অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಫರ್ಮಿ , ಎನ್ರಿಕೋ

ಫರ್ಮಿ , ಎನ್ರಿಕೋ

ಫರ್ಮಿ , ಎನ್ರಿಕೋ (1901-1954) ೧೯೩೮

ಇಟಲಿ-ಅಸಂಸಂ-ಬೈಜಿಕ ಭೌತಶಾಸ್ತ್ರ-ಪ್ರಥಮ ಪರಮಾಣು ಪ್ರತಿಕ್ರಿಯಾಕಾರಕ (Nuclear Reactor)  ನಿರ್ಮಿಸಿದಾತ.

ಸೈದ್ಧಾಂತಿಕ, ಪ್ರಾಯೋಗಿಕ ಭೌತಶಾಸ್ತ್ರ ವಲಯದಲಿ ಜಗತ್ತಿಗೆ ಇಟಲಿ ನೀಡಿದ ಅದ್ಭುತ ಕೊಡುಗೆ ಎನ್ರಿಕೋ ಫರ್ಮಿ.  ರೈಲ್ವೇ ಉದ್ಯೋಗಿಯ ಮಗನಾಗಿದ್ದ ಫರ್ಮಿ ಬಾಲ್ಯದಿಂದಲೇ ಪ್ರತಿಭಾವಂತ.  ಕ್ಷ-ಕಿರಣಗಳ ಸಂಶೋಧನೆ ನಡೆಸಿ ಪೀಸಾದಿಂದ ಫರ್ಮಿ ಡಾಕ್ಟರೇಟ್ ಗಳಿಸಿದನು.   ಲೀಡೆನ್‍ನಲ್ಲಿ ಪಿ. ಎಹ್ರೆನ್‍ಫೆಸ್ಟ್, ಮತ್ತು ಗಟ್ಟಿಂಜೆನ್‍ನಲ್ಲಿ ಬಾರ್ನ್ ಸಂಗಡ ಕೆಲಸ ಮಾಡಿದನು.  1927ರಲ್ಲಿ ರೋಮ್‍ಗೆ ತೆರಳಿ ಪ್ರಾಧ್ಯಾಪಕನಾದನು.  ಈ ವೇಳೆಗಾಗಲೇ ಪ್ರಸಿದ್ದ ವೈಜ್ಞಾನಿಕ ಪತ್ರಿಕೆಗಳಲ್ಲಿ, ಫರ್ಮಿ-ಡಿರಾಕ್ ಸಂಖ್ಯಾಕಲನ ಶಾಸ್ತ್ರ ಸೇರಿದಂತೆ ಸುಮಾರು 30 ಲೇಖನಗಳು ಪ್ರಕಟನೆಗೊಂಡಿದ್ದವು.  ರೋಮನಲ್ಲಿ ಕೆಲಕಾಲ ಇದ್ದ ಫರ್ಮಿ ಅಲ್ಲಿ ರಾಮನ್ ಪರಿಣಾಮ ಕುರಿತು ಸಂಶೋಧಿಸಿದನು. ಇಟಲಿಯಲ್ಲಿದ್ದಾಗ, ಉಜ್ವಲ ವಿಜ್ಞಾನಿಗಳ ತಂಡವೊಂದನ್ನು ಕಟ್ಟಲು ಫರ್ಮಿ ಯತ್ನಿಸಿದನಾದರೂ ಆಗಿದ್ದ ಕಲುಷಿತ ರಾಜಕೀಯ ವಾತಾವರಣದಿಂದಲೂ, ಅವನು ಯಹೂದಿಯಾಗಿದ್ದನೆಂಬ ಕಾರಣದಿಂದಲೂ ಸಾಧ್ಯವಾಗಲಿಲ್ಲ.  ಇದಎಂದ ಭ್ರಮ ನಿರಸನಗೊಂಡು 1938ರಲ್ಲಿ ಇಟಲಿ ತೊರೆದು, ಅಸಂಸಂದ ನ್ಯೂಯಾರ್ಕ್‍ನಲ್ಲಿ ನೆಲೆಸಿ ಕೊಲಂಬಿಯಾ ವಿಶ್ವವಿದ್ಯಾಲಯ ಸೇರಿದನು.  1933ರಲ್ಲಿ  ವಿಕಿರಣಶೀಲ ಬೀಟಾ ಶೈಥಿಲ್ಯ ಸಿದ್ಧಾಂತ  (Beta Decay Theory) ನೀಡಿದನು.  ಈ ಸಿದ್ಧಾಂತದಂತೆ ನ್ಯೂಟ್ರಾನ್ ಒಂದು ಎಲೆಕ್ಟ್ರಾನ್‍ನ್ನು (ಬೀಟಾ-ಕಣ) ಮತ್ತು ಪ್ರತಿ ನ್ಯೂಟ್ರಿನೋ (Antineutrino) ಹೊಮ್ಮಿಸಿ ಪ್ರೋಟಾನ್ ಆಗಿ ರೂಪುಗೊಳ್ಳುತ್ತದೆ. ಜೊಲಿಯಟ್ ಹಾಗೂ ಐರೀನ್ ಕ್ಯೂರಿ  ಬೈಜಿಕ ವಿಕಲ್ಪಗಳನ್ನು (Nuclear Mutations) ತರಲು ಹೀಲಿಯಂ ಅನಿಲದ ಬೀಜವನ್ನು ಬಳಸಿದ್ದರು.  ಇದಕ್ಕೆ ಬದಲಾಗಿ ನ್ಯೂಟ್ರಾನ್ ಬಳಸುವುದರಿಂದ ಹೆಚ್ಚಿನ  ಅನುಕೂಲವೆಂದು ಫರ್ಮಿ ತೋರಿಸಿದನು.  ಇದರ ಪರಿಣಾಮವಾಗಿ ಹೊಸ 40 ಬಗೆಯ ವಿಕಿರಣಶೀಲ ಸಮಸ್ಥಾನಿಗಳು (Radio Isotopes)    ಅನಾವರಣಗೊಂಡವು.  ಪ್ರಯೋಗಗಳಲ್ಲಿದ್ದಾಗ, ಆಕಸ್ಮಿಕವಾಗಿ ಪ್ಯಾರಾಫಿûನ್ ಮೇಣ ಬಳಸಿ ನ್ಯೂಟ್ರಾನ್‍ಗಳನ್ನು ನಿಧಾನಗೊಳಿಸಬಹುದೆಂದು ಫರ್ಮಿ ಕಂಡುಕೊಂಡನು.  ಫರ್ಮಿಯ ಇವೆಲ್ಲ ಸಾಧನೆಗಾಗಿ 1938ರ ನೊಬೆಲ್ ಪ್ರಶಸ್ತಿ ನೀಡಲಾಯಿತು. ಫರ್ಮಿ ನ್ಯೂಟ್ರಾನ್‍ಗಳಿಂದ ಯುರೇನಿಯಂ ವಿಕಲ್ಪ ಹೊಂದುವುದನ್ನು ತಪ್ಪಾಗಿ ಅರ್ಥೈಸಿದ್ದನು.  1938ರಲ್ಲಿ ಫ್ರಿಷ್ಕ್ ಮತ್ತು ಲಿಸಾ ಮೀಟನರ್ ಇದನ್ನು ಸರಿಪಡಿಸಿ ಯುರೇನಿಯಂ ಬೀಜಕ್ಕೆ ಹೆಚ್ಚಿನ ನ್ಯೂಟ್ರಾನ್‍ಗಳನ್ನು ಸೇರಿಸಿದಾಗ ಯುರೇನಿಯಂ ವಿದಳನಗೊಳ್ಳುವುದೆಂದು (Fission)    ಪ್ರಯೋಗಗಳ ಫಲಿತಾಂಶಗಳ ವಿಶ್ಲೇಷಣೆಯಿಂದ ತಿಳಿಸಿದರು.  ಇದೇ ವೇಳೆಗೆ ಜರ್ಮನಿಯ, ಬರ್ಲಿನ್‍ನಲ್ಲಿದ್ದ ಹಾನ್ ಮತ್ತು ಎಫ್.ಸ್ಟ್ರಾಸ್‍ಮನ್ ಸರಿಸಮಾನ ಫಲಿತಾಂಶ ಪಡೆದು, ಅದೇ ಬಗೆಯ ನಿರ್ಧಾರಗಳಿಗೆ ಬಂದಿದ್ದರು.  ಯುರೇನಿಯಂ ಪರಮಾಣುವನ್ನು ವಿದಳನಗೊಳಿಸುವುದರಿಂದ ಅಪಾರ ಪ್ರಮಾಣದ ಚೈತನ್ಯವನ್ನು ಪಡೆಯಬಹುದೆಂದು, ಇವರೆಲ್ಲರಿಗೂ ಖಚಿತವಾಗಿದ್ದಿತು. ಅದು  ಎರಡನೇ ಜಾಗತಿಕ  ಯುದ್ದದ ಬಿರುಸಿನ ಕಾಲ.  