অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕ್ಯೂರಿ, ಜೀನ್ ಫ್ರೆಡೆರಿಕ್ ಜೊಲಿಯಟ್

ಕ್ಯೂರಿ, ಜೀನ್ ಫ್ರೆಡೆರಿಕ್ ಜೊಲಿಯಟ್

ಕ್ಯೂರಿ, ಜೀನ್ ಫ್ರೆಡೆರಿಕ್ ಜೊಲಿಯಟ್ –(1900-1958) -೧೯೩೫

ಫ್ರಾನ್ಸ್-ರಸಾಯನಶಾಸ್ತ್ರ- ಕೃತಕ ವಿಕಿರಣಪಟುತ್ವದ ಹೊಂದಿದ ವಿಕಿರಣಶೀಲ ಧಾತುಗಳನ್ನು ಸಂಶ್ಲೇಷಿಸಿದಾತ

ಫ್ರೆಡರಿಕ್ ಜೊಲಿಯಟ್ 19 ಮಾರ್ಚ್ 1900ರಂದು ಪ್ಯಾರಿಸ್‍ನಲ್ಲಿ ಜನಿಸಿದನು.  ಎಕೊಲೆ ಡೆ ಫಿûಸಿಕ್ ಎಟ್ ಖಿಮಿ ಕಾಲೇಜಿನಿಂದ ರಾಸಾಯನಿಕ ಶಾಸ್ತ್ರದ ಪದವಿ ಗಳಿಸಿದನು. 1925ರಲ್ಲಿ ರೇಡಿಯಂ ಸಂಸ್ಥೆಯಲಿ ಮೇರಿ ಕ್ಯೂರಿಯ ಸಹಾಯಕನಾದನು. 1926ರಲ್ಲಿ ಕ್ಯೂರಿ ದಂಪತಿಗಳ ಮಗಳಾದ ಐರಿನ್‍ಳನ್ನು ಮದುವೆಯಾದನು.  ಮದುವೆಯಾದ ನಂತರ ಕ್ಯೂರಿ ವಂಶದ ಹೆಸರು ಶಾಶ್ವತವಾಗಿರಲೆಂದು ತನ್ನ ಹೆಸರಿನೊಂದಿಗೆ ಅದನ್ನು ಸೇರಿಸಿಕೊಂಡನು. 1930ರಲ್ಲಿ ಡಾಕ್ಟರೇಟ್ ಗಳಿಸಿದನು. ತನ್ನ ಡಾಕ್ಟರೇಟ್‍ಗಾಗಿ ವಿಕಿರಣ ಧಾತುಗಳ ವೈದ್ಯುತ್ ರಸಾಯನಶಾಸ್ತ್ರದ ಬಗೆಗೆ ಸಂಪ್ರಬಂಧ ಮಂಡಿಸಿದ್ದನು. 1935ರಲ್ಲಿ ಉಪನ್ಯಾಸಕನಾದನು. ಫ್ರೆಡರಿಕ್, ಪತ್ನಿ ಐರಿನ್‍ಳೊಂದಿಗೆ ಪರಮಾಣುಗಳ ರಾಚನಿಕ ಸ್ವರೂಪದ ಬಗೆಗೆ ಕೆಲಸ ಮಾಡಿದನು.  ಇದು ಮುಂದೆ1932ರಲ್ಲಿ ಚಾಡ್‍ವಿಕ್ ನ್ಯೂಟ್ರಾನ್‍ನ್ನು. 1932ರಲ್ಲಿ ಆ್ಯಂಡರ್‍ಸನ್ ಪಾಸಿಟ್ರಾನ್‍ನ್ನು ಅನಾವರಣಗೊಳಿಸಲು ನೆರವಾಯಿತು.  ಕೃತಕ ವಿಕಿರಣಶೀಲತೆಯ ಬಗೆಗೆ ಇವರು ನಡೆಸಿದ ಸಂಶೋಧನೆಗಳು ಜಗದ್ವಿಖ್ಯಾತವಾದವು. ಆಲ್ಫಾ ಕಣಗಳಿಂದ ಬೋರಾನ್, ಅಲ್ಯುಮಿನಿಯಂ ಹಾಗೂ ಮೆಗ್ನೇಷಿಯಂಗಳನ್ನು ತಾಡಿಸಿ, ಸಾರಜನಕ, ರಂಜಕ, ಸಿಲಿಕಾನ್, ಅಲ್ಯುಮಿನಿಯಂ ಸಮಸ್ಥಾನಿಗಳನ್ನು (Isooಠಿe) ಪಡೆದರು.  ಇವು ನೈಸರ್ಗಿಕವಾಗಿ ಲಭ್ಯವಿಲ್ಲ.  ಇವು ಎಲೆಕ್ಟ್ರಾನ್ ಹಾಗೂ ಪೆÇ್ರೀಟಾನ್‍ಗಳನ್ನು ವಿಕಿರಣಗಳಾಗಿ ಹೊಮ್ಮಿಸುತ್ತವೆ.  ಇದಕ್ಕಾಗಿಫ್ರೆಡರಿಕ್ಹಾಗೂ ಐರೀನ್ 1935ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಪಡೆದರು.  ಸದಾ ಮನುಷ್ಯನ ಅಭ್ಯುದಯ ಬಯುಸುತ್ತಿದ್ದಫ್ರೆಡರಿಕ್1934ರಲ್ಲಿ ಸಮಾಜವಾದಿ ಪಕ್ಷ ಸೇರಿಸಿದನಲ್ಲದೆ, 1936ರಲ್ಲಿ ಮಾನವ ಹಕ್ಕುಗಳ ಸಂಸ್ಥೆಯ ಸದಸ್ಯನಾದನು. ಜೂಲಿಯಟ್ ತನ್ನ ಪತ್ನಿಯ ಮರಣದ ನಂತರ ಮುಂದೆರೆಡು ವರ್ಷಗಳ ಕಾಲ ಬರ್ಸೆಯಲ್ಲಿ ಬೃಹತ್ ಗಾತ್ರದ ಬೈಜಿಕ ಭೌತಶಾಸ್ತ್ರದ ಸಂಶೋಧನಾಲಯ ನಿರ್ಮಿಸಲು ಶ್ರಮಿಸಿದನು.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 10/16/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate