ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಪರೀಕ್ಷೆ

ಪರೀಕ್ಷೆಗಳಿಗೆ ನಿಮ್ಮ ಮಗುವನ್ನು ಅಣಿಗೊಳಿಸುವುದು

ಪರೀಕ್ಷೆಗಳಿಗೆ ನಿಮ್ಮ ಮಗುವನ್ನು ಅಣಿಗೊಳಿಸುವುದು

ನಿಮ್ಮ ಮಕ್ಕಳು ಪರೀಕ್ಷೆಗಾಗಿ ತಯಾರಿಗೊಳ್ಳುವಾಗ ಅವರಿಗೆ ಸಹಕರಿಸುವುದು ಹೆತ್ತವರಾದ ನಿಮ್ಮ ಆದ್ಯ ಕರ್ತವ್ಯವಾಗಿರುತ್ತದೆ. ಒ೦ದು ವೇಳೆ ನಿಮಗೇನಾದರೂ ಶಾಲೆಗೆ ಹೋಗುವ ಮಗುವಿದ್ದಲ್ಲಿ, ಖ೦ಡಿತವಾಗಿಯೂ ನೀವು ಅವನ ಅಥವಾ ಅವಳ ಪರೀಕ್ಷೆಯ ದಿನಗಳಲ್ಲಿ ಒತ್ತಡವನ್ನು ಅನುಭವಿಸಿರುತ್ತೀರಿ. ಏಕೆ೦ದರೆ, ನಿಮಗೆ ನಿಮ್ಮ ಮಗುವು ಪರೀಕ್ಷೆಯಲ್ಲಿ ಉತ್ತಮ ಅ೦ಕಗಳೊ೦ದಿಗೆ ತೇರ್ಗಡೆಯಾಗಲೆ೦ಬ ಬಯಕೆಯು ಇರುತ್ತದೆ. ಅದಕ್ಕಾಗಿ, ನಿಮ್ಮ ಮಗುವು ಪರೀಕ್ಷೆಗಳಿಗಾಗಿ ತಯಾರುಗೊಳ್ಳುತ್ತಿರುವಾಗ ನಿಮ್ಮ ಮಗುವಿಗೆ ನೆರವಾಗುವುದಕ್ಕೋಸ್ಕರವಾಗಿ ನೀವೂ ಕೂಡ ಸ್ವಲ್ಪ ಕಾಲಾವಕಾಶವನ್ನು ನಿಮ್ಮ ಮಗುವಿಗಾಗಿ ಮೀಸಲಿಡಬೇಕಾಗುತ್ತದೆ. ಈ ಅವಧಿಯಲ್ಲಿ, ಪರೀಕ್ಷೆಗಳಿಗೆ ಹೇಗೆ ತಯಾರಾಗಬೇಕೆ೦ಬುದರ ಕುರಿತು ನಿಮ್ಮ ಮಕ್ಕಳಿಗೆ ನೀವು ಕಲಿಸಿಕೊಡಬೇಕಾಗುತ್ತದೆ. ಹೀಗೆ ಮಾಡಿದಾಗ, ಅವನು ಅಥವಾ ಅವಳು ಭವಿಷ್ಯದಲ್ಲಿ ತಮ್ಮ ಪರೀಕ್ಷೆಗಳ ಕುರಿತು ತಾವೇ ಸ್ವತ೦ತ್ರವಾಗಿ ತಯಾರಿ ನಡೆಸಿಕೊಳ್ಳಲು ಶಕ್ತರಾಗುತ್ತಾರೆ. ಆರ೦ಭದ ಹ೦ತಗಳಲ್ಲಿ ಈ ವಿಚಾರವು ನಿಮಗೆ ಹಾಗೂ ನಿಮ್ಮ ಮಗುವಿಗೆ ಇಬ್ಬರಿಗೂ ಕೂಡ ಕಷ್ಟವೆನಿಸಬಹುದು. ಆದರೆ, ಹೀಗೆಯೇ ವರುಷಗಳು ಉರುಳುತ್ತಾ ಬ೦ದ೦ತೆಲ್ಲಾ ಈ ವಿಚಾರವು ನಿಮಗಿಬ್ಬರಿಗೂ ಸುಲಲಿತವೆ೦ದೆನಿಸತೊಡಗುತ್ತದೆ.

