ಮುಖ್ಯವಾಹಿನಿ ಶಾಲಾ ವ್ಯವಸ್ಥೆ ಅಥವಾ ರಾಜ್ಯ ಶಿಕ್ಷಣ ವ್ಯವಸ್ಥೆ ಎಂದು ಕರೆಯಲ್ಪಡುವ ಈ ವ್ಯವಸ್ಥೆಯು, ಒಂದು ಸಮುದಾಯವಾಗಿ ಮಕ್ಕಳ ಶಿಕ್ಷಣವನ್ನು ಪರಿಗಣಿಸಿ ಕಾರ್ಯ ನಿರ್ವಹಿಸುವಂತಹದ್ದಾಗಿದೆ. ಈ ವ್ಯವಸ್ಥೆಯ ಸಾರ್ವಜನಿಕ ಸ್ವರೂಪ, ಅಂದರೆ, ಭವಿಷ್ಯದಲ್ಲಿ ಸಾಮಾನ್ಯವಾಗಿ ಉದ್ಯೋಗದ ಮೂಲಕ ಮತ್ತು ಜೀವನಕ್ಕೆ ಸ್ಥಿರವೆಂದು ನಿರೂಪಿಸಲಾಗುವಂತಹ ಪರಿಸರದಲ್ಲಿ ವಿಭಿನ್ನ ಹಿನ್ನೆಲೆಯುಳ್ಳ, ವಿವಿಧ ಧರ್ಮದ ಮತ್ತು ವರ್ಗದ ಮಕ್ಕಳು ಸಹಜವಾಗಿ ಬೆರೆತು, ಕಲೆತು ಕೆಲಸ ಮಾಡುವುದನ್ನು ಮತ್ತು ಜೊತೆಯಾಗಿ ಕಲಿಕೆಯಲ್ಲಿ ತೊಡಗಿಕೊಳ್ಳುವುದನ್ನು ಕಲಿಸುವುದಾಗಿದೆ.
ಅಕ್ಷರಶಃ ವ್ಯಾಖ್ಯಾನಿಸುವುದಾದರೆ, ಯಾವುದೇ ಹೊಸ ತಂತ್ರ ಅಥವಾ ವಿಧಾನವನ್ನು ಬಳಸಿಕೊಳ್ಳುವಂತಹ ಯಾವುದೇ ರೂಪದ ಕಲಿಕಾ ನಿರ್ಧರಣೆಯನ್ನು ನವೀನ ಕಲಿಕಾ ನಿರ್ಧರಣೆ ಎನ್ನಬಹುದು. ಹೀಗಿದ್ದರೂ, ನವೀನ ಕಲಿಕಾ ನಿರ್ಧರಣೆ ಎನ್ನುವುದಕ್ಕೆ ಇನ್ನೂ ಹೆಚ್ಚಿನ ಅರ್ಥವಿದೆ. ಇದು, ಸಂಪೂರ್ಣವಾಗಿ ವಿಭಿನ್ನ ತಂತ್ರಗಳು ಮತ್ತು ವಿಧಾನಗಳನ್ನು ಒಳಗೊಂಡಿರುವಂತಹದಕ್ಕೆ ಬಳಸುವ ಪದವಾಗಿದ್ದು, ಈ ತಂತ್ರ ಮತ್ತು ವಿಧಾನಗಳಲ್ಲಿ ಕೆಲವು, ಹೊಸ ಆವಿಷ್ಕಾರವಲ್ಲದಿರಬಹುದು. ಅವುಗಳಿಗಿರುವ ಏಕರೂಪದ ಗುರಿ ಅವನ್ನೆಲ್ಲಾ ಒಗ್ಗೂಡಿಸುತ್ತದೆ. ಈ ಗುರಿ ಏನೆಂದರೆ, ವಿದ್ಯಾರ್ಥಿ ಕಲಿಕೆಯ ಗುಣಮಟ್ಟವನ್ನು ಉತ್ತಮಪಡಿಸುವುದು. ಇದು, ಕಲಿಕಾ ನಿರ್ಧರಣೆಯು ‘ವಿದ್ಯಾರ್ಥಿಗಳಿಗೆ ಮಾಡುವಂತಹದ್ದು’ ಮಾತ್ರವಾಗದೇ ‘ ವಿದ್ಯಾರ್ಥಿಜೊತೆಯಲ್ಲಿ ಮಾಡುವ’ ಮತ್ತು ‘ವಿದ್ಯಾರ್ಥಿಗಳೇ ಮಾಡುವಂತಹದ್ದು’ (ಹ್ಯಾರಿಸ್ ಮತ್ತು ಬೆಲ್, 1990) ಎಂದಾದಾಗ ಹೆರಾನ್‍ರವರು (1981) ಕರೆದಿರುವಂತಹ ವಿದ್ಯಾಬಲದ ಮರುವಿತರಣೆ’ ಎಂಬುದನ್ನು ಕುರಿತ ನವೀನ ಕಲಿಕಾ ನಿರ್ಧರಣೆ ಆಗುತ್ತದೆ. ರೌನ್‍ಟ್ರೀರವರು ವ್ಯಾಖ್ಯಾನಿಸಿರುವಂತೆ (1977), ವಿದ್ಯಾರ್ಥಿಗಳನ್ನು ಮತ್ತು ಅವರ ಕಲಿಕಾ ಗುಣಮಟ್ಟವನ್ನು ಅರಿತುಕೊಳ್ಳುವುದೆ ಕಲಿಕಾ ನಿರ್ಧರಣೆ.
ಕಲಿಕಾ ನಿರ್ಧರಣೆಯನ್ನು ಉತ್ತಮಪಡಿಸಲು ತೆಗೆದುಕೊಳ್ಳುವ ಯಾವುದೇ ಉಪಕ್ರಮಗಳು ಪ್ರಸ್ತುತ ಬಳಕೆಯಲ್ಲಿರುವ ಔಪಚಾರಿಕ ಕಲಿಕಾನಿರ್ಧರಣೆಯನ್ನು ಪರಿಗಣಿಸಲೇ ಬೇಕಾಗುತ್ತದೆ. ಒಟ್ಟಾರೆಯಾಗಿ, ಕಲಿಕಾನಿರ್ಧರಣೆಯ ವ್ಯವಸ್ಥೆಯಲ್ಲಿನ ಯಾವುದೇ ಬದಲಾವಣೆಯು ಶೈಕ್ಷಣಿಕ ರೂಪಾಂತರದ ವ್ಯಾಪಕವಾದ ಕಾರ್ಯಸೂಚಿಯನ್ನು ಪರಿಗಣಿಸಿ, ಪ್ರಮುಖ ಭಾಗಿಗಳ, ವಿಶೇಷವಾಗಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಕರ ಬೆಂಬಲವನ್ನು ಹೊಂದಬೇಕಾಗುತ್ತದೆ.ಈ ನವೀನ ಕಾರ್ಯದ ಕಾರ್ಯಾಚರಣೆಯು ಪರಿಣಾಮಕಾರಿ ಆಗಬೇಕಾದರೆ ಶಿಕ್ಷಣದ ಇನ್ನಿತರ ಅಂಗಗಳೊಂದಿಗೆ ಅಂದರೆ ಪಠ್ಯಕ್ರಮ ಮತ್ತು ಬೋಧನೆಗಳೊಂದಿಗೆ ಇದು ಯಾವ ರೀತಿ ಪರಿಣಾಮಕಾರಿಯಾಗಿ ವರ್ತಿಸುತ್ತದೆ ಎಂಬುದರ ಮೇಲೆ ಅವಲಂಬಿಸುವದಲ್ಲದೇ ಶೈಕ್ಷಣಿಕ ವ್ಯವಸ್ಥೆಯೊಳಗಿನ ವಿವಿಧ ವಿಭಾಗಗಳು (ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ) ಮತ್ತು ರಚನೆಗಳು ಒಂದರೊಡನೆ ಇನ್ನೊಂದು ಎಷ್ಟು ಉತ್ತಮವಾಗಿ ವರ್ತಿಸುತ್ತವೆ ಎನ್ನುವುದನ್ನೂ ಅವಲಂಬಿಸಿರುತ್ತದೆ. ಒಂದು ಆದರ್ಶ ಸನ್ನಿವೇಶದಲ್ಲಿ, ಕಲಿಕಾ ನಿರ್ಧರಣಾ ವ್ಯವಸ್ಥೆಯ ಎಲ್ಲ ಘಟಕಗಳು ಆಶಿತ ಫಲಿತಾಂಶಗಳನ್ನು ಹೊರತರಲು ಕರಾರುವಾಕ್ಕಾಗಿ ವರ್ತಿಸುತ್ತವೆ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ. ಆದರೆ, ಆಚರಣೆಯಲ್ಲಿ ಇದನ್ನು ಸಾಧಿಸುವುದು ಕಷ್ಟ.
ತಾತ್ವಿಕವಾಗಿ, ನವೀನ ಕಲಿಕಾನಿರ್ಧರಣೆಗಳು ಎಲ್ಲಾ ವಿದ್ಯಾರ್ಥಿಗಳಿಗೂ “ಸಮಾನ ಸ್ಫರ್ಧಾವಕಾಶವನ್ನು” ಒದಗಿಸುವ ಗುರಿಯನ್ನು ಹೊಂದಿರಬಹುದು. ಆದರೆ ವಾಸ್ತವವಾಗಿ, ‘ಕಲಿಕೆಯ ಅವಕಾಶಗಳಲ್ಲಿನ’ ವಿಭಿನ್ನತೆ ಅಂದರೆ ಎಲ್ಲಾ ವಿದ್ಯಾರ್ಥಿಗಳ ಒಂದೇ ರೀತಿ ಸಿದ್ಧವಾಗಿಲ್ಲದಿರುವುದು ಮತ್ತು ಇದೇ ಅಸಮತೆಯು ಸಾಮಾನ್ಯವಾಗಿ ಫಲಿತಾಂಶಗಳಲ್ಲೂ ಪ್ರತಿಬಿಂಬಿತವಾಗುತ್ತದೆ. “ ಪ್ರಾಥಮಿಕ ವರ್ಗದಲ್ಲಿ “ಉತ್ತೀರ್ಣ ಮತ್ತು ಅನುತ್ತೀರ್ಣ” ಎರಡೂ ಇರದ ವ್ಯವಸ್ಥೆಯಲ್ಲಿ ವಿಭಿನ್ನ ಸಾಮಥ್ರ್ಯವಿರುವ ಮಕ್ಕಳು ಮುಂದುವರೆದು ಉನ್ನತ ಪ್ರಾಥಮಿಕ ವರ್ಗಕ್ಕೆ ವಿದ್ಯಾಭ್ಯಾಸಕ್ಕೆ ಬರುತ್ತಾರೆ. ಈ ಗುಂಪಿನಲ್ಲಿನ ಮಕ್ಕಳು ಹಾಗೆ ಬಂದಾಗ ಅವರ ಕಲಿಕಾ ಮಟ್ಟ ಎಂಥದ್ದು ಎನ್ನುವುದು ತಿಳಿದಿಲ್ಲದಿರುವುದರಿಂದ ಈ ಗುಂಪಿನೊಂದಿಗೆ ನವೀನ ಕಲಿಕಾನಿರ್ಧರಣೆಯನ್ನು ಪ್ರಯತ್ನಿಸುವುದು ಒಂದು ದೊಡ್ಡ ಸವಾಲು.” ಎಂದು ಮಾಧ್ಯಮಿಕ ಶಾಲಾ ಶಿಕ್ಷಕಿಯಾದ ಶ್ರೀಮತಿ ಸ್ರಾಬೊನಿ ಮುಖೋಪಾಧ್ಯಾಯ ಅವರು ಹೇಳುತ್ತಾರೆ.
ಬಹು ಭಾಷಾ ಸಮುದಾಯಗಳನ್ನು ಹೊಂದಿರುವ ನಮ್ಮ ದೇಶದಲ್ಲಿ, ಎಲ್ಲಾ ವಿದ್ಯಾರ್ಥಿಗಳ ಅಗತ್ಯತೆಯನ್ನು ಸಮರ್ಪಕವಾಗಿ ಪೂರೈಸಲು ಹೆಚ್ಚಿನ ಸಂಪನ್ಮೂಲವು ಬೇಕಾಗುತ್ತದೆ. ಯಾವುದೇ ಗುಂಪಿನ ಬಗ್ಗೆ ಪೂರ್ವಾಗ್ರಹವನ್ನು ಹೊಂದದೇ ಎಲ್ಲಾ ಸಾಧನಗಳನ್ನೂ ಒಂದು ಅಥವಾ ಹೆಚ್ಚಿನ ಭಾಷೆಗಳಿಗೆ ಭಾಷಾಂತರ ಮಾಡಬೇಕಾಗುತ್ತದೆ, ಹೆಚ್ಚಿನ ವಿಶ್ಲೇಷಣೆಗಳು ಬೇಕಾಗುತ್ತದೆ ಮತ್ತು ವರದಿಗಳನ್ನು ಬಹು ಭಾಷೆಗಳಲ್ಲಿ ಪ್ರಕಟಿಸಬೇಕಾಗುತ್ತದೆ. ಆಚರಣೆಯಲ್ಲಿ, ಏಕ ಭಾಷಾ ಬಳಕೆಗೆ ಪರ್ಯಾಯವಿಲ್ಲದಿರಬಹುದು ಆದರೆ ಪರೀಕ್ಷಿಸುವುದರಲ್ಲಿನ ಕೆಲವು ತೊಡಕುಗಳನ್ನು ನಿವಾರಿಸಲು ಮಾರ್ಗಗಳಿವೆ. (ಹೆನ್ಮನ್ ಮತ್ತು ರಾನ್ಸಮ್, 1990 ನೋಡಿ).
