ಈ ಹಿಂದೆ, ಕಾಳು ಮೆಣಸು ಕೊಯ್ಲಿಗೆ ಬಂದರೆ ಕಾರ್ಮಿಕರು ಕಟಾವು ಮಾಡಿದಂತಹ ಮೆಣಸನ್ನು ಸ್ವತಃ ಕಾಲಿನಿಂದ ತುಳಿದು ಬೇರ್ಪಡಿಸಿ, ತೂಕ ಮಾಡಿಸಿ ಹೋಗಬೇಕಿತ್ತು. ತೋಟದಿಂದ ಒಂದು ಗಂಟೆ ಮುಂಚಿತವಾಗಿ ಈ ಎಲ್ಲಾ ಕೆಲಸ ಮಾಡಬೇಕಿತ್ತು. ಅದಲ್ಲದೇ ಮೆಣಸನ್ನು ಕಾಲಿನಿಂದ ತುಳಿದು ಬೇರ್ಪಡಿಸುವಾಗ ಅದರ ಉಷ್ಣದಿಂದ ಕಾಲುಗಳು ಒಡೆದು ಉರಿಯುತ್ತಿದ್ದವು.
ಇದಕ್ಕೆ ಪರ್ಯಾಯವಾಗಿ ಈಗ ಯಂತ್ರ ಕಂಡುಹಿಡಿಯಲಾಗಿದೆ. ಈ ಯಂತ್ರದ ಸಹಾಯದಿಂದ ಮೂವರು ಜನರಿದ್ದರೆ ಒಂದು ಗಂಟೆಗೆ ಸುಮಾರು 2,500 ರಿಂದ 3 ಸಾವಿರ ಕೆ.ಜಿಯಷ್ಟು ಕಾಳು ಮೆಣಸನ್ನು ಬಿಡಿಸಬಹುದು. ಮೊದಲು ದಿನವೊಂದಕ್ಕೆ 30 ರಿಂದ 40 ಕೆ.ಜಿ ಕೊಯ್ಯುತ್ತಿದ್ದ ಕಾರ್ಮಿಕರು ಈ ಯಂತ್ರದ ಸಹಾಯದಿಂದ 100 ರಿಂದ 120 ಕೆ.ಜಿಯಷ್ಟು ಕೊಯ್ಲು ಮಾಡುತ್ತಿದ್ದಾರೆ. ಸಮಯ, ಶ್ರಮ ಉಳಿಸುವ ಈ ಯಂತ್ರ ರೈತರ ಪಾಲಿಗೆ ವರದಾನವಾಗಿದೆ. ಕೆಲವರು ಇದರಲ್ಲಿ ಬಾಡಿಗೆ ಸಹ ನೀಡಿ ಒಂದು ಕೆ.ಜಿಗೆ ಒಂದು ರೂಪಾಯಿಯಂತೆ ದುಡಿಯುತ್ತಾರೆ.
ಈ ಯಂತ್ರಕ್ಕೆ 5 ಎಚ್‌ಪಿ ಮೋಟಾರು ಅಳವಡಿಸಲಾಗಿದೆ. ಗಂಟೆಗೆ ಒಂದರಿಂದ ಎರಡು ಲೀಟರ್ ಡೀಸೆಲ್ ತೆಗೆದುಕೊಳ್ಳುತ್ತದೆ. ಯಂತ್ರದ ಬೆಲೆ 60 ರಿಂದ 65 ಸಾವಿರ ರೂಪಾಯಿಗಳು. ಹೆಚ್ಚಿನ ಮಾಹಿತಿಗೆ: 9448178925
ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ,ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.
ಕೊನೆಯ ಮಾರ್ಪಾಟು : 1/28/2020