ಮಳೆನೀರನ್ನು ಬಹು ಹಂತದ ಮೆಟ್ಟಿಲು ಹೊಂಡಗಳಿಂದ ಕೊಯ್ಲು ಮಾಡಲು ಸಮುದಾಯದ ಕ್ರಮ
ಸಮಸ್ಯೆ
ಪಶ್ಚಿಮ ಬಂಗಾಳದಲ್ಲಿ ಪಶ್ಚಿಮ ಭಾಗದಲ್ಲಿ ಛೋಟಾನಾಗಪುರ ಪ್ರದೇಶವಿದೆ. ಇಲ್ಲ್ಲಿನ ಮೇಲ್ ಮೈ ಲಕ್ಞಣವು ತೆಗ್ಗು ದಿನ್ನೆಯಿಂದ ಕೂಡಿದೆ.d. ದಿನ್ನೆ ಪ್ರದೇಶದ ಮೇಲಿನ ಭಾಗವು ಸಂಪೂರ್ಣವಾಗಿ ಬಂಜರಾಗಿದೆ. ಅಲ್ಲಿ ಯಾವುದೆ ಸಸ್ಯ ಸಂಕುಲವಿಲ್ಲ. ಇಲ್ಲಿನದು ಕಲ್ಲು ಭೂಮಿ. ಅದಕ್ಕೆ ನೀರನ್ನು ಹಿಡಿದಿಡುವುದು ಆಗುವುದಿಲ್ಲ. ವಾರ್ಷಿಕ ಮಳೆ 1200 ರಿಂದ 1400 ಮಿಮಿ ಆಗುವುದು., ಆದರೆ ಎಲ್ಲ ಮಳೆಯು, ವರ್ಷದಲ್ಲಿ 2 ಎರಡು ತಿಂಗಳ ಅವಧಿಯಲ್ಲೆ ಸುರಿದು . ವರ್ಷದ ಉಳಿದ ಸಮಯವು ಪೂರ್ತಿ ಒಣದಾಗಿದ್ದು , ಪೂರ್ತಿ ಬರದ ವಾತಾವರಣವೆ ಇರುವುದು. ಈ ಅರೆ ಮರುಭೂಮಿಯ ಪ್ರದೇಶದಲ್ಲಿ ಪೂರ್ತಿ ಮಳೆ ಆಧಾರಿತವಾದ ಒಂದೆ ಬೆಳೆ ಸಿಗುವುದು. ಉಳಿದ 8 – 9 ತಿಂಗಳಲ್ಲಿ ನೀರಿನ ಕೊರತೆಯಿಂದ ಯಾವ ಬೆಳೆಯೂ ಅಗದು.. ಮಳೆ ಆಧಾರಿತ ಬೆಳೆಗೂ ಕೂಡಾ ಇತ್ತೀಚಿಗೆ ಸರಿಯಾಗಿ ಬರದ ಮಳೆಯಿಂದಾಗಿ ತೊಂದರೆಯಾಗಿದೆ. ವಾತಾವರಣದ ವೈಪರೀತ್ಯದಿಂದ ಬಹುತೇಕ ಭೂಮಿಯು ಸಾಗು ಮಾಡಲಾಗದೆ ಹೆಚ್ಚಿನ ಅವಧಿಗೆ ಹಾಗೆಯೆ ಇರುವುದು. ಕೆಲಸದ ಅಭಾವವು ಸದೃಢ ಯುವಕ ಯುವತಿಯರನ್ನು ಕೆಲಸ ಹುಡುಕಿಕೊಂಡು ಅಕ್ಕ ಪಕ್ಕದ ಸಮೃದ್ಧ ಜಿಲ್ಲೆಗಳಿಗೆ ವಲಸೆ ಹೋಗುವಂತೆ ಮಾಡಿದೆ.
ಹೊಂಡವನ್ನು ತೋಡುವಾಗ ಕಲ್ಲು ಬಂಡೆ ಬಂದರೆ ಕೆಲಸ ಕಠಿನ ಮತ್ತು ದುಬಾರಿ ಯಾಗುವುದು. ಆಗ ಹೊಂಡವನ್ನು ಆಳವಾಗಿ ತೋಡಲಾಗುವುದಿಲ್ಲ. ಅದರಿಂ ನೀರನ್ನು ಬೇಸಿಗೆಯವರೆಗೆ ಹಿಡಿದಿಟ್ಟುಕೊಳ್ಳ ಲಾಗುವುದಿಲ್ಲ. ಬಾವಿಗಳೂ ಒಣಗಿ ಹೋಗುತ್ತವೆ. ನದಿಗಳಲ್ಲಿ 10 – 12 ತಿಂಗಳು ನೀರು ಇರಬಹುದು., ಬಡ ಗುಡ್ಡಗಾಡುಜನರು ಅ ನೀರನ್ನು ಬೇಸಿಗೆಯ ಕೃಷಿಗಾಗಿ ಬಳಕೆ ಮಾಡುವ ವಿಧಾನ, ಸಂಪನ್ಮೂಲ ಮತ್ತು ಜ್ಞಾನವನ್ನು ಹೊಂದಿರುವುದಿಲ್ಲ.