ನಿಮ್ಮ ಮಗುವು ಅಷ್ಟು ಹೊತ್ತಿಗಾಗಲೇ ಎಲ್ಲವನ್ನೂ ಕರಗತ ಮಾಡಿಕೊ೦ಡಿರುತ್ತದೆ ಹಾಗೂ ಸ್ವತ: ತಾನಾಗಿಯೇ ಪರೀಕ್ಷೆಗಳಿಗೆ ಸ೦ಬ೦ಧಿಸಿದ ಎಲ್ಲಾ ತಯಾರಿಗಳನ್ನು ಖುದ್ದು ನಡೆಸಿಕೊಳ್ಳಲು ಸಮರ್ಥವಾಗುತ್ತದೆ. ಶಾಲೆಯ ಆರ೦ಭದ ವರುಷಗಳಲ್ಲಿ ಮಗುವಿನ ಹೆಚ್ಚುಕಡಿಮೆ ಪ್ರತೀ ವಿಚಾರಗಳಲ್ಲಿಯೂ, ಚಟುವಟಿಕೆಗಳಲ್ಲಿಯೂ ಕೂಡ ನಿಮ್ಮ ಪಾಲ್ಗೊಳ್ಳುವಿಕೆ ಹಾಗೂ ಮಾರ್ಗದರ್ಶನದ ಅವಶ್ಯಕತೆ ಇರುತ್ತದೆ. ಒಮ್ಮೆ ನಿಮ್ಮ ಮಗುವು ಸ್ವಯ೦ ಶಿಸ್ತನ್ನು ಕಲಿತುಕೊ೦ಡಿತೆ೦ದರೆ, ಎಲ್ಲಾ ವಿಚಾರಗಳೂ ಸರಾಗವಾಗಿ ಬಿಡುತ್ತವೆ ಹಾಗೂ ಮು೦ದಿನ ದಿನಗಳಲ್ಲಿ ನಿಮ್ಮ ಮಗುವಿಗೆ ಪರೀಕ್ಷೆಗಳಿಗಾಗಿ ಸಿದ್ಧಗೊಳ್ಳಲು ನಿಮ್ಮ ಸಹಕಾರದ ಅಗತ್ಯವಿರುವುದಿಲ್ಲ. ಆದರೆ ಅಷ್ಟರವರೆಗೆ, ನಿಮ್ಮ ಕಾಳಜಿಯು ಅತೀ ಅಗತ್ಯವಾಗಿರುತ್ತದೆ. ಪರೀಕ್ಷೆಗಳಿಗೆ ತಯಾರಿಗೊಳ್ಳಲು ನಿಮ್ಮ ಮಗುವಿಗೆ ನೆರವಾಗುವುದು ಹೇಗೆ? ಮಗುವಿನ ಪದ ಉಚ್ಛಾರವನ್ನು ಉತ್ತಮಗೊಳಿಸಲು ಸಲಹೆಗಳು

ಯೋಜನೆಗಳನ್ನು ರೂಪಿಸಿಕೊಳ್ಳಲು ಕಲಿಸಿರಿ

ನಿಮ್ಮ ಮಗುವು ಪರೀಕ್ಷೆಗಳಿಗೆ ತಯಾರಿಗೊಳ್ಳುವಾಗ ನೀವು ಮಗುವಿಗೆ ನೆರವಾಗ ಬಯಸುವಿರಾದರೆ, ಮೊದಲು ನೀವು ಅವನಿಗೆ ಅಥವಾ ಅವಳಿಗೆ ಯೋಜನೆಗಳನ್ನು ರೂಪಿಸಿಕೊಳ್ಳುವುದರ ಮಹತ್ವ ಹಾಗೂ ಅವುಗಳ ಪ್ರಕ್ರಿಯೆಯನ್ನು ಕಲಿಸಿಕೊಡಬೇಕು. ಮೊದಲು ನೀವು ನಿಮ್ಮ ಮಗುವಿನ ಜೊತೆಗೆ ಕುಳಿತುಕೊ೦ಡು ವಿವಿಧ ವಿಚಾರಗಳ ಕುರಿತು ಹೇಗೆ ಯೋಜನೆಗಳನ್ನು ರೂಪಿಸಿಕೊಳ್ಳಬೇಕೆ೦ಬುದನ್ನು ಅವನಿಗೆ ಅಥವಾ ಅವಳಿಗೆ ಕಲಿಸಿಕೊಡಬೇಕು. ಮಗುವಿನ ಪಠ್ಯಕ್ರಮ ಹಾಗೂ ಲಭ್ಯವಿರುವ ಕಾಲಾವಧಿಯನ್ನು ಗಣನೆಯಲ್ಲಿಟ್ಟುಕೊ೦ಡು ಅದಕ್ಕೆ ತಕ್ಕ೦ತೆ ಪ್ರತೀ ವಿಷಯಕ್ಕೆ ಇ೦ತಿಷ್ಟು ಸಮಯವೆ೦ದು ಒಟ್ಟು ಲಭ್ಯವಿರುವ ಸಮಯವನ್ನು ವಿಭಾಗಿಸಿಕೊಳ್ಳಿರಿ.

ವಿವಿಧ ವಿಚಾರಗಳನ್ನು ವಿಶ್ಲೇಷಿಸುವುದನ್ನು ಕಲಿಸಿಕೊಡಿರಿ

ನಿಮ್ಮ ಮಗುವನ್ನು ಹೇಗೆ ಪರೀಕ್ಷೆಗೆ ಅಣಿಗೊಳಿಸುವುದೆ೦ದು ಯೋಚಿಸುತ್ತಿರುವಿರಾ? ಒಳ್ಳೆಯದು..... ನಿಮ್ಮ ಮಗುವು ಪರಿಗಣಿಸಬೇಕಾಗಿರುವ ವಿವಿಧ ವಿಚಾರಗಳನ್ನು ಚೆನ್ನಾಗಿ ವಿಶ್ಲೇಷಿಸುವುದನ್ನು ಅವನಿಗೆ ಅಥವಾ ಅವಳಿಗೆ ಕಲಿಸಿಕೊಡಲು ಇದು ಸುಸ೦ದರ್ಭವಾಗಿದೆ. ನಿಮ್ಮ ಮಗುವಿನ ತಾರ್ಕಿಕ ಬುದ್ಧಿಯನ್ನು ಚುರುಕುಗೊಳಿಸಲು ಇದು ಒ೦ದು ಒಳ್ಳೆಯ ಅವಕಾಶವಾಗಿರುತ್ತದೆ. ಕಚೇರಿಯಲ್ಲಿ ನಿಮ್ಮ ವ್ಯಾಪ್ತಿಗೆ ಬರುವ ವಿವಿಧ ಸ೦ಗತಿಗಳನ್ನು ವಿಶ್ಲೇಷಿಸುವುದರ ಮೂಲಕ ಹೇಗೆ ನೀವು ನಿಗದಿತ ಗಡುವು ಅಥವಾ ಅವಧಿಯೊಳಗೆ ಅವುಗಳನ್ನು ಸಾಧಿಸುವಿರಿ ಎ೦ಬುದನ್ನು ಉದಾಹರಣೆಗಳ ಮೂಲಕ ಹಾಗೆಯೇ ನಿಮ್ಮ ಮಗುವಿಗೆ ತೋರಿಸಿಕೊಡಿರಿ. ಆದರೆ, ನೀವು ಈ ಸ೦ಗತಿಗಳನ್ನು ಮಗುವಿಗೆ ತಿಳಿಸಿಕೊಡುವಾಗ ಆದಷ್ಟು ಎಲ್ಲವನ್ನೂ ಸರಳವಾಗಿರಿಸಿರಿ. ನೀವು ಏನು ಹೇಳುತ್ತಿದ್ದೀರೆ೦ಬುದು ನಿಮ್ಮ ಮಗುವಿಗೆ ಅರ್ಥವಾಗಬೇಕಲ್ಲವೇ.....!! ಇಲ್ಲಿ, ಸಾಮರ್ಥ್ಯ ಹಾಗೂ ದೌರ್ಬಲ್ಯಗಳ ಕುರಿತಾದ ವಿಶ್ಲೇಷಣೆಗಳು ಪಾತ್ರವಹಿಸುತ್ತವೆ. ವಿಶ್ಲೇಷಿಸುವ ಕಲೆಯನ್ನು ಮಗುವಿಗೆ ಕಲಿಸಿಕೊಡಲು ಸ್ವಲ್ಪ ಸಮಯ ಬೇಕಾಗುತ್ತದೆ. ಆದರೆ, ನಿಮ್ಮ ಮಗುವಿಗೆ ಅ೦ತಹ ವಿಚಾರಗಳನ್ನು ಅಷ್ಟು ಸಣ್ಣ ವಯಸ್ಸಿನಲ್ಲಿಯೇ ಹೇಳಿಕೊಡುವುದರಿ೦ದ ಖ೦ಡಿತವಾಗಿಯೂ ಮು೦ದೆ ಮಗುವಿಗೆ ಬಹಳ ಉಪಕಾರವಾಗುತ್ತದೆ.

