অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ನಾರ್ಮನ್, ಎಫ್. ರಾಮ್ಸೆ

ನಾರ್ಮನ್, ಎಫ್. ರಾಮ್ಸೆ

ನಾರ್ಮನ್, ಎಫ್. ರಾಮ್ಸೆ (1915--) 1989

ಅಸಂಸಂ-ಭೌತಶಾಸ್ತ್ರ-ಬೈಜಿಕ ಚತುರ್ ಧೃವ  ಅನುರಣನ (NUCLEAR QUADRAPOLE RESONANCE)     ವಿದ್ಯಾಮಾನವನ್ನು ಅನಾವರಣಗೊಳಿಸಿದಾತ.

ಸ್ಕಾಟ್ಲೆಂಡ್ ಮೂಲದ ತಂದೆ, ಜರ್ಮನ್ ಮೂಲದ ತಾಯಿಯ ಮಗನಾದ ನಾರ್ಮನ್ 27 ಆಗಸ್ಟ್ 1915 ರಂದು ಜನಿಸಿದನು. ರ್‍ಯಾಮ್ಸೆಯ ತಂದೆ ಸೇನೆಯಲ್ಲಿದ್ದು, ಆಗಾಗ್ಗೆ ವರ್ಗಾವಣೆಗೊಳ್ಳುತ್ತಿದ್ದುದರಿಂದ, ಇವರ ಕುಟುಂಬ ವಾಷಿಂಗ್ಟನ್, ಟೊಪೆಕಾ, ಕ್ಯಾನ್ಸಾಸ್, ಪ್ಯಾರಿಸ್, ಡೊವೆರ್‍ಗಳಲ್ಲಿ ನೆಲೆಸಿದ್ದಿತು.  ಇದರಿಂದಾಗಿ ರ್‍ಯಾಮ್ಸೆಯ ವಿದ್ಯಾಭ್ಯಾಸ ಹಲವಾರು ಊರುಗಳಲ್ಲಿ ಜರುಗಿತು.  15 ನೇ ವಯಸ್ಸಿಗೆ ರ್‍ಯಾಮ್ಸೆ ಪ್ರೌಢಶಿಕ್ಷಣ ಮುಗಿಸಿದನು.  ಈ ಆವಧಿಯಲ್ಲಿ ಕ್ವಾಂಟಂ ಬಲ ವಿಜ್ಞಾನ ಕುರಿತಾದ ಲೇಖನ ಓದಿದ ರ್‍ಯಾಮ್ಸೆ ತಾನೂ ಒಬ್ಬ ಭೌತಶಾಸ್ತ್ರಜ್ಞನಾಗ ಬಯಸಿದನು. ಆದರೆ ಮಗ ಪದವಿ ಮುಗಿಸಿ, ಸೇನೆಗೆ ಸೇರಬೇಕೆಂದು ರ್‍ಯಾಮ್ಸೆಯ ತಂದೆ ತಾಯಿಯರ ಅಶೆಯಾಗಿದ್ದಿತು.  1931ರಲ್ಲಿ ಕೊಲಂಬಿಯಾದಲ್ಲಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಸೇರಿದನು.  ಆದರೆ ಪ್ರಕೃತಿಯ ರಹಸ್ಯಗಳನ್ನು ಆಳವಾಗಿ ಅರಿಯಬೇಕೆಂದು ರ್‍ಯಾಮ್ಸೆಯ ಆಕಾಂಕ್ಷೆ ಆತ ಇಂಜಿನಿಯರಿಂಗ್ ತೊರೆದು ಗಣಿತವನ್ನು ಆರಿಸಿ ಕೊಳ್ಳುವಂತೆ ಮಾಡಿತು.  1935 ರಲ್ಲಿ ಪದವಿ ಮುಗಿಸಿದ ರ್‍ಯಾಮ್ಸೆ ಭೌತಶಾಸ್ತ್ರದಲ್ಲಿ ವೃತ್ತಿ ಜೀವನ ಮುಂದುವರಿಸಲು ಯತ್ನಿಸಿದನು. ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಕೆಲ್ಲೆಟ್ ಫೆಲೋಷಿಫ್ಗಳಿಸಿದ ರ್‍ಯಾಮ್ಸೆ ಇಂಗ್ಲೆಂಡಿನ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪದವಿಗೆ ನೊಂದಾಯಿಸಿಕೊಂಡನು.  ಆ ಕಾಲದಲ್ಲಿ ಈ ವಿಶ್ವವಿದ್ಯಾಲಯದ ಕ್ಯಾವೆಂಡಿಷ್ ಪ್ರಯೋಗಾಲಯ ಜೆ.ಜೆ.ಥಾಮ್ಸನ್, ರುದರ್ಫೋರ್ಡ್, ಚಾಡ್‍ವಿಕ್, ಕಾಕ್‍ರಾಪ್ಟ್, ಎಡಿಂಗ್ಟನ್, ಆ್ಯಪಲ್‍ಟನ್ , ಬಾರ್ನ್,  ಫೌಲರ್,ಬುಲ್ಲಾರ್ಡ್, ಮೌರಿಸ್, ಗೋಲ್ಡಹೇಬರ್, ಹಾಗೂ ಡಿರಾಕ್‍ರನ್ನೊಳಗೊಂಡ ಜಗತ್ಪ್ರಸಿದ್ದವಾದ ಭೌತಶಾಸ್ತ್ರದ ಗಣಿಯೆನಿಸಿದ್ದಿತು. ರ್‍ಯಾಮ್ಸೆ ಮೌರಿಸ್, ಗೋಲ್ಡ್ ಹೇಬರ್ ಕೈಕೆಳಗೆ ಅಣ್ವಯಿಕ ದೂಲಗಳನ್ನು ಕುರಿತಾಗಿ ಲೇಖನ ಪ್ರಕಟಿಸಿ ಎರಡನೇ ಪದವಿ ಗಳಿಸಿದನು.  ಇದಾದ ನಂತರ ಕೊಲಂಬಿಯಾಗೆ ಮರಳಿ, ರಬಿಯ ಮಾರ್ಗದರ್ಶನದಲ್ಲಿ ಡಾಕ್ಟರೇಟ್‍ಗೆ ನೊಂದಾಯಿಸಿಕೊಂಡನು. ಇದಾದ ಅಲ್ಪ ಕಾಲದಲ್ಲೇ ರಬಿ ಅಣ್ವಯಿಕ ದೂಲ ಕಾಂತೀಯ ಅನುರಣನ ವಿಧಾನವನ್ನು ರೂಪಿಸಿ, ಕಣ ಭೌತಶಾಸ್ತ್ರದಲ್ಲಿನ ಅಧ್ಯಯನಗಳಿಗೆ ಹೊಸ ಸಾಧ್ಯತೆಗಳನ್ನು ತೆರೆದಿದ್ದನು.  ಕಾಂತೀಯ ಅನುರಣನ ವಿಧಾನದಲ್ಲಿ ಕಾರ್ಯ ಪ್ರಾರಂಭಿಸಿದ ಬೆರಳೆಣಿಕೆಯ ಜನರಾದ ರಬಿ, ಜಕಾರಿಯಾಸ್, ಕೆಲ್ಲೋಗ್ ಮಿಲನ್ ಹಾಗೂ ಕುಷರ್ ಗುಂಪಿಗೆ ರ್‍ಯಾಮ್ಸೆ ಸೇರ್ಪಡೆಯಾದನು.  ಈ ತಂಡ ಡ್ಯುಟೆರಾನ್‍ನ ಚತುರ್ ಧೃವ  ಅನುರಣನೆ (NUCLEAR QUADRAPOLE RESONANCE) ಆವಿಷ್ಕಾರ ಮಾಡಿತು.  ರಬಿಯ ಕೆಳಗಿನ ಸಂಶೋಧನೆಯಿಂದ ಡಾಕ್ಟರೇಟ್ ಗಳಿಸಿದ ರ್‍ಯಾಮ್ಸೆ ವಾಷಿಂಗ್ಟನ್ ಡಿ.ಸಿಗೆ ಹೋಗಿ, ಅಲ್ಲಿ ಕಾರ್ನೆಗಿ ಸಂಸ್ಥೆಯ ಫೆಲೋ ಆದನು.  ಈ ಸಂಸ್ಥೆಯಲ್ಲಿ ನ್ಯೂಟ್ರಾನ್ ಪ್ರೋಟಾನ್, ಪ್ರೋಟಾನ್ ಹೀಲಿಯಂ ಚದುರಿಕೆಯನ್ನು ಕುರಿತಾಗಿ ಅಧ್ಯಯನ ನಡೆಸಿದನು. 1940ರಲ್ಲಿ ವಿವಾಹವಾದ ರ್‍ಯಾಮ್ಸೆ ಮುಂದಿನ ವೃತ್ತಿ ಜೀವನವನ್ನು ಇಲಿನಾಯ್ ವಿಶ್ವವಿದ್ಯಾಲಯದಲ್ಲಿ ಕಳೆಯಲು ನಿರ್ಧರಿಸಿ, ಅಲ್ಲಿನ ಸಿಬ್ಬಂದಿಯಾದನು.  ಆದರೆ ಎರಡನೇ ಜಾಗತಿಕ ಯುದ್ದ ಪ್ರಾರಂಭವಾಗಿ, ರ್‍ಯಾಮ್ಸೆ ಎಂಐಟಿಯ ವಿಕಿರಣ ಪ್ರಯೋಗಾಲಯಕ್ಕೆ ಸೇರಬೇಕಾದ ಅನಿವಾರ್ಯತೆ ಬಂದೊದಗಿತು.  ಮುಂದೆ ಎರಡು ವರ್ಷಗಳ ಕಾಲ 3 ಸೆಂಮೀ ತರಂಗಾಂತರ (WAVE LENGTH)  ರಡಾರ್ ಅಭಿವೃದ್ದಿಗೆ ಶ್ರಮಿಸಿದನು  ನಂತರ ಅಸಂಸಂ ಯುದ್ದ ಕಾರ್ಯದರ್ಶಿಗೆ ರಡಾರ್ ಸಲಹೆಗಾರನಾಗಿ ನೇಮಕಗೊಂಡನು.  1943ರಲ್ಲಿ ನ್ಯೂ ಮೆಕ್ಸಿಕೋದ ಲಾಸ್ ಅಲ್ಮೋಸ್‍ನಲ್ಲಿ ಪರಮಾಣು ಅಸ್ತ್ರ ತಯಾರಿಕೆಯ ಮ್ಯಾನ್‍ಹಟನ್ ಯೋಜನೆಗೆ ನಿಯೋಜಿತನಾದನು.  ಯುದ್ದದ ನಂತರ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾದನು. ರ್‍ಯಾಮ್ಸೆ, ರಬಿಯೊಂದಿಗೆ, ಯುದ್ದಕಾಲದಲ್ಲಿ ನಿಲ್ಲಿಸಿದ್ದ, ಅಣ್ವಯಿಕ ದೂಲ (ATOMIC BEAM)  ಪ್ರಯೋಗಾಲಯವನ್ನು ಪುನರುಜ್ಜೀವನಗೊಳಿಸಿದನು.  ಲಾಂಗ್ ದ್ವೀಪದ, ಬ್ರೂಕ್ ಹ್ಯಾವೆನ್ ನ್ಯಾಷನಲ್ ಲ್ಯಾಬೋರೇಟರಿಯನ್ನು ಸ್ಥಾಪಿಸುವಲ್ಲಿ ರ್‍ಯಾಮ್ಸೆ ಪ್ರಮುಖ ಪಾತ್ರ ವಹಿಸಿ 1946 ರಲ್ಲಿ ಅಲ್ಲಿ ಭೌತಶಾಸ್ತ್ರದ ವಿಭಾಗದ ಮೊದಲ ಮುಖ್ಯಸ್ಥನಾದನು.  1947ರಲ್ಲಿ ಹಾವರ್ಡ್ ವಿಶ್ವವಿದ್ಯಾಲಯಕ್ಕೆ ಹೋದ ರ್‍ಯಾಮ್ಸೆ, ಮುಂದಿನ ನಲವತ್ತು ವರ್ಷಗಳ ಕಾಲ ಅಲ್ಲಿಯೇ ಸೇವೆ ಸಲ್ಲಿಸಿದನು.  ಜಲಜನಕ ದ್ವ-ಪರಮಾಣುಗಳ (DIATOMS)   ಮೇಲೆ ವಿವಿಧ ರೀತಿಯ ಪ್ರಯೋಗಗಳನ್ನು ನಡೆಸಿದ ರ್‍ಯಾಮ್ಸೆ ಹಾಗೂ ಆತನ ವಿದ್ಯಾರ್ಥಿಗಳು ಸಿದ್ಧಾಂತ ಹಾಗೂ ವೀಕ್ಷಿತ ಪ್ರಯೋಗ ಫಲಿತಾಂಶಗಳನ್ನು ತಾಳೆ ನೋಡಿದರು. ರ್‍ಯಾಮ್ಸೆ ಹಾಗೂ ಡೇನಿಯಲ್ ಕ್ಲೆಪ್‍ನರ್ ಪರಮಾಣ್ವಿಕ  ಜಲಜನಕ ಮೇಸರ್ ಉತ್ಪಾದಿಸಿ, ಜಲಜನಕ ಡ್ಯುಟೇರಿಯಂ ಮತ್ತು ಟೈಟ್ರಿಯಂನ ಸೂಕ್ಷ್ಮಾತಿಸೂಕ್ಷ್ಮ ಪ್ರತ್ಯೇಕತೆಗಳನ್ನು ನಿರ್ಧರಿಸಿದರು. ರ್‍ಯಾಮ್ಸೆ ಹಾರ್ವರ್ಡ್ ವಿಶ್ವವಿದ್ಯಾಲಯದ  ಸೈಕ್ಲೋಟ್ರಾನ್ ನಿರ್ಮಾಣ ಹಾಗೂ ಆರಂಭಿಕ ನಿರ್ಮಹಣೆಯನ್ನು ವಹಿಸಿಕೊಂಡಿದ್ದನು. 1986ರಲ್ಲಿ ಹಾರ್ವರ್ಡ್‍ನಿಂದ ನಿವೃತ್ತನಾದನು. 1989ರಲ್ಲಿ ರ್‍ಯಾಮ್ಸೆ, ಹ್ಯಾನ್ಸ್ ಡೆಹ್ಲ್‍ಮೆಲ್ಟ್ ಮತ್ತು ವೂಲ್ಫ್’ಗ್ಯಾಂಗ್ ಪೌಲಿಯವರೊಂದಿಗೆ  ನೊಬೆಲ್ ಪ್ರಶಸ್ತಿ ಪುರಸ್ಕೃತನಾದರು.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 8/25/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate