অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕೊಮ್ರ್ಯಾಕ್, ಅಲ್ಯನ್ ಮೆಕ್ಲಿಯಾಡ್ (1924--) 1979

ಕೊಮ್ರ್ಯಾಕ್, ಅಲ್ಯನ್ ಮೆಕ್ಲಿಯಾಡ್ (1924--) 1979

ಕೊಮ್ರ್ಯಾಕ್, ಅಲ್ಯನ್ ಮೆಕ್ಲಿಯಾಡ್ (1924--)   ೧೯೭೯

ದಕ್ಷಿಣ ಆಫ್ರಿಕಾ-ಅಸಂಸಂ- ಭೌತಶಾಸ್ತ್ರ -  ಕ್ಷ-ಕಿರಣ  ಟೊಮೊಗ್ರಫಿಯ  ಅಗ್ರಣಿ.

ಕೇಪಟನ್ ವಿಶ್ವವಿದ್ಯಾಲಯದಲ್ಲಿ ಓದಿದ ಕೊಮ್ರ್ಯಾಕ್, ಜೊಹಾನ್ಸ್‍ಬರ್ಗ್‍ನಲ್ಲಿ, ರೇಡಿಯೋ ಸಮಸ್ಥಾನಿಗಳನ್ನು (Radio Isotopes) ವೈದ್ಯಕೀಯದಲ್ಲಿ ಅಳವಡಿಸಿಕೊಳ್ಳುವ ಸಾಧ್ಯತೆಗಳನ್ನು ಅರಿಯುವತ್ತ ಆಸಕ್ತನಾದನು.  ನಂತರ 1956ರಲ್ಲಿ ಅಸಂಸಂಗಳಿಗೆ ಹೋಗಿ ನೆಲೆಸಿದನು. 1963ರಲ್ಲಿ ಕೊಮ್ರ್ಯಾಕ್ ಕ್ಷ-ಕಿರಣಗಳ ನೆರವಿನಿಂದ ಮೆದು ಅಂಗಾಂಶಗಳ ಬಿಂಬಗಳನ್ನು ಪಡೆಯುವ ವಿಧಾನಗಳನ್ನು ರೂಪಿಸಿದನು. ಇದೇ ಪ್ರಯತ್ನವನ್ನು ಹೌನ್ಸ್’ಫೀಲ್ಡ್ ಸ್ವತಂತ್ರವಾಗಿ ನಡೆಸಿ, ಯಶಸ್ವಿಯಾದನು.  ಕೊರ್ಮ್ಯಾಕ್ ಹಾಗೂ ಹೌಸಫೀಲ್ಡ್‍ರ ಈ ಯತ್ನ ಯಶಸ್ವಿಯಾಗುವವರೆಗೆ, ಮೂಳೆಯಂತಹ ಗಟ್ಟಿ ಹಾಗೂ ದೃಢ ಅಂಗಗಳ ಬಿಂಬಿಕೆ (Imaging) ಮಾತ್ರ ಸಾಧ್ಯವಾಗುತ್ತಿತ್ತು. ಇವರು ಕ್ಷ –ಕಿರಣಗಳಿಂದ ಅಂಗಾಂಶದ ಹಲವಾರು ಛೇದನಗಳನ್ನು (Sections)   ಹಲವಾರು ಕೋನ ಹಾಗೂ ದಿಶೆಗಳಿಗಿಂತ ತೆಗೆದು , ಅಂಗಾಂಶದ ಪೂರ್ಣ ಸ್ಥಿತಿಯನ್ನು ಮೂರು ಆಯಾಮಗಳಲ್ಲಿ ಅರಿಯಲು ಸಾಧ್ಯವಾಗುವಂತೆ ಮಾಡಿದರು.  ಈ ತಂತ್ರ ಗಣಕ ಸಹಾಯಿತ ಟೊಮೊಗ್ರಫಿ (Computer Aided Tomography )  ಅಥವಾ ಗಣಕ ಟೊಮೊಗ್ರಾಫಿ ಎಂದು ಖ್ಯಾತವಾಯಿತು. ಈ ತಂತ್ರವೇ ಆಧುನಿಕ ದೇಹ Sಛಿಚಿಟಿಟಿeಡಿ ತಳಹದಿ. ಕೊರ್ಮ್ಯಾಕ್ ಹಾಗೂ ಹೌಸಫೀಲ್ಡ್ ಅಭಿವೃದ್ದಿಪಡಿಸಿದ ತಂತ್ರವನ್ನು ಪುರಸ್ಕರಿಸಿ, 1979ರಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಯಿತು.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 7/13/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate