ಬೆಳೆ ಪದ್ಧತಿ ಎಂದರೇನು ?
ಬೆಳೆಯನ್ನು ಭೂಸಂಪನ್ಮೂಲ, ಆರ್ಥಿಕತೆ, ಹವಾಗುಣ ಮತ್ತು ಮಣ್ಣಿನ ಆಧಾರದ ಮೇಲೆ ವಿವಿಧ ಸ್ಥಿತಿಗಳಲ್ಲಿ ಹೇಗೆ ಬೆಳೆಯಬಹುದು ಎನ್ನುವುದೇ ಬೆಳೆಪದ್ಧತಿ.
ವಿಧಗಳು
- ಏಕಬೆಳೆ ಪದ್ಧತಿ
- ದ್ವಿಬೆಳೆ ಪದ್ಧತಿ
- ತ್ರಿಬೆಳೆ ಪದ್ಧತಿ
- ಬಹುಬೆಳೆ ಪದ್ಧತಿ
- ಅಂತರ ಬೇಸಾಯ ಪದ್ಧತಿ
- ಕೂಳೆ ಬೆಳೆ ಪದ್ಧತಿ
- ಮಿಶ್ರ ಬೆಳೆ ಪದ್ಧತಿ
- ಏಕಬೆಳೆ ಪದ್ಧತಿ : ಒಂದು ಭೂಮಿಯಲ್ಲಿ ಒಂದು ವರ್ಷದಲ್ಲಿ ಒಂದೇ ಒಂದು ಬೆಳೆಯುನ್ನು ಬೆಳೆಯುವುದಕ್ಕೆ ಏಕಬೆಳೆ ಪದ್ಧತಿ ಎನ್ನುತ್ತಾರೆ. ಉದಾ : ಭತ್ತ (ಮಳೆಗಾಲದಲ್ಲಿ).
- ದ್ವಿಬೆಳೆ ಪದ್ಧತಿ : ಒಂದು ಭೂಮಿಯಲ್ಲಿ ಒಂದು ವರ್ಷ ಅಥವಾ ಒಂದು ಋತುವಿನಲ್ಲಿ ಎರಡು ಬೆಳೆಗಳನ್ನು ಬೆಳೆಸುವುದಕ್ಕೆ ದ್ವಿ ಬೆಳೆ ಪದ್ದತಿ ಎನ್ನುತ್ತಾರೆ. ಉದಾ : ಜೋಳ (ಮಳೆಗಾಲ)- ಕಡಲೆ (ಕಳಿಗಾಲ-ನೀರಾವರಿ)
- ಬೆಳೆ ಪದ್ಧತಿ : ಒಂದು ಭೂಮಿಯಲ್ಲಿ ಒಂದು ವರ್ಷದಲ್ಲಿ ಮೂರು ಬೆಳೆಗಳನ್ನು ಬೆಳೆಯುವುದೇ ತ್ರಿಬೆಳೆ ಪದ್ಧತಿ. ಉದಾ ಆಲೂಗಡ್ಡೆ-ಹೆಸರು ಕಾಳು -ಕಲ್ಲಂಗಡಿ
- ಬಹುಬೆಳೆ ಪದ್ಧತಿ : ಎರಡು ಅಥವಾ ಎರಡಕ್ಕಿಂತ ಹೆಚ್ಚು ಬೆಳೆಗಳನ್ನು ಒಂದೇ ಭೂಮಿಯಲ್ಲಿ ಒಂದು ವರ್ಷದಲ್ಲಿ ಆದರೆ ಬೇರೆ ಬೇರೆ ಸಾಲುಗಳಲ್ಲಿ ಬೆಳೆಯುವುದೇ ಬಹುಬೆಳೆ ಪದ್ಧತಿ ಎನ್ನುತ್ತಾ.ರೆ. ಉದಾ : ಜೋಳ - ಅಲಸಂದೆ- ತೊಗರಿ -ಬೆಂಡೆ.
- ಅಂತರ ಬೇಸಾಯ ಪದ್ಧತಿ : ಒಂದು ಬೆಳೆಯನ್ನು ಇನ್ನೊಂದು ಬೆಳೆಯ ಸಾಲುಗಳ ನಡುವಿನ ಅಂತÀರದಲ್ಲಿ ಬೆಳೆಯುವುದಕ್ಕೆ ಅಂತರ ಬೆಳೆ ಬೇಸಾಯ ಪದ್ಧತಿ ಎನ್ನುತ್ತೇವೆ. ಉದಾ : ಕಬ್ಬಿನ ಸಾಲುಗಳ ನಡುವೆ ಉದ್ದು ಅಥವಾ ಹೆಸರು ಕಾಳು / ಸೋಯಾ ಅವರೆ.
- ಕೂಳೇ ಬೆಳೆ ಪದ್ಧತಿ : ಮೊದಲ ಬೆಳೆಯ ಕೊಯ್ಲಿನ ನಂತರ, ಅದರ ಕೂಳೆಗಳಿಂದ ಬೆಳೆಯನ್ನು ಬೆಳೆಸುವುದಕ್ಕೆ ಕೂಳೆ ಬೆಳೆ ಪದ್ದತಿ ಎನ್ನುತ್ತಾರೆ. ಉದಾ : ಕಬ್ಬು, ಭತ್ತ
- ಮಿಶ್ರ ಬೆಳೆ : ಒಂದೇ ಭೂಮಿಯಲ್ಲಿ ಎರಡು ಅಥವಾ ಎರಡಕ್ಕಿಂತ ಹೆಚ್ಚು ಬೆಳೆಗಳನ್ನು ಒಂದೇ ಋತುವಿನಲ್ಲಿ ಬೆಳೆಯುವುದಕ್ಕೆ ಮಿಶ್ರಬೆಳೆ ಎನ್ನುತ್ತಾರೆ. ಉದಾ : ರಾಗಿ + ಜೋಳ + ತೊಗರಿ + ಹುರಳಿ + ಹುಚ್ಚೆಳ್ಳು ಮತ್ತು ಇತ್ಯಾದಿ (ನವಧಾನ್ಯಗಳು)
ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ,ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.
ಕೊನೆಯ ಮಾರ್ಪಾಟು : 1/28/2020
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.