ಮಧ್ಯವರ್ತನೆ
- ಸಣ್ಣ ಮತ್ತು ಅತಿಸಣ್ಣ ರೈತರು ಗುಂಪುಗಳನ್ನು ಮಾಡಿ ಹೊಸ ಹೊಂಡಗಳನ್ನು ತೋಡಲು ಮತ್ತು ಹಳೆಯ ಹೊಂಡಗಳ ಹೂಳೆತ್ತಲು ಉತ್ತೇಜಿಸಲಾಯಿತು. ಹೊಂಡಗಳು ಮೂರು ಅಥವ ನಾಲಕ್ಕು ಹಂತದ ವಿನ್ಯಾಸವನ್ನು ಹೊಂದಿವೆ. ಮಧ್ಯದ ತಳ ವನ್ನು ತಲುಪು ನಾಲಕ್ಕು ಕಡೆಯೂ ಮೂರು ಅಥವ ನಾಲಕ್ಕು ಅಗಲವಾದ ಮೆಟ್ಟಿಲುಗಳು ಇರುವವು. ಈ ಮೆಟ್ಟಿಲುಗಳು ಮಳೆಗಾಲದಲ್ಲಿ ನೀರಿನಲ್ಲಿ ಮುಳುಗಿರುತ್ತವೆ. ಮಳೆಯ ನೀರು ನೇರವಾಗಿ ಹೊಂಡದಲ್ಲಿ ಬೀಳುವ ಜತೆಗೆ ಸುತ್ತಲಿನ ತಾಕುಗಳಿಂದ ಹೆಚ್ಚಾದ ನೀರು ಹರಿದು ಹೊಂಡಸೇರಲು ಕಾಲುವೆ ಮಾಡಲಾಗುವುದು.ದಂಡೆಗುಂಟ ಕುಂಬಳ, ಸೋರೆಕಾಯಿ, ಹಾಗಲ ಬಳ್ಳಿಗಳನ್ನು ಹಬ್ಬಿಸಲಾಗುವುದು ಅದಕ್ಕಾಗಿ ತಟ್ಟಿಯ ಹಂದರವನ್ನು ಕಟ್ಟಲಾಗುವದುದ. ಅದರ ಆಸರೆಯಲ್ಲಿ ಬಳ್ಳಿಗಳನ್ನು ಹಬ್ಬಿಸಲಾಗುವುದು.. ಬೇಸಗೆಯಲ್ಲಿ ಹೊಂಡದಲ್ಲಿನ ನೀರು ಕಡಿಮೆಯದಾಗ ಹೊಂಡದ ಅಗಲವಾದ ಮೆಟ್ಟಿಲುಗಳ ಮೇಲೆ ತರಕಾರಿ ಬೆಳೆಯಲಾಗುವುದು. ಹಂಗಾಮಿನ, ಅರೆ ಶಾಸ್ವತ ಮತ್ತು ಬಹುಉದ್ಧೇಶಿತ ಮರ ಮತ್ತು ಅವರೆಯಂತಹ ದ್ವಿದಳ ಧಾನ್ಯದ ಗಿಡಗಳನ್ನು ಬೆಳೆಯುವರು. ಹೊಂಡದಲ್ಲಿ ಮೀನು ಸಾಕಿ ಹೆಚ್ಚುವರಿ ಆದಾಯ ಪಡೆಯಬಹುದು. ಅಲ್ಲಿ ಶೇಖರಿಸಿದ ನೀರನ್ನು ಅಕ್ಕಪಕ್ಕದ ಬೀಳು ಭೂಮಿಯಲ್ಲಿ ತರಕಾರಿ ಸಾಗುವಳಿ ಮಾಡಲು ಬಳಸಬಹುದು. ಹೊಂಡದ ಮೆಟ್ಟಲುಗಳ ಮೇಲೆ ಸಾವಯವ ಪದ್ದತಿಯಲ್ಲಿ ಕೃಷಿ ಮಾಡುವರು. ಗುಂಪಿನ ಒಟ್ಟು ಅಗತ್ಯವನ್ನು ಅರಿತ ಮೇಲೆ,ಹೊಂಡದಿಂದ ಬಂದ ಉತ್ಪನ್ನವನ್ನು ಗಂಪಿನ ಸದಸ್ಯರಿಗೆ ಸಮನಾಗಿ ಹಂಚಿ ಉಳಿದುದನ್ನು ಗುಂಪಿನ ಸದಸ್ಯರಲ್ಲದ ರೈತರಿಗೂ ಉಚಿತವಾಗಿ ನೀಡಲಾಗುವುದು.ನಂತರ ಮಿಕ್ಕಿದ್ದನ್ನು ಮಾರಿಬಂದ ಆದಾಯವನ್ನು ಬ್ಯಾಂಕಿನಲ್ಲಿ ಗುಂಪಿನ ಖಾತೆಗೆ ಜಮಾ ಮಾಡಲಾಗುವುದು.
- ಮಳೆಯಾಧಾರಿತ ಒಂದೆ ಬೆಳೆ ತೆಗೆಯುವ ಮಾಲಕನು ಬೇಸಿಗೆಯಲ್ಲಿ ಸಾಗು ಮಾಡಲಾರದ ಹಂಗಾಮಿನಲ್ಲಿ ಆ ಭೂಮಿಯನ್ನು ಸಣ್ಣ ಮತ್ತು ಅತಿಸಣ್ಣ ರೈತರ ಗುಂಪಿಗೆ ಆ ಅವಧಿಯಲ್ಲಿ ಬಳಸಲು ಕೊಡುವ ವ್ಯವಸ್ಥೆ ಮಾಡಿದೆ. ಕಡಿಮೆ ವೆಚ್ಚದ ಮಾದರಿಯನ್ನು ಅಭಿವೃದ್ಧಿ ಪಡಿಸಿ ಅದರಿಂದ ನೀರನ್ನು ಎತ್ತಿ ಕೃಷಿಮಾಡಲು ಬಳಸಲಾಗುವುದು..
- ಈ ಹೊಂಡದ ಅಳತೆಯು 1.3 ಎಕರೆಯಲ್ಲಿ; 180ಅಡಿ X 160ಅಡಿ X 10ಅಡಿ ಇರಬಹುದು.ಹೊಂಡವನ್ನು ಅಗೆದ ಭೂಮಿಯು 5 ಜನರಿಗೆ ಸೇರಿತ್ತು ., ಅವರು ಅದನ್ನು 30 ರೈತರಿಗೆ ಗುತ್ತಿಗೆ ಯ ಮೇಲೆ ಕೊಡಲು ಒಪ್ಪಿದರು ಗುತ್ತಿಗೆ ಅವಧಿ ಮುಗಿದ ಮೇಲೆ ಹೊಂಡವನ್ನು ಮಾಲಕರಿಗೆ ಹಿಂತಿರುಗಿಸ ಬೇಕು. ಆದರೆ ರೈತರ ಗುಂಪು ನೀರನ್ನು ಉಪಯೋಗಿಸಬಹುದಾಗಿತ್ತು.
ಪರಿಣಾಮ
- ಈವರೆಗೂ ಬಳಸಲಾರದ( ಬೀಳು) ಭೂಮಿಯನ್ನು ನೈಸರ್ಗಿಕ ಸಂಪನ್ಮೂಲಗಳನ್ನು ಆಹಾರ ಮೇವು ಉರುವಲು ಬೆಳೆಯಲು ಉಪಯೋಗಿಸಲು ಸಾಧ್ಯವಾಯಿತು.
- ಅನೇಕ ಹೆಚ್ಚಿನ ಮಾನವ ದಿನಗಳನ್ನು ನಿರ್ಮಿಸಬಹುದು, ಇದರಿಂದ ಹಂಗಾಮಿನಲ್ಲಿನ ವಲಸೆ ಕಡಿಮೆಯಾಗಬಹುದು.. ಇದರಿಂದ 2979 ಮಾನವ ದಿನಗಳು ಹೊಂಡ ತೋಡಲು ಮತ್ತು 831 ಮಾನವ ದಿನಗಳು ಬೀಳುಭೂಮಿಯಲ್ಲಿ ಮಿಶ್ರ ಬೆಳೆ ಪಡೆಯಲು ದೊರೆಯಿತು.
- ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲಾಯಿತು.
- ಕುಟುಂಬಕ್ಕೆ ಆಹಾರ ಮತ್ತು ಪೋಷಕಾಂಶಗಳನ್ನೂ ವರ್ಷ ಪೂರ್ತಿ ಪೂರೈಸಲು ಸಾಧ್ಯವಾಯಿತು. ಹೊಂಡದ ದಡದಲ್ಲಿ ಸಾಗು ಮಾಡುವುದಲ್ಲದೆ , ಇದರಿಂದ 10 ಎಕರೆ ಬೀಳು ಭೂಮಿಯನ್ನು ಸಾಗು ಮಾಡಲಾಯಿತು. 2006 ಇಸ್ವಿಯಲ್ಲಿ , 40 ವಿಧದ ತರಕಾರಿಗಳನ್ನು ಮಿಶ್ರ ಬೆಳೆಯಾಗಿ ಪಡೆಯಲಾಯಿತು.. ಸ್ವಂತ ಉಪಯೋಗ ಮಾಡಿಕೊಂಡು ಹೆಚ್ಚಾದುದುನ್ನು ಮಾರಿ ಆದಾಯ ಪಡೆಯುವ ಅವಕಾಶವೂ ಬಂದಿತು.
ಮೂಲ: DRCSC, Kolkatta
ಕೊನೆಯ ಮಾರ್ಪಾಟು : 11/19/2019
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.