ಪ್ಯಾನ್ ಕಾರ್ಡ್ಗೆ ಅನ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದು
ಖಾಯಂ ಖಾತೆ ಸಂಖ್ಯೆ (ಪ್ಯಾನ್) ಕಾರ್ಡ್ ಒಂದು ಫೋಟೊ ಗುರುತಿನ ಕಾರ್ಡ್ ಆಗಿದೆ. ಇದು, ಪ್ರತಿ ಕಾರ್ಡ್ದಾರನಿಗೆ ಪ್ರತ್ಯೇಕವಾದ 10 ಅಕ್ಷರಾಂಕಗಳ ವಿಶಿಷ್ಟ ಸಂಖ್ಯೆಯನ್ನು ಹೊಂದಿರುತ್ತದೆ. ಈ ಕಾರ್ಡ್ ಅನ್ನು ವಾಣಿಜ್ಯ (ಭಾರತದ ಸರ್ಕಾರ) ಇಲಾಖೆಯಿಂದ ನೀಡಲಾಗುತ್ತದೆ. ಇದನ್ನು ಬ್ಯಾಂಕ್ ಖಾತೆ ತೆರೆಯಲು, ಪಾಸ್ಪೋರ್ಟ್ ಪಡೆಯಲು, ಇ-ಟಿಕೆಟ್ನೊಂದಿಗೆ ರೈಲಿನಲ್ಲಿ ಪ್ರಯಾಣಿಸಲು, ಇತ್ಯಾದಿಗಳಿಗೆ ಫೋಟೊ ಗುರುತಾಗಿ ಬಳಸಬಹುದು.
ಆನ್ ಲೈನ್ ನಲ್ಲಿ ಏನ್.ಆರ್.ಇ.ಜಿ.ಎಸ್ ಗೆ ಸಂಬಂಧಿಸಿದ ದೂರು ದಾಖಲಿಸಿ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂ .ಏನ್.ಆರ್.ಇ.ಜಿ.ಎಸ್)ಯನ್ನು ಗ್ರಾಮೀಣ ಅಭಿವೃದ್ಧಿ ಇಲಾಖೆಯ ಮೂಲಕ ರಾಜ್ಯ ಸರ್ಕಾರದ ಸಹಾಯದೊಂದಿಗೆ ದೇಶದಲ್ಲೆಡೆ ಜಾರಿಗೆ ತರಲಾಗಿದೆ. ಈ ಯೋಜನೆಯು ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬದ ನಿರುದ್ಯೋಗಿ ವ್ಯಕ್ತಿಗೆ ಅವರ ಮನೆಯಿಂದ 5 ಕಿ.ಮೀ ಸುತ್ತಮುತ್ತು ಆವರಣದ ಒಳಗೆ 100 ದಿನಗಳ ಉದ್ಯೋಗದ ಖಾತರಿಯನ್ನು ಒದಗಿಸುತ್ತದೆ .
ಯಾವುದೇ ವ್ಯಕ್ತಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ 2005ರಡಿಯಲ್ಲಿ ಕೆಲಸಕ್ಕಾಗಿ ಅರ್ಜಿಸಲ್ಲಿಸಿದ್ದು ,ಇದುವರೆಗೂ ಕೆಲಸದ ಕಾರ್ಡ್ ಪಡೆಯದೆ ಇದ್ದರೇ ಅಥವಾ ಸರಿಯಾಗಿ ಸಂಬಳ ಪಡೆಯದಿದ್ದರೆ ಅಥವಾ ಕಡಿಮೆ ಸಂಬಳ ದೊರೆಯುತ್ತಿದ್ದಲ್ಲಿ ಇತ್ಯಾದಿಗಳು, ಅಂತಹ ಸಂದರ್ಭದಲ್ಲಿ ಪರಿಹಾರಕ್ಕಾಗಿ ಆನ್ ಲೈನ್ ನಲ್ಲಿ ನೀವು ನಿಮ್ಮ ದೂರನ್ನು ನಿಮ್ಮ ರಾಜ್ಯದ ಸಂಬಂಧಪಟ್ಟ ಅಧಿಕಾರಿಗೆ ಸಲ್ಲಿಸಬಹುದು.
ಡಬ್ಲ್ಯೂ.ಎಂ.ಏನ್.ಆರ್.ಇ.ಜಿ.ಎಸ್ ದೂರನ್ನು ಯಾವಾಗ ದಾಖಲಿಸಬೇಕು?
ನೀವು ನಿಮ್ಮ ದೂರನ್ನು ಕೆಳಗಿನ ಸಂದರ್ಭಗಳಲ್ಲಿ ದಾಖಲಿಸಬಹುದು:
ನೋಂದಣಿ/ಕೆಲಸದ ಕಾರ್ಡ್
- ಗ್ರಾಮ ಪಂಚಾಯಿತಿ ಕೆಲಸದ ಕಾರ್ಡ್ ಗಾಗಿ ನೋಂದಣಿ ಮಾಡಿರದಿದ್ದಲ್ಲಿ
- ಗ್ರಾಮ ಪಂಚಾಯಿತಿ ಕೆಲಸದ ಕಾರ್ಡ್ ಅನ್ನು ನೀಡಿರದಿದ್ದಲ್ಲಿ
- ಕೆಲಸಗಾರರಿಗೆ ಕೆಲಸದ ಕಾರ್ಡ್ ನೀಡಿರದಿದ್ದಲ್ಲಿ
ಸಂಬಳ
- ಸಂಬಳ ಪಾವತಿಸಲು ವಿಳಂಬ
- ಅರ್ಧ ಸಂಬಳ
- ಸಂಬಳ ನೀಡದೆ ಇರುವುದು
- ಸರಿಯಾದ ವಿಧಾನ ಬಳಸದೆ ಇರುವುದು.
ಮಾಪನ
- ಸಮಯಕ್ಕೆ ಸರಿಯಾಗಿ ಮಾಪನ ಮಾಡದೇ ಇರುವುದು
- ಸರಿಯಿಲ್ಲದ ಮಾಪನ,
- ಮಾಪನಕ್ಕೆ ಇಂಜಿನಿಯರ್ ಗೈರು ಹಾಜರಿ
- ಮಾಪನ ಉಪಕರಣಗಳ ಅಲಭ್ಯತೆ.
ಕೆಲಸಕ್ಕಾಗಿ ಬೇಡಿಕೆ
- ಬೇಡಿಕೆಯನ್ನು ನೋಂದಣಿ ಮಾಡದೆ ಇರುವುದು,
- ದಿನಾಂಕ ಹೊಂದಿದ ರಸೀದಿ ನೀಡದೆ ಇರುವುದು
ಕೆಲಸದ ವಿತರಣೆ
- ಕೆಲಸದ ಅಲಭ್ಯತೆ
- 5 ಕೀ.ಮೀ ಒಳಗೆ ಕೆಲಸವನ್ನು ನಿಗದಿ ಪಡಿಸದೆ ಇರುವುದು
- 5 ಕೀ.ಮೀ ದೂರದ ಕೆಲಸದ ಸ್ಥಳಕ್ಕೆ TA/DAಯನ್ನು ನೀಡದೆ ಇರುವುದು
- ಸರಿಯಾದ ಸಮಯಕ್ಕೆ ಕೆಲಸವನ್ನು ವಿತರಣೆ ಮಾಡದೆ ಇರುವುದು
ಕೆಲಸದ ನಿರ್ವಹಣೆ
- ಕೆಲಸ ಸೃಷ್ಟಿಸದೆ ಇರುವುದು
- ಆರೋಗ್ಯ ಸೌಲಭ್ಯವನ್ನು ಒದಗಿಸದೆ ಇರುವುದು
- ನುರಿತ/ಅರೆನುರಿತ ಕೆಲಸಗಾರರಿಗೆ ಸಂಬಳ ನೀಡದೆ ಇರುವುದು
ನಿರುದ್ಯೋಗ ಭತ್ಯಗಳು
- ನಿರುದ್ಯೋಗ ಭತ್ಯೆಗಳು ಪಾವತಿಸದೆ ಇರುವುದು
- ಅರ್ಜಿಯನ್ನು ಸ್ವೀಕರಿಸದೆ ಇರುವುದು
ನಿಧಿ
- ನಿಧಿಯ ಅಲಭ್ಯತೆ
- ನಿಧಿ/ಹಣ ವರ್ಗಾವಣೆ ಆಗದೆ ಇರುವುದು
- ನಿಧಿ ರವಾನೆಯಲ್ಲಿರುವುದು
- ಕೂಲಿಯ ವರ್ಗಾವಣೆಗೆ ಬ್ಯಾಂಕ್ ಹಣವನ್ನು ವಿಧಿಸುವುದು
ಸಲಕರಣೆ
- ಸಾಮಾನುಗಳ ಅಲಭ್ಯತೆ
- ಬೆಲೆ ಏರಿಕೆ
- ಕಳಪೆ ಗುಣಮಟ್ಟದ ಸಾಮಾನು
ಯಾರು ದೂರನ್ನು ದಾಖಲಿಸಲು ಸಾಧ್ಯ?
- ಕೆಲಸಗಾರರು
- ಪ್ರಜೆಗಳು
- ಸರ್ಕಾರೇತರ ಸಂಸ್ಥೆಗಳು,
- ಮಾಧ್ಯಮ
- ವಿ ಐ ಪಿ
ದೂರು ಸಲ್ಲಿಸುವ ಪ್ರಕ್ರಿಯೆ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಸಂಬಂಧಿಸಿದ ದೂರುಗಳನ್ನು ಸಲ್ಲಿಸಲು, ದಯವಿಟ್ಟು ಈ ಕ್ರಮಗಳನ್ನು ಅನುಸರಿಸಿ:
- ಕ್ರಮ-1: ಎಂ ಏನ್ ಆರ್ ಇ ಜಿ ಎಸ್ ಗೆ ಸಂಬಂಧಿಸಿದ ದೂರುಗಳನ್ನು ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
- ಕ್ರಮ-2: ನಿಮ್ಮ ರಾಜ್ಯದ ಹೆಸರಿನ ಮೇಲೆ ಕ್ಲಿಕ್ ಮಾಡಿ
- ಕ್ರಮ-3: ಅರ್ಜಿ ಕಾಣಿಸಿ ಕೊಳ್ಳುತ್ತದೆ
- ಕ್ರಮ-4: ಮೊದಲು ನಿಮ್ಮ ಗುರುತನ್ನು ಆಯ್ಕೆ ಮಾಡಿ, ನೀವು- ಕೆಲಸಗಾರರು ಅಥವಾ ಪ್ರಜೆ ಅಥವಾ ಸರ್ಕಾರೇತರ ಸಂಸ್ಥೆಗಳು ಅಥವಾ ಮಾಧ್ಯಮ ಅಥವಾ ವಿ ಐ ಪಿ .
- ಕ್ರಮ-5: ನೀವು ಎಂ ಏನ್ ಆರ್ ಇ ಜಿ ಎಸ್ ಯಲ್ಲಿನ ಅಕ್ರಮಗಳ ಬಗ್ಗೆ ಮಾಹಿತಿ ಪಡೆದ ಮೂಲವನ್ನು ಆಯ್ಕೆ ಮಾಡಿ
- ಕ್ರಮ-6: ನೀಡಿದ ಸ್ಥಳದಲ್ಲಿ ಅಗತ್ಯವಾದ ಮಾಹಿತಿಯನ್ನು ನಮೂದಿಸಿ ಮತ್ತು "ದೂರು ಸಲ್ಲಿಸಿ" ಬಟನ್ ಮೇಲೆ ಒತ್ತಿ.
ಮೂಲ : ಆಪ್ನ ಸಿಯಸ್ಸಿ