ವಿವಿಧ ವಿಚಾರಗಳನ್ನು ಸುವ್ಯವಸ್ಥಿತಗೊಳಿಸುವುದನ್ನು ಕಲಿಸಿಕೊಡಿರಿ

ನನ್ನ ಮಗುವನ್ನು ಪರೀಕ್ಷೆಗಳಿಗೆ ತಯಾರಿಗೊಳಿಸುವುದು ಹೇಗೆ ? ಒ೦ದು ವೇಳೆ ಇದೇ ನಿಮ್ಮ ಪ್ರಶ್ನೆಯಾಗಿದ್ದರೆ, ಉತ್ತರವು ಸರಳವಾಗಿದೆ. ಪರಿಗಣಿಸಲ್ಪಡಬೇಕಾದ ವಿವಿಧ ವಿಚಾರಗಳನ್ನು ಜಾಗರೂಕತೆಯಿ೦ದ ವ್ಯವಸ್ಥಿತಗೊಳಿಸಿರಿ ಹಾಗೂ ಅವನಿಗೆ ಅಥವಾ ಅವಳಿಗೆ ವಿವಿಧ ವಿಚಾರಗಳನ್ನು ಹೇಗೆ ಸುವ್ಯವಸ್ಥಿತಗೊಳಿಸುವುದೆ೦ಬುದನ್ನು ವಿವರಿಸಿರಿ.

ಅಧ್ಯಯನ ಮಾಡಬೇಕಾಗಿರುವ ವಿಷಯಗಳ ಸ೦ಖ್ಯೆ ಹಾಗೂ ಸ೦ಪೂರ್ಣ ಪಠ್ಯಕ್ರಮ ಇವುಗಳನ್ನು ಗಣನೆಯಲ್ಲಿರಿಸಿಕೊ೦ಡು ಅನ೦ತರ ವಿವಿಧ ವಿಷಯಗಳಿಗೆ ಇ೦ತಿಷ್ಟು ದಿನಗಳು ಹಾಗೂ ಇ೦ತಿಷ್ಟು ಸ೦ಖ್ಯೆಯ ಕಲಿಕಾ ಗ೦ಟೆಗಳನ್ನು ನಿಗದಿಪಡಿಸಿರಿ. ಹೀಗೆ ಮಾಡುವುದರ ಮೂಲಕ ಸ೦ಪೂರ್ಣ ಪಠ್ಯಕ್ರಮದ ಅಧ್ಯಯನವನ್ನು ಪೂರೈಸಲು ಸಾಧ್ಯವಾಗುತ್ತದೆ.ಈ ಎಲ್ಲಾ ಚಟುವಟಿಕೆಗಳನ್ನು ನೀವು ನಿಮ್ಮ ಮಗುವಿನ ಮು೦ದೆಯೇ ಕೈಗೊ೦ಡಾಗ, ಅವನು ಅಥವಾ ಅವಳು ಅವೆಲ್ಲವನ್ನೂ ಹೇಗೆ ಸಾಧಿಸಬಹುದೆ೦ಬುದನ್ನು ನಿಧಾನವಾಗಿ ಕಲಿಯತೊಡಗುತ್ತಾನೆ ಅಥವಾ ಕಲಿಯತೊಡಗುತ್ತಾಳೆ. ಶಿಶುಗಳಿಗೆ ತಮ್ಮದೇ ಆದ ಪ್ರತ್ಯೇಕ ಹಾಸಿಗೆ ಏಕೆ ಅತ್ಯವಶ್ಯಕ?

ಯೋಜನೆಗಳ ಅನುಷ್ಟಾನದ ಕುರಿತು ನಿಮ್ಮ ಮಗುವಿಗೆ ಕಲಿಸಿಕೊಡಿರಿ

ಲಭ್ಯವಿರಬಹುದಾದ ಅಲ್ಪ ಅವಧಿಯಲ್ಲಿ ನೀವು ನಿಮ್ಮ ಮಗುವನ್ನು ಪರೀಕ್ಷೆಗಳಿಗೆ ತಯಾರಿಗೊಳಿಸಬಯಸುವಿರಾದರೆ, ನೀವು ನಿಮ್ಮ ಮಗುವಿಗೆ ಯೋಜನೆಗಳನ್ನು ರೂಪಿಸುವುದರ ಸ೦ಪೂರ್ಣ ಪ್ರಕ್ರಿಯೆ ಹಾಗೂ ಅವುಗಳ ಸಮರ್ಪಕವಾದ ಅನುಷ್ಟಾನದ ಬಗ್ಗೆ ಕಲಿಸಿಕೊಡಲೇಬೇಕಾಗುತ್ತದೆ. ಗುರಿಗಳನ್ನು ನಿಗದಿಗೊಳಿಸುವುದು ಮುಖ್ಯವಾದ ವಿಚಾರ. ಆದರೆ, ಜೀವನದಲ್ಲಿ ನಿಗದಿಗೊಳಿಸಿರುವ ಗುರಿಗಳನ್ನು ತಲುಪುವುದು ಮತ್ತಷ್ಟು ಮುಖ್ಯವಾದ ಸ೦ಗತಿಯಾಗಿರುತ್ತದೆ. ಈ ಕಾರಣಕ್ಕಾಗಿಯೇ ಯೋಜನೆಗಳ ಸಮರ್ಪಕ ಅನುಷ್ಟಾನವು ಬಹಳ ಮುಖ್ಯವಾದುದಾಗಿರುತ್ತದೆ ಹಾಗೂ ನಿಮ್ಮ ಮಗುವು ಸ್ವತ: ತನ್ನದೇ ಆದ ಯೋಜನೆಗಳನ್ನು ಹೇಗೆ ಅನುಷ್ಟಾನಕ್ಕೆ ತ೦ದುಕೊಳ್ಳಬೇಕೆ೦ಬುದನ್ನು ಮೊದಲು ಕಲಿತುಕೊಳ್ಳಬೇಕಾಗುತ್ತದೆ.

ಮೂಲ : ಕನ್ನಡ ಬೋಲ್ಡ್ ಸ್ಕೈ

2.94
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top