ಹಿಟ್ಲರ್‍ಗೆ ಈ ಸಾಧ್ಯತೆ ಅರಿವಾದರೆ ಜಗತ್ತಿನಲ್ಲಿ ಅವನಿಗೆ ಸರಿಸಮಾನಾದ, ಎದುರಿಗೆ ನಿಲ್ಲಬಲ್ಲ ದೇಶ ಇರಲಾರದೆಂದು ಭಾವಿಸಿದ ಫರ್ಮಿ, ಐನ್‍ಸ್ಟೀನ್ ,ಝಿಲಾರ್ಡ್ ಹಾಗೂ ಅಮೆರಿಕಾದ ಅಧ್ಯಕ್ಷ ರೂಸವೆಲ್ಟ್‍ನನ್ನು ಭೇಟಿಯಾಗಿ ಜರ್ಮನಿಗಿಂತಲೂ ಮೊದಲೇ ಬೈಜಿಕಾಸ್ತ್ರ (Nuclear Weapon)     ತಯಾರಿಸಬೇಕೆಂದು ಒತ್ತಾಯಿಸಿದರು.  ಇದರ ಫಲವಾಗಿ 2 ಬಿಲಿಯನ್ ಡಾಲರ್ ವೆಚ್ಚದ ಮ್ಯಾನ್‍ಹಟನ್ ಪರಿಯೋಜನೆ ಮೈದಳೆಯಿತು.  ಡಿಸೆಂಬರ್ 2, 1942ರಂದು, ಚಿಕಾಗೋದ ಸ್ಟ್ಯಾಗ್’ಫೀಲ್ಡ್ ಸ್ಟೇಡಿಯಂನಲ್ಲಿ ಎನ್ರಿಕೋ ಫರ್ಮಿ ಹಾಗೂ ಸಂಗಡಿಗರು ಮೊಟ್ಟ ಮೊದಲ ನಿಯಂತ್ರಣಗೊಳಿಸಬಹುದಾದ ಬೈಜಿಕ ಕ್ರಿಯಾಸರಣಿಯನ್ನು ಪಡೆದರು. ಎನ್ರಿಕೋ ಫರ್ಮಿ ಬೈಜಿಕ ವಿದಳನದಿಂದ, ಅಣ್ವಸ್ತ್ರ ತಯಾರಿಸುವ ಯೋಜನೆಯಲ್ಲಿದ್ದು, ಮೆಕ್ಸಿಕೋದ ಮರುಭೂಮಿಯಲ್ಲಿ ಅದರ ಮೊದಲ ಸ್ಪೋಟ ಪ್ರಯೋಗ ನಡೆದಾಗ ಉಪಸ್ಥಿತನಿದ್ದನು.  ಎನ್ರಿಕೋ ಫರ್ಮಿ ಹಾಗೂ ಓಪೆನ್‍ಹೀಮರ್ ಈ ಹೊಸ ಅಸ್ತ್ರವನ್ನು ಜಪಾನಿನ ವಿರುದ್ದ ಬಳಸಲು ಬೆಂಬಲಿಸಿದರು.  ಬೈಜಿಕ ಸದಳನದಿಂದ (Fussion) ರೂಪುಗೊಂಡ ಜಲಜನಕ ಬಾಂಬ್ ಅಭಿವೃದ್ದಿಯನ್ನುಫರ್ಮಿ ವಿರೋಧಿಸಿದನು.  ಎರಡನೇ ಜಾಗತಿಕ ಯುದ್ದದ ನಂತರ ಚಿಕಾಗೋದಲ್ಲಿ ಪ್ರಾಧ್ಯಾಪಕನಾಗಿ ಉಳಿದ ಫರ್ಮಿಯ ಗೌರವಾರ್ಥ ಹೊಸದಾಗಿ ಬೆಳಕಿಗೆ ಬಂದ 100ನೇ ಧಾತುವಿಗೆ ಫರ್ಮಿಯಾನ್ ಎಂದು ಹೆಸರಿಸಲಾಗಿದೆ.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 10/30/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate