অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕ್ಯೂರಿ, ಐರೀನ್ ಜೊಲಿಯೆಟ್ (1897-1956) 1935

ಕ್ಯೂರಿ, ಐರೀನ್ ಜೊಲಿಯೆಟ್ (1897-1956) 1935

ಕ್ಯೂರಿ, ಐರೀನ್  ಜೊಲಿಯೆಟ್ (1897-1956) ೧೯೩೫

ಫ್ರಾನ್ಸ್ -ಬೈಜಿಕ ಭೌತಶಾಸ್ತ್ರ- ಕೃತಕವಾಗಿ ಪ್ರೇರೇಪಿಸಲ್ಪಟ್ಟ ವಿಕಿರಣಪಟುತ್ವ (Radioactivity) ಸಹ ಅನಾವರಣಗೊಳಿಸಿದಾಕೆ.

ಖ್ಯಾತ ವಿಜ್ಞಾನಿ ದಂಪತಿ ಪೀರೆ ಮತ್ತು ಮೇರಿ ಕ್ಯೂರಿಯ ಹಿರಿಮಗಳು ಐರೀನ್ . ಐರೀನ್ ಜಗತ್ಪ್ರಸಿದ್ದರ ಬಳಿ ಶಿಕ್ಷಣ ಪಡೆದ ಅದೃಷ್ಟವಂತೆ .  ಮನೆಯಲ್ಲಿ ತಾಯಿ ಭೌತಶಾಸ್ತ್ರದ ಪಾಠ ಹೇಳಿದರೆ,ಲ್ಯಾಂಜೆವಿನ್‍ನಿಂದ ಗಣಿತವನ್ನು, ಪೆಟ್ರಿನ್‍ನಿಂದ ರಸಾಯನಶಾಸ್ತ್ರವನ್ನು ಕಲಿತಳು.  ಮೊದಲ ಜಾಗತಿಕ ಯುದ್ದದಲ್ಲಿ ಐರೀನ್, ರೇಡಿಯೋ ಗ್ರಾಫರ್ ಹುದ್ದೆಯಲ್ಲಿ ಸೇವೆ ಸಲ್ಲಿಸಿದಳು.  ಅಸಮರ್ಪಕ ಸುರಕ್ಷ ವ್ಯವಸ್ಥೆಯಿಂದಾಗಿ ಐರೀನ್ ತನ್ನ ತಾಯಿ ಮೇರಿಯಂತೆಯೇ ವಿಕಿರಣಕ್ಕೆ ಮೈದೆರೆದು ಲ್ಯುಕೇಮಿಯಾಕ್ಕೆ ತುತ್ತಾಗಿ ಸಾವನ್ನಪ್ಪಿದಳು. 1930ರಲ್ಲಿ ಐರೀನ್, ಗಂಡ ಜೊಲಿಯಟ್ ಜೊತೆ ಸೇರಿ ಕೃತಕ ವಿಕಿರಣಪಟುತ್ವದ ಬಗೆಗೆ ವ್ಯಾಪಕ ಸಂಶೋಧನೆ ನಡೆಸಿದಳು. ಇದಕ್ಕಾಗಿ ದಂಪತಿಗಳಿಬ್ಬರಿಗೂ 1935ರ ನೊಬೆಲ್ ಪ್ರಶಸ್ತಿ ಹಂಚಲಾಯಿತು.  ಎರಡನೇ ಜಾಗತಿಕ ಯುದ್ದದ ಸಮಯದಲ್ಲಿ ಐರೀನ್ ಸ್ವಿಟ್ಸರ್ಲ್ಯಾಂಡ್‍ಗೆ ಪಲಾಯನಗೈದಳು.  ಯುದ್ದದ ನಂತರ ಫ್ರಾನ್ಸ್'ಗೆ ಮರಳಿ 1946ರಲ್ಲಿ ರೇಡಿಯಂ ಇನ್ಸ್ಟಿಟ್ಯೂಟ್ ಹಾಗೂ ಫ್ರೆಂಚ್ ಅಟಾಮಿಕ್ ಎನರ್ಜಿ ಕಮಿಷನ್ ನಿರ್ದೇಶಕಿಯಾದಳು. 1933ರಲ್ಲಿ ಐರೀನ್ ಹಾಗೂ ಆಕೆಯ ಪತಿ ಜೊಲಿಯಟ್ ಆಲ್ಫಾ-ಕಣಗಳಿಂದ ಅಲ್ಯುಮಿನಿಯಂನ್ನು ತಾಡಿಸಿ, ಮೊದಲ ಕೃತಕ ರೇಡಿಯೋಪಟು ಸಾಮಾಗ್ರಿಯನ್ನು ಪಡೆದರು.  ಇದರ ಫಲವಾಗಿ, ರಂಜಕದ ರೇಡಿಯೋ ಸಮಸ್ಥಾನಿ (Isotope) ದಕ್ಕಿತು.  ಇದು ಕೆಲವು ವೈದ್ಯಕೀಯ ಚಿಕಿತ್ಸೆ, ಸಂಶೋಧನೆಗಳಿಗೆ ಭಾರಿ ನೆರವಾಗುತ್ತದೆ.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 7/23/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate