ಜೈವಿಕ ಗೊಬ್ಬರ ಬಳಕೆಯನ್ನು ಮೂರು ವಿಧಾನದಲ್ಲಿ ಮಾಡಬಹುದು.
- ಬೀಜೋಪಚಾರ ಕ್ರಮ
- ಪ್ರತಿ ಪೊಟ್ಟಣದಲ್ಲಿ ಬೆಳೆಗೆ ಅನುಗುಣವಾಗಿ 200 ಗ್ರಾಂ ಪುಡಿ ರೂಪದ ಜೈವಿಕ ಗೊಬ್ಬರ ಇರುತ್ತದೆ. ಇದು ಸಾಮಾನ್ಯವಗಿ ವಿವಿಧ ಬೆಳೆಯಲ್ಲಿ ಒಂದು ಎಕರೆಗೆ ಶಿಫಾರಸ್ಸು ಮಾಡಿರುವ ಮಧ್ಯಮ ಗಾತ್ರದ 10 ಕಿ.ಗ್ರಾಂ ಬಿತ್ತನೆ ಬೀಜಕ್ಕೆ ಸರಿಹೋಗುತ್ತದೆ. ಜೈವಿಕ ಗೊಬ್ಬರದ ಅವಶ್ಯಕತೆಯು, ಬೀಜದ ಗಾತ್ರ ಹಾಗೂ ಎಕರೆಗೆ ಬೇಕಾಗುವ ಬಿತ್ತನೆ ಬೀಜದ ಪ್ರಮಾಣದ ಮೇಲೆ ಅವಲಂಬಿಸಿರುತ್ತದೆ.
- ಬೀಜಕ್ಕೆ ಲೀಪಿಸುವ ಮೊದಲು ಒಂದು ಅಂಟು ದ್ರಾವಣವನ್ನು ತಯಾರಿಸಬೇಕು. ಅಂಟು ದ್ರಾವಣ ತಯಾರಿಸಲು 70 ಗ್ರಾಂ ಬೆಲ್ಲ ಅಥವಾ ಸಕ್ಕರೆ 0.25 ಲೀಟರ್ ನೀರಿನಲ್ಲಿ ಕರಗಿಸಿ 15-20 ನಿಮಿಷಗಳ ಕಾಲ ಕುದಿಸಿ ನಂತರ ತಣ್ಣಗೆ ಮಾಡುವುದು. ಒಂದು ಕಿ.ಗ್ರಾಂ. ಬೀಜಕ್ಕೆ ಸುಮಾರು 30-50 ಮಿ.ಲೀ. ಅಂಟು ಬೇಕಾಗುತ್ತದೆ.
- ಅವಶ್ಯಜವಿದ್ದಷ್ಟು ಅಂಟು ದ್ರಾವಣವನ್ನು ಒಂದು ಸಣ್ಣ ಪಾತ್ರೆಯಲ್ಲಿ ತೆಗೆದುಕೊಂಡು ಒಂದು ಪ್ಯಾಕೆಟ್‍ನಲ್ಲಿರುವ ( 200 ಗ್ರಾಂ ) ಪುಡಿಯ ರೂಪದ ಜೈವಿಕ ಗೊಬ್ಬರವನ್ನು ಹಾಕಿ ಕಲಸಿ.
- ಒಂದು ಎಕರೆಗೆ ಬೇಕಾಗುವ ಬಿತ್ತನೆ ಬೀಜದ ಮೇಲೆ ತಯಾರಿಸಿದ ಜೈವಿಕ ಗೊಬ್ಬರ ದ್ರಾವಣವನ್ನು ಸುರಿದು ಪ್ರತಿ ಬೀಜಕ್ಕೂ ಸಮವಾಗಿ ಅಂಟುವಂತೆ ಲೇಪನಮಾಡಬೇಕು. ಬೀಜದ ಗಾತ್ರ ಹಾಗೂ ಎಕರೆಗೆ ಉಪಯೋಗಿಸುವ ಬೀಜ ಪ್ರಮಾಣದ ಆಧಾರದ ಮೇಲೆ ಹೆಚ್ಚು ಜೈವಿಕ ಗೊಬ್ಬರವನ್ನು ಬಳಸಬಹುದು. ಅಜೊಟೋಬ್ಯಾಕ್ಟರ್, ರಂಜಕ ಕರಗಿಸುವ ಗೊಬ್ಬರ ಮತ್ತು ಟ್ರೈಕೋಡರ್ಮಾವನ್ನು ಪ್ರತಿ 2 ಕೆ.ಜಿ. ಯಂತೆ ಗೊಬ್ಬರಕ್ಕೆ ಮಿಶ್ರ ಮಾಡಿದಾಗ ಫಲವತ್ತಾದ ಗೊಬ್ಬರ 2 ತಿಂಗಳಲ್ಲಿ ತಯಾರಾಗುತ್ತದೆ.
- ಈ ರೀತಿ ಸಂಸ್ಕರಿಸಿದ ಬೀಜವನ್ನು ಬಟ್ಟೆ ಅಥವಾ ಗೋಣಿಚೀಲದ ಮೇಲೆ ಹರಡಿ ನೆರಳಿನಲ್ಲಿ ಒಣಗಿಸಿದ ನಂತರ ಕೂಡಲೇ ಬಿತ್ತನೆ ಮಾಡುವುದು.
- ಕೀಟನಾಶಕ ಅಥವಾ ಶಿಲೀಂಧ್ರನಾಶಕ ಲೇಪಿತ ಬೀಜಗಳಿಗೆ ಎರಡು ಪಟ್ಟು ಜೈವಿಕ ಗೊಬ್ಬರ ಬಳಸಬೇಕು.
- ನೇರವಾಗಿ ಮಣ್ಣಿಗೆ ಹಾಕುವ ವಿಧಾನ
- ಒಂದು ಎಕರೆಗೆ ಬೇಕಾಗುವಷ್ಟು ಪುಡಿ ರೂಪದ ಜೈವಿಕ ಗೊಬ್ಬರವನ್ನು (4ಕಿ.ಗ್ರಾಂ) ಕೊಟ್ಟಿಗೆ ಗೊಬ್ಬರದೊಂದಿಗೆ ಮಿಶ್ರಣಮಾಡಿ (1:20 ರ ಪ್ರಮಾಣದಲ್ಲಿ) ಬಿತ್ತನೆ ಸಾಲುಗಳಲ್ಲಿ ಹಾಕುವುದು.
- ಸಸ್ಯ ಬೇರುಗಳಿಗೆ ಉಪಚರಿಸುವ ವಿಧಾನ
- ಸಸಿ ಮಡಿಯಿಂದ ಸಸಿಗಳನ್ನು ತೆಗೆದು ಬಯಲಲ್ಲಿ ನಾಟಿಮಾಡುವ ಮೊದಲು ಈ ರೀತಿ ಉಪಚರಿಸಿ.
- ಪುಡಿ ರೂಪದ ಜೈವಿಕ ಗೊಬ್ಬರವನ್ನು ಚಿಕ್ಕ ಪಾತ್ರೆಯಲ್ಲಿ ಸ್ವಲ್ಪ ನೀರಿನಲ್ಲಿ (1ಕಿ.ಗ್ರಾಂ ಜೀವಾಣು ಗೊಬ್ಬರ 5 ಲೀಟರ್ ನೀರಿನಲ್ಲಿ) ಕಲಸಿಕೊಳ್ಳಬೇಕು.
- ಸಸಿಗಳನ್ನು ಮಡಿಯಿಂದ ಕಿತ್ತು ಬಯಲಲ್ಲಿ ನಾಟಿ ಮಾಡುವ ಮೊದಲು ಇವುಗಳ ಬೇರುಗಳನ್ನು ನೀರಿನಲ್ಲಿ ತಯಾರಿಸಿದ ಜೈವಿಕ ಗೊಬ್ಬರದಲ್ಲಿ ಕನಿಷ್ಠ 30 ನಿಮಿಷ ಅದ್ದಿ ಕೂಡಲೆ ನಾಟಿ ಮಾಡಬೇಕು. ಈ ಪದ್ಧತಿಯು ನಾಟಿ ಮಾಡಬಲ್ಲ ಸಸ್ಯಗಳಾದ ರಾಗಿ, ಭತ್ತ, ಮೆಣಸಿನ ಸಸಿ, ಟೊಮ್ಯಾಟೊ ಇತ್ಯಾದಿ ಸಸ್ಯಗಳಿಗೆ ಅತ್ಯಂತ ಉಪಯೋಗಕ
ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ,ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.
ಕೊನೆಯ ಮಾರ್ಪಾಟು : 4/27/2020
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.