ್ನು ಈ ಕಾರ್ಯಕ್ಕಾಗಿ ತೆಗೆದುಕೊಳ್ಳುತ್ತದೆ.

ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್‌ ಅಡಿಯಲ್ಲಿನ ಆಧಾರ್‌ ನೋಂದಣಿಯಾಗಿದ್ದ ಸಂದರ್ಭದಲ್ಲಿ ಅದನ್ನು ಭಾರತದ ಜನಸಂಖ್ಯಾ ಮಹಾ ನೋಂದಣಿ ಜನರಲ್‌ ಅವರ ಮಾನ್ಯತೆ ನೀಡಿದ ಸಾಮಾನ್ಯ ನಿವಾಸಿಗಳ ಸ್ಥಳೀಯ ರಿಜಿಸ್ಟರ್‌ ಜತೆಯಲ್ಲಿ ಪರಿಶೀಲನೆ ನಡೆಸಲಾಗುತ್ತದೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಆಧಾರ್‌ ಸಂಖ್ಯೆಯನ್ನು ನೀಡಲಾಗುವುದು. ಇದು ಮೇಲೆ ಹೇಳಿದ ಕಾಲಾವಧಿಗಿಂತ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ. ನೋಂದಣಿ ಸಮಯದಲ್ಲಿ ನಿವಾಸಿಗಳಿಗೆ ನೀಡಲಾದ ಸ್ವೀಕೃತಿ ಪತ್ರದ ಆಧಾರದ ಮೇಲೆ ಅವರು ತಮ್ಮ ರಿಜಿಸ್ಟ್ರಾರ್‌ ಯಾರು ಎಂಬುದನ್ನು ತಿಳಿಬಹುದು. ಅವರು ಭಾರತದ ಜನಸಂಖ್ಯಾ ಮಹಾನೋಂದಣಿ ಜನರಲ್‌ ಆಗಿದ್ದರೆ ಅವರ ಕಚೇರಿಯನ್ನು ಸಂಪರ್ಕಿಸಬೇಕು

ಮೂಲ :ಯು ಐ ಡಿ ಎ ಐ

2.94047619048
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top