ಹೆಚ್ಚಿನ ನವೀನ ಉಪಕ್ರಮಗಳು “ಅನುಷ್ಠಾನದಲ್ಲಿ ಕುಸಿತವನ್ನು” ಅನುಭವಿಸುತ್ತವೆ – ಅಂದರೆ, ವಿದ್ಯಾರ್ಥಿ ನಿರ್ವಹಣೆಯು ಉತ್ತಮಗೊಳ್ಳುವುದಕ್ಕೆ ಮುಂಚೆ ಕಳಪೆಯಾಗುತ್ತದೆ. ವಿದ್ಯಾರ್ಥಿಗಳ ಸಾಧನೆಯಲ್ಲಿನ ಸುಧಾರಣೆಯು ಪ್ರಾಥಮಿಕ ಶಾಲೆಗಳಲ್ಲಿ ಐದು ವರ್ಷಗಳಷ್ಟು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳಬಹುದಾದರೆ, ಮಾಧ್ಯಮಿಕ ಶಾಲೆಗಳಲ್ಲಿ, ಇನ್ನೂ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳಬಹುದು (ಫುಲ್ಲನ್, 2001). ನವೀನ ಕಲಿಕಾನಿರ್ಧರಣೆಯನ್ನು ಬಳಸುತ್ತಿರುವ ಶಿಕ್ಷಕರಿಗೆ ತಮ್ಮ ಅಭ್ಯಾಸಗಳನ್ನು ಎಲ್ಲಿ ಮತ್ತು ಹೇಗೆ ಸರಿಹೊಂದಿಸಿಕೊಳ್ಳಬೇಕು ಎನ್ನುವಲ್ಲಿ ಹೆಚ್ಚಿನ ನೆರವು ಬೇಕಾಗುತ್ತದೆ.
ಶಾಲೆಗಳಲ್ಲಿನ ಕಲಿಕಾನಿರ್ಧರಣೆಯ ವಿನ್ಯಾಸವು ತರಗತಿಯ ಮಟ್ಟವನ್ನು ಆಧರಿಸಿರುವುದಾದರೆ; ಪ್ರತಿ ತರಗತಿಯ ಮಟ್ಟವೂ ತನ್ನ ಕಲಿಕಾನಿರ್ಧರಣೆಗಳಲ್ಲಿ ವಿಭಿನ್ನ ವಿಧಾನಗಳನ್ನು ಹೊಂದಿರಬೇಕಾಗುತ್ತದೆ. ಪ್ರಾಥಮಿಕ ಶಾಲಾ ನಾಲ್ಕನೆಯ ತರಗತಿಯಲ್ಲಿ ಒಂದು ವಿಷಯವನ್ನು ಬೋಧಿಸುವ ಶಿಕ್ಷಕರಿಗೆ, ಪ್ರಾಥಮಿಕ ಶಾಲಾ ತರಗತಿ ಎರಡರಲ್ಲಿ ಏನಾಗುತ್ತಿದೆ ಎನ್ನುವುದು ತಿಳಿದಿರಲಾರದು. ಹೀಗಾಗಿ, ತರಗತಿಯ ವಿಭಿನ್ನ ತರಗತಿಗಳಲ್ಲಿ ಬೋಧಿಸುವ ಶಿಕ್ಷಕರ ನಡುವೆ ಸಮನ್ವಯವಿರುವುದು ಪ್ರಮುಖ ಮತ್ತು ಅವಶ್ಯಕ. ಒಬ್ಬ ಶಿಕ್ಷಕಿಯಾದ ಅಲೋಕ ಮಾಥುರ್ ಹೇಳುತ್ತಾರೆ, ‘ನವೀನ ಕಲಿಕಾನಿರ್ಧರಣೆಗಳಿಗೆ ಸ್ವಾಗತವಿದೆ, ಆದರೆ ತರಗತಿಯಲ್ಲಿರುವ ಹೆಚ್ಚಿನ ವಿದ್ಯಾರ್ಥಿ ಸಂಖ್ಯೆಯೊಡನೆ ಹೊಂದಿಸಿಕೊಳ್ಳುವುದು ಹೇಗೆ? ಮುಖ್ಯವಾಹಿನಿಯಲ್ಲಿನ ಶಾಲೆಗಳಲ್ಲಿರುವ ಪ್ರಸ್ತುತ ಶಿಕ್ಷಕ-ವಿದ್ಯಾರ್ಥಿ ಅನುಪಾತವು ಪರಿಣಾಮಕಾರಿ ಅನುಷ್ಠಾನಕ್ಕೆ ಒಂದು ದೊಡ್ಡ ಅಡಚಣೆಯಾಗಿದೆ. ಶಿಕ್ಷಕರು ಅತ್ಯಂತ ಹೆಚ್ಚಿನ ಕಾರ್ಯಭಾರಕ್ಕೆ ಮತ್ತು ವಿವಿಧ ನಮೂನೆಗಳಲ್ಲ್ಲಿ ಮಾಹಿತಿಗಳ ನಿರ್ವಹಣೆಯನ್ನು ಮಾಡಲು ತಮ್ಮನ್ನು ತಾವೇ ಸಿದ್ಧಪಡಿಸಿಕೊಳ್ಳಬೇಕು. ಪ್ರಾಥಮಿಕ ಹಂತದಲ್ಲಿ ಬೋಧಿಸಲಾಗುವ ವಿಷಯವನ್ನು ಶಿಕ್ಷಕರಿಗೇ ಮುಕ್ತವಾಗಿ ಬಿಟ್ಟಿರುವುದರಿಂದಾಗಿ ನವೀನ ಗುಣಮಟ್ಟದ ಪರೀಕ್ಷೆಗಳು ಕರಾರುವಾಕ್ಕಾದ ಹಿಮ್ಮಾಹಿತಿಯನ್ನು ನೀಡದೇ ಇರಬಹುದು. ಒಂದೇ ತರಗತಿಯ ವಿವಿಧ ವಿಭಾಗಗಳಲ್ಲಿಯೂ ಹೆಚ್ಚಿನ ವಿಭಿನ್ನತೆಯು ಇರುತ್ತದೆ, ಹೀಗಾಗಿ ಮಾನಕಗೊಳಿಸಿದ ಪರೀಕ್ಷೆಗಳು ಕರಾರುವಾಕ್ಕಾದ ಚಿತ್ರಣವನ್ನು ನೀಡಲು ಸಾಧ್ಯವಿಲ್ಲ.” ಪ್ರತಿಯೊಬ್ಬ ಶಿಕ್ಷಕರೂ ಒಂದೇ ವಿದ್ಯಾರ್ಥಿಯನ್ನು ತಮ್ಮದೇ ಪೂರ್ವಗ್ರಹಿಕೆಗೆ ಅನುಗುಣವಾಗಿ ಅಳೆದು ಅಂಕ ಮತ್ತು ಶ್ರೇಣಿಯನ್ನು ನೀಡಬಹುದು. ಹೀಗಾಗಿ, ಶಿಕ್ಷಕರೆಲ್ಲರೂ ಜೊತೆಯಾಗಿ ಕುಳಿತು ಅಂಕ ನೀಡಿಕೆ ಮತ್ತು ಶ್ರೇಣೀಕರಣಕ್ಕೆ ತಮಗೆ ಬೇಕಾಗಿರುವ ಅಂಶಗಳನ್ನು ಚರ್ಚಿಸಿ ಒಂದು ನಿರ್ಣಯಕ್ಕೆ ಬಂದು ವಿದ್ಯಾರ್ಥಿಗಳ ಕಲಿಕಾನಿರ್ಧರಣೆಯನ್ನು ಮಾಡಬೇಕಾಗುತ್ತದೆ.
ಅರ್ಹ ಮತ್ತು ಅನುಭವಿ ಶಿಕ್ಷಕರ ಕೊರತೆ, ಮತ್ತು ಶಿಕ್ಷಕ ಪಡೆಗೆ ಇರುವ ಕೆಳಮಟ್ಟದ ಆತ್ಮಸ್ಥೈರ್ಯ ಮತ್ತು ಪ್ರೇರಣೆಯನ್ನೂ ನವೀನ ವ್ಯವಸ್ಥೆಯು ಎದುರಿಸುವ ಪ್ರಮುಖವಾದ ಅಡೆತಡೆ ಎಂದು ಹೇಳಬಹುದಾಗಿದೆ. ಶಿಕ್ಷಕ ಅಭಿವೃದ್ಧಿ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಾಗ ಮಾತ್ರ ನವೀನ ಉಪಕ್ರಮಗಳು ಯಶಸ್ವಿಯಾಗುತ್ತವೆ.” ಎಂದು ಒಬ್ಬ ಕಾರ್ಯನಿರತ ಶಿಕ್ಷಕಿಯಾದ ಸ್ರಾಬೊನಿ ಮುಖೋಪಾಧ್ಯಾಯ ಹೇಳುತ್ತಾರೆ. “ಕಲಿಕಾ ವೇಗ ಮತ್ತು ವಿಭಿನ್ನ ಹಿನ್ನಲೆಯುಳ್ಳ ವಿದ್ಯಾರ್ಥಿಗಳನ್ನು ಹೊಂದಿರುವ ಸಮ್ಮಿಲಿತ ವಿದ್ಯಾಭ್ಯಾಸ ವ್ಯವಸ್ಥೆಯಲ್ಲಿ ನಾವೀನ್ಯತೆಯು ಕಷ್ಟಕರವಾದ್ದು ಮತ್ತು ನವೀನತೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದು ಶಿಕ್ಷಕರಿಗೆ ಒಂದು ದೊಡ್ಡ ಸವಾಲು”. ಇಂತಹ ತರಬೇತಿ ಕಾರ್ಯಕ್ರಮದ ಪ್ರಮುಖ ಉದ್ದೇಶವು ತರಗತಿಗಳಲ್ಲಿ ಮತ್ತು ಪರೀಕ್ಷಾ ಉದ್ದೇಶಗಳಿಗೆ ಸೂಕ್ತವಾದ ಕಲಿಕಾನಿರ್ಧರಣೆಯನ್ನು ಬಳಸುವುದಾಗಿರಬೇಕು. ಹೆಚ್ಚಿನ ಸಮಯ, ಹೊಸ ಶೈಕ್ಷಣಿಕ ವರ್ಷದಲ್ಲಿ ಹೊಸದಾಗಿ ಶಿಕ್ಷಕರು ಶಾಲೆಗೆ ಸೇರುತ್ತಾರೆ, ಇದರಲ್ಲಿ ಹಲವರಿಗೆ ಕಲಿಕಾ ನಿರ್ಧರಣೆಯಲ್ಲಿ ನವೀನ ತಂತ್ರಗಳಲ್ಲಿನ ವೃತ್ತಿಪರ ಜ್ಞಾನ ಮತ್ತು ಕೌಶಲವು ಇಲ್ಲದಿರಬಹುದು. ಇಂತಹ ಶಿಕ್ಷಕರಿಗೆ ಸೂಕ್ತವಾದ ವಿಷಯ ಜ್ಞಾನ ಮತ್ತು ಅಭ್ಯಾಸಗಳನ್ನು ಬೆಳಸಿಕೊಳ್ಳುವುದಕ್ಕೆ ಶಾಲೆಯು ಸಾಕಷ್ಟು ಸಮಯವನ್ನು ನೀಡಬೇಕು.
ಕಂಪ್ಯೂಟರ್‍ಗಳು, ಮಲ್ಟೀಮೀಡಿಯಾ ಮತ್ತು ಬ್ರಾಡ್‍ಬ್ಯಾಂಡ್ ಸಂವಹನ ಸಂಪರ್ಕಜಾಲಗಳ ಬಳಕೆಯು ಕಲಿಕಾನಿರ್ಧರಣೆಯ ಮೇಲೆ ಪ್ರಮುಖವಾದ ಪರಿಣಾಮವನ್ನು ಬೀರುತ್ತದೆ ಎನ್ನುವುದರ ಬಗ್ಗೆ ಒಮ್ಮತವಿದೆ. ಅಗತ್ಯವಿರುವ ಮೂಲಭೂತ ಸೌಕರ್ಯವನ್ನು ಗಮನಿಸಿದಾಗ ತಂತ್ರಜ್ಞಾನ ಆಧರಿತ ಪರೀಕ್ಷೆಯ ದೃಷ್ಟಿಯು ಇನ್ನೂ ದೂರವಾಗಿಯೇ ಉಳಿದಿರುವಂತೆ ತೋರುತ್ತದೆ. ಅಗತ್ಯವಿರುವ ಪರಿಣಿತಿಯ ಲಭ್ಯತೆಯು ಕಡಿಮೆ ಇರುವಲ್ಲಿ ಮತ್ತು ಇಲ್ಲದೇ ಇರುವಲ್ಲಿ ತಂತ್ರಜ್ಞಾನದ ಅವಶ್ಯಕತೆಯು ಒಂದು ತೊಡಕಾಗಿರಬಹುದು. ಇದರೊಟ್ಟಿಗೆ, ವಿದ್ಯಾರ್ಥಿಗಳಿಗೆ ಗರಿಷ್ಠ ಲಾಭ ದೊರಕುವಂತೆ ನೋಡಿಕೊಳ್ಳುವುದಕ್ಕಾಗಿ ಕಲಿಕಾನಿರ್ಧರಣೆಯ ಸಾಧನಗಳು ಮತ್ತು ಮಾಹಿತಿಗಳನ್ನು ಶಿಕ್ಷಕರಿಗೆ ದೊರಕಿಸಬೇಕು. ಕಲಿಕಾ ನಿರ್ಧರಣೆಗೆ ಸಂಬಂಧಿಸಿದ ತಂತ್ರಜ್ಞಾನಗಳ ಅತ್ಯಾಧುನಿಕ ಲಿಖಿತ ಮತ್ತು ಗಣಕೀಕೃತ ಬಳಕೆ, ಹಾಗೂ ವ್ಯವಸ್ಥೆಯ ಯಶಸ್ವೀ ರೂಪಾಂತರದ ನಡುವಿನ ಸಮತೋಲನದ ಸಾಧನೆಯು ಒಂದು ಪ್ರಮುಖ ವಿಷಯವಾಗಿದೆ. ಇದಕ್ಕೆ ಕಾರಣಗಳೆಂದರೆ, ಶಾಲೆಗಳಲ್ಲಿ ತಂತ್ರಜ್ಞಾನವನ್ನು ಪರಿಚಯಿಸುತ್ತಿರುವ ವೇಗ, ತಂತ್ರಜ್ಞಾನದ ಸಂಪನ್ಮೂಲಗಳ ಸಂಘಟನೆ (ಉದಾಹರಣೆಗೆ, ಕಂಪ್ಯೂಟರ್ ಪ್ರಯೋಗಾಲಯಗಳು), ಕಳಪೆ ತಾಂತ್ರಿಕ ಬೆಂಬಲ ಮತ್ತು ಸೂಕ್ತವಾದ ಶಿಕ್ಷಕರ ವೃತ್ತಿಪರ ಬೆಳವಣಿಗೆಯ ಕೊರತೆಗಳು.
ಹೆಚ್ಚಿನ ಹೊಣೆಗಾರಿಕೆಯನ್ನು ಬೇಡುವ ಪರೀಕ್ಷೆಗಳು ಪಠ್ಯಕ್ರಮದ ಸಂಕುಚಿತಗೊಳಿಸುವಿಕೆ ಮತ್ತು ಪರೀಕ್ಷಾ ತಯಾರಿಯ ಮೇಲೆ ಅನಾವಶ್ಯಕವಾದ ಹೆಚ್ಚಿನ ಒತ್ತನ್ನು ನೀಡುವಂತಹ ಪರಿಣಾಮಗಳಿಗೆ ಎಡೆ ಮಾಡಿಕೊಡಬಹುದು. ವಿದ್ಯಾರ್ಥಿ ಸಮುದಾಯವು ಗುರಿಗೆ ಸಂಬಂಧಿಸಿದಂತೆ ವಿಭಿನ್ನವಾಗಿದ್ದಾಗ ಇದು ಹೆಚ್ಚು ಹಾನಿಕರವಾದದ್ದು. ನವೀನ ಕಲಿಕಾನಿರ್ಧರಣೆ ಮತ್ತು ಶೈಕ್ಷಣಿಕ ವ್ಯವಸ್ಥೆಗಳೆರಡೂ ಪರಿಣಾಮಕಾರಿಯಾಗಿ ಕಾರ್ಯವೆಸಗುತ್ತಿದ್ದರೂ, ಅನಪೇಕ್ಷಿತ ಮತ್ತು ಶೈಕ್ಷಣಿಕವಾಗಿ ಸಂಪೂರ್ಣವಾಗಿ ಸೂಕ್ತವಲ್ಲದ ಪರಿಣಾಮಗಳಿಗೆ ಕಾರಣವಾಗಬಹುದು. ಉದಾಹರಣೆಗೆ, ಕಲಿಕೆಯ ಕನಿಷ್ಠ ಮಟ್ಟವನ್ನು ಅನುಷ್ಠಾನಗೊಳಿಸುವ ಒಂದು ಪ್ರಯತ್ನವನ್ನು ಸೂಕ್ತವಾದ ಒಂದು ದೊಡ್ಡ ಮಟ್ಟದ ಶಿಕ್ಷಕರ ತರಬೇತಿ ಕಾರ್ಯಕ್ರಮದೊಂದಿಗೆ ಜೊತೆಗೂಡಿಸುವುದು. ಹೀಗಿದ್ದಾಗ್ಯೂ, ಶಿಕ್ಷಕರು ಪರೀಕ್ಷೆಗಾಗಿಯೇ ಬೋಧಿಸುವುದನ್ನು ಸಂಶೋಧಕರು ಐದು ವರ್ಷದ ಒಳಗೆ ಕಂಡುಕೊಂಡರು (ಗೋವಿಂದ, 1998). ಕಾರ್ಯಕ್ರಮದ ಒಟ್ಟಾರೆ ಪರಿಣಾಮವು ಕಂಠಪಾಠ ಕಲಿಕೆ ಮತ್ತು ‘ವರ್ಗಾಯಿಸುವಿಕೆಯ’ ಬೋಧನಾ ವಿಧಾನಗಳನ್ನು ಹೆಚ್ಚಿಸಿದ್ದರಿಂದ ಹೆಚ್ಚಿನ ದುಷ್ಪರಿಣಾಮಗಳು ಉಂಟಾದವೆಂದು ಮತ್ತು ಇವು ಶಾಲಾನಂತರದಲ್ಲಿ ಪರೀಕ್ಷೆಗಾಗಿ ಮಕ್ಕಳಿಗೆ ತಯಾರಿ ನಡೆಸುವ ಉದ್ಯೊಗಿ ವರ್ಗವನ್ನು ಸೃಷ್ಟಿಸಲು ಸಹಾಯಕವಾಯಿತು ಮತ್ತು ಇದು ಬಡತನದ ಹಿನ್ನೆ¯ಯುಳ್ಳ ವಿದ್ಯಾರ್ಥಿಗಳ ಬಗ್ಗೆ ತಾರತಮ್ಯವನ್ನು ಹೆಚ್ಚಲು ಕಾರಣವಾಯಿತು ಎಂದು ಗೋವಿಂದ ಅವರು (1998) ಗುರುತಿಸುತ್ತಾರೆ.
“ನಾವೀನ್ಯತೆ ಅಥವಾ ಯಾವುದೇ ಹೊಸ ಆಲೋಚನೆಯನ್ನು ಥಟ್ಟನೆ ಯಾರೂ ಒಪ್ಪಿಕೊಳ್ಳುವುದಿಲ್ಲ. ಒಂದು ಸಂಸ್ಥೆಯು ಯಾವುದೇ ನವೀನ ಉಪಕ್ರಮವನ್ನು ಒಪ್ಪಿಕೊಂಡು ಅಂತರ್ಗತಗೊಳಿಸಿಕೊಳ್ಳುವ ಮೊದಲು, ಪದೇ-ಪದೇ ಪ್ರಯತ್ನ ಮಾಡಬೇಕಾಗುತ್ತದೆ, ಕೊನೆಯಿಲ್ಲದ ಪ್ರದರ್ಶನಗಳು ಮತ್ತು ಪದೇಪದೇ ಅಭ್ಯಾಸಗಳನ್ನು ಮಾಡಬೇಕಾಗುತ್ತದೆ. ಇದಕ್ಕೆ ಸ್ಥೈರ್ಯ ಮತ್ತು ಧೈರ್ಯದೊಂದಿಗೆ ತಾಳ್ಮೆಯ ಅಗತ್ಯವಿದೆ.” – ವಾರೆನ್ ಬೆನ್ನಿಸ್. ನೋಹಾ ಮತ್ತು ಎಕ್‍ಸ್ಟೈನ್‍ರವರು (1192ಎ) ಗುರುತಿಸಿ ಹೇಳಿರುವಂತೆ, ಪರೀಕ್ಷೆಗಳಲ್ಲಿನ ಬದಲಾವಣೆಗಳನ್ನು ಶಿಕ್ಷಣ ಮತ್ತು ಸಮಾಜದಲ್ಲಿನ ಬದಲಾವಣೆಗೆ, ಪಠ್ಯಕ್ರಮದ ಸುಧಾರಣೆಗೆ, ವ್ಯವಸ್ಥೆಯ ಮೇಲಿನ ಪರಿಣಾಮಕಾರಿ ನಿಯಂತ್ರಣವನ್ನು ದೂರವಾಗಿಸಲು ಅಥವಾ ಕೇಂದ್ರದೆಡೆಗೆ ಒಯ್ಯಲು ಹಾಗೂ ನಿರ್ದಿಷ್ಟವಾದ ರಾಜಕೀಯ ಗುರಿಗಳನ್ನು ಸಾಧಿಸಲು ಬಳಸಿಕೊಳ್ಳಲಾಗುತ್ತಿದೆ.
ನವೀನ ಕಲಿಕಾ ನಿರ್ಧರಣೆಯನ್ನು ಸ್ವ-ವಿಮರ್ಶೆಯನ್ನೂ ಒಳಗೊಂಡಂತೆ, ವಿಮರ್ಶಾತ್ಮಕ ಚಿಂತನೆಯನ್ನು ಬೆಳಸಿಕೊಳ್ಳಲು ವಿನ್ಯಾಸ ಮಾಡಲಾಗಿದೆ. ನವೀನ ಕಲಿಕಾನಿರ್ಧರಣೆಯ ತಂತ್ರಗಳು ಸಮಸ್ಯೆಯಿಂದ ಹೊರತಾಗಿರುವುದೇನೂ ಅಲ್ಲ ಮತ್ತು ಅವುಗಳು “ಪ್ರಸಿದ್ಧ ವೈಫಲ್ಯ” ಎಂಬ ಹಣೆಪಟ್ಟಿಯನ್ನು ತಪ್ಪಿಸಿಕೊಳ್ಳಲು, ಅವುಗಳನ್ನು ಖಂಡಿತವಾಗಿಯೂ ಬಹಳ ಎಚ್ಚರಿಕೆಯಿಂದ ಜಾರಿಗೆ ತರಬೇಕಾದ ಅಗತ್ಯವಿದೆ. ಆದರೂ, ನಾವು ಕಲಿಕಾನಿರ್ಧರಣೆಯನ್ನು ಮಾಡುವ ವಿಧಾನದಲ್ಲಿ ಬದಲಾವಣೆಗಳನ್ನು ತರಬೇಕಾದ ಅಗತ್ಯತೆ ಸಂಭಾವ್ಯ ಸಮಸ್ಯೆಗಳಿಗಿಂತ ಮಿಗಿಲಾದುದು. ಕಲಿಕಾನಿರ್ಧರಣೆಗಾಗಿನ ನವೀನ ವಿಧಾನಗಳನ್ನು , ಮೂಲಭೂತವಾಗಿ ವಿದ್ಯಾರ್ಥಿ ಕಲಿಕೆಯ ಗುಣಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ಮಾಡಲಾಗಿದೆ ಮತ್ತು ಇದನ್ನು ಕಲಿಕಾನಿರ್ಧರಣೆಯಾಗಿ ನೋಡದೆ ಬೋಧನೆ ಮತ್ತು ಕಲಿಕೆಯ ಪ್ರಕ್ರಿಯೆಯಲ್ಲಿನ ಒಂದು ಅವಿಭಾಜ್ಯ ಭಾಗವನ್ನಾಗಿ ನೋಡುವುದರಲ್ಲಿ ನಮ್ಮ ಸವಾಲು ಅಡಗಿದೆ.
ಮೂಲ : ಟೀಚರ್ಸ್ ಇಂಡಿಯಾ
ಕೊನೆಯ ಮಾರ್ಪಾಟು : 5/28/2020