অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಷಾಕ್ಲೆ , ವಿಲಿಯಂ ಬ್ರಾಡ್’ಫೋರ್ಡ್

ಷಾಕ್ಲೆ , ವಿಲಿಯಂ ಬ್ರಾಡ್’ಫೋರ್ಡ್

ಷಾಕ್ಲೆ , ವಿಲಿಯಂ ಬ್ರಾಡ್’ಫೋರ್ಡ್ (1910-1989) ೧೯೫೬

ಅಸಂಸಂ-ಭೌತಶಾಸ್ತ್ರ- ಟ್ರಾನ್ಸಿಸ್ಟರ್ ಉಪಜ್ಞೆಕಾರ.

ಷಾಕ್ಲೆಯ ತಂದೆ ತಾಯಿಗಳಿಬ್ಬರೂ ಗಣಿಗಾರಿಕೆ ಇಂಜಿನಿಯರಿಂಗ್‍ಗಳಾಗಿದ್ದರು.  ಷಾಕ್ಲೆ ,ಲಂಡನ್‍ನಲ್ಲಿ ಜನಿಸಿದನು.  ಕ್ಯಾಲಿಪೋರ್ನೀಯಾ ಹಾಗೂ  ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್‍ನಲ್ಲಿ ವ್ಯಾಸಂಗ ಮಾಡಿದನು.  1936ರಿಂದ ಬೆಲ್ ಪ್ರಯೋಗಾಲಯಗಳಲ್ಲಿ ಕೆಲಸಕ್ಕೆ ಸೇರಿದನು. 1942ರಿಂದ 1944ರ ಅವಧಿಯಲ್ಲಿ ಅಸಂಸಂಗಳ  ಜಲಾಂತರ್ಗಾಮಿ ವಿರೋಧಿ ಯುದ್ದ ಸಂಶೋಧನೆಯಲ್ಲಿ ಕೆಲಸ ಮಾಡಿದನು.  ಎರಡನೇ ಜಾಗತಿಕ ಯುದ್ದದ ನಂತರ, ಬೆಲ್ ಪ್ರಯೋಗಾಲಯಗಳಿಗೆ ಮರಳಿ ಬಾರ್ಡೀನ್, ಬ್ರಾಟೀನ್‍ರವರ ಸಹಯೋಗದಲ್ಲಿ ನಿರ್ವಾತ ಕೊಳವೆಗಳಿಗೆ ಬದಲು ಅರೆವಾಹಕಗಳನ್ನು ಬಳಸಲು ಯತ್ನಿಸಿದನು. ಸೀಸದ ಸಲ್ಫೇಡ್ ಹಾಗೂ ಆ ಬಗೆಯ ಸ್ಪಟಿಕಗಳು, ವಿದ್ಯುತ್ ಪ್ರವಾಹವನ್ನು ಒಂದೇ ದಿಕ್ಕಿನಲ್ಲಿ ಹರಿಯಲು ಬಿಟ್ಟು  ಕವಾಟಗಳಂತೆ ವರ್ತಿಸುತ್ತವೆ. ಬ್ರಿಟನ್‍ನಲ್ಲಿ ಜೆ.ಎ. ಫೆ್ಲಮಿಂಗ್‍ನ ಡಯೋಡ್‍ಗಳು ಬಳಕೆಯಲ್ಲಿದ್ದವು. ಷಾಕ್ಲೆ ಹಾಗೂ ಸಹೋದ್ಯೋಗಿಗಳ ಸಂಶೋಧನೆ, ಜರ್ಮೇನಿಯಂ ಉತ್ತಮ ಅರೆವಾಹಕವೆಂದು , ಅದರಲ್ಲಿನ ಕಲ್ಮಷಗಳ ಪ್ರಮಾಣಕ್ಕನುಗುಣವಾಗಿ,ಅದರ ವಾಹಕತೆ ಬದಲಾಗುವುದೆಂದು ಗುರುತಿಸಿದರು.  ಇದರ ಮುಂದುವರಿದ ಸಂಶೋಧನೆಯ ಫಲವಾಗಿ ಬಿಂದು ಸಂಪರ್ಕ (Point Contact) ಟ್ರಾನ್ಸಿಸ್ಟರ್’ಗಳು 1947ರಲ್ಲಿ ನಿರ್ಮಾಣಗೊಂಡವು. ಇದಾದ ಒಂದು ತಿಂಗಳಲ್ಲೇ ಷಾಕ್ಲೆ, ವಿಭಿನ್ನ ಸಂಸ್ಕರಿತ ಸಿಲಿಕಾನ್ ಸ್ಪಟಿಕಗಳ ಸಂಧಿ ಟ್ರಾನ್ಸಿಸ್ಟರ್ ತಯಾರಿಸಿದನು.  ಇಂತಹ ಘನಸ್ಥಿತಿಯ ಟ್ರಾನ್ಸಿಸ್ಟರ್‍ಗಳು ವಿದ್ಯುತ್‍ನ್ನು ವರ್ಧನೆಗೊಳಿಸುವಂತೆ ಶೋಧಿಸಿ ಕವಾಟದಂತೆಯೂ ವರ್ತಿಸುತ್ತವೆ. ಇವುಗಳಿಂದ ಬಹು ಕಿರಿದಾದ, ವಿದ್ಯುತ್ ಮಂಡಲಗಳ ರಚನೆ ಸಾಧ್ಯವಾಯಿತು.  ಇವುಗಳಿಂದಾಗಿಯೇ ಎಲೆಕ್ಟ್ರಾನ್ ಕ್ರಾಂತಿ ಜರುಗಿ, ನಾಗರಿಕ ಜಗತ್ತಿನ ಸ್ವರೂಪವೇ ಬದಲಾಯಿತು.  ರೇಡಿಯೋ , ದೂರದರ್ಶನ, ಗಣಕ,ನೂರಾರು ಬಗೆಯ ಸಾಧನಗಳು ಹೊರಬಂದವು.  1956ರಲ್ಲಿ ಷಾಕ್ಲೆ, ಬಾರ್ಡೀನ್ ಮತ್ತು ಬ್ರಾಟೇನ್ ನೊಬೆಲ್ ಪ್ರಶಸ್ತಿ ಪಡೆದನು. 1963ರಿಂದ ಷಾಕ್ಲೆ ,ಸ್ಟ್ಯಾನ್ ಪೋರ್ಡ್‍ನಲ್ಲಿ ಇಂಜಿನಿಯರಿಂಗ್ ಪ್ರಾಧ್ಯಾಪಕನಾದನು. 1965ರ ನಂತರ ಬುದ್ಧ್ದಿವಂತಿಕೆ, ಅನುವಂಶಿಕವೆಂದು ಕೆಲವು ಜನಾಂಗಗಳ ಜನಸಂಖ್ಯೆ ಅಭಿವೃದ್ದಿ ಮಾನವ ಕುಲದಲ್ಲಿ ಬುದ್ದಿವಂತಿಕೆಯನ್ನು ಕುಗ್ಗಿದುವುದೆಂಬ ಹೇಳಿಕೆ ನೀಡಿ ಸಾರ್ವಜನಿಕ ಟೀಕೆಗೆ ತುತ್ತಾದನು.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 2/17/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate