ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಕೈ ತೋಟ

ಮನೆ ಎಂದರೆ ಅಲ್ಲಿ ಉದ್ಯಾನವನ ಅತ್ಯವಶ್ಯಕ. ಸುಂದರ ಹೂ ತೋಟ ಮನೆಗೆ ಶೋಭೆಯನ್ನು ತರುತ್ತದೆ ಮತ್ತು ಸುತ್ತಲಿನ ಪರಿಸರವನ್ನು ಆಹ್ಲಾದಮಯವನ್ನಾಗಿಸುತ್ತದೆ.

ಚಿಕ್ಕದಾದ ಚೊಕ್ಕದಾದ ಕೈ ತೋಟ ನಿರ್ಮಿಸುವುದು ಹೇಗೆ?

ಮನೆ ಎಂದರೆ ಅಲ್ಲಿ ಉದ್ಯಾನವನ ಅತ್ಯವಶ್ಯಕ. ಸುಂದರ ಹೂ ತೋಟ ಮನೆಗೆ ಶೋಭೆಯನ್ನು ತರುತ್ತದೆ ಮತ್ತು ಸುತ್ತಲಿನ ಪರಿಸರವನ್ನು ಆಹ್ಲಾದಮಯವನ್ನಾಗಿಸುತ್ತದೆ.

ಮಹಾ ನಗರಗಳಲ್ಲಿ ಮನೆಗಳು ಸಣ್ಣದಾಗಿರುವುದರಿಂದ ಹೂ ತೋಟಕ್ಕೆ ಬೇಕಾದ ಸಾಕಷ್ಟು ಜಾಗ ಅವರಲ್ಲಿ ಇರುವುದಿಲ್ಲ. ಆದರೂ ಇದ್ದ ಸ್ಥಳದಲ್ಲೆ ಸುಂದರವಾದ ಚೊಕ್ಕದಾದ ಹೂ ತೋಟವನ್ನು ನಿರ್ಮಿಸುವುದು ನಿಮಗೆ ತಿಳಿದಿರಬೇಕು.

ಉದ್ಯಾನವನವನ್ನು ಪ್ರೇಮಿಸುವವರಿಗೆ ಸಣ್ಣ ಸ್ಥಳಾವಕಾಶ ಕೂಡ ಮಹತ್ತರ ಬದಲಾವಣೆಗೆ ದಾರಿ ಮಾಡಿಕೊಡುತ್ತದೆ. ಚಿಕ್ಕದಾದ ಚೊಕ್ಕದಾದ ಕೈ ತೋಟವನ್ನು ನಿರ್ಮಿಸುವ ಕಲೆ ಅವರಲ್ಲಿ ಮೊಳಕೆಯೊಡೆಯುತ್ತದೆ. ನಿಮ್ಮ ಮನೆಯ ಕಿಟಕಿಯಲ್ಲೂ ಸಣ್ಣದಾದ ಹೂತೋಟವನ್ನು ನಿಮಗೆ ನಿರ್ಮಿಸಬಹುದು.ಆ ಚಿಕ್ಕದಾದ ಸ್ಥಳದಲ್ಲಿ ಸುಂದರ ಕೈ ತೋಟ ನಿರ್ಮಿಸುವುದು ಹೇಗೆಂಬುದು ನಿಮ್ಮ ಚಿಂತೆಯಾಗಿದ್ದರೆ ಅದಕ್ಕಾಗಿ ನಾವಿರುವೆವು ಇಲ್ಲಿ. ಈ ಕೆಲವು ವಿಧಾನಗಳನ್ನು ನೀವು ಅರಿತುಕೊಂಡರೆ ಸುಂದರ ಕೈ ತೋಟ ನಿರ್ಮಾಣ ಅತಿ ಸರಳವಾದುದು.

ಸಣ್ಣ ಜಾಗ ನಿಮ್ಮಲ್ಲಿದ್ದರೂ ಅದರ ಸರಿಯಾದ ಬಳಕೆಯನ್ನು ನೀವು ಮಾಡಬೇಕು. ಲಿಂಬೆ ಬಳ್ಳಿ, ಇತರ ಗಿಡಮೂಲಿಕೆ ಸಸ್ಯಗಳ ಬಳ್ಳಿಗಳನ್ನು ನೀವು ಪೋಷಿಸಬಹುದು. ಇಂತಹ ಬಳ್ಳಿಗಳಿಗೆ ವಾರಕ್ಕೊಮ್ಮೆ ಹಾಕುವ ನೀರು ಸಾಕಾಗುತ್ತದೆ. ಅದೇ ರೀತಿ ಇವುಗಳ ಪೋಷಣೆಗೆ ಬಹಳಷ್ಟು ಸಮಯ ಬೇಕೆಂದಿಲ್ಲ.

ಸಲಾಡ್ ಗಾರ್ಡನ್ ನಿರ್ಮಿಸಿ:

ಮುಳ್ಳುಸೌತೆ ಹಾಗೂ ಟೊಮೇಟೋ ಇಷ್ಟವೇ?, ನಿಮ್ಮ ಚಿಕ್ಕ ಜಾಗದಲ್ಲಿ ಇವೆರಡೂ ತರಕಾರಿಗಳನ್ನು ಸುಲಭವಾಗಿ ನಿಮಗೆ ಬೆಳೆಸಿಕೊಳ್ಳಬಹುದು. ಇವುಗಳೊಂದಿಗೆ ಇತರೆ ಸಲಾಡ್ ತರಕಾರಿಗಳನ್ನು ನಿಮ್ಮ ಕೈ ತೋಟದಲ್ಲಿ ಬೆಳೆಸಿಕೊಳ್ಳಿ. ಪಾಲಾಕ್, ಬೀಟ್‌ರೋಟ್, ಮೂಲಂಗಿ ಮೊದಲಾದವುಗಳನ್ನು ಬೆಳೆಸಬಹುದು.

ನಿಮ್ಮ ಗಾರ್ಡನ್ ಸುಂದರಗೊಳಿಸಿ:

ಸಣ್ಣ ಸ್ಥಳದಲ್ಲಿ ಹೂಗಳನ್ನು ಬೆಳೆಸಿ ನಿಮ್ಮ ಉದ್ಯಾನವನವನ್ನು ಸುಂದರಗೊಳಿಸಲು ಸಾಧ್ಯ. ಉದ್ದನೆಯ ದಾಹಿಲಾಸ್ ಹಾಗೂ ಗ್ಲೋರಿಸೋಗಳನ್ನು ಕೈ ತೋಟದಲ್ಲಿ ಬೆಳೆಸಬಹುದು. ಪಿಂಕ್ ಹಾಗೂ ನೇರಳೆ ಬಣ್ಣದ ಹೂಗಳನ್ನು ನೆಟ್ಟು ನಿಮ್ಮ ಕೈ ತೋಟವನ್ನು ವರ್ಣರಂಜಿತಗೊಳಿಸಬಹುದು. ಕಾಸ್ಮೋ ಹಾಗೂ ಸವ್ಲಿಯಾವನ್ನು ಬೆಳೆಸಿ ನಿಮ್ಮ ತೋಟದ ಶೋಭೆಯನ್ನು ಹೆಚ್ಚಿಸಬಹುದು.

ಮೂಲ : ಬೋಲ್ಡ್ ಸ್ಕೈ

2.94871794872
ದಿವ್ಯ Feb 26, 2017 06:08 PM

ಸಸಿ ಮಡಿ ಏoದರೇನು

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top