ಹೆಸರು ಸೇರ್ಪಡೆಗೆ ಅರ್ಜಿ
- ಜನವರಿ 1,2010ಕ್ಕೆ 18 ವರ್ಷ ಭರ್ತಿಯಾದ ವ್ಯಕ್ತಿಯ ಹೆಸರಿನ ಸೇರ್ಪೆಡೆಗೆ ಅರ್ಜಿ ಸಲ್ಲಿಸಬಹುದು
- ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಫಾರಂ ಸಂಖ್ಯೆ-6ನ್ನು ಬಳಸಿ
- ಎರಡು ಕಲರ್ ಅಥವಾ ಕಪ್ಪು/ಬಿಳುಪು ಭಾವಚಿತ್ರವನ್ನು ಫಾರಂ-6ನೊಂದಿಗೆ ಲಗತ್ತಿಸಿ
- ಜನ್ಮ ಪ್ರಮಾಣ ಪತ್ರದ ಜೆರಾಕ್ಸ್ಪ್ರತಿಯನ್ನು ಸೇರಿಸಿ ( ನಗರ ಸಭೆಯಿಂದ ನೀಡಿದ ಜನ್ಮ ಪ್ರಮಾಣ ಪತ್ರ ಅಥವಾ ಮೆಟ್ರಿಕ್ಯುಲೇಶನ್ ದೃಢೀಕರಣ ಪತ್ರ ಅಥವಾ ಶಾಲೆ/ಕಾಲೇಜಿನಿಂದ ನೀಡಿದ ದೃಢೀಕರಣ ಪತ್ರ)
- ವಿಳಾಸ ಪುರಾವೆಯ ಜೆರಾಕ್ಸ್ ಪ್ರತಿಯನ್ನು ಲಗತ್ತಿಸಿ (ಬ್ಯಾಂಕ್/ಅಂಚೆ ಕಚೇರಿಯ ಪ್ರಸ್ತುತ ಪಾಸ್ ಬುಕ್, ಪಡಿತರ ಚೀಟಿ ಅಥವಾ ಡ್ರೈವಿಂಗ್ ಲೈಸೆನ್ಸ್/ ಆದಾಯ ತೆರಿಗೆ ನಿರ್ಧಾರಣ ಆದೇಶ ಅಥವಾ ಆ ವಿಳಾಸದ ಇತ್ತೀಚಿನ ನೀರು/ದೂರವಾಣಿ/ವಿದ್ಯುಚ್ಛಕ್ತಿ/ಗ್ಯಾಸ್ ಸಂಪರ್ಕದ ಬಿಲ್ (ಅರ್ಜಿದಾರ ಅಥವಾ ಆತ/ಆಕೆಯ ಹೆತ್ತವರ ವಿಳಾಸದಲ್ಲಿ ಇತ್ಯಾದಿ) ಅಥವಾ ಆ ವಿಳಾಸದ ಅರ್ಜಿದಾರ ಹೆಸರಿನಲ್ಲಿ ಅಂಚೆ ಇಲಾಖೆಯ ಸ್ವೀಕೃತ/ ಕಳುಹಿಸಿದ ಅಂಚೆಗಳು
ಹೆಸರು ತೆಗೆದು ಹಾಕಲು ಅರ್ಜಿ
- ಮತದಾರನು ಬೇರೆ ಮತದಾನ ಕ್ಷೇತ್ರಕ್ಕೆ ವರ್ಗಾವಣೆ ಆಗಿದ್ದರೆ ಅಥವಾ ಮರಣ ಹೊಂದಿದ್ದರೆ ಅಥವಾ ತಪ್ಪು ನಮೂದನೆ ಆಗಿದ್ದಲ್ಲಿ, ಆಗ ನೀವು ಅವರ ಹೆಸರನ್ನು ತೆಗೆದು ಹಾಕಲು ಅರ್ಜಿ ಸಲ್ಲಿಸಬೇಕು.
- ಈ ಉದ್ದೇಶಕ್ಕೆ ಫಾರಂ ಸಂಖ್ಯೆ-7 ಅನ್ನು ಬಳಸಬೇಕು.
ಹೆಸರು ಸರಿಪಡಿಸಲು ಅರ್ಜಿ
- ಮತದಾರರ ಪಟ್ಟಿಯಲ್ಲಿ ಅಥವಾ ನಿಮ್ಮ ಮತದಾರರ ಫೋಟೋ ಗುರುತು ಕಾರ್ಡ್ (EPIC) ನಲ್ಲಿ ತಪ್ಪು ಕಂಡು ಬಂದಲ್ಲಿ, ಆಗ ನೀವು ಅಗತ್ಯ ತಿದ್ದುಪಡಿಗೆ ಅರ್ಜಿ ಸಲ್ಲಿಸಬೇಕು.
- ತಪ್ಪು ನಮೂದನೆಯ ತಿದ್ದುಪಡಿಗೆ ಫಾರಂ ಸಂಖ್ಯೆ-8 ಅನ್ನು ಬಳಸ ಬೇಕು.
- ಜನ್ಮ ಪ್ರಮಾಣ ಪತ್ರದ ಜೆರಾಕ್ಸ್ಪ್ರತಿಯನ್ನು ಗುರುತು ಪುರಾವೆಯಾಗಿ ಸಲ್ಲಿಸಬೇಕು.
ಮತದಾರರ ಪಟ್ಟಿಗಳಲ್ಲಿ ನಮೂದನೆಯ ವರ್ಗಾವಣೆಗೆ ಅರ್ಜಿ
- ನಿಮ್ಮ ಮನೆ ಬೇರೆ ಮತ ಕ್ಷೇತ್ರಕ್ಕೆ ಬದಲಾಯಿಸಿದರೆ, ಆಗ ಮತದಾರರ ಪಟ್ಟಿಗಳಲ್ಲಿ ನಿಮ್ಮ ನಮೂದನೆಯನ್ನು ಆ ಪ್ರದೇಶಕ್ಕೆ ವರ್ಗಾಯಿಸಲು ಅರ್ಜಿಸಲ್ಲಿಸ ಬೇಕು.
- ಈ ಉದ್ದೇಶಕ್ಕೆ ಫಾರಂ ಸಂಖ್ಯೆ-9 ಅನ್ನು ಬಳಸಬೇಕು.
- ವಿಳಾಸ ಪುರಾವೆಯ ಜೆರಾಕ್ಸ್ ಪ್ರತಿಯನ್ನು ಲಗತ್ತಿಸಿ (ಬ್ಯಾಂಕ್/ಅಂಚೆ ಕಚೇರಿಯ ಪ್ರಸ್ತುತ ಪಾಸ್ ಬುಕ್, ಪಡಿತರ ಚೀಟಿ ಅಥವಾ ಡ್ರೈವಿಂಗ್ ಲೈಸೆನ್ಸ್/ ಆದಾಯ ತೆರಿಗೆ ನಿರ್ಧಾರಣ ಆದೇಶ ಅಥವಾ ಆ ವಿಳಾಸದ ಇತ್ತೀಚಿನ ನೀರು/ದೂರವಾಣಿ/ವಿದ್ಯುಚ್ಛಕ್ತಿ/ಗ್ಯಾಸ್ ಸಂಪರ್ಕದ ಬಿಲ್ಲು (ಅರ್ಜಿದಾರ ಅಥವಾ ಆತ/ಆಕೆಯ ಹೆತ್ತವರ ವಿಳಾಸದಲ್ಲಿ ಇತ್ಯಾದಿ) ಅಥವಾ ಆ ವಿಳಾಸದ ಅರ್ಜಿದಾರ ಹೆಸರಿನಲ್ಲಿ ಅಂಚೆ ಇಲಾಖೆಯ ಸ್ವೀಕೃತ/ ಕಳುಹಿಸಿದ ಅಂಚೆಗಳು.
ಅರ್ಜಿ
- ಫಾರಂ ನಂಬರ್- 6
- ಫಾರಂ ನಂಬರ್- 7
- ಫಾರಂ ನಂಬರ್- 8
- ಫಾರಂ ನಂಬರ್- 8 A
ಅರ್ಜಿಯನ್ನು ಎಲ್ಲಿ ಸಲ್ಲಿಸುವುದು
- ನೀವು ನಗರ ಸಭೆಯ ಪ್ರದೇಶದಲ್ಲಿ ವಾಸಿಸುತ್ತಿದ್ದರೆ, ನಿಮ್ಮ ಅರ್ಜಿಯನ್ನು ಕೆಳಕಂಡಲ್ಲಿ ಸಲ್ಲಿಸಿ:
- ಸಹಾಯಕ ಆಯುಕ್ತರು (ನಗರ ಪಾಲಿಕೆಯ ಕಚೇರಿ)
- ಅಂಚೆ ಕಚೇರಿಗಳು
- ವಾಣಿಜ್ಯ ಮಳಿಗೆಗಳ ಡ್ರಾಪ್ ಡೌನ್ ಪೆಟ್ಟಿಗೆಗಳು
ಪೆಟ್ರೋಲ್ ಬಂಕ್ಗಳು.
- ನೀವು ನಗರ ನಗರ ಸಭೆಯ ಪ್ರದೇಶವಲ್ಲದೆ ಬೇರೆ ಕಡೆ ವಾಸವಾಗಿದ್ದರೆ, ನಿಮ್ಮ ಅರ್ಜಿಯನ್ನು ನಿಮ್ಮ ಜಿಲ್ಲೆಯಲ್ಲಿ ಸಲ್ಲಿಸಿ:
- ಉಪ ಪರೀಕ್ಷಕ ಕಚೇರಿ.
- ರೆವಿನ್ಯೂ ಡಿವಿಶನಲ್ ಅಧಿಕಾರಿ ಕಚೇರಿ (ಮತದಾರ ನೋಂದಾವಣೆ ಅಧಿಕಾರಿ)
- ತಹಶೀಲ್ದಾರರ ಕಚೇರಿ (ಸಹಾಯಕ ಮತದಾರ ನೋಂದಾವಣೆ ಅಧಿಕಾರಿ)
ಮೂಲ : ಆಪ್ನ ಸಿಯಸ್ಸಿ
ಕೊನೆಯ ಮಾರ್ಪಾಟು : 12/31/2019
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.