অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಬೀಡ್ಲ್ , ಜಾರ್ಜ್ ವೆಲ್ಸ್

ಬೀಡ್ಲ್ , ಜಾರ್ಜ್ ವೆಲ್ಸ್

ಬೀಡ್ಲ್ , ಜಾರ್ಜ್ ವೆಲ್ಸ್ (1903-89)  ೧೯೫೮

ಅಸಂಸಂ-ತಳಿಶಾಸ್ತ್ರ- ಜೀವ ರಾಸಾಯನಿಕ ತಳಿಶಾಸ್ತ್ರದ ಆದ್ಯರೊಲ್ಲೊಬ್ಬ

ವಾಹೂ ಪ್ರಾಂತದಲ್ಲಿ ಜನಿಸಿದ ಬೀಡ್ಲ್, ಪದವಿ ಗಳಿಸಿದ ನಂತರ ಊರಿಗೆ ಮರಳಬೇಕೆಂದು ನಿರ್ಧರಿಸಿದ್ದನಾದರೂ ತಳಿಶಾಸ್ತ್ರದಲಿದ್ದ ಅಪಾರ ಆಸಕ್ತಿಯಿಂದಾಗಿ , ಮೆಕ್ಕೆ ಜೋಳದ ತಳಿಶಾಸ್ತ್ರದ ಬಗ್ಗೆ ಅಧ್ಯಯನ ನಡೆಸಿ ತನ್ಮೂಲಕ ಡಾಕ್ಟರೇಟ್ ಗಳಿಸಲು ಕಾರ್ನೆಲ್ ವಿಶ್ವವಿದ್ಯಾಲಯ ಸೇರಿದನು.  1935ರಲ್ಲಿ ಪ್ಯಾರಿಸ್ಸಿನಲ್ಲಿ ಎಫ್ರೆಸಿಯೊಡನೆ ,ಡ್ರೊಸೊಫಿಲಿಯಾ ಕೀಟದ ಕಣ್ಣಿನ ಬಣ್ಣದ ಬಗ್ಗೆ ಸಂಶೋಧನೆ ನಡೆಸಿದನು.  ಇದರ ಫಲಿತಾಂಶವಾಗಿ ಡ್ರೊಸೊಫಿಯಾ ಡಿಂಬದ (Larva) ಹಂತದಲ್ಲಿರುವಾಗ, ಅದರ ಕಣ್ಣಿನ ಕಂದುಗಳನ್ನು, ಬಾಹ್ಯದಿಂದ ಕಸಿ ಮಾಡಿ, ಪ್ರಯೋಗ ನಡೆಸಿ,  ವಂಶವಾಹಕಗಳು ಕಣ್ಣಿನ ಬೆಳವಣಿಗೆಯಲ್ಲಿ ವಹಿಸುವ ಪಾತ್ರದ ಬಗ್ಗೆ ಸಂಶೋಧನೆ ನಡೆಸಿದನು. ನಂತರ ಪ್ಯಾರಿಸ್‍ನಿಂದ. ಅಸಂಸಂಗಳಿಗೆ ಹಿಂದುರುಗಿದ ಬೀಡ್ಲ್ ಸ್ಟ್ಯಾನ್’ಫೋರ್ಡ್’ನಲ್ಲಿ    ಕೆಲಸಕ್ಕೆ ಸೇರಿ ಅಲ್ಲಿನ ಖ್ಯಾತ ಸೂಕ್ಷ್ಮಜೀವಶಾಸ್ತ್ರಜ್ಞನಾದ  ಇ.ಎಲ್.ಟಾಟಮೆ ಜೊತೆ ತಳಿಶಾಸ್ತ್ರದ ಹಲವು ಮಗ್ಗುಲುಗಳನ್ನು ಕೆದುಕುವಲ್ಲಿ ನಿರತನಾದನು.  ಇದರ ಫಲವಾಗಿ 1940ರಲ್ಲಿ ಕಂದು ಬ್ರೆಡ್‍ಗೆ ತಾಗುವ ಶಿಲೀಂಧ್ರ  ಬಳಸಿ ಜೀವ ರಾಸಾಯನಿಕವಾಗಿ ತಳಿಗಳ ಮೇಲಾಗುವ ಪ್ರಭಾವವನ್ನು ಕುರಿತು ಅಧ್ಯಯನಕ್ಕೆ ತೊಡಗಿದನು. ಈ ಶಿಲೀಂಧ್ರಕ್ಕೆ, ವಯಸ್ಕ ಹಂತದಲ್ಲಿ ಒಂದೇ ವರ್ಣಕಾಯವಿದ್ದು, ಶೀಘ್ರವಾಗಿ ಬೆಳೆದು ಸಂಶೋಧನೆಗೆ ಅನುಕೂಲಕರವಾಗಿದ್ದಿತು.  ಉನ್ನತ ಜೀವಿಗಳಲ್ಲಿ ಪ್ರತಿ ಗುಣಕ್ಕೂ ಎರಡು ವರ್ಣಕಾಯಗಳಿದ್ದು, ಪ್ರಬಲ ವಂಶವಾಹಕಗಳು ಸುಪ್ತವಾದ ಜೀವವಾಹಿನಿಗಳನ್ನು ಹಿಂದೂಡಿ, ಹಲವಾರು ಎದ್ದು ಕಾಣುವ ಗುಣಗಳಿಗೆ ಕಾರಣವಾಗುತ್ತವೆ.  ಇದರಿಂದ ವಂಶವಾಹಕಗಳಲ್ಲಿ ಪ್ರಬಲ ಹಾಗೂ ಸುಪ್ತ ಯಾವುದು, ಯಾವ ಗುಣಕ್ಕೆ ಹೇಗೆ ಕಾರಣ ಎಂದು ಗುರುತಿಸುವುದು ಕಠಿಣ.  ಆದರೆ ಈ ಜಟಿಲತೆ ಬೀಡ್ಲ್ ಆರಿಸಿಕೊಂಡ ಶಿಲೀಂಧ್ರಕ್ಕೆ  ಇಲ್ಲ. ಬೀಡ್ಲ್ ಹಾಗೂ ಟಾಟಮೆ ಈ ಶಿಲೀಂಧ್ರವನ್ನೂ ಕ್ಷ-ಕಿರಣಗಳಿಗೆ ಒಡ್ಡಿ ಅವುಗಳನ್ನು ವಿಕಲ್ಪಗೊಳಿಸಿದರು. ಈ ವಿಕಲ್ಪಿತ ಕರೆಗಳಿಗೆ (Mutated Stains)  ತಮ್ಮ ಬೆಳವಣಿಗೆಗೆ ಬೇಕಾದ ಪೌಷ್ಟಿಕಾಂಶವನ್ನು ತಾವೇ ಸಂಶ್ಲೇಷಿಸುವ ಸಾಮರ್ಥ್ಯ ಹೊಂದಿವೆ0iÉುೀ ಇಲ್ಲವೇ ಎಂದು ಪರಿಶೀಲಿಸಿದನು.  ವಿಸ್ತ್ರತವಾದ ಈ ಬಗೆಯ ಪ್ರಯೋಗಗಳಿಂದ ಈ ಶಿಲೀಂಧ್ರದಲ್ಲಿನ ವಂಶವಾಹಕಗಳು, ಹಲವಾರು ಕಿಣ್ವಗಳ ಉತ್ಪಾದನೆಯನ್ನು ನಿಯಂತ್ರಿಸುತ್ತವೆಯೆಂದು ಅರಿತರು. ಇವರಿಗಿಂತ 30 ವರ್ಷ ಮೊದಲೇ ಗೆರಾಡ್ ಮಾನವನ ಚಯಾಪಚಯ (Metabolism) ಸಂಬಂದ ಕೋಶಗಳ ಬಗ್ಗೆ ಅಧ್ಯಯನ ನಡೆಸಿ ‘ಒಂದು ವಂಶವಾಹಿನಿ-ಒಂದು ಕಿಣ್ವ’ ಎಂದು ನೀಡಿದ್ದ  ಹೇಳಿಕೆ  ತಳಿಯೊಂದರ ಅರಿವು ಬೀಡ್ಲ್ ಹಾಗೂ ಟಾಟಮೆಗೆ ತಿಳಿದಿರಲಿಲ್ಲ . ಬೀಡ್ಲ್ ಹಾಗೂ ಟಾಟಮೆ ಪ್ರಯೋಗಾಧಾರಿತ ಸಂಶೋಧನೆ ಜೀವರಸಾಯನಶಾಸ್ತ್ರದ ಅಧಾರ ಸ್ತಂಭವಾಗಿ ಉಳಿದಿದೆ.  ಈಗ ಸಾಬೀತಾಗಿರುವಂತೆ ಡಿಎನ್‍ಎ ಒಂದು ಕಾರ್ಯಶೀಲ ಘಟಕ ಒಂದು ಪೆಪ್ಟೈಡ್ ಸರಣಿಯನ್ನು ನಿಯಂತ್ರಿಸುತ್ತದೆ.  1958ರಲ್ಲಿ ಬೀಡ್ಲ್ ಟಾಟಂ ಹಾಗೂ ಲೆಡೆರ್‍ಬರ್ಗ್ ನೊಬೆಲ್ ಪ್ರಶಸ್ತಿಯನ್ನು ಹಂಚಿಕೊಂಡು ಪುರಸ್ಕೃತರಾದರು.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 7/23/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate