• ಮಣ್ಣಿನಲ್ಲಿ ಪೋಷಕಾಂಶಗಳ ಕೊರತೆಯಿಂದ ನಿರೀಕ್ಷಿತ ಮಟ್ಟದ ಬೆಳೆ ಉತ್ಪಾದನೆ ಆಗುತ್ತಿಲ್ಲ.
• ಮುಖ್ಯವಾಗಿ ಸಾರಜನಕ, ರಂಜಕ, ಪೊಟಾಷ್, ಸುಣ್ಣ, ಗಂಧಕ, ಜಿಂಕ್, ಬೋರಾನ್ ಮತ್ತು ಕಬ್ಬಿಣದ ಕೊರತೆಯಿಂದ ಕೃಷಿ ಉತ್ಪಾದನೆಯಲ್ಲಿ ಇಳಿಮುಖ ಕಂಡು ಬಂದಿದೆ.
• ರೈತರು ಸಾಮಾನ್ಯವಾಗಿ ಸಾರಜನಕಯುಕ್ತ ರಸಗೊಬ್ಬರಗಳನ್ನು ಮಾತ್ರ ಕೊಡುತ್ತಾರೆ. ಆದರೆ ಬೆಳೆಗಳಿಗೆ ಸಮತೋಲನವಾದ ಗೊಬ್ಬರ ದೊರಕದೆ ಕುಂಠಿತ ಇಳುವರಿಗೆ ಕಾರಣವಾಗುತ್ತದೆ.
• ಹೆಚ್ಚಿನ ಸಂದರ್ಭಗಳಲ್ಲಿ ಬೆಳೆಗಳಿಗೆ ಉತ್ತಮ ಇಳುವರಿ ನೀಡಲು ಸಾಕಾಗುವಷ್ಟು ಪೋಷಕಾಂಶಗಳನ್ನು ಒದಗಿಸುವ ರಸಗೊಬ್ಬರಗಳನ್ನು ರೈತರು ನೀಡುವುದಿಲ್ಲ. ಇದರಿಂದ ಬೆಳೆಗಳ ಇಳುವರಿಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ.
• ಮಣ್ಣು ಪರೀಕ್ಷೆ ಮಾಡಿಸುವುದರಿಂದ ಮಣ್ಣಿನಲ್ಲಿ ಇರುವ ಪೋಷಕಾಂಶಗಳ ಪ್ರಮಾಣ ತಿಳಿಯುತ್ತದೆ. ಬೆಳೆಗಳಿಗೆ ಬೇಕಾದ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಹೊರಗಿನಿಂದ ಒದಗಿಸಲು ಮಣ್ಣು ಪರೀಕ್ಷೆ ಸಹಾಯಕವಾಗುತ್ತದೆ.
ಕೊನೆಯ ಮಾರ್ಪಾಟು : 2/15/2020